Kannada News: ಅಸಲಿಗೆ ಬಿಜೆಪಿ ಸೇರಿಕೊಳ್ಳಬೇಕು ಎಂದುಕೊಂಡಿದ್ದ ಅನಂತ್ ನಾಗ್, ಕೊನೆ ಕ್ಷಣದಲ್ಲಿ ಗೈರಾಗಿದ್ದು ಯಾಕೆ ಗೊತ್ತೇ?ಅಸಲಿ ಕಾರಣ ಏನು ಗೊತ್ತೇ?

Kannada News: ಅಸಲಿಗೆ ಬಿಜೆಪಿ ಸೇರಿಕೊಳ್ಳಬೇಕು ಎಂದುಕೊಂಡಿದ್ದ ಅನಂತ್ ನಾಗ್, ಕೊನೆ ಕ್ಷಣದಲ್ಲಿ ಗೈರಾಗಿದ್ದು ಯಾಕೆ ಗೊತ್ತೇ?ಅಸಲಿ ಕಾರಣ ಏನು ಗೊತ್ತೇ?

Kannada News: ಸ್ಯಾಂಡಲ್ ವುಡ್ ನ ಹಿರಿಯನಟ ಹಾಗೂ ಮಾಜಿ ಸಂಸದ ಅನಂತ್ ನಾಗ್ (Anant Nag) ಅವರು ಬಹಳ ವರ್ಷಗಳ ನಂತರ ಮತ್ತೆ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿತ್ತು, ಫೆಬ್ರವರಿ 22ರಂದು ಅನಂತ್ ನಾಗ್ ಅವರು ಬಿಜೆಪಿ (BJP) ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಪಕ್ಷದ ಇನ್ನಿತರ ಸದಸ್ಯರನ್ನು ಸೇರಿಸಿ ಸಭೆಯನ್ನು ಏರ್ಪಡಿಸಿದ್ದರು. ಎಲ್ಲರೂ ಅನಂತ್ ನಾಗ್ ಅವರಿಗಾಗಿ ಕಾಯುತ್ತಿರುವಾಗ ನಡೆದದ್ದೇ ಬೇರೆ ವಿಚಾರ ಆಗಿದೆ.

ಅನಂತ್ ನಾಗ್ ಅವರು ಈಗ ಬರುತ್ತಾರೆ, ಆಗ ಬರುತ್ತಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದು ಕಾಯುತ್ತಿದ್ದರು, ಆದರೆ ಅನಂತ್ ನಾಗ್ ಅವರು ಬರಲೇ ಇಲ್ಲ. ಕೊನೆಯ ಕ್ಷಣದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅನಂತ್ ನಾಗ್ ಅವರು ಜೆಡಿಎಸ್ (JDS) ಪಕ್ಷದಲ್ಲಿದ್ದರು, 2004ರ ಎಲೆಕ್ಷನ್ ನಂತರ ರಾಜಕೀಯದಿಂದ ದೂರವೇ ಉಳಿದಿದ್ದ ಅನಂತ್ ನಾಗ್ ಅವರು ಈಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನಲಾಗಿತ್ತು, ಆದರೆ ಅನಂತ್ ನಾಗ್ ಅವರು ಕ್ಯಾನ್ಸಲ್ ಮಾಡಿಕೊಂಡಿರುವ ಬಗ್ಗೆ ಬೇರೆಯದೇ ಟ್ವಿಸ್ಟ್ ಸಿಕ್ಕಿದೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ರಾಜ್ಯ ರಾಜಕಾರಣದ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ: HDK ಬಾಣ ಠುಸ್ ಆಯ್ತಾ??

ಅನಂತ್ ನಾಗ್ ಅವರು ಮುಂದಿನ ವಾರ ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರಮೋದಿ (Narendra Modi) ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಅವರ ಸಮ್ಮುಖದಲ್ಲಿ ಅನಂತ್ ನಾಗ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿದ್ದು, ಕೆಲವರು ಅನಂತ್ ನಾಗ್ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ, ಇನ್ನು ಕೆಲವರು ಅವರು ರಾಜಕೀಯದಿಂದ ದೂರ ಉಳಿಯುವುದೇ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಶಿವರಾತ್ರಿಯ ಪುಣ್ಯದಿನದಂದು ಕೊಡೇಕಲ್ ಕಾಲಜ್ಞಾನ ಬಸವಣ್ಣ ನುಡಿದ ರಾಜಕೀಯ ಭವಿಷ್ಯದ ಅರ್ಥವೇನು ಗೊತ್ತೇ? ಈ ಬಾರಿ ಅಧಿಕಾರ ಯಾರದ್ದು ಗೊತ್ತೇ?