IPL 2023: ಈ ಬಾರಿಯ ಐಪಿಎಲ್ ನಲ್ಲಿ ಅಬ್ಬರಿಸುವ ಟಾಪ್ 5 ಆಟಗಾರರನ್ನು ಹೆಸರಿಸಿದ ಗಂಗೂಲಿ; ಆಯ್ಕೆಯಾದ ಯುವಕರು ಯಾರ್ಯಾರು ಗೊತ್ತೇ??

IPL 2023: ಈ ಬಾರಿಯ ಐಪಿಎಲ್ ನಲ್ಲಿ ಅಬ್ಬರಿಸುವ ಟಾಪ್ 5 ಆಟಗಾರರನ್ನು ಹೆಸರಿಸಿದ ಗಂಗೂಲಿ; ಆಯ್ಕೆಯಾದ ಯುವಕರು ಯಾರ್ಯಾರು ಗೊತ್ತೇ??

IPL 2023: ಐಪಿಎಲ್ 16 (IPL 16) ನೇ ಆವೃತ್ತಿ ಶುರುವಾಗುವುದಕ್ಕೆ ಉಳಿದಿರುವುದು ಇನ್ನು 1 ತಿಂಗಳು. ಇದಕ್ಕಾಗಿ ಈಗಾಗಲೇ ಎಲ್ಲಾ ತಂಡಗಳು ತಯಾರಿ ನಡೆಸಿಕೊಂಡಿವೆ. ಐಪಿಎಲ್ ಶುರುವಾಗುವ ಮೊದಲು ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ (Saurav Ganguly) ಅವರು ಈ ವರ್ಷ ಐಪಿಎಲ್ ನಲ್ಲಿ ಅಬ್ಬರಿಸುವ ಟಾಪ್ 5 ಆಟಗಾರರ ಹೆಸರನ್ನು ತಿಳಿಸಿದ್ದಾರೆ. ಅವರು ಹೇಳಿರುವ ಆ ಐವರು ಆಟಗಾರರನ್ನು ತಿಳಿಸುತ್ತೇವೆ ನೋಡಿ..

ಸೂರ್ಯಾಕುಮಾರ್ ಯಾದವ್ :- ಪ್ರಸ್ತುತ ಇರುವ ಅತ್ಯುತ್ತಮ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಕೂಡ ಒಬ್ಬರು ಎಂದು ಹೇಳಿದ್ದಾರೆ ಸೌರವ್ ಗಂಗೂಲಿ, ಪ್ರಸ್ತುತ ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು ಕೂಡ ಅವರನ್ನು ಯಂಗ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ. ಈ ವರ್ಷ ಇವರು ಐಪಿಎಲ್ (IPL) ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರವಾಗಿ ಆಡುತ್ತಾರೆ. ಇದುವರೆಗೂ ಸೂರ್ಯಕುಮಾರ್ ಅವರು ಐಪಿಎಲ್ ನಲ್ಲಿ 123 ಪಂದ್ಯಗಳನ್ನಾಡಿದ್ದು 16 ಅರ್ಧಶತಕ ಸೇರಿಸಿ 2644 ರನ್ಸ್ ಗಳಿಸಿದ್ದಾರೆ. ಇದನ್ನು ಓದಿ..RCB IPL 2023: ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಬಲಾಢ್ಯ ಬ್ಯಾಟ್ಸಮನ್ ಗೆ ಆಯ್ತು ಇಂಜುರಿ: ಏನಾಗಿದೆ ಗೊತ್ತೇ??

ಪೃಥ್ವಿ ಶಾ :- ಪೃಥ್ವಿ ಶಾ (Prithvi Shaw) ಅವರನ್ನು ಹೊಗಳಿರುವ ಸೌರವ್ ಗಂಗೂಲಿ ಅವರು, ಆತ ಪ್ರತಿಭಾವಂತ ಎಂದು ಹೇಳಿದ್ದಾರೆ. ಇವರು ಯಂಗ್ ಪ್ಲೇಯರ್ ಟಿ20 ಪಂದ್ಯಗಳಲ್ಲಿ ಉತ್ತಮವಾಗಿ ಆಡುವ ಶಕ್ತಿ ಅವರಲ್ಲಿದೆ ಎಂದು ಹೇಳಿದ್ದಾರೆ. ಈ ಸಾಲಿನಲ್ಲಿ ಪೃಥ್ವಿ ಶಾ ಅವರು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂದರ ಪರವಾಗಿ ಆಡಲಿದ್ದಾರೆ. ಇವರು ಇದುವರೆಗೂ 63 ಐಪಿಎಲ್ ಪಂದ್ಯಗಳನ್ನಾಡಿದ್ದು 1588 ರನ್ಸ್ ಗಳಿಸಿದ್ದಾರೆ. 12 ಅರ್ಧಶತಕಗಳನ್ನು ಗಳಿಸಿದ್ದಾರೆ ಪೃಥ್ವಿ ಶಾ.

ಋತುರಾಜ್ ಗಾಯಕ್ವಾಡ್ :- ಇವರು ಐಪಿಎಲ್ ನಲ್ಲಿ ತಮ್ಮದೇ ಆದ ರೀತಿಯಲ್ಲಿ ಆಡಿ ಎಲ್ಲರ ಆಕರ್ಷಣೆ ಗಳಿಸಿದ್ದಾರೆ. ಇದುವರೆಗೂ ಋತುರಾಜ್ (Ruthuraj Gaikwad) ಅವರು ಐಪಿಎಲ್ ನಲ್ಲಿ 36 ಪಂದ್ಯಗಳನ್ನಾಡಿದ್ದು, ಕೇವಲ ಅಷ್ಟೇ ಪಂದ್ಯಗಳಲ್ಲಿ 10 ಅರ್ಧಶತಕಗಳು ಮತ್ತು 1 ಶತಕ ಸಿಡಿಸಿದ್ದು, ಇವರ ಮೇಲೆ ಗಮನ ಹರಿಸಬೇಕು ಎಂದು ಗಂಗೂಲಿ ಅವರು ಹೇಳಿದ್ದಾರೆ. ಇದನ್ನು ಓದಿ..IPL 2023: ಡೆಲ್ಲಿ ತಂಡಕ್ಕೆ ವಾರ್ನರ್ ಹೊಸ ನಾಯಕ: ಆದರೆ ಅಚ್ಚರಿಯಾಗಿ ಉಪನಾಯಕನ ಸ್ಥಾನ ಪಡೆದ ಭಾರತೀಯ ಯಾರು ಗೊತ್ತೇ??

ಉಮ್ರಾನ್ ಮಲಿಕ್ :- ಸೌರವ್ ಗಂಗೂಲಿ ಅವರು ಉಮ್ರಾನ್ ಮಲಿಕ್ (Umran Malik) ಅವರನ್ನು ಹೊಗಳಿದ್ದಾರೆ. ಇವರು ವೇಗವಾಗಿ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್ಮನ್ ಗಳು ಭಯಪಡುವ ಹಾಗೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಉಮ್ರಾನ್ ಮಲಿಕ್ ಅವರು ಇದುವರೆಗೂ ಐಪಿಎಲ್ ನಲ್ಲಿ 17 ಪಂದ್ಯಗಳನ್ನಾಡಿದ್ದು, 24 ವಿಕೆಟ್ಸ್ ಉರುಳಿಸಿದ್ದಾರೆ.

ಶುಭಮನ್ ಗಿಲ್ :- ಕೊನೆಯದಾಗಿ ಶುಭಮನ್ ಗಿಲ್ (Shubhman Gill) ಅವರನ್ನು ಹೊಗಳಿದ್ದಾರೆ ಸೌರವ್ ಗಂಗೂಲಿ ಅವರು. ಗಿಲ್ ಅವರು ಐಪಿಎಲ್ ನಲ್ಲಿ ಇದುವರೆಗೂ 74 ಪಂದ್ಯಗಳನ್ನಾಡಿದ್ದು, ಅದರಲ್ಲಿ 14 ಅರ್ಧಶತಕ ಕೂಡಿದೆ. ಒಟ್ಟಾರೆಯಾಗಿ ಗಿಲ್ ಅವರು 1900 ರನ್ಸ್ ಸಿಡಿಸಿದ್ದಾರೆ. 2022ರಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಅಡಿದ್ದರು ಗಿಲ್. ಇದನ್ನು ಓದಿ..RCB IPL 2023: ಹೊರಹೋಗಬೇಕಾಗಿದ್ದ ಸ್ಟಾರ್ ಪ್ಲೇಯರ್ ಅನ್ನು ಆರ್ಸಿಬಿ ತಂಡದಲ್ಲಿ ಉಳಿಯುವಂತೆ ಮಾಡಿದ ಕಾಣದ ಕೈ ಯಾರದ್ದು ಗೊತ್ತೇ?? DK ಹೇಳಿದ್ದೇನು ಗೊತ್ತೇ?