IPL 2023: ಮುಂಬೈ ತಂಡಕ್ಕೆ ಬಿಗ್ ಶಾಕ್: ಈತನಿಲ್ಲದೆ ರೋಹಿತ್ ಕಪ್ ಗೆಲ್ಲಲು ಸಾಧ್ಯವೇ ಇಲ್ಲ. ಟಾಪ್ ಬೌಲರ್ ಔಟ್ ಯಾರು ಗೊತ್ತೇ??
IPL 2023: ಮುಂಬೈ ತಂಡಕ್ಕೆ ಬಿಗ್ ಶಾಕ್: ಈತನಿಲ್ಲದೆ ರೋಹಿತ್ ಕಪ್ ಗೆಲ್ಲಲು ಸಾಧ್ಯವೇ ಇಲ್ಲ. ಟಾಪ್ ಬೌಲರ್ ಔಟ್ ಯಾರು ಗೊತ್ತೇ??
IPL 2023: 2023ರ ಐಪಿಎಲ್ (IPL) ಸೀಸನ್ ಶುರುವಾಗುವುದಕ್ಕೆ ಉಳಿದಿರುವುದು ಒಂದು ತಿಂಗಳು, ಮಾರ್ಚ್ 31ರಿಂದ ಐಪಿಎಲ್ ಶುರುವಾಗಲಿದ್ದು, ಮೊದಲ ಪಂದ್ಯ ಸಿ.ಎಸ್.ಕೆ (CSK) ವರ್ಸಸ್ ಕಳೆದ ಸೀಸನ್ ವಿನ್ನರ್ ಗುಜರಾತ್ ಟೈಟನ್ಸ್ (Gujarat Titans) ನಡುವೆ ನಡೆಯಲಿದೆ. ಎಲ್ಲಾ ತಂಡಗಳು ಐಪಿಎಲ್ ಗಾಗಿ ತಯಾರಿ ನಡೆಸುತ್ತಿವೆ. ಹೀಗಿರುವಾಗ, ಐದು ಸಾರಿ ಚಾಂಪಿಯನ್ಸ್ ಆಗಿರುವ ಮುಂಬೈ ತಂಡಕ್ಕೆ ಐಪಿಎಲ್ ಶುರುವಾಗುವುದಕ್ಕಿಂತ ಮೊದಲೇ ದೊಡ್ಡ ಶಾಕ್ ಎದುರಾಗಿದೆ. ಮುಂಬೈ ಇಂಡಿಯನ್ಸ್ ಟಾಪ್ ಬೌಲರ್ ತಂಡಕ್ಕೆ ಬರುವುದು ಅನುಮಾನ ಎನ್ನಲಾಗಿದೆ.
ಐಪಿಎಲ್ ಇಂದ ಹೊರಗಿರುತ್ತಾರೆ ಎನ್ನಲಾಗುತ್ತಿರುವ ಮತ್ಯಾರು ಅಲ್ಲ, ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರ (Jasprit Bumrah). ಇವರು ಕಳೆದ 7 ತಿಂಗಳುಗಳಿಂದ ಕ್ರಿಕೆಟ್ ಇಂದ ದೂರವೇ ಇದ್ದಾರೆ, ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ ಟೂರ್ನಿಯ ನಡುವೆ ಬುಮ್ರ ಅವರಿಗೆ ಬೆನ್ನಿನ ಸಮಸ್ಯೆ ಕಾಣಿಸಿಕೊಂಡಿತು, ಈ ಕಾರಣಕ್ಕೆ ಅವರು ನ್ಯಾಷನಲ್ ಟೀಮ್ ಇಂದ ಹೊರಗಿದ್ದು, ಸೆಪ್ಟೆಂಬರ್ ನಲ್ಲಿ ನಡೆದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australia) ಸರಣಿ ಮೂಲಕ ಕಂಬ್ಯಾಕ್ ಮಾಡಿದರು, ಆದರೆ ಎರಡು ಪಂದ್ಯಗಳನ್ನು ಆಡಿದ ನಂತರ ಮತ್ತೊಮ್ಮೆ ಬೆನ್ನುನೋವು ಶುರುವಾಯಿತು.. ಇದನ್ನು ಓದಿ..IPL 2023: ಈ ಬಾರಿಯ ಐಪಿಎಲ್ ನಲ್ಲಿ ಅಬ್ಬರಿಸುವ ಟಾಪ್ 5 ಆಟಗಾರರನ್ನು ಹೆಸರಿಸಿದ ಗಂಗೂಲಿ; ಆಯ್ಕೆಯಾದ ಯುವಕರು ಯಾರ್ಯಾರು ಗೊತ್ತೇ??
ಈ ಕಾರಣಕ್ಕೆ ಬುಮ್ರ ಅವರು ಕ್ರಿಕೆಟ್ ಇಂದ ಹೊರಗಿದ್ದು ಚಿಕಿತ್ಸೆ ವಿಶ್ರಾಂತಿ ಪಡೆಯುತ್ತಿದ್ದರು. ಐಪಿಎಲ್ ಮೂಲಕ ಜಸ್ಪ್ರೀತ್ ಬುಮ್ರ ಕಂಬ್ಯಾಕ್ ಮಾಡಬಹುದು ಎನ್ನಲಾಗಿತ್ತು, ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಬುಮ್ರ ಅವರು ಪೂರ್ತಿಯಾಗಿ ಚೇತರಿಸಿಕೊಳ್ಳುವುದಕ್ಕೆ ಇನ್ನು ತುಂಬಾ ಸಮಯ ಬೇಕಾಗುತ್ತದೆ. ಪ್ರಸ್ತುತ ಬುಮ್ರ ಅವರು ಎನ್.ಸಿ.ಎ (NCA) ನಲ್ಲಿ ತರಬೇತಿ ಪಡೆಯುತ್ತಿದ್ದಾರೆ . ಈ ಕಾರಣಕ್ಕೆ ಬುಮ್ರ ಅವರು ಐಪಿಎಲ್ ಮತ್ತು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ನಲ್ಲಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲ ಎನ್ನಲಾಗಿದ್ದು, ಅಕ್ಟೋಬರ್ -ನವೆಂಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI Worldcup) ಮೂಲಕ ಕಂಬ್ಯಾಕ್ ಮಾಡಬಹುದು ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..RCB IPL 2023: ಹೊರಹೋಗಬೇಕಾಗಿದ್ದ ಸ್ಟಾರ್ ಪ್ಲೇಯರ್ ಅನ್ನು ಆರ್ಸಿಬಿ ತಂಡದಲ್ಲಿ ಉಳಿಯುವಂತೆ ಮಾಡಿದ ಕಾಣದ ಕೈ ಯಾರದ್ದು ಗೊತ್ತೇ?? DK ಹೇಳಿದ್ದೇನು ಗೊತ್ತೇ?