ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ದಿಡೀರ್ ಎಂದು ಅಣ್ಣಾವ್ರ ಮ್ಯಾಟರ್ ಕೆಣಕಿದ ಕಿಶೋರ್: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದಕ್ಕೆ ಅಣ್ಣಾವ್ರ ಬಗ್ಗೆ ಏನಾದ್ರು ಗೊತ್ತೇ??

1,462

Get real time updates directly on you device, subscribe now.

Kannada News: ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಕಿಶೋರ್ (Kishore) ಅವರು, ಸಿನಿಮಾ ಇಂದ ಎಷ್ಟು ಫೇಮಸ್ ಆಗಿದ್ದಾರೋ, ತಾವು ಕೊಡುವ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕಿಶೋರ್ ಅವರು ಹಲವು ವಿಕಬಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅಣ್ಣಾವ್ರು ಚಪ್ಪಲಿ ಬಿಟ್ಟು ಹಾಡು ಹಾಡಿರುವ ಫೋಟೋ ಒಂದನ್ನು ಶೇರ್ ಮಾಡಿ, ಅದರ ಬಗ್ಗೆ ಮಾತನಾಡಿದ್ದು. ಅವುಗಳ ಬಗ್ಗೆ ತಿಳಿಸುತ್ತೇವೆ ನೋಡಿ..

“ಇತ್ತೀಚೆಗೆ ಡಾ||ರಾಜ್ ಕುಮಾರ್ (Dr Rajkumar) ರವರ ಈ ವಿಡಿಯೋ ಜೊತೆ ಅವರ “ಚಪ್ಪಲಿ” ಬಿಟ್ಟು ದೇವರ ನಾಮ ಹಾಡಿದ ಸಂಸ್ಕೃತಿಯನ್ನು ಹೊಗಳಿ ನಮ್ಮ ಸಂಸ್ಕೃತಿಯ ವಾರಸುದಾರರು ಹಾಕಿದ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡಿ ನನಗೂ ಬಂತು. ನನಗೆ ಕುತೂಹಲ ಮೂಡಿಸಿದ್ದೇನೆಂದರೆ ಆ ಹಾಡು ಹೇಳಿದ್ದು ಇದಕ್ಕೆ ತದ್ವಿರುದ್ಧ.
“ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ, ಪಾಪವಂತೆ ಪುಣ್ಯವಂತೆ ಕಾಣೆ, ನಾದವಂತೆ ವೇದವಂತೆ ಒಂದೂ ತಿಳಿಯೆ, ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ, ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ???” ಇದರಲ್ಲಿ ಯಾವುದು ಸರಿ?? ಇದನ್ನು ಓದಿ..Kannada News: ಖ್ಯಾತ ನಟನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ನಟಿ ಅಂಜಲಿ. ಏನಾಗಿದೆ ಅಂತೇ ಗೊತ್ತೇ? ನಟ ಮಾಡಿದ್ದೇನು ಗೊತ್ತೆ??

ನನ್ನ ಪ್ರಕಾರ ನಾವಿಲ್ಲಿ ನೋಡಬೇಕಾದ್ದು ಅಣ್ಣಾವ್ರ ಚಪ್ಪಲಿಯಲ್ಲ ನಮ್ಮಣ್ಣ ರಾಜಕುಮಾರ ಸಮಾಜದ ಯಾವ ನಂಬಿಕೆ ನಿಲುವುಗಳನ್ನೂ ಸಾರ್ವಜನಿಕವಾಗಿ ಅಲ್ಲಗಳೆಯಲೇ ಇಲ್ಲ. ಅವರಿಗೆ ತನ್ನ ಪ್ರತಿಭೆಯ ಮತ್ತದರ ಸಾಧ್ಯತೆಗಳ ಬಗ್ಗೆ ಇದ್ದ ಅರಿವು ಮತ್ತು ಅದರ ಮೂಲಕ ಮಾತ್ರ ಅವರ ಬಂಡಾಯ. ಅದರ ಸೊಗಸೂ ಏನೆಂದರೆ ಚಪ್ಪಲಿ ಬಿಟ್ಟು ಮಡಿವಂತರನ್ನು ಮೆಚ್ಚಿಸುತ್ತಾ ಅವರನ್ನೂ ಒಳಗೊಳ್ಳುತ್ತಲೇ ಭಕ್ತಿ ಪ್ರೀತಿಯ ನಿಯಮ ಗಳ ಮುರಿದು ಅವುಗಳ ನಿಜಾರ್ಥ ಹಾಡಿಮೆರೆಯುವರು, ಮಡಿವಂತರಲ್ಲೂ ಭಾವಬಿಂಬಿಸುವರು. ಹಾಗಾಗಿ ಅಣ್ಣ ಬಿಟ್ಟಿದ್ದು ಚಪ್ಪಲಿಯಲ್ಲ, ಢಂಬಾಚಾರವನ್ನು. ಇದನ್ನೇ ನಾವು ಜಾಣಪದ ಪ್ರತಿಭೆ ಎನ್ನುವುದು. ಆ ಅಣ್ಣನೇ ಕಣ್ ಹೊಡೆದಂತೆ ..”ಎಂದು ನಟ ಕಿಶೋರ್ ಅವರು ಬರೆದುಕೊಂಡಿದ್ದಾರೆ. ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Kannada News: ಸಾಫ್ಟ್ವೇರ್ ಹುಡುಗಿಯ ಮೇಲೆ ಸ್ವಂತ ಚಿಕ್ಕಪ್ಪನ ದರ್ಬಾರ್. ಪಾಪ ಆ ಸಾಫ್ಟ್ ಹುಡುಗಿಗೆ ಏನು ಮಾಡಿದ್ದಾನೆ ಗೊತ್ತೇ??

Get real time updates directly on you device, subscribe now.