Cricket News: KL ರಾಹುಲ್ ಬೇಡವೇ ಬೇಡ, ಈತನಿಗೆ ಆರಂಭಿಕ ಸ್ಥಾನ ನೀಡಲಿ ಎಂದ ದಿನೇಶ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: KL ರಾಹುಲ್ ಬೇಡವೇ ಬೇಡ, ಈತನಿಗೆ ಆರಂಭಿಕ ಸ್ಥಾನ ನೀಡಲಿ ಎಂದ ದಿನೇಶ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: ಕರ್ನಾಟಕ ಮೂಲದ ಆಟಗಾರ ಕೆ.ಎಲ್.ರಾಹುಲ್ (KL Rahul) ಅವರು ಇನ್ನು ಫಾರ್ಮ್ ಕಂಡುಕೊಂಡಿಲ್ಲ, ಇವರಿಗೆ ಎಷ್ಟೇ ಅವಕಾಶಗಳನ್ನು ನೀಡುತ್ತಿದ್ದರು ಸಹ, ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಎರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ 20 ರನ್ ಗಳಿಸಿ ಔಟ್ ಆದ ರಾಹುಲ್ ಅವರು, ಎರಡನೇ ಟೆಸ್ಟ್ ಪಂದ್ಯದಲ್ಲಿ 17 ಮತ್ತು 1 ರನ್ ಗಳಿಸಿ ಔಟ್ ಆದರು. ಇದರಿಂದ ರಾಹುಲ್ ಅವರು ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಕೆ.ಎಲ್.ರಾಹುಲ್ ಅವರು ಪದೇ ಪದೇ ಟೀಕೆಗೆ ಗುರಿಯಾಗುತ್ತಿರುವುದರಿಂದ, ಇವರನ್ನು ತಂಡದಿಂದ ಹೊರಗಿಡುವುದು ಒಳ್ಳೆಯದು, ರಾಹುಲ್ ಅವರ ಬದಲಾಗಿ ಯೋಗ ಅದ್ಭುತ ಫಾರ್ಮ್ ನಲ್ಲಿರುವ ಶುಬ್ಮನ್ ಗಿಲ್ (Shubman Gill) ಅವರಿಗೆ ಅವಕಾಶ ಕೊಡುವುದು ಉತ್ತಮ ಎನ್ನುವುದು ನೆಟ್ಟಿಗರ ಆಯ್ಕೆ ಆಗಿದೆ. ಶುಬ್ಮನ್ ಗಿಲ್ ಅವರು ಏಕದಿನ ಸರಣಿಯಲ್ಲಿ ದ್ವಿಶತಕ, ಟಿ20 ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಇವರಿಗೆ ಅವಕಾಶ ನೀಡುವುದು ಒಳ್ಳೆಯದು ಎಂದು ದಿನೇಶ್ ಕಾರ್ತಿಕ್ (Dinesh Karthik) ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಕೆ.ಎಲ್.ರಾಹುಲ್ ಅವರು ಔಟ್ ಆಗಿರುವ ಎಸೆತಗಳನ್ನು ಗಮನಿಸಿದರೆ, ಅದರಲ್ಲಿ ಅವರು ಉತ್ತಮವಾದ ಶಾಟ್ ಗಳನ್ನೇ ಆಡಬಹುದಿತ್ತು. ಆ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡದೆ ಹೋದರೆ, ಅವರನ್ನು ಆಡುವ ಬಳಗದಿಂದ ತೆಗೆಯಬಹುದು ಎಂದು ಅವರಿಗು ಗೊತ್ತಿರುತ್ತದೆ.. ಇದನ್ನು ಓದಿ..RCB IPL 2023: ಆರ್ಸಿಬಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಬಿಗ್ ಶಾಕ್: ಪ್ರಮುಖ ಬೌಲರ್ ಆಟವಾಡುವುದೇ ಅನುಮಾನ. ಈತನಿಲ್ಲದೆ ಹೇಗೆ??

ಒಂದು ಅಥವಾ ಎರಡು ಇನ್ನಿಂಗ್ಸ್ ಮಾತ್ರವಲ್ಲ, ಕಳೆದ ಐದಾರು ಟೆಸ್ಟ್ ಪಂದ್ಯಗಳಿಂದ ಹೀಗೆ ಆಡುತ್ತಿದ್ದಾರೆ. ರಾಹುಲ್ ಅವರು ಮೂರು ಸ್ವರೂಪದ ಕ್ರಿಕೆಟ್ ನಲ್ಲೂ ಕ್ಲಾಸ್ ಆಟಗಾರ ಎನ್ನುವುದು ನಿಜ, ಆದರೆ ಕೆಲವೊಮ್ಮೆ ಅವರು ಟೆಕ್ನಿಕ್ಸ್ ಗಳನ್ನು ಫಾಲೋ ಮಾಡುವುದಿಲ್ಲ. ಇದಲ್ಲವು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನನಗೆ ಗೊತ್ತಿದೆ. ಹಾಗಾಗಿ ರಾಹುಲ್ ಅವರು ಸ್ವಲ್ಪ ವಿಶ್ರಾಂತಿ ಪಡೆದು, ಓಡಿಐ ತಂಡಕ್ಕೆ ಮರಳಿ ಬರಬೇಕು. ಮೂರನೇ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಲು ಶುಬ್ಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಬಹಳ ಚೆನ್ನಾಗಿ ಆಡುತ್ತಿದ್ದಾರೆ.. ಮುಂದಿನ ಪಂದ್ಯಕ್ಕೆ ನಾನು ಈ ಒಂದು ಬದಲಾವಣೆಯನ್ನು ಬಯಸುತ್ತೇನೆ. ಕೆ.ಎಲ್.ರಾಹುಲ್ ಅವರಿಗೆ ಇದು ಅಗ್ನಿಪರೀಕ್ಷೆ ಆಗಿದ್ದು, ಇದರ ಬಗ್ಗೆ ನನಗೆ ಬೇಸರವಿದೆ..”ಎಂದು ಹೇಳಿದ್ದಾರೆ ದಿನೇಶ್ ಕಾರ್ತಿಕ್. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್. 6,6,6,6,6,6 – ಹೇಗಿತ್ತು ಗೊತ್ತೇ ಅಬ್ಬರ??