Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್. 6,6,6,6,6,6 – ಹೇಗಿತ್ತು ಗೊತ್ತೇ ಅಬ್ಬರ??

Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್. 6,6,6,6,6,6 – ಹೇಗಿತ್ತು ಗೊತ್ತೇ ಅಬ್ಬರ??

Cricket News: ಟೀಮ್ ಇಂಡಿಯಾದ (Team India) ಬ್ಯಾಟ್ಸ್ಮನ್ ನಮ್ಮ ಆರ್ಸಿಬಿ (RCB) ತಂಡದ ಪ್ರಮುಖ ಫಿನಿಷರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಈಗ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದಿರುವುದರಿಂದ ಬಿಡುವಾಗಿರುವ ಕಾರ್ತಿಕ್ ಅವರು, ಡಿವೈ ಪಾಟೀಲ್ ಕಪ್ ಟಿ20 ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸರಣಿ ನವಿ ಮುಂಬೈನಲ್ಲಿ ನಡೆಯುತ್ತಿದೆ. ಇದರಲ್ಲಿ ಡಿವೈ ಬಿ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರು ಕಾಣಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಡಿವೈ ತಂಡವೇ ಬ್ಯಾಟಿಂಗ್ ಶುರು ಮಾಡಿತು, ಆದರೆ ತಂಡಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ, ಯಶ್ ಧುಲ್ 29 ರನ್ಸ್ ಗಳಿಸಿದರು, ಹಾರ್ದಿಕ್ ತಮೋರೆ ಅವರು ಕೂಡ 29 ರನ್ಸ್ ಗಳಿಸಿದರು. ಮಿಡ್ಲ್ ಆರ್ಡರ್ ನಲ್ಲಿ ಬಂದ ದಿನೇಶ್ ಕಾರ್ತಿಕ್ ಅವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟರು. ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಕಳಿಸಿ, ಬೌಂಡರಿ ಸಿಕ್ಸರ್ ಭಾರಿಸಿದರು. 5 ಬೌಂಡರಿ, 6 ಸಿಕ್ಸರ್ ಸೇರಿದಂತೆ ಕೇವಲ 38 ಎಸೆತಗಳಲ್ಲಿ ಭರ್ಜರಿ 75 ರನ್ಸ್ ಭಾರಿಸಿದರು ದಿನೇಶ್ ಕಾರ್ತಿಕ್. ಇದನ್ನು ಓದಿ..Cricket News: ಸೋತರು ಬುದ್ಧಿ ಕಲಿಯದ ಆಸ್ಟ್ರೇಲಿಯನ್ನರು: ಟೀಮ್ ಇಂಡಿಯಾ ಗೆ ವಾರ್ನಿಂಗ್ ಕೊಟ್ಟು ಬ್ರೆಟ್ ಲೀ ಹೇಳಿದ್ದೇನು ಗೊತ್ತೆ?

ಕಾರ್ತಿಕ್ ಅವರ ಈ ಕೊಡುಗೆಯಿಂದ ತಂಡವು 186 ರನ್ಸ್ ಗಳಿಸಲು ಸಾಧ್ಯವಾಯಿತು. 187 ರನ್ಸ್ ಗಳ ಭರ್ಜರಿ ಗುರಿಯನ್ನು ತಲುಪಬೇಕಿದ್ದ ಆರ್.ಬಿ.ಐ ತಂಡವು 161 ರನ್ಸ್ ಗಳಿಸಿತು, ಇದರಿಂದ ಡಿವೈ ತಂಡಕ್ಕೆ ಭರ್ಜರಿ ಜಯ ಸಿಕ್ಕಿತು. ಈ ಪಂದ್ಯದಲ್ಲಿ ಇಂಥಹ ಸ್ಫೋಟಕ ಪ್ರದರ್ಶನ ನೀಡುವ ಮೂಲಕ ದಿನೇಶ್ ಕಾರ್ತಿಕ್ ಅವರು ಫಾರ್ಮ್ ನಲ್ಲಿರುವುದನ್ನು ಪ್ರೂವ್ ಮಾಡಿದ್ದಾರೆ. ಕಾರ್ತಿಕ್ ಅವರ ಈ ಇನ್ನಿಂಗ್ಸ್ ನೋಡಿ ಅಭಿಮಾನಿಗಳು ಆರ್ಸಿಬಿ ತಂಡ ಇದು ಬಹಳ ಒಳ್ಳೆಯದು ಎನ್ನುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ, ಈ ಸಾರಿ ಆರ್ಸಿಬಿ ಕಪ್ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..RCB IPL 2023: ಆರ್ಸಿಬಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಬಿಗ್ ಶಾಕ್: ಪ್ರಮುಖ ಬೌಲರ್ ಆಟವಾಡುವುದೇ ಅನುಮಾನ. ಈತನಿಲ್ಲದೆ ಹೇಗೆ??