RCB IPL 2023: ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಬಲಾಢ್ಯ ಬ್ಯಾಟ್ಸಮನ್ ಗೆ ಆಯ್ತು ಇಂಜುರಿ: ಏನಾಗಿದೆ ಗೊತ್ತೇ??

RCB IPL 2023: ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಬಲಾಢ್ಯ ಬ್ಯಾಟ್ಸಮನ್ ಗೆ ಆಯ್ತು ಇಂಜುರಿ: ಏನಾಗಿದೆ ಗೊತ್ತೇ??

RCB IPL 2023: ಐಪಿಎಲ್ (IPL) ಸೀರೀಸ್ ಶುರುವಾಗಲು ಇನ್ನುಳಿದಿರುವುದು ಕೆಲವೇ ಕೆಲವು ದಿನಗಳು. ಮಾರ್ಚ್ 31ರಿಂದ ಐಪಿಎಲ್ ಶುರುವಾಗಲಿದ್ದು, ಈಗಾಗಲೇ ವೇಳಾಪಟ್ಟಿ ಬಿಡುಗಡೆ ಆಗಿದೆ, ಮೊದಲ ಪಂದ್ಯ ಕಳೆದ ವರ್ಷ ಟ್ರೋಫಿ ಗುಜರಾತ್ ಟೈಟನ್ಸ್ (Gujarat Titans) ಮತ್ತು ಸಿ.ಎಸ್.ಕೆ (CSK) ತಂಡದ ವಿರುದ್ಧ ನಡೆಯಲಿದೆ. ಹಾಗೆಯೇ ಆರ್ಸಿಬಿ (RCB) ತಂಡದ ಮೊದಲ ಪಂದ್ಯ ಏಪ್ರಿಲ್ 2ರಂದು ಶುರುವಾಗಲಿದೆ. ಟೂರ್ನಿ ಶುರುವಾಗಲು ಇನ್ನುಳಿದಿರುವುದು ಒಂದು ತಿಂಗಳು, ಹೀಗಿರುವಾಗ ಆರ್ಸಿಬಿ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಸ್ಟಾರ್ ಪ್ಲೇಯರ್ ಒಬ್ಬರು ಮತ್ತೆ ಇಂಜುರಿಗೆ ಒಳಗಾಗಿದ್ದಾರೆ.

ಆರ್ಸಿಬಿ ತಂಡದ ಪ್ರಮುಖ ಬೌಲರ್ ಜೋಶ್ ಹೇಜಲ್ ವುಡ್ (Josh Hazelwood) ಅವರು ಇಂಜುರಿ ಕಾರಣದಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಇಂದ ಹೊರಗಿದ್ದು, ಇವರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಇನ್ನು ಮತ್ತೊಬ್ಬ ಆಟಗಾರ ಹಸರಂಗ (Vanindu Hasaranga) ಅವರಿಗು ಕೂಡ, ಇನ್ನು ಎನ್.ಓ.ಸಿ ನೀಡಲಾಗಿಲ್ಲ. ಅದರ ನಡುವಲ್ಲೇ ಆರ್ಸಿಬಿ ತಂಡದ ಮತ್ತೊಬ್ಬ ಪ್ರಮುಖ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಮತ್ತೊಮ್ಮೆ ಇಂಜುರಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಮ್ಯಾಕ್ಸ್ವೆಲ್ ಅವರು ಇಂಜುರಿ ಮಾಡಿಕೊಂಡು, ಕೆಲಕಾಲ ಕ್ರಿಕೆಟ್ ಇಂದ ದೂರ ಉಳಿದು ಈಗಷ್ಟೇ ಕಂಬ್ಯಾಕ್ ಮಾಡಿದ್ದರು. ಇದನ್ನು ಓದಿ..Cricket News: KL ರಾಹುಲ್ ಬೇಡವೇ ಬೇಡ, ಈತನಿಗೆ ಆರಂಭಿಕ ಸ್ಥಾನ ನೀಡಲಿ ಎಂದ ದಿನೇಶ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಐಪಿಎಲ್ ನಲ್ಲಿ ಆರ್ಸಿಬಿ ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ತಮ್ಮ ಫಿಟ್ನೆಸ್ ಗಾಗಿ ಮ್ಯಾಕ್ಸ್ವೆಲ್ ಅವರು ಶೆಫೀಲ್ಡ್ ಟ್ರೋಫಿಯಲ್ಲಿ ಆಡುತ್ತಿದ್ದರು, ಆದರೆ ಫೀಲ್ಡಿಂಗ್ ಮಾಡುವಾಗ ಬಾಲ್ ಹಿಡಿಯುವಾಗ ಮ್ಯಾಕ್ಸ್ವೆಲ್ ಅವರ ಬೆರಳಿಗೆ ಬಡಿದು ಗಾಯಕ್ಕೆ ಒಳಗಾಗಿದ್ದಾರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ, ಆದರೆ ಸ್ಕ್ಯಾನಿಂಗ್ ಮಾಡಿಸಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಒಂದು ವೇಳೆ ಈ ಗಾಯ ಜಾಸ್ತಿಯಾದರೆ ಐಪಿಎಲ್ ನಲ್ಲಿ ಮ್ಯಾಕ್ಸ್ವೆಲ್ ಅವರು ಆಡುವುದು ಅನುಮಾನ ಆಗುತ್ತದೆ. ಒಂದು ವೇಳೆ ಹೀಗೆ ನಡೆದರೆ, ಆರ್ಸಿಬಿ ತಂಡಕ್ಕೆ ಭಾರಿ ಹಿನ್ನಡೆ ಆಗುವುದು ಖಂಡಿತ. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್. 6,6,6,6,6,6 – ಹೇಗಿತ್ತು ಗೊತ್ತೇ ಅಬ್ಬರ??