Kannada News: ಖ್ಯಾತ ನಟನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ನಟಿ ಅಂಜಲಿ. ಏನಾಗಿದೆ ಅಂತೇ ಗೊತ್ತೇ? ನಟ ಮಾಡಿದ್ದೇನು ಗೊತ್ತೆ??
Kannada News: ಖ್ಯಾತ ನಟನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ ನಟಿ ಅಂಜಲಿ. ಏನಾಗಿದೆ ಅಂತೇ ಗೊತ್ತೇ? ನಟ ಮಾಡಿದ್ದೇನು ಗೊತ್ತೆ??
Kannada News: ಈಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎನ್ನುವುದು ಇಲ್ಲವಾಗಿ ಹೋಗಿದೆ, ಹೆಣ್ಣು ಎಂದರೆ ಆಕೆಯನ್ನು ಬೇರೆ ವಿಧದಲ್ಲಿ ನೋಡಿ, ಆಕೆಯ ಮೇಲೆ ಹಿಡಿತ ಸಾಧಿಸುವ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಪ್ರಯತ್ನ ಪಡುವ ಗಂಡಸರೇ ಹೆಚ್ಚಾಗಿದ್ದಾರೆ. ಇದು ಸಾಮಾನ್ಯ ಹೆಣ್ಣುಮಕ್ಕಳ ಕಥೆ ಮಾತ್ರವಲ್ಲ, ಸೆಲೆಬ್ರಿಟಿಗಳದ್ದು ಕೂಡ ಇದೇ ಕಥೆ ಆಗಿದೆ. ಕೆಲವರು ಇಂತಹ ನೋವುಗಳನ್ನು ಹೊರಗಡೆ ಎಲ್ಲಿಯೂ ಹೇಳಿಕೊಳ್ಳಲು ಸಾಧ್ಯವಾಗದೆ ನೋವು ಅನುಭವಿಸಿದರೆ, ಇನ್ನು ಕೆಲವರು ಧೈರ್ಯ ಮಾಡಿ, ಪೊಲೀಸರ ಮೊರೆ ಹೋಗುತ್ತಿದ್ದಾರೆ..
ಇತ್ತೀಚೆಗೆ ಮಲಯಾಳಂ ನ ಖ್ಯಾತ ನಟಿ ಅಂಜಲಿ ನಾಯರ್ ಅವರಿಗೆ ಇದೇ ರೀತಿ ಆಗಿದ್ದು, ಆಕೆ ಪೊಲೀಸ್ ಸ್ಟೇಶನ್ ಗೆ ಬಂದು ಒಬ್ಬ ನಟನ ಮೇಲೆ ದೂರು ನೀಡಿದ್ದಾರೆ, ಬಳಿಕ ಮಾತನಾಡಿ.. “ನನ್ನ ಮೊದಲ ತಮಿಳು ಸಿನಿಮಾ ಚಿತ್ರೀಕರಣ ನಡೆಯುತ್ತಿದೆ, ಅಲ್ಲಿ ನನಗೆ ಈ ನಟನಿಂದ ತೊಂದರೆ ಆಗಿದೆ. ಅವರು ಸಿನಿಮಾದಲ್ಲಿ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಸಿನಿಮಾದ ಸಹ ನಿರ್ಮಾಪಕ ಕೂಡ ಹೌದು. ನನ್ನನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದರು, ನನ್ನ ಜೊತೆಗೆ ಅವರ ವರ್ತನೆ ಚೆನ್ನಾಗಿರಲಿಲ್ಲ. ಶೂಟಿಂಗ್ ಮುಗಿದಿದ್ದರು ಹೋಗಲು ಬಿಡುತ್ತಿರಲಿಲ್ಲ. ಅಲ್ಲೇ ಇರಿಸಿಕೊಳ್ಳುತ್ತಿದ್ದರು. ಇದನ್ನು ಓದಿ..Kannada News: ಪುರುಷರ ಪ್ರಾಬಲ್ಯವು ಸಿನಿಮಾ ರಂಗದಲ್ಲಿ ಹೇಗೆ ಬೆಳೆದಿದೆ ಅಂತೇ ಗೊತ್ತೇ?? ನಟಿ ರಾಕುಲ್ ಪ್ರೀತಿ ಸಿಂಗ್ ಹೇಳಿದ್ದೇನು ಗೊತ್ತೆ??
ಪದೇ ಪದೇ ಅನುಚಿತವಾಗಿ ವರ್ತಿಸುತ್ತಿದ್ದರು. ಅಷ್ಟೇ ಅಲ್ಲದೆ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲದೆ, ಒಂದು ಸಾರಿ ಚಲಿಸುತ್ತಿರುವ ರೈಲಿನಿಂದ ನನ್ನನ್ನು ತಳ್ಳಿ ನನ್ನ ಪ್ರಾಣ ತೆಗೆಯುವ ಪ್ರಯತ್ನವನ್ನು ಮಾಡಿದ್ದರು. ಇದನ್ನೆಲ್ಲ ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಶೂಟಿಂಗ್ ಮುಗಿದ ಮೇಲೆ, ನಾನು ಕೇರಳದಲ್ಲಿ ಇದ್ದೇನೆ ಎಂದು ಹೇಳಬೇಕಾಯಿತು..” ಎಂದು ನಟಿ ಅಂಜಲಿ ನಾಯರ್ ಅವರು ಹೇಳಿದ್ದಾರೆ. ಇವರು ಹೇಳಿರುವ ಈ ಮಾತುಗಳು ಈಗ ವೈರಲ್ ಆಗಿದ್ದು, ಈಕೆಗೆ ತೊಂದರೆ ಕೊಟ್ಟಿರುವ ಆ ನಟ ಯಾರು ಎಂದು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ. 2010 ರಲ್ಲಿ ನಿರ್ದೇಶಕ ಅನಿಶ್ ಅವರೊಡನೆ ಮದುವೆಯಾಗಿದ್ದ ಅಂಜಲಿ ನಾಯರ್ ಅವರು ಅನಿಶ್ ಅವರೊಡನೆ ಆದ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದರು. ನಂತರ ನಿರ್ದೇಶಕ ಅಜಿತ್ ಅವರೊಡನೆ ಎರಡನೇ ಮದುವೆಯಾಗಿದ್ದಾರೆ. ಇದನ್ನು ಓದಿ..Kannada News: ಕಿರುತೆರೆ ನಟಿ ಮೇಘ ಶೆಟ್ಟಿ ರವರಿಗೆ ಖಡಕ್ ಮಾತುಗಳ ಮೂಲಕ ಕುಟುಕಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ. ಅದೊಂದು ವಿಡಿಯೋ ಇಂದ ಏನಾಗಿದೆ ಗೊತ್ತೇ?