Cricket News: ಭಾರತ ಕ್ರಿಕೆಟ್ ತಂಡದಲ್ಲಿ ಅನಾವಶ್ಯವಾಗಿ ಇರುವ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಕೊನೆಗೂ ಹೇಳಿದ್ದೇನು ಗೊತ್ತೇ??
Cricket News: ಭಾರತ ಕ್ರಿಕೆಟ್ ತಂಡದಲ್ಲಿ ಅನಾವಶ್ಯವಾಗಿ ಇರುವ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಕೊನೆಗೂ ಹೇಳಿದ್ದೇನು ಗೊತ್ತೇ??
Cricket News: ಟೀಮ್ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ (K L Rahul) ಅವರ ಮೇಲೆ ಭರವಸೆ ಇಟ್ಟು ಎಷ್ಟೇ ಅವಕಾಶಗಳನ್ನು ಕೊಡುತ್ತಿದ್ದರು ಕೂಡ, ವೈಫಲ್ಯವನ್ನೇ ಅನುಭವಿಸುತ್ತಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಕೆ.ಎಲ್.ರಾಹುಲ್ ಅವರು ರನ್ ಗಳಿಸಲು ಪರದಾಡುತ್ತಿದ್ದಾರೆ. ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಹುಲ್ ಅವರಿಗೆ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ (India vs Australi) ಟೆಸ್ಟ್ ಪಂದ್ಯದಲ್ಲೂ ಅವಕಾಶ ಕೊಡಲಾಗಿತ್ತು, ಮೊದಲ ಟೆಸ್ಟ್ ಪಂದ್ಯದಲ್ಲಿ ವಿಫಲರಾದ ಕೆ.ಎಲ್.ರಾಹುಲ್, ಎರಡನೇ ಪಂದ್ಯದಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಸರಣಿಯ ಮೊದಲ ಇನ್ನಿಂಗ್ಸ್ ನಲ್ಲಿ 17 ರನ್ಸ್ ಗಳಿಸಿ ಕೆ.ಎಲ್.ರಾಹುಲ್ ಔಟ್ ಆಗಿದ್ದರು.
ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 2 ರನ್ ಗಳಿಸಿ ಔಟ್ ಆಗಿದ್ದಾರೆ. ಇದರಿಂದ ರಾಹುಲ್ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ಇದರಿಂದ ನೆಟ್ಟಿಗರ ವಲಯದಲ್ಲಿ ರಾಹುಲ್ ಅವರ ಮೇಲೆ ಅಸಮಾಧಾನ ವ್ಯಕ್ತವಾಗುತ್ತಿದೆ, ಶುಬ್ಮನ್ ಗಿಲ್ (Shubman Gill) ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾದರು ಸಹ, ಅವರ ಬದಲಾಗಿ ರಾಹುಲ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಕೊಡಲಾಗಿತ್ತು, ಆದರೆ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಅವರ ಬದಲಾಗಿ ಗಿಲ್ ಅವರಿಗೆ ಅವಕಾಶ ಕೊಡಬೇಕು ಎನ್ನುವುದು ನೆಟ್ಟಿಗರ ವಾದ ಆಗಿದ್ದು, ಇದರ ಬಗ್ಗೆ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಮಾತನಾಡಿ, ಕೆ.ಎಲ್.ರಾಹುಲ್ ಅವರಿಗೆ ಬೆಂಬಲ ನೀಡುವ ಸಮಯ ಇದು ಎಂದು ಹೇಳಿದ್ದಾರೆ. ಇದನ್ನು ಓದಿ..Cricket News: ಶ್ರೇಷ್ಠ ನಾಯಕ ಧೋನಿ ಗಿಂತ ಬೆಸ್ಟ್ ನಾಯಕನನ್ನು ಆಯ್ಕೆ ಮಾಡಿದ ಸೆಹ್ವಾಗ್: ಆಯ್ಕೆಯಾದ ಭಾರತೀಯ ನಾಯಕ ಯಾರು ಗೊತ್ತೇ??
“ಇದು ಬಹಳ ಕಷ್ಟದ ಸಮಯದಲ್ಲಿ ಒಂದು.. ರಾಹುಲ್ ಅವರು ವಿದೇಶದ ಪಿಚ್ ಗಳಲ್ಲಿ ಕೂಡ ಅತ್ಯಂತ ಸಕ್ಸಸ್ ಫುಲ್ ಓಪನರ್ ಎಂದು ಹೆಸರು ಪಡೆದಿದ್ದಾರೆ. ಇಂಗ್ಲೆಂಡ್, ಸೌತ್ ಆಫ್ರಿಕಾ ಇಂತಹ ದೇಶಗಳಲ್ಲಿ ಸೆಂಚುರಿ ಭಾರಿಸಿದ್ದಾರೆ. ಅಂತಹ ಆಟಗಾರನಿಗೆ ಸಪೋರ್ಟ್ ಮಾಡುವುದನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಈ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ, ಅದರಿಂದ ಹೊರಗೆ ಬರುವ ಸಾಮರ್ಥ್ಯ ಮತ್ತು ಗುಣ ಅವರಲ್ಲಿದೆ ಎಂದು ನನಗೆ ನಂಬಿಕೆ ಇದೆ. ಈ ತಂಡದ ಜೊತೆಗೆ ಕೆಲಸ ಮಾಡುವುದು ಅದ್ಭುತವಾದ ಅನುಭವ ಕೊಡುತ್ತದೆ. ಬೇರೆ ಬೇರೆ ಮಾದರಿಯ ಕ್ರಿಕೆಟ್ ನಲ್ಲಿ ಆಡುವುದು ಕಷ್ಟದ ಸವಾಲು, ಇದರಲ್ಲಿ ಟೆಕ್ನಿಕಲ್ ಆಗಿ ಕೋಚಿಂಗ್ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಕಷ್ಟದ ಸಮಯದಲ್ಲಿ ಅವರಿಗೆ ಸಪೋರ್ಟ್ ಮಾಡುವುದು ತುಂಬಾ ಮುಖ್ಯ..” ಎಂದು ರಾಹುಲ್ ದ್ರಾವಿಡ್ ಅವರು ಹೇಳಿದ್ದಾರೆ. ಇದನ್ನು ಓದಿ..Cricket News: ಪಂದ್ಯದ ಮಧ್ಯದಲ್ಲಿಯೇ ವಿರಾಟ್ ಗೆ ಪಾರ್ಸೆಲ್ ನಲ್ಲಿ ಬಂದದ್ದು ಏನು ಗೊತ್ತೇ?? ಅದ್ಯಾಕೆ ಅದೇ ಸಮಯಕ್ಕೆ ಬಂತು ಗೊತ್ತೇ??