ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಪಂದ್ಯದ ಮಧ್ಯದಲ್ಲಿಯೇ ವಿರಾಟ್ ಗೆ ಪಾರ್ಸೆಲ್ ನಲ್ಲಿ ಬಂದದ್ದು ಏನು ಗೊತ್ತೇ?? ಅದ್ಯಾಕೆ ಅದೇ ಸಮಯಕ್ಕೆ ಬಂತು ಗೊತ್ತೇ??

246

Get real time updates directly on you device, subscribe now.

Cricket News: ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ನಡೆಯುತ್ತಿದೆ, ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಗೆದ್ದುಕೊಂಡ ಭಾರತ ಇದೀಗ ಎರಡನೇ ಪಂದ್ಯವನ್ನು ಮೂರನೇ ದಿನವೇ ಗೆದ್ದುಕೊಂಡಿದೆ. ದೆಹಲಿಯ ಫಿರೋಜ್ ಶಾ ಮೈದಾನದಲ್ಲಿ ಈ ಪಂದ್ಯ ನಡೆಯಿತು. ಇದರಲ್ಲೂ ಗೆದ್ದು 2-0 ಅಂತರದಲ್ಲಿ ಭಾರತ ತಂಡ ಮುನ್ನಡೆ ಸಾಧಿಸಿದೆ, ಪಂದ್ಯ ನಡೆದ ಎರಡನೆಯ ದಿನ ವಿರಾಟ್ ಕೊಹ್ಲಿ (Virat Kohli) ಅವರು ವಿವಾದಾತ್ಮವಾಗಿ ಔಟ್ ಆದರು, ಅವರು ಔಟ್ ಆದ ನಂತರ ವಿರಾಟ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರಿಗೆ ಬಂದ ಪಾರ್ಸಲ್ ನಲ್ಲಿ ಏನಿತ್ತು ಎಂದು ಅಭಿಮಾನಿಗಳಿಗೆ ಕುತೂಹಲ ಶುರುವಾಗಿದೆ.

ವಿರಾಟ್ ಕೊಹ್ಲಿ ಅವರು ಅಂದು ಔಟ್ ಆಗಿ ಹೊರಗಡೆ ಹೋದ ನಂತರ, ಬಹಳ ಬೇಸರದಲ್ಲಿ ಕುಳಿತಿದ್ದರು, ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರೊಡನೆ ಮಾತನಡುತ್ತಿದ್ದರು. ಆಗ ಒಬ್ಬ ವ್ಯಕ್ತಿ ಊಟದ ಪ್ಯಾಕೆಟ್ ತೆಗೆದುಕೊಂಡು ಬಂದು ಏನನ್ನೋ ಹೇಳುತ್ತಾರೆ, ಆಗ ವಿರಾಟ್ ಅವರ ಮೂಡ್ ಪೂರ್ತಿಯಾಗಿ ಬದಲಾಗಿ ಕೈಯಲ್ಲಿ ಹೊಡೆದು ಏನನ್ನೋ ಸೂಚನೆ ಕೊಡುತ್ತಾರೆ. ಪ್ಯಾಕೆಟ್ ನಲ್ಲಿ ಬಂದಿದ್ದು ಏನು ಎನ್ನುವ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು. ಪಂದ್ಯ ಮುಗಿದ ನಂತರ ರಾಹುಲ್ ದ್ರಾವಿಡ್ ಅವರು ಈಗ ಆ ವಿಚಾರದ ಬಗ್ಗೆ ತಿಳಿಸಿದ್ದಾರೆ.. “ಅದು ಚೋಲೇ ಬಟೂರೆ ಅಲ್ಲ ಕುಲ್ಚಾ ಚೋಲೇ ಆಗಿತ್ತು..ಅದಕ್ಕೆ ಅವರು ನನಗೆ ಪ್ರಚೋದನೆ ಕೊಡುತ್ತಿದ್ದರು. ಇದನ್ನು ಓದಿ..Cricket News: ಶ್ರೇಷ್ಠ ನಾಯಕ ಧೋನಿ ಗಿಂತ ಬೆಸ್ಟ್ ನಾಯಕನನ್ನು ಆಯ್ಕೆ ಮಾಡಿದ ಸೆಹ್ವಾಗ್: ಆಯ್ಕೆಯಾದ ಭಾರತೀಯ ನಾಯಕ ಯಾರು ಗೊತ್ತೇ??

ನನಗೆ ಈಗಾಗಲೇ 50 ವರ್ಷ ಆಗಿರುವುದರಿಂದ, ಆ ಆಹಾರವನ್ನು ನಿಭಾಯಿಸಲು ನನ್ನಿಂದ ಸಾಧ್ಯವಿಲ್ಲ ಎಂದು ನಾನು ಹೇಳಿದೆ..” ಎಂದು ನಾನು ಹೇಳಿದೆ ಎಂದು ದ್ರಾವಿಡ್ ಅವರು ಹೇಳಿದ್ದಾರೆ. ಪಂದ್ಯದ ಬಗ್ಗೆ ಹೇಳುವುದಾದರೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ಸ್ ಗಳಿಸಿ ಎಲ್ಲಾ ವಿಕೆಟ್ಸ್ ಕಳೆದುಕೊಂಡಿತು, ಭಾರತ ತಂಡ 262 ರನ್ಸ್ ಗಳಿಸಿತು. ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು 113 ರನ್ಸ್ ಗೆ ಆಲೌಟ್ ಮಾಡಿತು ಭಾರತ, ಇನ್ನು ಟೀಮ್ ಇಂಡಿಯಾ ಕೇವಲ 4 ವಿಕೆಟ್ಸ್ ಕಳೆದುಕೊಂಡು ಗುರಿಯನ್ನು ತಲುಪಿತು. ಈ ಮೂಲಕ ಟೀಮ್ ಇಂಡಿಯಾ (Team India) 6 ವಿಕೆಟ್ಸ್ ಗಳ ಜಯ ಸಾಧಿಸಿತು..ಈ ಪಂದ್ಯದಲ್ಲಿ 10 ವಿಕೆಟ್ಸ್ ಪಡೆದು, ಬ್ಯಾಟಿಂಗ್ ನಲ್ಲಿ 26 ರನ್ಸ್ ಗಳಿಸಿದ ರವೀಂದ್ರ ಜಡೇಜಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಇದನ್ನು ಓದಿ..Cricket News: ಪದೇ ಪದೇ ವಿಫಲಾಗುತ್ತಿರುವ ರಾಹುಲ್ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ? ಇವರ ಪಾಯಿಂಟ್ ಕೂಡ ಸರಿ ಇದೆ ಎಂದದ್ದು ಯಾಕೆ ಗೊತ್ತೇ?

Get real time updates directly on you device, subscribe now.