Cricket News: ಸೋತರು ಬುದ್ಧಿ ಕಲಿಯದ ಆಸ್ಟ್ರೇಲಿಯನ್ನರು: ಟೀಮ್ ಇಂಡಿಯಾ ಗೆ ವಾರ್ನಿಂಗ್ ಕೊಟ್ಟು ಬ್ರೆಟ್ ಲೀ ಹೇಳಿದ್ದೇನು ಗೊತ್ತೆ?

Cricket News: ಸೋತರು ಬುದ್ಧಿ ಕಲಿಯದ ಆಸ್ಟ್ರೇಲಿಯನ್ನರು: ಟೀಮ್ ಇಂಡಿಯಾ ಗೆ ವಾರ್ನಿಂಗ್ ಕೊಟ್ಟು ಬ್ರೆಟ್ ಲೀ ಹೇಳಿದ್ದೇನು ಗೊತ್ತೆ?

Cricket News: ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಗಳು ಭರ್ಜರಿಯಾಗಿ ನಡೆಯುತ್ತಿದ್ದು, ಈಗ ನಡೆದಿರುವ 2 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಗೆದ್ದು ಬೀಗಿದೆ. ಮೂರನೇ ಪಂದ್ಯಕ್ಕೆ ಈಗ ಸಜ್ಜಾಗುತ್ತಿದ್ದು, ಮಾರ್ಚ್ 1ರಿಂದ 5ರವರೆಗು ಮೂರನೇ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ತಂಡ ಹೀಗೆ ಸೋತಿರುವಾಗಲು, ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರೆಟ್ ಲೀ ಅವರು ಟೀಮ್ ಇಂಡಿಯಾಗೆ ವಾರ್ನಿಂಗ್ ಕೊಟ್ಟಿದ್ದಾರೆ. 3ನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪರವಾಗಿ ಸ್ಟಾರ್ ಸ್ಪಿನ್ನರ್ ಟಾಡ್ ಮಾರ್ಫ್ ಬರುತ್ತಾರೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಬ್ರೆಟ್ ಲೀ ಅವರು, “ನೇಥನ್ ಲ್ಯಾನ್ ಅಂತಹ ಅದ್ಭುತ ಆಟಗಾರನ ನಂತರ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಯಾರು ಎಂದು ಪ್ರಶ್ನೆ ಶುರುವಾಗಿತ್ತು, ಅದಕ್ಕೆ ಈಗ ಉತ್ತರ್ಸ್ ಸಿಕ್ಕಿದೆ, ಯುವ ಆಟಗಾರ 22 ವರ್ಷದ ಟಾಡ್ ಮಾರ್ಫಿ ಆ ಸ್ಥಾನವನ್ನು ತುಂಬಲಿದ್ದಾರೆ. ಅವರ ಎಂಟ್ರಿ ಬಹಳ ಚೆನ್ನಾಗಿತ್ತು, ಆಸ್ಟ್ರೇಲಿಯಾ ತಂಡ ಸೋತಿದ್ದರು ಸಹ ಟಾಡ್ ಮಾರ್ಫಿ ಅವರ ಅದ್ಭುತ ಪ್ರದರ್ಶನಕ್ಕೆ ಎಲ್ಲರೂ ಮನಸೋತಿದ್ದಾರೆ..” ಎಂದು ಹೇಳಿದ್ದಾರೆ ಬ್ರೆಟ್ ಲೀ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ಮೂಲಕ ಟಾಡ್ ಮಾರ್ಫಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೃತ್ತಿ ಶುರು ಮಾಡಿದ್ದರು. ಇದನ್ನು ಓದಿ..Cricket News: ಭಾರತ ಕ್ರಿಕೆಟ್ ತಂಡದಲ್ಲಿ ಅನಾವಶ್ಯವಾಗಿ ಇರುವ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಕೊನೆಗೂ ಹೇಳಿದ್ದೇನು ಗೊತ್ತೇ??

ಮೊದಲ ಟೆಸ್ಟ್ ಮ್ಯಾಚ್ ನಲ್ಲೇ ಬರೋಬ್ಬರಿ 7 ವಿಕೆಟ್ಸ್ ಪಡೆದರು. ಸ್ಟಾರ್ ಪ್ಲೇಯರ್ ಗಳಾದ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಕೆ.ಎಲ್.ರಾಹುಲ್, ಆರ್.ಅಶ್ವಿನ್ ಇವರುಗಳ ವಿಕೆಟ್ಸ್ ಪಡೆದರು. ಇಂಥಹ ಹಿರಿಯ ಆಟಗಾರರ ವಿಕೆಟ್ಸ್ ಪಡೆದ ಮಾರ್ಫಿ ಅವರ ಸಾಧನೆಯನ್ನು ಬ್ರೆಟ್ ಲೀ ಅವರು ಹೊಗಳಿದ್ದಾರೆ. ಪಂದ್ಯಗಳನ್ನು ನೋಡುವುದಾದರೆ, ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 132 ರನ್ ಗಳ ಭರ್ಜರಿ ಜಯ ಸಾಧಿಸಿತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ 6 ವಿಕೆಟ್ಸ್ ಗಳ ಜಯ ಸಾಧಿಸಿತು. ಈ ಎರಡು ಪಂದ್ಯಗಳಲ್ಲಿ ಆಡಿದ ಆಟಗಾರರೇ ಮೂರನೇ ಪಂದ್ಯದಲ್ಲು ಆಡಲಿದ್ದು, ಟೀಮ್ ಇಂಡಿಯಾ ಈಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದನ್ನು ಓದಿ..Cricket News: ಪಂದ್ಯದ ಮಧ್ಯದಲ್ಲಿಯೇ ವಿರಾಟ್ ಗೆ ಪಾರ್ಸೆಲ್ ನಲ್ಲಿ ಬಂದದ್ದು ಏನು ಗೊತ್ತೇ?? ಅದ್ಯಾಕೆ ಅದೇ ಸಮಯಕ್ಕೆ ಬಂತು ಗೊತ್ತೇ??