ಕರುನಾಡ ವಾಣಿ
ಇದು ನಿಮ್ಮ ಧ್ವನಿ

RCB IPL 2023: ಆರ್ಸಿಬಿಗೆ ಐಪಿಎಲ್ ಆರಂಭಕ್ಕೂ ಮುನ್ನವೇ ಬಿಗ್ ಶಾಕ್: ಪ್ರಮುಖ ಬೌಲರ್ ಆಟವಾಡುವುದೇ ಅನುಮಾನ. ಈತನಿಲ್ಲದೆ ಹೇಗೆ??

225

Get real time updates directly on you device, subscribe now.

RCB IPL 2023: 2023ರ ಐಪಿಎಲ್ ಶುರುವಾಗಲು ಉಳಿದಿರುವುದು ಇನ್ನು ಒಂದು ತಿಂಗಳು ಮಾತ್ರ. ಈಗಾಗಲೇ ಹರಾಜು ಪ್ರಕ್ರಿಯೆ ನಡೆದು, ಎಲ್ಲಾ ತಂಡಗಳು ಪ್ರಕಟವಾಗಿದೆ, ಹಾಗೆಯೇ ಎಲ್ಲಾ ತಂಡಗಳು ಸಹ ಈಗಾಗಲೇ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ನಮ್ಮ ಆರ್ಸಿಬಿ ತಂಡ ಈ ಸಾರಿ ಕಪ್ ಗೆಲ್ಲಬೇಕು ಎಂದು ಅಭಿಮಾನಿಗಳು ಕಾತುರರಾಗಿ ಟೂರ್ನಿ ಶುರುವಾಗಲು ಕಾಯುತ್ತಿದ್ದಾರೆ. ಐಪಿಎಲ್ ಶುರುವಾಗಲು ಇನ್ನು ಒಂದು ತಿಂಗಳು ಇರುವಾಗಲೇ ಈಗ ಆರ್ಸಿಬಿ ತಂಡಕ್ಕೆ ದೊಡ್ಡ ಶಾಕ್ ಸಿಕ್ಕಿದೆ.

ಅದೇನೆಂದರೆ, ಆರ್ಸಿಬಿ ತಂಡದ ಪ್ರಮುಖ ವೇಗಿ ಆಗಿರುವ ಜೋಶ್ ಹೇಜಲ್ ವುಡ್ ಅವರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಕಷ್ಟ ಆಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈಗ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದ್ದು, ಅದರಿಂದ ಜೋಶ್ ಹೇಜಲ್ ವುಡ್ ಅವರು ಹಿಂದೆ ಸರಿದಿದ್ದಾರೆ, ಹೇಜಲ್ ವುಡ್ ಅವರಿಗೆ ಈಗ ಪಾದದ ಸ್ನಾಯು ಸಮಸ್ಯೆಗೆ ಒಳಗಾಗಿದ್ದು, ಈ ಕಾರಣದಿಂದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರಂತೆ ಜೋಶ್ ಹೇಜಲ್ ವುಡ್. ಇದನ್ನು ಓದಿ..Cricket News: ಭಾರತ ಕ್ರಿಕೆಟ್ ತಂಡದಲ್ಲಿ ಅನಾವಶ್ಯವಾಗಿ ಇರುವ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಕೊನೆಗೂ ಹೇಳಿದ್ದೇನು ಗೊತ್ತೇ??

ಈ ವಿಚಾರ ಈಗ ಆರ್ಸಿಬಿ ತಂಡಕ್ಕೆ ಮತ್ತು ಆರ್ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಒಂದು ವೇಳೆ ಜೋಶ್ ಹೇಜಲ್ ವುಡ್ ಅವರು ಮಾರ್ಚ್ ಅಂತ್ಯದವರೆಗು ಚೇತರಿಸಿಕೊಳ್ಳದೆ ಹೋದರೆ, ಅವರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಖಚಿತವಿಲ್ಲ. ಹೀಗಾಗಿ ಪ್ರಮುಖ ವೇಗಿ ಆಗಿರುವ ಇವರು ಇಲ್ಲದೆ ಹೋದರೆ, ತಂಡಕ್ಕೆ ಹಿನ್ನಡೆ ಆಗುತ್ತದೆ. 2022ರ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರ ಅತಿಹೆಚ್ಚು ವಿಕೆಟ್ಸ್ ಗಳಿಸಿದ ಎರಡನೇ ಆಟಗಾರ ಆಗಿದ್ದರು. ಇವರು 12 ಪಂದ್ಯಗಳಿಂದ 20 ವಿಕೆಟ್ಸ್ ಪಡೆದಿದ್ದರು. ಇದನ್ನು ಓದಿ..Cricket News: ಸೋತರು ಬುದ್ಧಿ ಕಲಿಯದ ಆಸ್ಟ್ರೇಲಿಯನ್ನರು: ಟೀಮ್ ಇಂಡಿಯಾ ಗೆ ವಾರ್ನಿಂಗ್ ಕೊಟ್ಟು ಬ್ರೆಟ್ ಲೀ ಹೇಳಿದ್ದೇನು ಗೊತ್ತೆ?

Get real time updates directly on you device, subscribe now.