Kannada News: ಬಿಗ್ ನ್ಯೂಸ್: ರಾಜ್ಯ ರಾಜಕಾರಣದ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ: HDK ಬಾಣ ಠುಸ್ ಆಯ್ತಾ??
Kannada News: ಬಿಗ್ ನ್ಯೂಸ್: ರಾಜ್ಯ ರಾಜಕಾರಣದ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಪ್ರಹ್ಲಾದ್ ಜೋಶಿ: HDK ಬಾಣ ಠುಸ್ ಆಯ್ತಾ??
Kannada News: ಪ್ರಸ್ತುತ ರಾಜ್ಯದಲ್ಲೋ ರಾಜಕೀಯದ ಬಿಸಿ ಜೋರಾಗಿದೆ, ಎಲೆಕ್ಷನ್ ಗೆ ಸಮಯ ಹತ್ತಿರ ಆಗುತ್ತಿರುವುದರಿಂದ ರಾಜ್ಯ ಮತ್ತು ರಾಷ್ಟ್ರ ನಾಯಕರು ಕರ್ನಾಟಕ ಎಲೆಕ್ಷನ್ ಮೇಲೆ ಗಮನ ಹರಿಸಿದ್ದಾರೆ. ಇದೀಗ ಕೇಂದ್ರದ ಗಣಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾದ ಪ್ರಹ್ಲಾದ್ ಜೋಷಿ (Prahlad Joshi) ಅವರು ಮಾತನಾಡಿದ್ದು, ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಈ ಮಾತಿನಿಂದ ಹೆಚ್.ಡಿ.ಕೆ ಅವರ ಬಾಣ ಠುಸ್ ಆಗಬಹುದು ಎನ್ನಲಾಗುತ್ತಿದೆ.
ಪೇಶ್ವೆ ಮೂಲದ ವ್ಯಕ್ತಿಯನ್ನು ಸಿಎಂ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು, ಇದಕ್ಕೆ ಪ್ರಹ್ಲಾದ್ ಜೋಶಿ ಅವರು ಪ್ರತ್ಯುತ್ತರ ಕೊಟ್ಟಿದ್ದು, “ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ ನಾನು ಏನನ್ನು ಹೇಳಲು ಆಗುವುದಿಲ್ಲ. ಈ ರೀತಿಯ ಅಪ್ರಬುದ್ಧ ಹೇಳಿಕೆಗಳಿಗೆ ನಾನು ಉತ್ತರ ಕೊಡೋಕೆ ಆಗಲ್ಲ. ನರೇಂದ್ರ ಮೋದಿ (Narendra Modi) ಅವರ ಅಡಿಯಲ್ಲಿ ಕೆಲಸ ಮಾಡೋದಕ್ಕೆ ನನಗೆ ಬಹಳ ಸಂತೋಷ ಇದೆ, ಅದು ನನ್ನ ಭಾಗ್ಯ. ಮೋದಿ ಅವರಂಥ ನಾಯಕ ಸಿಗೋದು, ಶತಮಾನಕ್ಕೆ ಒಂದು ಸಾರಿ. ಅವರ ನಾಯಕತ್ವದಲ್ಲಿ ಭಾರತ ದೇಶವು ಎಲ್ಲದರಲ್ಲಿ ಮೊದಲ ಸ್ಥಾನಕ್ಕೆ ಏರುತ್ತಿದೆ. ಇದೊಂದು ಮಹತ್ತರ ಬದಲಾವಣೆ..” ಎಂದು ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಶಿವರಾತ್ರಿಯ ಪುಣ್ಯದಿನದಂದು ಕೊಡೇಕಲ್ ಕಾಲಜ್ಞಾನ ಬಸವಣ್ಣ ನುಡಿದ ರಾಜಕೀಯ ಭವಿಷ್ಯದ ಅರ್ಥವೇನು ಗೊತ್ತೇ? ಈ ಬಾರಿ ಅಧಿಕಾರ ಯಾರದ್ದು ಗೊತ್ತೇ?
“ಇಡೀ ಭಾರತ ಮೋದಿ ಅವರನ್ನೇ ನೋಡುತ್ತಿರುವಾಗ, ಈ ರಾಜ್ಯ ರಾಜಕಾರಣದ ಕಡೆಗೆ ನನಗೆ ಆಸಕ್ತಿಯೇ ಇಲ್ಲ. ಮುಖ್ಯಮಂತ್ರಿ ಆಗಬೇಕು ಎನ್ನುವ ಪ್ರಶ್ನೆಯೇ ಇಲ್ಲ…” ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಕೂಡ ಮಾತನಾಡಿದ್ದು, ಕಾಂಗ್ರೆಸ್ ಪಕ್ಷವನ್ನು ಜನರು ನಿರಾಕರಿಸಿದ್ದಾರೆ, ಹಾಗಿದ್ದರೂ ಬಜೆಟ್ ಮಂಡಣೆಗೆ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದಿದ್ದರು, ಜನರು ಈಗಾಗಲೇ ಅವರ ಕಿವಿಯಲ್ಲಿ ಹೂವು ಇಟ್ಟಿದ್ದಾರೆ, ಇನ್ಮುಂದೆ ಅವರೇ ಕಿವಿಗೆ ಹೂವು ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಬರುತ್ತದೆ.. ಎಂದು ಹೇಳಿದ್ದಾರೆ ಇದೀಗ ಈ ಹೇಳಿಕೆ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಚುನಾವಣೆಯ ಹೊಸ್ತಿನಲ್ಲಿಯೇ ಕುಮಾರಸ್ವಾಮಿ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್. ಏನಾಗಿದೆ ಗೊತ್ತೇ??