Kannada News: ಬಿಗ್ ನ್ಯೂಸ್: ಶಿವರಾತ್ರಿಯ ಪುಣ್ಯದಿನದಂದು ಕೊಡೇಕಲ್ ಕಾಲಜ್ಞಾನ ಬಸವಣ್ಣ ನುಡಿದ ರಾಜಕೀಯ ಭವಿಷ್ಯದ ಅರ್ಥವೇನು ಗೊತ್ತೇ? ಈ ಬಾರಿ ಅಧಿಕಾರ ಯಾರದ್ದು ಗೊತ್ತೇ?

Kannada News: ಬಿಗ್ ನ್ಯೂಸ್: ಶಿವರಾತ್ರಿಯ ಪುಣ್ಯದಿನದಂದು ಕೊಡೇಕಲ್ ಕಾಲಜ್ಞಾನ ಬಸವಣ್ಣ ನುಡಿದ ರಾಜಕೀಯ ಭವಿಷ್ಯದ ಅರ್ಥವೇನು ಗೊತ್ತೇ? ಈ ಬಾರಿ ಅಧಿಕಾರ ಯಾರದ್ದು ಗೊತ್ತೇ?

Kannada News: ರಾಜ್ಯದಲ್ಲಿ ಈಗ ಚುನಾವಣೆಯ ಸಮಯ ಹತ್ತಿರ ಬಂದಾಗಿದೆ, ಎಲ್ಲಾ ಪಕ್ಷಗಳು ಕೂಡ ತಮ್ಮ ಪಕ್ಷ ಗೆಲ್ಲಬೇಕು ಎಂದು ಹೊಸ ತಂತ್ರಗಳ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹೀಗೆ ಪಕ್ಷಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿರುವ ಸಮಯದಲ್ಲಿ ಕೊಡೇಕಲ್ ಕಾಲಜ್ಞಾನ ಬಸವಣ್ಣನವರಿ ಭವಿಷ್ಯ ನುಡಿದಿದ್ದು, ಇದು ಎಲ್ಲಾ ಪಕ್ಷದವರಿಗೆ ಎಚ್ಚರಿಕೆ ಗಂಟೆಯ ಹಾಗೆ ಕೇಳಿಬಂದಿದೆ. ಮುಂದಿನ ಎಲೆಕ್ಷನ್ ನಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರದ ಯೋಗವಿಲ್ಲ ಎಂದು ಕಾಲಜ್ಞಾನ ಬಸವಣ್ಣನವರು ಹೇಳಿದ್ದು, ಈ ಮಾತು ಈಗ ಸಂಚಲನ ಸೃಷ್ಟಿಸಿದೆ.

ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ಕೊಡೇಕಲ್ ಹೆಸರಿನ ಗ್ರಾಮದಲ್ಲಿ ಕಾಲಜ್ಞಾನಿ ಬಸವಣ್ಣನವರ ದೇಗುಲ ಒಂದಿದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ದಿವಸ ಬಸವಣ್ಣನವರು ಹೇಳಿರುವ ವಚನಗಳನ್ನು ಹೇಳಲಾಗುತ್ತದೆ. ನಿನ್ನೆಯ ಹಬ್ಬದ ದಿನ, ಹೇಳಿರುವ ಭವಿಷ್ಯ ನುಡಿಯಲ್ಲಿ ಬಸವಣ್ಣನವರು ಪಕ್ಷಾಂತರಿಗಳಿಗೆ ಎಚ್ಚರಿಕೆ ನೀಡಿರುವ ಹಾಗೆ ಭಾಸವಾಗಿದೆ. 2023ರ ಎಲೆಕ್ಷನ್ ನಲ್ಲಿ ಕುದುರೆ ವ್ಯಾಪಾರ ಮಾಡುವವರಿಗೆ, ಪಕ್ಷಾಂತರ ಮಾಡುವವರಿಗೆ ಅಧಿಕಾರದ ಯೋಗ ಸಿಗುವುದಿಲ್ಲ, ಜನರಿಂದಲೇ ಅವರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮಾತಿನಂತೆಯೇ ನಡೆಯುವವರಿಗೆ ಈ ಸಾರಿ ಅಧಿಕಾರ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಆಗಾಗ್ಗೆ ಬಾಲ ಬಿಚ್ಚಲು ಪ್ರಯತ್ನ ಪಡುತ್ತಿರುವ ಚೀನಾ ಗೆ ಸೆಡ್ಡು ಹೊಡೆಯಲು ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ: ಗಡಿಯಲ್ಲಿ ಇನ್ನು ಮುಂದೆ ಹೇಗಿರಲಿದೆ ಗೊತ್ತೇ??

ಪುಣ್ಯ ಸ್ರ್ತೀಯರ ಪ್ರೀತಿ ಬಣ್ಣದ ಭಜನೆ ಅಲ್ಲ, ತನ್ನ ಜೊತೆಗಿರುವ ಗಂಡನೇ ತನಗೆ ಎಲ್ಲ ಎಂದುಕೊಂಡಿದ್ದರೆ ನಿಮಗೆ ಶಿವನಲ್ಲಿ ಮನ್ನಣೆ ಸಿಗುತ್ತದೆ ಎಂದು ಹೇಳಿದ್ದಾರೆ. ಈ ಮಾತಿನಲ್ಲಿ ಬಹಳಷ್ಟು ಅರ್ಥಗಳನ್ನು ಅರ್ಥೈಸಲಾಗುತ್ತಿದೆ. ಪಕ್ಷಾಂತರ ಮಾಡುವವರಿಗೆ, ಕುದುರೆಯ ವ್ಯಾಪಾರ ಮಾಡುವವರಿಗೆ ಈ ಸಾರಿ ಅಧಿಕಾರ ಮಾಡುವ ಯೋಗ ಸಿಗುವುದಿಲ್ಲ. ಸುಳ್ಳುಪೊಳ್ಳು ಹೇಳಿ ಬಣ್ಣದ ಮಾತನಾಡೋರಿಗೆ ಎಲೆಕ್ಷನ್ ನಲ್ಲಿ ಗೆಲುವು ಸಿಗುವುದಿಲ್ಲ, ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡು ಹೋಗುವವರಿಗೆ ಗೆಲುವು ಮತ್ತು ಅಧಿಕಾರ ಸಿಗುತ್ತದೆ ಎಂದು ಈ ಮಾತುಗಳಿಗೆ ಅರ್ಥ ಹೇಳಲಾಗಿದೆ. ಇದೇ ರೀತಿ ಕಳೆದ ವರ್ಷ ಶಿವರಾತ್ರಿ ಹಬ್ಬಕ್ಕೆ ನುಡಿದ ಭವಿಷ್ಯ ನಿಜವಾಯಿತು, ಅದೇ ರೀತಿ ಈ ವರ್ಷ ಕೂಡ ನಿಜವಾಗುತ್ತದೆ ಎಂದು ವಿಶ್ಲೇಷಣೆ ಮಾಡುವ ಬಸವರಾಜ ಭದ್ರಗೋಳ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಚುನಾವಣೆಯ ಹೊಸ್ತಿನಲ್ಲಿಯೇ ಕುಮಾರಸ್ವಾಮಿ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್. ಏನಾಗಿದೆ ಗೊತ್ತೇ??