Kannada News: ಕಿರುತೆರೆ ನಟಿ ಮೇಘ ಶೆಟ್ಟಿ ರವರಿಗೆ ಖಡಕ್ ಮಾತುಗಳ ಮೂಲಕ ಕುಟುಕಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ. ಅದೊಂದು ವಿಡಿಯೋ ಇಂದ ಏನಾಗಿದೆ ಗೊತ್ತೇ?
Kannada News: ಕಿರುತೆರೆ ನಟಿ ಮೇಘ ಶೆಟ್ಟಿ ರವರಿಗೆ ಖಡಕ್ ಮಾತುಗಳ ಮೂಲಕ ಕುಟುಕಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ. ಅದೊಂದು ವಿಡಿಯೋ ಇಂದ ಏನಾಗಿದೆ ಗೊತ್ತೇ?
Kannada News: ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ನಟಿ ಮೇಘಾ ಶೆಟ್ಟಿ ಅವರು ಈಗ ಹೊಸದೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಮೇಘಾ ಶೆಟ್ಟಿ ಅವರನ್ನು ಬಹಿರಂಗವಾಗಿ ಇನ್ಸ್ಟಾಗ್ರಾಮ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಕುಟುಂಬದ ಮರಿಯಾದೆಗೆ ಧಕ್ಕೆ ತರಬೇಡಿ ಎಂದಿದ್ದಾರೆ. ವಿಜಯಲಕ್ಷ್ಮಿ ಅವರು ಇಷ್ಟು ಕೋಪ ಮಾಡಿಕೊಳ್ಳುವಂಥದ್ದು ಏನಾಯ್ತು? ಮೇಘಾ ಶೆಟ್ಟಿ ಅವರು ಮಾಡಿದ್ದೇನು? ತಿಳಿಸುತ್ತೇವೆ ನೋಡಿ..
ನಟಿ ಮೇಘಾ ಶೆಟ್ಟಿ ಅವರು ದರ್ಶನ್ ಅವರ ಅಭಿಮಾನಿಗಳು, ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ ಇತ್ತು, ಈ ದಿನ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ದರ್ಶನ್ ಅವರ ಮನೆಯ ಮುಂದೆ ಹಾಜರಿದ್ದರು, ಇಡೀ ರಾತ್ರಿ ದರ್ಶನ್ ಅವರು ಅಭಿಮಾನಿಗಳ ಜೊತೆಗೆ ನಿಂತು ಹುಟ್ಟುಹಬ್ಬ ಆಚರಿಸಿದರು. ದರ್ಶನ್ ಅವರ ಹುಟ್ಟುಹಬ್ಬದ ದಿನ ನಟಿ ಮೇಘಾ ಶೆಟ್ಟಿ ಅವರು ಬರ್ತ್ ಡೇ ವಿಶ್ ಮಾಡಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು, ಅದರಲ್ಲಿ ಮೇಘಾ ಶೆಟ್ಟಿ, ನಟಿ ಸೋನಲ್ ಮತ್ತು ಇನ್ನಿತರರು ಸೇರಿ ಡಿಬಾಸ್ ದರ್ಶನ್ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದರಲ್ಲಿ ಎಲ್ಲರೂ ಆತ್ಮೀಯವಾಗಿದ್ದಾರೆ. ಈ ವಿಡಿಯೋ ಶೇರ್ ಮಾಡಿದ ತಕ್ಷಣವೇ ಎಲ್ಲೆಡೆ ಬಹಳ ವೈರಲ್ ಆಯಿತು. ಇದನ್ನು ಓದಿ..Kannada News: ಚುನಾವಣೆಯ ಹೊಸ್ತಿನಲ್ಲಿಯೇ ಕುಮಾರಸ್ವಾಮಿ ಗೆ ಮತ್ತೊಂದು ಶಾಕ್ ಕೊಟ್ಟ ಕೋರ್ಟ್. ಏನಾಗಿದೆ ಗೊತ್ತೇ??
ಅಭಿಮಾನಿಗಳು ಇದನ್ನು ರೀಶೇರ್ ಮಾಡಲು ಶುರು ಮಾಡಿದರು, ಈ ಕಾರಣಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮೇಘಾ ಶೆಟ್ಟಿ ಅವರ ಮೇಲೆ ಕೋಪ ಬಂದಿದ್ದು, “ನನ್ನ ಕುಟುಂಬವನ್ನು ಡ್ಯಾಮೇಜ್ ಮಾಡುವ ಇಂತಹ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುವ ಎಲ್ಲಾ ಅಭಿಮಾನಿಗಳು ಇದನ್ನು ಈಗಲೇ ನಿಲ್ಲಿಸಬೇಕು..ಒಂದು ಹೆಣ್ಣಾಗಿ ಈ ವಿಡಿಯೋ ಪೋಸ್ಟ್ ಮಾಡುವ ಮೊದಲು ಯೋಚನೆ ಮಾಡಬೇಕಿತ್ತು, ಇದರಿಂದ ನನಗೆ ಮತ್ತು ನನ್ನ ಮಗನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಮೌನವಾಗಿದ್ದರೆ, ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಇರುತ್ತೇನೆ ಎಂದು ಅರ್ಥವಲ್ಲ.. ಮೇಘಾ ಶೆಟ್ಟಿ. ” ಎಂದು ಬರೆದಿದ್ದಾರೆ. ಇದೀಗ ಈ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಪುರುಷರ ಪ್ರಾಬಲ್ಯವು ಸಿನಿಮಾ ರಂಗದಲ್ಲಿ ಹೇಗೆ ಬೆಳೆದಿದೆ ಅಂತೇ ಗೊತ್ತೇ?? ನಟಿ ರಾಕುಲ್ ಪ್ರೀತಿ ಸಿಂಗ್ ಹೇಳಿದ್ದೇನು ಗೊತ್ತೆ??