ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಆಗಾಗ್ಗೆ ಬಾಲ ಬಿಚ್ಚಲು ಪ್ರಯತ್ನ ಪಡುತ್ತಿರುವ ಚೀನಾ ಗೆ ಸೆಡ್ಡು ಹೊಡೆಯಲು ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ: ಗಡಿಯಲ್ಲಿ ಇನ್ನು ಮುಂದೆ ಹೇಗಿರಲಿದೆ ಗೊತ್ತೇ??

26

Get real time updates directly on you device, subscribe now.

Kannada News: ಚೈನಾ ದೇಶವು ಭಾರತದ ಜೊತೆಗೆ ಆಗಾಗ ಯಾವುದಾದರೂ ಒಂದು ವಿಚಾರಕ್ಕೆ ಬಾಲ ಬಿಚ್ಚುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಗಡಿಭಾಗಗಳಲ್ಲಿ ತೊಂದರೆ ಕೊಡುತ್ತಲೇ ಇರುತ್ತಾರೆ, ಹಾಗಾಗಿ ಚೈನಾ ದೇಶಕ್ಕೆ ಬಿಸಿ ಮುಟ್ಟಿಸಲಿ ಭಾರತ ಸರ್ಕಾರವು ಸರಿಯಾದ ಕ್ರಮವನ್ನು ಕೈಗೊಂಡಿದೆ. 7 ಹೊಸ ಬೆಟಾಲಿಯನ್ ರಚನೆ ಅಗಲಿದ್ದು, ಇದಕ್ಕೆ ಸುಮಾರು ₹2,808 ಕೋಟಿ ರೂಪಾಯಿ ಬೇಕಾಗಲಿದೆ. ಈ ವಿಚಾರದ ಬಗ್ಗೆ ಸಭೆ ನಡೆದಿದ್ದು, ಪ್ರಧಾನ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಟಿಬೆಟ್‌ ಮತ್ತು ಕ್ಸಿನ್‌ಜಿಯಾಂಗ್‌ ಪ್ರದೇಶಗಳಿಗೆ ರೈಲು ಮಾರ್ಗದ ವ್ಯವಸ್ಥೆಯನ್ನು ಚೈನಾ ದೇಶ ಮಾಡುತ್ತಿರುವಾಗ, ಭಾರತ ದೇಶವು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ರೈಲು ಮಾರ್ಗವು ಈಗಾಗಲೇ ವಿವಾದಕ್ಕೆ ಒಳಗಾಗಿರುವ ಅಕ್ಸಾಯ್ ಚಿನ್ ಮೂಲಕ ಹಾದು ಹೋಗುತ್ತದೆ..

ಈಸ್ಟ್ ಲಡಾಖ್ ಮತ್ತು ಆರುಣಾಚಲಪ್ರದೇಶದಲ್ಲಿ ಗಡಿ ವಿಚಾರಕ್ಕೆ ಚೈನಾ ದೇಶವು ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಇದನ್ನು ತಡೆಗಟ್ಟಲು ಹೆಚ್ಚು ಸೇವೆಯ ಅಗತ್ಯ ಇರುವುದರಿಂದ ಇಂಡೋ ಟಿಬೆಟ್ ಗಡಿಯ ಪೊಲೀಸ್ ಪಡೆಗಾಗಿ 9400 ಹೆಚ್ಚುವರಿ ಸ್ಥಾನ ತುಂಬಲು 7 ಹೊಸ ಬೆಟಾಲಿಯನ್ ಅನ್ನು ರಚಿಸಲಿದೆ. ಹಾಗೆಯೇ ಒಂದು ಸೆಕ್ಟರ್ ಬೇಸ್ಡ್ ಕೇಂದ್ರ ಕಚೇರಿ ಕೂಡ ನಿರ್ಮಾಣವಾಗಲಿದೆ. ಈ ವಿಚಾರದ ಬಗ್ಗೆ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಐಟಿಬಿಪಿ 2013-14ರಲ್ಲಿಯೇ ಇನ್ನು ಹೆಚ್ಚಿನ ಬೆಟಾಲಿಯನ್ ಗಳ ಅಗತ್ಯವಿದೆ ಎಂದು ತಿಳಿಸಿತ್ತು, ಮೊದಲಿಗೆ 12 ಬೆಟಾಲಿಯನ್ ಮಾಡಬೇಕು ಎಂದುಕೊಂಡು, ಈಗ 7 ಬೆಟಾಲಿಯನ್ ಮಾಡಲಾಗಿದೆ. ಮುಂಬರುವ ಸಮಯದಲ್ಲಿ ಚೈನಾ ಗಡಿಯಲ್ಲಿ 47 ಗಡಿ ಹೊರ ಠಾಣೆಗಳು, 12 ಸ್ಟ್ಯಾಗಿಂಗ್ ಕ್ಯಾಂಪ್ ಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನು ಓದಿ..Kannada News: ಅಂದು ದಲಿತರಿಗೆ ಮುಸ್ಲಿಂ ಹುದ್ದೆ ಎಂದು ಹೇಳಿದ್ದ ಕುಮಾರಣ್ಣ, ಇಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ? ಯಾರಿಗೆ ಅಂತೇ ಗೊತ್ತೇ DCM ಹುದ್ದೆ??

2022-23 ಇಂದ 2025-26ರ ಸಮಯದಲ್ಲಿ ಗಡಿಪ್ರದೇಶಗಳಲ್ಲಿ ಇರುವ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲಿ, ₹4,800 ಕೋಟಿ ರೂಪಾಯಿ ವೆಚ್ಚದಲ್ಲಿ ‘ವೈಬ್ರಂಟ್ ವಿಲೇಜ್’ ಯೋಜನೆಯನ್ನು ಮಾಡಲಾಗುತ್ತದೆ. ಉತ್ತರಾಖಂಡ್, ಹಿಮಾಚಲ್ ಪ್ರದೇಶ್, ಸಿಕ್ಕಿಂ, ಅರುಣಾಚಲ ಪ್ರದೇಶ್, ಜಮ್ಮು ಕಾಶ್ಮೀರ ಮತ್ತು ಲಡಾಖ್ ನಲ್ಲಿರುವ 19 ಜಿಲ್ಲೆಗಳು, 46 ಗಡಿ ಬ್ಲಾಕ್ ಇವುಗಳನ್ನು ಅಭಿವೃದ್ಧಿಗೊಳಿಸಿ ಇದರಿಂದ ಸಾವಿರಾರು ಜನರಿಗೆ ಸಹಾಯ ಆಗಬೇಕು ಎನ್ನುವುದು ಉದ್ದೇಶವಾಗಿದೆ. 2966 ಹಳ್ಳಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ಸಿಗುತ್ತದೆ, ಅಷ್ಟೇ ಅಲ್ಲದ್ದ್ 4.1ಕಿಮೀ ಉದ್ದ ಬರುವಂತಹ ಶಿಂಕು ಲಾ ಸುರಂಗ ಮಾರ್ಗ ಕೂಡ ನಿರ್ಮಾಣವಾಗಲಿದೆ, ಹಾಗೆಯೇ ರಸ್ತೆಗಳು ಅಭಿವೃದ್ಧಿಯಾಗಲಿದ್ದು, ಇದಕ್ಕಾಗಿ ₹2,500 ಕೋಟಿ ವೆಚ್ಚವಾಗಲಿದೆ.

ಇವುಗಳಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ನೋಡುವುದಾದರೆ, ಮೊದಲನೆಯದಾಗಿ, 663 ಹಳ್ಳಿಗಳಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿಯಾಗುತ್ತದೆ. ಲೋಕಲ್ ಗಳಿಗೆ ಮತ್ತು ಕೆಲಸ ಹುಡುಕಿ ಬರುವವರಿಗೆ ಕೆಲಸದ ಅವಕಾಶ, ಗಡಿ ಕಾಯುವ ಸೇನೆಗೆ ಹೆಚ್ಚು ಅನುಕೂಲಗಳು. ಸಹಕಾರ ಸಂಘ, ಸ್ವಸಹಾಯ ಸಂಘಗಳ ಅಭಿವೃದ್ಧಿ. ಕೃಷಿ ಪ್ರವಾಸೋದ್ಯಮ ಅಲ್ಲಿನ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡಲು ಪ್ರೋತ್ಸಾಹ. ಮುಂದಿನ ವರ್ಷಗಳಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳ ನಿರ್ಮಾಣ, ಡೈರಿ ಮೀನುಗಾರಿಕೆ ಮತ್ತು ಸಹಕಾರ ಸಂಘಗಳ ಸ್ಥಾಪನೆ ಆಗಬೇಕು ಎಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನು ಓದಿ..Kannada News: ಯುದ್ಧ ವಿಮಾನದ ಮೇಲೆ ದಿಡೀರ್ ಎಂದು ಹನುಮಾನ್ ಚಿತ್ರವನ್ನು ತೆಗೆದು ಹಾಕಿದ್ದು ಯಾಕೆ ಗೊತ್ತೇ? HAL ನೀಡಿದ ಕಾರಣವೇನು ಗೊತ್ತೆ??

Get real time updates directly on you device, subscribe now.