Kannada News: ಶಾರುಖ್ ಸಿನಿಮಾ ಬಾಯ್ ಕೋಟ್ ಆದರೂ ಕೂಡ ತೆರೆ ಹಿಂದೆ ಏನಾಗಿರಬಹುದು? ಅಷ್ಟು ದುಡ್ಡು ಹೇಗೆ ಮಾಡಿತು? ಎಲ್ಲವನ್ನು ಬಿಚ್ಚಿಟ್ಟ ಕಾಶ್ಮೀರ ಫೈಲ್ಸ್ ನಿರ್ದೇಶಕ. ಹೇಳಿದ್ದೇನು ಗೊತ್ತೇ??
Kannada News: ಶಾರುಖ್ ಸಿನಿಮಾ ಬಾಯ್ ಕೋಟ್ ಆದರೂ ಕೂಡ ತೆರೆ ಹಿಂದೆ ಏನಾಗಿರಬಹುದು? ಅಷ್ಟು ದುಡ್ಡು ಹೇಗೆ ಮಾಡಿತು? ಎಲ್ಲವನ್ನು ಬಿಚ್ಚಿಟ್ಟ ಕಾಶ್ಮೀರ ಫೈಲ್ಸ್ ನಿರ್ದೇಶಕ. ಹೇಳಿದ್ದೇನು ಗೊತ್ತೇ??
Kannada News: ನಟ ಶಾರುಖ್ ಖಾನ್ (Shahrukh Khan) ಅವರ ಪಠಾಣ್ (Pathan) ಸಿನಿಮಾ ಬಾಲಿವುಡ್ ಗೆ ಹೊಸಚೈತನ್ಯ ತಂದಿದೆ ಎನ್ನುವುದು ಹಲವರ ಅಭಿಪ್ರಾಯ ಆಗಿದೆ. ಪಠಾಣ್ ಸಿನಿಮಾ ಈಗಾಗಲೇ ದೇಶಾದ್ಯಂತ ಬರೋಬ್ಬರಿ 953 ಕೋಟಿ ರೂಪಾಯಿ ಹಣಗಳಿಕೆ ಮಾಡಿದೆ. ಈ ಕಥೆ ಜನರಿಗೆ ಇಷ್ಟವಾಗಿ ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಮೊದಲಿಗೆ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎನ್ನುವ ವಿಚಾರ ಕೂಡ ಹರಿದಾಡಿತ್ತು. ಅದೆಲ್ಲದರ ನಡುವೆ ಸಿನಿಮಾ ಇಷ್ಟರ ಮಟ್ಟಿಗೆ ಗೆದ್ದಿರುವ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಸಿನಿಮಾ ಯಶಸ್ಸು, ಹಣಗಳಿಕೆ ಎರಡರ ಬಗ್ಗೆಯೂ ಕಿಡಿಕಾರಿದ್ದಾರೆ, “ಈ ಸಿನಿಮಾ ಇಷ್ಟು ಹಣಗಳಿಕೆ ಮಾಡಿರುವುದು ಅತಿಹೆಚ್ಚು ಪ್ರಚಾರ ಮಾಡಿದ ಕಾರಣಕ್ಕೆ ಮಾತ್ರ..” ಎಂದು ಹೇಳಿದ್ದಾರೆ. “ಪಠಾಣ್ ಸಿನಿಮಾ ನಂತರ ಬಾಲಿವುಡ್ ನ ಎಲ್ಲರು ಕೂಡ ಮೊದಲಿದ್ದ ಹಾಗೆಯೇ ಅದೇ ಸ್ಥಾನಕ್ಕೆ ಮರಳುತ್ತಾರೆ ಎಂದು ನನಗೆ ಅನ್ನಿಸುತ್ತದೆ. ಈ ಸಿನಿಮಾದ ಯಶಸ್ಸನ್ನು ಯಶಸ್ಸು ಎನ್ನುವ ಪದದಿಂದ ಕರೆಯುವುದಕ್ಕೆ ನನಗೆ ಇಷ್ಟವಿಲ್ಲ. ಇದನ್ನು ನಾನು ವಿಜಯ ಎಂದು ಕರೆಯುತ್ತೇನೆ. ಇದು ಮೊದಲಿದ್ದಂತಹ ಶೋಷಣೆ, ನೆಪೋಟಿಸಮ್ ಇಂಥಹ ವಿಚಾರಗಳಿಂದ ಸಿಕ್ಕಿರುವ ವಿಜಯ ಇದು.. ಇದನ್ನು ಓದಿ..Airtel: ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್ ಹಾಗೂ ನೆಟ್ ಪ್ಲಿಕ್ಸ್ ಎಲ್ಲವೂ ಉಚಿತವಾಗಿ ಬೇಕು ಎಂದರೆ ಇರುವ ಉತ್ತಮ ಯೋಜನೆ ಯಾವುದು ಗೊತ್ತೇ??
ಈಗ ಬರುತ್ತಿರುವ ಸಿನಿಮಾಗಳು ರಾಜಕೀಯದಲ್ಲಿ ಇರುವವರು ಪ್ರಚಾರ ಮಾಡಿಕೊಳ್ಳುವುದಕ್ಕೆ ಇರುವ ಸಿನಿಮಾ ಹಾಗಿದೆ. ಅವರಿಗೆ ಈ ಸಿನಿಮಾ ಸಹಕಾರಿಯಾಗಿದೆ. ಈ ಸಿನಿಮಾ ಗೆದ್ದಿರೋದು ಅದರಲ್ಲಿರುವ ಚಾರ್ಮ್ ಮತ್ತು ಶಾರುಖ್ ಖಾನ್ ಅವರ ಅಭಿಮಾನಿಗಳಿಂದ. ಇದು ತಮ್ಮದೇ ಸಿನಿಮಾ ಎನ್ನುವ ಹಾಗೆ ಶಾರುಖ್ ಖಾನ್ ಅವರು ಪ್ರಚಾರ ಮಾಡಿದರು, ಈ ಸಿನಿಮಾ ಬಗ್ಗೆ ತಪ್ಪು ಪ್ರಚಾರ ಮಾಡಿದ ವ್ಯಕ್ತಿಗಳಿಂದ ಸಹ ಸಿನಿಮಾಗೆ ಈ ವಿಜಯ ಸಿಕ್ಕಿದೆ, ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದುಕೊಂಡೆ ಸಿನಿಮಾಗೆ ಪ್ರಚಾರ ನೀಡಿದ್ದಾರೆ..ಇದು ಸಾಮಾನ್ಯವಾದ ಬಾಯ್ಕಾಟ್ ಗುಂಪಲ್ಲ..” ಎಂದು ಹೇಳಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ ಚಾರ್ಮಿ ರವರು ಇಂದಿಗೂ ಮದುವೆಯಾಗದೆ ಉಳಿದಿರಲು ಕಾರಣ ಏನು ಗೊತ್ತೇ? ಪ್ರೀತಿಸಿದ್ದ ಚಾರ್ಮಿಗೆ ಏನಾಯ್ತು??