ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಯುದ್ಧ ವಿಮಾನದ ಮೇಲೆ ದಿಡೀರ್ ಎಂದು ಹನುಮಾನ್ ಚಿತ್ರವನ್ನು ತೆಗೆದು ಹಾಕಿದ್ದು ಯಾಕೆ ಗೊತ್ತೇ? HAL ನೀಡಿದ ಕಾರಣವೇನು ಗೊತ್ತೆ??

737

Get real time updates directly on you device, subscribe now.

Kannada News: ಬೆಂಗಳೂರಿನಲ್ಲಿ ನಡೆದ 2023ರ ಏರೋ ಇಂಡಿಯಾ ಶೋನಲ್ಲಿ ಅನೇಕ ವಿಮಾನಗಳನ್ನು ಪ್ರದರ್ಶಿಸಲಾಯಿತು. ಈ ಬಾರಿ HAL ಹೊಸದಾಗಿ ತಯಾರಿಸಿದ್ದ ಹನುಮಾನ್ HLFT-42 ವಿಮಾನವು ಅದರ ಮೇಲೆ ಹನುಮಾನ್ ದೇವರ ಭಾವಚಿತ್ರದೊಂದಿಗೆ ಎಲ್ಲರ ಗಮನ ಸೆಳೆದಿತ್ತು, ಆದರೆ ಈಗ ಹೆಚ್.ಎ.ಎಲ್ ಸಂಸ್ಥೆಯು ಹನುಮಾನ್ ದೇವರ ಫೋಟೋವನ್ನು ವಿಮಾನದಿಂದ ತೆಗೆದು ಹಾಕಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಸ್ವತಃ ಸಂಸ್ಥೆಯೇ ತಿಳಿಸಿದೆ. ಆದರೆ ಹನುಮಾನ್ ಫೋಟೋ ಹಾಕಿರುವುದಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಕೂಡ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದರು.

HAL ಸಂಸ್ಥೆಯು ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯ ಅಡಿಯಲ್ಲಿ ಈ HFLT-42 ವಿಮಾನವನ್ನು ತಯಾರಿಸಿದ್ದು, ಇದು ಅತ್ಯಂತ ಆಧುನಿಕವಾದ ವಿಮಾನ, ಮಾರ್ಕ್2 ರೀತಿಯ ಟೆಕ್ನಾಲಜಿ ಹೊಂದಿದ್ದು, 2030ರ ಸಮಯಕ್ಕೆ ಫ್ಲೈಯಿಂಗ್ ಶುರು ಮಾಡುತ್ತದೆ. ಈ ವಿಮಾನವು ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕೂಡ ಹಾರಾಟ ಮಾಡುವ ಸಾಮರ್ಥ್ಯ ಹೊಂದಿದೆ. ಈ ವಿಮಾನ ಬಲವನ್ನು ಸೂಚಿಸಲು ಹನುಮಾನ್ ದೇವರು ಪರ್ವತ ಎತ್ತುತ್ತಿರುವ ಫೋಟೋವನ್ನು ಹಾಕಿ ಚಂಡಮಾರುತ ಬರುತ್ತಿದೆ (The Storm is Coming) ಎಂದು ಟ್ಯಾಗ್ ಲೈನ್ ಕೂಡ ಹಾಕಲಾಗಿತ್ತು. ಆದರೆ ಹಲವರು ಸೇನೆಯ ವಿಮಾನದ ಮೇಲೆ ಧಾರ್ಮಿಕ ಚಿಹ್ನೆಯ ರೀತಿ ದೇವರ ಫೋಟೋ ಇರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಫೋಟೋವನ್ನು ತೆಗೆದುಹಾಕಲಾಗಿದೆ. ಇದನ್ನು ಓದಿ..Kannada News: ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ, ಅಮಿತ್ ಶಾ, ಮಾಸ್ಟರ್ ಮೈಂಡ್ ಕೆಲಸ ಆರಂಭ. ಟಾರ್ಗೆಟ್ ಏನು ಅಂತೇ ಗೊತ್ತೇ??

ಈ ರೀತಿಯ ಮಾತುಗಳು ಕೇಳಿಬಂದ ನಂತರ ಹನುಮಾನ್ ಫೋಟೋವನ್ನು ತೆಗೆದುಹಾಕಿದ್ದು, ತೆಗೆದುಹಾಕುವುದಕ್ಕೆ ಯಾರದ್ದೇ ಒತ್ತಡ ಇರಲಿಲ್ಲ, ಇದು ಸಂಸ್ಥೆಯ ನಿರ್ಧಾರ ಆಗಿತ್ತು, ವಿಮಾನದ ಬಲ ಎಷ್ಟಿದೆ ಎಂದು ತೋರಿಸಲು ಫೋಟೋ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಹೆಚ್.ಎ. ಎಲ್ ಸಂಸ್ಥೆಯ ಅಧ್ಯಕ್ಷ ಹಾಗು ವ್ಯವಸ್ಥಾಪಕ ನಿರ್ದೇಶಕ ಆಗಿರುವ ಸಿ.ಬಿ. ಅನಂತಕೃಷ್ಣನ್ (C B Ananthakrishnan) ಅವರು ಮಾತನಾಡಿ, “ಎಲ್ಲವನ್ನು ಚರ್ಚೆ ಮಾಡಿದ ಬಳಿಕ ವಿಮಾನದ ಮೇಲೆ ಹನುಮಂತನ ಫೋಟೋ ಹಾಕುವುದು ಸೂಕ್ತವಲ್ಲ ಎಂದು ಅನ್ನಿಸಿದ ಕಾರಣ ಅದನ್ನು ತೆಗೆದುಹಾಕಿದ್ದೇವೆ..”ಎಂದು ಮಾಧ್ಯಮದ ಎದುರು ಹೇಳಿದ್ದಾರೆ. ಇದನ್ನು ಓದಿ..Kannada News: ಅಂದು ದಲಿತರಿಗೆ ಮುಸ್ಲಿಂ ಹುದ್ದೆ ಎಂದು ಹೇಳಿದ್ದ ಕುಮಾರಣ್ಣ, ಇಂದು ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ? ಯಾರಿಗೆ ಅಂತೇ ಗೊತ್ತೇ DCM ಹುದ್ದೆ??

Get real time updates directly on you device, subscribe now.