Post Office Savings Scheme: ಕೋಟ್ಯಂತರ ಜನ ಹೂಡಿಕೆ ಮಾಡುತ್ತಿವೆ ಬೆಸ್ಟ್ ಸೇವಿಂಗ್ ಯೋಜನೆ ಯಾವುದು ಗೊತ್ತೇ? ಪೋಸ್ಟ್ ಆಫೀಸ್ ನಲ್ಲಿ ಖಚಿತ ಲಾಭ.

Post Office Savings Scheme: ಕೋಟ್ಯಂತರ ಜನ ಹೂಡಿಕೆ ಮಾಡುತ್ತಿವೆ ಬೆಸ್ಟ್ ಸೇವಿಂಗ್ ಯೋಜನೆ ಯಾವುದು ಗೊತ್ತೇ? ಪೋಸ್ಟ್ ಆಫೀಸ್ ನಲ್ಲಿ ಖಚಿತ ಲಾಭ.

Post Office Savings Scheme: ಹಣ ಉಳಿತಾಯ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಬಹಳ ಪ್ರಮುಖಬಾದ ಆಯ್ಕೆಯಾಗಿದೆ. ಇಲ್ಲಿ ಹಣ ಉಳಿಸಲು ಹಲವು ಯೋಜನೆಗಳನ್ನು ನೀಡಿದೆ. ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ, ಹಾಗೆಯೇ ಹೆಚ್ಚು ಲಾಭ ಕೂಡ ಸಿಗುತ್ತಫೆ ಎಂದು ನಂಬಿಕೆ ಇಡಬಹುದು. ಈ ರೀತಿಯ ಪೋಸ್ಟ್ ಆಫೀಸ್ ನ ಒಳ್ಳೆಯ ಯೋಜನೆಗಳಲ್ಲಿ ಒಂದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಇದನ್ನು NSC ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ನೀವು ಹೆಚ್ಚು ಲಾಭ ಪಡೆಯಬಹುದು.

ಅಂಚೆಕಚೇರಿಯ ಪ್ರಕಾರ ತಿಳಿದುಬಂದಿರುವ ಮಾಹಿತಿ ಪ್ರಕಾರ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯು 7% ಬಡ್ಡಿ ನೀಡುತ್ತದೆ, ಇದಕ್ಕೆ ಉದಾಹರಣೆ ಕೊಡುವುದಾದರೆ ಒಂದು ವೇಳೆ ನೀವು 1000 ರೂಪಾಯಿ ಹೂಡಿಕೆ ಮಾಡಿದರೆ, ಯೋಜನೆಯ ಮುಗಿಯುವ ಸಮಯಕ್ಕೆ ₹1403 ರೂಪಾಯಿ ನಿಮ್ಮ ಕೈಗೆ ಸಿಗುತ್ತದೆ. 403 ರೂಪಾಯಿ ಲಾಭ, ಈ ಯೋಜನೆಯ ಮೆಚ್ಯುರಿಟಿ ಸಮಯ ಮುಗಿಯುವುದು 5 ವರ್ಷಕ್ಕೆ, ಸರ್ಕಾರವು ಪ್ರತಿ 3 ತಿಂಗಳಿಗೆ ಒಂದು ಸಾರಿ ಬಡ್ಡಿ ದರವನ್ನು ಪರಿಶೀಲನೆ ಮಾಡುತ್ತದೆ, ಆಗ ಬಡ್ಡಿ ದರಗಳಲ್ಲೊ ಏರಿಳಿತ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಯೋಜನೆ ಶುರು ಮಾಡಲು ಇಂಥದ್ದೇ ವಯಸ್ಸು ಎಂದು ಇಲ್ಲ, 10 ವರ್ಷ ಮೇಲ್ಪಟ್ಟ ಯಾರಾದರೂ ತೆರೆಯಬಹುದು, ಆದರೆ ಅವರ ಪರವಾಗಿ ಗಾರ್ಡಿಯನ್ ಸಹ ಇರಬೇಕಾಗುತ್ತದೆ.

ಹಾಗೆಯೇ ಈ ಯೋಜನೆಯನ್ನು ನೀವು ಒಬ್ಬರೇ ಅಥವಾ ಜಂಟಿಯಾಗಿ ಎರಡು ರೀತಿಯಲ್ಲಿ ಖಾತೆ ತೆರೆಯಬಹುದು. ಈ ಯೋಜನೆ ಶುರು ಮಾಡಲು ಕನಿಷ್ಠ 1000ರೂಪಾಯಿ ಹೂಡಿಕೆ ಮಾಡಬೇಕು, ಗರಿಷ್ಠ ಹಣಕ್ಕೆ ಮಿತಿ ಇಲ್ಲ, ಯೋಜನೆಯು ಮುಗಿಯುವ ಸಮಯಕ್ಕೆ ಬಡ್ಡಿ ಹಣ ಬರುತ್ತದೆ. ಇದಕ್ಕೆ ಉದಾಹರಣೆ ನೀಡುವುದಾದರೆ, ಒಂದು ವೇಳೆ ನೀವು ಇದರಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 2 ಲಕ್ಷಕ್ಕಿಂತ ಹೆಚ್ಚು ಹಣ ಬಡ್ಡಿ ರೂಪದಲ್ಲೇ ಸಿಗುತ್ತದೆ. ಇಲ್ಲಿ ನಿಮಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಪ್ರಯೋಜನ ಸಿಗಲಿದೆ. ಇಲ್ಲಿ ನಿಮಗೆ 1.5ಲಕ್ಷ ರೂಪಾಯಿವರೆಗು ಉಳಿತಾಯ ಸಿಗುತ್ತದೆ, ಪ್ರತಿ ವರ್ಷ ತೆರಿಗೆ ವಿನಾಯಿತಿ ಸಹ ಪಡೆಯಬಹುದು.