ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ, ಅಮಿತ್ ಶಾ, ಮಾಸ್ಟರ್ ಮೈಂಡ್ ಕೆಲಸ ಆರಂಭ. ಟಾರ್ಗೆಟ್ ಏನು ಅಂತೇ ಗೊತ್ತೇ??

Kannada News: ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ, ಅಮಿತ್ ಶಾ, ಮಾಸ್ಟರ್ ಮೈಂಡ್ ಕೆಲಸ ಆರಂಭ. ಟಾರ್ಗೆಟ್ ಏನು ಅಂತೇ ಗೊತ್ತೇ??

634

Kannada News: ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆ ಬಿಸಿ ಜೋರಾಗಿದೆ. ಚುನಾವಣೆ ಘೋಷಣೆ ಆಗುವುದಕ್ಕಿಂತ ಮೊದಲೇ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಎಲ್ಲಾ ಪಕ್ಷಗಳ ನಾಯಕರು ಇದ್ದಾರೆ. ರಾಷ್ಟ್ರ ನಾಯಕರು ನಮ್ಮ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಮೋದಿ ಅವರು ಈಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದರು, ಬಳಿಕ ಫೆಬ್ರವರಿ 11ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭೇಟಿ ನೀಡಿದ್ದಾರೆ. ಮಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು, ಮಂಗಳೂರು ಮತ್ತು ಶಿವಮೊಗ್ಗದ ಬಿಜೆಪಿ ನಾಯಕರ ಜೊತೆಗೆ ಸಭೆ ನಡೆಸಿ ಹಲವು ವಿಚಾರಗಳನ್ನು ತಂತ್ರಗಳನ್ನು ಹೇಳಿಕೊಟ್ಟು, ಟಾರ್ಗೆಟ್ ಸಹ ನೀಡಿದ್ದಾರೆ. ಅದೇನು ಎಂದು ತಿಳಿಸುತ್ತೇವೆ ನೋಡಿ..

Follow us on Google News

ದಕ್ಷಿಣ ಕನ್ನಡ, ಉತ್ತರ ಕನ್ನಡ ,ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಈ 6 ಜಿಲ್ಲೆಗಳಲ್ಲಿ ಒಟ್ಟು 33 ವಿಧಾನ ಸಭಾ ಕ್ಷೇತ್ರಗಳಿದ್ದು, ಇದರಲ್ಲಿ 29 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ, ಹಾಗಾಗಿ ಇನ್ನುಳಿದ 4 ಕ್ಷೇತ್ರಗಳಲ್ಲಿ ಸಹ ಬಿಜೆಪಿ ಗೆಲ್ಲಬೇಕು ಎಂದು ಅಮಿತ್ ಶಾ ಅವರು ಟಾರ್ಗೆಟ್ ನೀಡಿದ್ದಾರೆ, ಹಾಗೆಯೇ ಈಗಿರುವ ಕ್ಷೇತ್ರಗಳನ್ನು ಸಹ ಕಳೆದುಕೊಳ್ಳಬಾರದು, ಈ ರೀತಿಯಾಗಿ 6 ಜಿಲ್ಲೆಗಳಲ್ಲಿ ಕ್ಲೀನ್ ಸ್ವೀಪ್ ಇರಬೇಕು ಎಂದು ಹೇಳಿದ್ದಾರೆ. ಈಗ ಸೋತಿರುವ ಕ್ಷೇತ್ರಗಳಲ್ಲಿ ನಾಳೆಯಿಂದಲೇ ಹೋಗಿ, ಜನರನ್ನು ಮಾತನಾಡಿಸಬೇಕು, ಪಕ್ಷ ಸಂಘಟನೆ ಕೆಲಸ ಆರಂಭಿಸಬೇಕು ಎಂದು ಅಮಿತ್ ಶಾ ಅವರು ಟಾಸ್ಕ್ ನೀಡಿದ್ದಾರೆ. ಇದನ್ನು ಓದಿ..Kannada News: ಜಮ್ಮು ಹಾಗೂ ಕಾಶ್ಮೀರದಲ್ಲಿ ಲಿಥಿಯಂ ಸಿಕ್ಕಿರಿವುದು ಅದೆಷ್ಟು ಗೊತ್ತು? ಇದರಿಂದ ದೇಶಕ್ಕೆ ಹಾಗೂ ಸ್ಥಳೀಯರಿಗೆ ಏನು ಲಾಭ ಗೊತ್ತೇ??

ಇದಷ್ಟೇ ಅಲ್ಲದೆ, ಪಕ್ಷದಿಂದ ಟಿಕೆಟ್ ಬೇಕು ಎನ್ನುವವರ ಸಂಖ್ಯೆ ಜಾಸ್ತಿ ಇರುವುದರಿಂದ ಅಸಮಾಧಾನ ಉಂಟಾಗುವುದು ಕೂಡ ಕಾಮನ್. ಆದರೆ ಅದೆಲ್ಲವನ್ನು ಸರಿಯಾದ ರೀತಿಯಲ್ಲಿ ನಿವಾರಿಸಿಕೊಂಡು ಹೋಗಬೇಕು, ಸಂಘಟನೆ ಬಗ್ಗೆ ಗಮನ ಕೊಟ್ಟು ಈ ಸಾರಿ ಎಲೆಕ್ಷನ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಹಾಗೆ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ. ಇದರ ಬಗ್ಗೆ ಯಡಿಯೂರಪ್ಪ ಅವರು ಮಾತನಾಡಿ, ಪ್ರತಿಯೊಂದು ಕ್ಷೇತ್ರದ ಬಗ್ಗೆ ಗಮನ ಹರಿಸಿ, ಹಳ್ಳಿಗಳು ಎಲ್ಲಾ ಕಡೆಗೆ ಹೋಗಿ ಮತದಾರರ ಬಗ್ಗೆ ಗಮನ ಹರಿಸಬೇಕು, ಇನ್ನು ಒಂದು ತಿಂಗಳು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು, ಆಗ ನಾವು ಖಂಡಿತವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಅಮಿತ್ ಶಾ ಅವರು ಹೇಳಿದ್ದಾರಂತೆ, ಈ ವಿಚಾರ ತಿಳಿಸಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆ ಬ್ರೇಕ್ ಹಾಕಲು, ಖ್ಯಾತ ನಟಿಯನ್ನು ಕರೆತಂದ ಸಿದ್ದು. ಅಖಾಡಕ್ಕೆ ಇಳಿಯುತ್ತಿರುವುದು ಯಾರು ಗೊತ್ತೇ??