ಕರುನಾಡ ವಾಣಿ
ಇದು ನಿಮ್ಮ ಧ್ವನಿ

WPL 2023: ಆರ್ಸಿಬಿ ಪಾಲಾದ ಸ್ಮೃತಿ ಮಂದಣ್ಣ ಸಂಬಳ ನೋಡಿ ಎಲ್ಲರೂ ಶಾಕ್. ಪಾಕ್ ನ ಬಾಬರ್ ಅಜಂ ನನ್ನ ಟ್ರೊಲ್ ಮಾಡಿದ್ದು ಯಾಕೆ ಗೊತ್ತೇ?

WPL 2023: ಆರ್ಸಿಬಿ ಪಾಲಾದ ಸ್ಮೃತಿ ಮಂದಣ್ಣ ಸಂಬಳ ನೋಡಿ ಎಲ್ಲರೂ ಶಾಕ್. ಪಾಕ್ ನ ಬಾಬರ್ ಅಜಂ ನನ್ನ ಟ್ರೊಲ್ ಮಾಡಿದ್ದು ಯಾಕೆ ಗೊತ್ತೇ?

1,435

WPL 2023: ಬಹುನಿರೀಕ್ಷಿತ ಮಹಿಳೆ ಕ್ರಿಕೆಟ್ ಸ್ಪರ್ಧಿಗಳ ಐಪಿಎಲ್ (Women’s IPL) ನ ಹರಾಜು ಪ್ರಕ್ರಿಯೆ ನಿನ್ನೆ ನಡೆದಿದ್ದು, ಆಟಗಾರ್ತಿಯರನ್ನು ತಂಡದವರು ದಾಖಲೆಯ ಮೊತ್ತಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅವರು ಅತಿಹೆಚ್ಚು ಹಣಕ್ಕೆ ಮಾರಾಟವಾದ ಆಟಗಾರ್ತಿ ಎನ್ನಿಸಿಕೊಂಡಿದ್ದಾರೆ. ಆರ್ಸಿಬಿ ತಂಡ ಬರೋಬ್ಬರಿ 3.4 ಕೋಟಿ ರೂಪಾಯಿ ಬಿಡ್ ಮಾಡಿ ಸ್ಮೃತಿ ಮಂಧಾನ ಅವರನ್ನು ಖರೀದಿ ಮಾಡಿದೆ. ಇದೀಗ ಸ್ಮೃತಿ ಅವರ ಸಂಬಳದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.

Follow us on Google News

ವುಮನ್ಸ್ ಐಪಿಎಲ್ ನ ಮೊದಲ ಸೀಸನ್ ನಲ್ಲೇ ಸ್ಮೃತಿ ಅವರು ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ, ಇದು ಪಾಕಿಸ್ತಾನ್ ಪ್ರೀಮಿಯರ್ ಲೀಗ್ (PSL) ನಲ್ಲಿ ನಾಯಕ ಬಾಬರ್ ಅಜಂ (Babar Azam) ಅವರ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಿನ ಮೊತ್ತ ಆಗಿದೆ, ಬಾಬರ್ ಅಜಂ ಅವರನ್ನು ಖರೀದಿ ಮಾಡಿರುವುದು 1.40 ಕೋಟಿಗೆ, ಇಲ್ಲಿ ಸ್ಮೃತಿ ಅವರಿಗೆ 3.40 ಕೋಟಿ ರೂಪಾಯಿ ನೀಡಲಾಗಿದೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಒಟ್ಟಿನಲ್ಲಿ ಸ್ಕೃತಿ ಮಂಧಾನ ಅವರು ಆರ್ಸಿಬಿ ತಂಡಕ್ಕೆ ಬರಬೇಕು ಎನ್ನುವ ಎಲ್ಲಾ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗಿದೆ. ಇದನ್ನು ಓದಿ..Cricket News: ಪಂದ್ಯ ಗೆಲ್ಲಿಸಿದ ಜಡೇಜಾ ಬಿಗ್ ಶಾಕ್ ಕೊಟ್ಟ ಐಸಿಸಿ: ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಜಡೇಜಾ ಗೆ ಐಸಿಸಿ ಮಾಡಿದ್ದೇನು ಗೊತ್ತೇ??

ಆರ್ಸಿಬಿ ಮಹಿಳಾ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಸ್ಟಾರ್ ಆಟಗಾರ್ತಿಯರನ್ನೇ ಆರ್ಸಿಬಿ ತಂಡ ಆಯ್ಕೆ ಮಾಡಿದೆ, ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ರಿಚ್ಛಾ ಘೋಷ್ (Richa Ghosh) ಅವರನ್ನು 1.90 ಕೋಟಿ ರೂಪಾಯಿಗೆ ಖರೀದಿ ಮಾಡಿದೆ, ಟೀಮ್ ಇಂಡಿಯಾದ ವೇಗಿ ರೇಣುಕಾ ಸಿಂಗ್ (Renuka Singh) ಅವರನ್ನು 1.50 ಕೋಟಿ ರೂಪಯಿಗೆ ಖರೀದಿ ಮಾಡಲಾಗಿದೆ. ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಲ್ ರೌಂಡರ್ ಸೋಫಿ ಡಿವೈನ್ (Sophie Devine) ಅವರನ್ನು ಎಲಿಸ್ಸಾ ಪೆರ್ರಿ (Elissa Perry) ಅವರನ್ನು 1.70 ಕೋಟಿ ಕೊಟ್ಟು ಖರೀದಿ ಮಾಡಲಾಗಿದೆ. ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಸೋಫಿ ಡಿವೈನ್ ಅವರನ್ನು 50 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ಹೀಗೆ 18 ಪ್ರತಿಭಾನ್ವಿತ ಆಟಗಾರ್ತಿಯರನ್ನು ಆರ್ಸಿಬಿ ತಂಡ ಖರೀದಿ ಮಾಡಿದೆ. ಇದನ್ನು ಓದಿ..Cricket News: ಜಡೇಜಾರವರ ಮೇಲೆ ಮುಗಿ ಬಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಬಾರಿ ಮುಜುಗರ; ಉಲ್ಟಾ ಹೊಡೆದ ಆಸ್ಟ್ರೇಲಿಯಾ ಮಾಜಿ ನಾಯಕ ಕ್ಲಾರ್ಕ್ ಹೇಳಿದ್ದೇನು ಗೊತ್ತೇ?