Kannada News: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆ ಬ್ರೇಕ್ ಹಾಕಲು, ಖ್ಯಾತ ನಟಿಯನ್ನು ಕರೆತಂದ ಸಿದ್ದು. ಅಖಾಡಕ್ಕೆ ಇಳಿಯುತ್ತಿರುವುದು ಯಾರು ಗೊತ್ತೇ??
Kannada News: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆ ಬ್ರೇಕ್ ಹಾಕಲು, ಖ್ಯಾತ ನಟಿಯನ್ನು ಕರೆತಂದ ಸಿದ್ದು. ಅಖಾಡಕ್ಕೆ ಇಳಿಯುತ್ತಿರುವುದು ಯಾರು ಗೊತ್ತೇ??
Kannada News: ರಾಜ್ಯದಲ್ಲಿ ಈಗ ಚುನಾವಣೆಯ ಬಿಸಿ ಶುರುವಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಗೆಲುವು ಸಾಧಿಸಲು ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಸಾರಿ ಅಧಿಕಾರಕ್ಕೆ ಬರಲು ಬಹಳಷ್ಟು ಹೊಸ ತಂತ್ರಗಳನ್ನು ರೂಪಿಸುತ್ತಿದ್ದು, ಈಗಾಗಲೇ ಕಷ್ಟದಲ್ಲಿರುವ ಜೆಡಿಎಸ್ (JDS) ಪಕ್ಷವನ್ನು ಕಟ್ಟಿಹಾಕಲು ಕಾಂಗ್ರೆಸ್ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಒಂದು ಹೊಸ ತಂತ್ರವನ್ನು ರೂಪಿಸಿದ್ದಾರೆ. ಈ ರೀತಿ ಮಾಡಿದರೆ, ಖಂಡಿತವಾಗಿಯೂ ರಾಮನಗರ, ಚೆನ್ನಪಟ್ಟಣ (Channapattana) ಮತ್ತು ಮಂಡ್ಯ (Mandya) ಈ ಮೂರು ಜಿಲ್ಲೆಗಳಲ್ಲಿ ಮಾಜಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಬಹುದು ಎನ್ನುವ ಪ್ಲಾನ್ ಆಗಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಒಂದು ದಾರಿ ಇದೆ, ಅದೇನು ಎಂದು ನೋಡುವುದಾದರೆ, ಹಳೆ ಮೈಸೂರು ಪ್ರದೇಶದಲ್ಲಿ ಜಿಡಿಎಸ್ ಪಕ್ಷವನ್ನು ಕಾಂಗ್ರೆಸ್ (Congress) ಸೋಲಿಸಬೇಕು. ಇದಕ್ಕಾಗಿ ಮಂಡ್ಯ, ರಾಮನಗರ ಇಲ್ಲೆಲ್ಲಾ ಒಕ್ಕಲಿಗ ಸಮುದಾಯದವರಿದ್ದು ಆ ಸ್ಥಳದಲ್ಲಿ ಜೆಡಿಎಸ್ ಅನ್ನು ಸೋಲಿಸಬೇಕು, ಹೀಗಾಗಿ ಸಿದ್ದರಾಮಯ್ಯ ಅವರು ಒಂದು ದೊಡ್ಡ ಪ್ಲಾನ್ ಮಾಡಿ ಹೈಕಮ್ಯಾಂಡ್ ಎದುರು ಇಟ್ಟಿದ್ದಾರೆ. ರಾಮನಗರದಲ್ಲಿ ಮೇಲುಗೈ ಸಾಧಿಸಲು ಒಂದು ಭರ್ಜರಿ ಪ್ಲಾನ್ ಮಾಡಿರುವ ಸಿದ್ದರಾಮಯ್ಯ ಅವರು, ಅಲ್ಲಿನವರೇ ಆಗಿರುವ ಡಿ.ಕೆ.ಶಿವಕುಮಾರ್ (D K Shivakumar) ಅವರನ್ನು ರಾಮನಗರದಲ್ಲಿ ಕಣಕ್ಕೆ ಇಳಿಸಬೇಕು ಎಂದಿದ್ದಾರೆ. ಇದನ್ನು ಓದಿ..Kannada News: ಭಾರತದ ವಿರುದ್ಧ ದೊಡ್ಡ ಕುತಂತ್ರಗಳನ್ನು ಮಾಡುತ್ತಿರುವ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಆನಂದ್ ಮಹಿಂದ್ರಾ. ಹೇಳಿದ್ದೇನು ಗೊತ್ತೇ?
ಹಾಗೆಯೇ ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ (Ramya) ಅವರನ್ನು ಚೆನ್ನಪಟ್ಟಣ ಇಂದ ಎಲೆಕ್ಷನ್ ಗೆ ನಿಲ್ಲಿಸಬೇಕು ಎಂದು ಕೂಡ ತಂತ್ರ ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ರಮ್ಯಾ ಅವರು ಸ್ಪರ್ಧೆಗೆ ಇಳಿದರೆ, ಅದು ಮಂಡ್ಯ ಕ್ಷೇತ್ರದ ಮೇಲು ಪ್ರಭಾವ ಬೀರುತ್ತದೆ, ಇಲ್ಲಿ ಟ್ರೈಯಾಂಗಲ್ ಸ್ಪರ್ಧೆ ಆಗುವುದರಿಂದ ರಮ್ಯಾ ಅವರು ಗೆಲ್ಲುವ ಸಂಭವ ಹೆಚ್ಚು. ಹಾಗೆಯೇ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಮನಗರ ಮತ್ತು ಚೆನ್ನಪಟ್ಟಣದಲ್ಲಿ ಗೆಲ್ಲುವುದು ಕಷ್ಟವಾಗುತ್ತದೆ ಎಂದು ಹೈಕಮ್ಯಾಂಡ್ ಎದುರು ಸಿದ್ದರಾಮಯ್ಯ ಅವರು ಗೆಲುವಿಗೆ ಹೊಸ ಫಾರ್ಮುಲಾ ತಿಳಿಸಿದ್ದಾರೆ. ಇದನ್ನು ಓದಿ..Kannada News: ಜಮ್ಮು ಹಾಗೂ ಕಾಶ್ಮೀರದಲ್ಲಿ ಲಿಥಿಯಂ ಸಿಕ್ಕಿರಿವುದು ಅದೆಷ್ಟು ಗೊತ್ತು? ಇದರಿಂದ ದೇಶಕ್ಕೆ ಹಾಗೂ ಸ್ಥಳೀಯರಿಗೆ ಏನು ಲಾಭ ಗೊತ್ತೇ??