ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ ನರೇಂದ್ರ ಮೋದಿ: ಸಂಸದರಿಗೆ ಕೊಟ್ಟ ಖಡಕ್ ಸಂದೇಶವೇನು ಗೊತ್ತೇ?

35

Get real time updates directly on you device, subscribe now.

Kannada News: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಈ ಸಮಯದಲ್ಲಿ ಆಡಳಿತ ಪಕ್ಷ ಬಿಜೆಪಿಯವರಿಗೆ ವಿರೋಧಿಗಳ ಅಲೆ ಶುರುವಾಗುವ ಸೂಚನೆ ಇದೆ. ಹಾಗಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆಲ್ಲಾ ಒಂದು ಖಡಕ್ ಸಂದೇಶ ನೀಡಿದ್ದಾರೆ. ಅದೇನೆಂದರೆ ಎಲ್ಲಾ ಸಂಸದರು ಕೂಡ ತಮ್ಮ ಕ್ಷೇತ್ರಕ್ಕೆ ಹೋಗಿ ಪ್ರಜೆಗಳ ಜೊತೆಯಲ್ಲಿ ಸಂಪರ್ಕದಲ್ಲಿರಬೇಕು, ಮತದಾರರ ಜೊತೆಗಿದ್ದರೆ ವಿರೋಧಿಗಳು ಹತ್ತಿರ ಬರುವುದಕ್ಕೂ ಆಗುವುದಿಲ್ಲ ಎಂದು ಎಲ್ಲಾ ಸಂಸದರಿಗೆ ಸೂಚನೆ ನೀಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಫೆಬ್ರವರಿ 1ರಂದು ಬಜೆಟ್ ಮಂಡನೆ ಆಯಿತು..

ಅದಾದ ಬಳಿಕ ನಡೆದ ಮೊದಲ ಸಭೆಯಲ್ಲಿ ಈ ಸೂಚನೆ ನೀಡಿದ ಮೋದಿಯವರು, ಲೋಕಸಭಾ ಚುನಾವಣೆಗಿಂತ ಮೊದಲು ನಡೆದಿರುವ ಬಜೆಟ್ ಇದು, ಆದರೆ ನಾವು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಹಣಕಾಸಿನ ಏಳಿಗೆ ಹಾಗೂ ಬಡವರನ್ನು ಬಜೆಟ್ ನಲ್ಲಿ ಸೇರಿಸಿರುವುದರಿಂದ ಪ್ರತಿಪಕ್ಷದವರು ಈ ಬಜೆಟ್ ಎಲೆಕ್ಷನ್ ಬಜೆಟ್ ಎಂದು ಕರೆದಿಲ್ಲ ಎಂದಿದ್ದಾರೆ. ಈ ಸಮಯದಲ್ಲಿ ಬಿಜೆಪಿಯ ಎಲ್ಲ ಸಂಸದರು ಅವರವರ ಕ್ಷೇತ್ರದ ಜನರ ಬಳಿ ಹೋಗಿ, ಬಜೆಟ್ ನಲ್ಲಿ ಜನರಿಗೆ ಬಡವರಿಗೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಸಿ ಹೇಳಬೇಕು, ಅವರನ್ನು ತಲುಪಿ ಅವರ ಜೊತೆಗೆ ನಿಲ್ಲುವುದು ಮುಖ್ಯ ಎಂದಿದ್ದಾರೆ. ಇದನ್ನು ಓದಿ..Kannada News: ಜೆಡಿಎಸ್ ಗೆ ಬಿಗ್ ಶಾಕ್: ಭದ್ರಕೋಟೆಯಾಗುತ್ತಿದೆ ಛಿದ್ರ ಛಿದ್ರ: ಮಂಡ್ಯದಲ್ಲಿ ಏನಾಗುತ್ತಿದೆ ಗೊತ್ತೇ?? ಒಮ್ಮೆಲೇ ಮೂರು ಶಾಕ್.

ಈ ಮೂಲಕ ಲೋಕಸಭಾ ಚುನಾವಣೆಗೆ ಬೇಗ ಸಿದ್ಧತೆ ನಡೆಸಬೇಕು ಎಂದಿದ್ದಾರೆ. ಬಿಜೆಪಿ ಸಂಸದರು ಮತ್ತು ಸಭೆಯಲ್ಲಿ ಸೇರಿದ್ದ ಎಲ್ಲರೂ ಕೂಡ ಬಜೆಟ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಇದೇ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕೂಡ ಮಾತನಾಡಿ, ಬಜೆಟ್ ನಲ್ಲಿ ಬಡವರಿಗೆ ದೀನ ದಲಿತರಿಗೆ ನೀಡಿರುವ ಪ್ರಾಮುಖ್ಯತೆ ಬಗ್ಗೆ ಜನರಿಗೆ ಗೊತ್ತಾಗಬೇಕು, ಅವರಿಗೆ ಎಲ್ಲಾ ಸೌಕರ್ಯಗಳು ಸಿಗಬೇಕು, ಜನರ ಜೊತೆಗೆ ಬೆರೆತು ಅವರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಕಾರ್ಣಿಕ: ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದರೆ ಏನು ಅರ್ಥ ಗೊತ್ತೇ? ಗೊರವಯ್ಯ ನುಡಿದ ಭವಿಷ್ಯದ ನಿಜವಾದ ಅರ್ಥವೇನು ಗೊತ್ತೆ??

Get real time updates directly on you device, subscribe now.