ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಕಾರ್ಣಿಕ: ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದರೆ ಏನು ಅರ್ಥ ಗೊತ್ತೇ? ಗೊರವಯ್ಯ ನುಡಿದ ಭವಿಷ್ಯದ ನಿಜವಾದ ಅರ್ಥವೇನು ಗೊತ್ತೆ??

9,297

Get real time updates directly on you device, subscribe now.

Kannada News: ನಮ್ಮ ರಾಜ್ಯದ ವಿಶೇಷತೆಗಳಲ್ಲಿ ಮೈಲಾರ ಕಾರ್ಣಿಕೋತ್ಸವ ಕೂಡ ಒಂದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಮೈಲಾರ ಗ್ರಾಮದಲ್ಲಿ ಈ ವರ್ಷದ ಮೈಲಾರ ಕಾರ್ಣಿಕೋತ್ಸವ ಮಂಗಳವಾರ ನಡೆದಿದೆ. ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ದೈವದ ದೈವನುಡಿಯನ್ನು ಲಕ್ಷಾಂತರ ಜನ ಕೇಳಿದ್ದಾರೆ. ಈ ಬಾರಿಯ ದೈವನುಡಿ ರೈತರಿಗೆ ಬಹಳ ಸಂತೋಷ ತಂದರೆ, ರಾಜಕೀಯ ಪಕ್ಷಗಳ ನಡುವೆ ಚರ್ಚೆ ನಡೆಯುವ ಹಾಗೆ ಆಗಿದೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂದು ದೈವ ನುಡಿದಿದ್ದು, ಈ ಮಾತಿನ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ. ಭರತ ಹುಣ್ಣಿಮೆಯಾದ ನಂತರ 11 ದಿವಾಸಗಳು ಉಪವಾಸ ಇದ್ದ ಬಳಿಕ ಗೊರವಯ್ಯ ಕಾರ್ಣಿಕೋತ್ಸವದಲ್ಲಿ ದೈವನುಡಿ ನುಡಿದಿದ್ದಾರೆ.

ಸುಮಾರು 14 ಅಡಿಗಳಷ್ಟು ಎತ್ತರವಿದ್ದ ಬಿಲ್ಲನ್ನು ಏರಿದ ಗೊರವಯ್ಯ ರಾಮಪ್ಪ ಅವರು ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂದು ನುಡಿದಿದ್ದಾರೆ. ಈ ದೈವನುಡಿ ಕೇಳಿದ ನಂತರ ಎಲ್ಲಾ ಜನರಲ್ಲಿ ಈ ನುಡಿ ಈ ಮಾತಿನ ಅರ್ಥವೇನು ಎನ್ನುವ ಕುತೂಹಲ ಶುರುವಾಗಿ, ಮಾತಿನ ವಿಶ್ಲೇಷಣೆ ನಡೆಸಿದ್ದಾರೆ. ಗೊರವಯ್ಯ ಹೇಳಿದ ಈ ನುಡಿ ರೈತರಿಗೆ ಮತ್ತು ರಾಜಕೀಯದವರಿಗೆ ಆಶಾದಾಯಕವಾಗಿ ಕಾಣಿಸುತ್ತಿದೆ. ಭಂಡಾರದ ಈ ದೈವನುಡಿಯಿಂದ ಬಹಳ ಸಂತೋಷ ಆಗಿರುವುದು ರಾಜ್ಯದ ರೈತರಿಗೆ, ಏಕೆಂದರೆ ದೈವನುಡಿಯ ಅರ್ಥ ಈ ವರ್ಷ ಮಳೆ ಜಾಸ್ತಿಯಾಗುತ್ತದೆ, ಅದರಿಂದ ಬೆಳೆಯು ಉತ್ತಮವಾಗಿರುತ್ತದೆ. ಇದನ್ನು ಓದಿ..Kannada News: ಕೇವಲ ಮೂರು ಸಾವಿರ ಖರ್ಚು ಮಾಡಿ 5 ಲಕ್ಷ ಗಳಿಸುತ್ತಿರುವ ರೈತ: ನೌಕರಿ ಬಿಟ್ಟು ಹೇಗೆ ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಗೊತ್ತೇ??

ಈ ಮಳೆಯಿಂದ ಅತಿವೃಷ್ಟಿ ಆಗುತ್ತದೆ, ಇದರಿಂದ ಎಲ್ಲಾ ರೈತರ ಜೀವನ ಸಮೃದ್ಧಿಯಿಂದ ತುಂಬಿರುತ್ತದೆ ಎಂದು ಅರ್ಥ ಹೇಳಲಾಗಿದೆ. ಇನ್ನು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದೈವನುಡಿ ಕಾರಣವಾಗಿದೆ, ಪ್ರಾಮಾಣಿಕವಾಗಿ ನಿಷ್ಠೆಯಿಂದ ಇರುವ ರಾಜಕೀಯ ಮುಖಂಡ ರಾಜ್ಯದ ಸಿಎಂ ಆಗುತ್ತಾರೆ ಎಂದು ಕಾರ್ಣಿಕ ನುಡಿದಿದ್ದಾರೆ. ಈ ಚರ್ಚೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಮತ್ತು ಕುತೂಹಲ ಶುರು ಆಗುವ ಹಾಗೆ ಮಾಡಿದೆ. ಈ ನುಡಿಯು ರಾಜಕೀಯ ವಲಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಕುತೂಹಲ ಶುರು ಆಗುವ ಹಾಗೆ ಮಾಡಿದೆ. ಆ ನಿಷ್ಠಾವಂತ ನಾಯಕ ಯಾರಿರಬಹುದು ಎಂದು ಎಲ್ಲರಲ್ಲೂ ಕುತೂಹಲ ಶುರುವಾಗಿದ್ದು, ಇದಕ್ಕೆ ಉತ್ತರ ತಿಳಿಯಲು, ಎಲೆಕ್ಷನ್ ವರೆಗು ಕಾದು ನೋಡಬೇಕಿದೆ. ಇದನ್ನು ಓದಿ..Kannada Astrology: ಅದಾನಿ ಸಾಮ್ರಾಜ್ಯ ಮುಳುಗಲು, ಶನಿ ದೇವನ ಕಾಟ ಕಾರಣ. ಮುಂದೇನಾಗುತ್ತದೆ ಗೊತ್ತೇ? ಜ್ಯೋತಿಷಿಗಳು ಹೇಳುವುದು ಗೊತ್ತೇ??

Get real time updates directly on you device, subscribe now.