ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಭಾರಿ ನಿರೀಕ್ಷೆ ಮೂಡಿಸಿರುವ ಆಸ್ಟ್ರೇಲಿಯಾ ಹಾಗೂ ಭಾರತ ಟೆಸ್ಟ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರಂತೆ ಗೊತ್ತೇ? ಜಯವರ್ಧನೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

219

Get real time updates directly on you device, subscribe now.

Cricket News: ಭಾರತ ತಂಡ (Team India) ಬಾರ್ಡರ್ ಗವಾಸ್ಕರ್ ಟ್ರೋಫಿಗೆ (Border Gavaskar Trophy)ಸಜ್ಜಾಗಿದೆ. ಫ್ರಬ್ರವರಿ 9ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಶುರುವಾಗಲಿದೆ. ಭಾರತದಲ್ಲೇ ಈ 4 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದ್ದು, ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮತ್ತು ಟೀಮ್ ಆಸ್ಟ್ರೇಲಿಯಾ ಎರಡು ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದು, ಈ ಸರಣಿಯಲ್ಲಿ ಗೆಲ್ಲುವುದು ಯಾರು ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ (Mahela Jayawardhane) ಭವಿಷ್ಯ ನುಡಿದಿದ್ದಾರೆ.

ಬಿಸಿಸಿಐ ಈ ಸರಣಿಗಾಗಿ, ಯುವ ಆಟಗಾರರು ಮತ್ತು ಹಿರಿಯ ಆಟಗಾರರು ಇಬ್ಬರು ಇರುವ ತಂಡವನ್ನು ಕಟ್ಟಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರು ಈ ಸೀರೀಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಗೆ ಇದು ಬಹಳ ಮುಖ್ಯ ಆಗಿರುವ ಕಾರಣ, ಭಾರತ ತಂಡ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಇದರ ನಡುವೆಯೇ ಸಂದರ್ಶನ ಒಂದರಲ್ಲಿ ಜಯವರ್ಧನೆ ಅವರು ಮಾತನಾಡಿದ್ದು, “ಈ ಸಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಹಿಂದಿನ ಎಲ್ಲಾ ಸರಣಿಗಳಿಗಿಂತ ಅತ್ಯಂತ ಕುತೂಹಲಕಾರಿಯಾದ ಸರಣಿ ಆಗಿರಲಿದೆ. ಇದನ್ನು ಓದಿ.. Cricket News: ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದಲ್ಲಿ ಈತನೇ ಮಿಂಚಬೇಕು, ಈತನೇ ಮುಖ್ಯ ಎಂದ ಅಶ್ವಿನ್: ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??

ಭಾರತದಲ್ಲಿ ಈ ಸರಣಿ ನಡೆಯುತ್ತಿದೆ. ಭಾರತದ ಪಿಚ್ ಅನ್ನು ಮತ್ತು ಭಾರತ ತಂಡವನ್ನು ಆಸ್ಟ್ರೇಲಿಯಾ (India vs Australia) ತಂಡ ಹೇಗೆ ಎದುರಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಸಹ ಒಳ್ಳೆಯ ಬೌಲರ್ ಗಳಿದ್ದಾರೆ, ಹಾಗಾಗಿ ಅವರನ್ನು ಭಾರತ ತಂಡದ ಆಟಗಾರರು ಹೇಗೆ ಎದುರಿಸುತ್ತಾರೆ ಎನ್ನುವ ಕುತೂಹಲ ಸಹ ಇದೆ. ಸರಣಿಯನ್ನು ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ, ಆದರೆ ಶ್ರೀಲಂಕಾದ ನಾಗರೀಕನಾಗಿ, ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದುಕೊಂಡಿದ್ದೇನೆ. 2-1 ಅಂತರದಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿ ಗೆಲ್ಲುತ್ತದೆ..” ಎಂದು ಜಯವರ್ಧನೆ ಅವರು ಭವಿಷ್ಯ ನುಡಿದಿದ್ದಾರೆ. ಇದನ್ನು ಓದಿ..Cricket News: ವಿರಾಟ್ ಸರಿ, ಆದರೆ ರೋಹಿತ್ ಗೆ ಅಷ್ಟು ಸೀನ್ ಇಲ್ಲ. ಬಹಿರಂಗವಾಗಿಯೇ ನಾಯ್ಕ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ವಸ್ಸಿಂ. ಹೇಳಿದ್ದೇನು ಗೊತ್ತೇ??

Get real time updates directly on you device, subscribe now.