Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??
Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??
Kannada News: ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅಬರ ಮೆಗಾ ಕುಟುಂಬಕ್ಕೆ ಬಹಳ ಗೌರವ ಇದೆ. ಇವರ ಕುಟುಂಬದಿಂದ ಚಿರಂಜೀವಿ ಅವರ ನೆರಳಿನಲ್ಲಿ ಸಾಕಷ್ಟು ನಟರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರಲ್ಲಿ ಮುಖ್ಯವಾದವರು ಚಿರಂಜೀವಿ ಅವರ ತಮ್ಮ ಪವನ್ ಕಲ್ಯಾಣ್ (Pawan Kalyan). ಅಣ್ಣ ಸ್ಟಾರ್ ಆಗಿದ್ದರು ಕೂಡ, ತಮ್ಮ ಟ್ಯಾಲೆಂಟ್ ಇಂದ ಬೆಳೆದು ಇಂದು ಪವರ್ ಸ್ಟಾರ್ ಎಂದು ಹೆಸರು ಮಾಡಿದ್ದಾರೆ. ಇವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಇವರು ವೈಯಕ್ತಿಕ ಜೀವನದ ವಿಚಾರಕ್ಕೆ ಬಹಳಷ್ಟು ಸುದ್ದಿಯಾಗುತ್ತಾರೆ.
ಅದರಲ್ಲು ಮೂರು ಮದುವೆಗಳ ಕಾರಣಕ್ಕೆ. ಪವನ್ ಕಲ್ಯಾಣ್ ಅವರು ಮದುವೆಯಾಗಿದ್ದ ಮೊದಲ ಹುಡುಗಿಗೆ ವಿಚ್ಛೇದನ ನೀಡಿ, ನಟಿ ರೇಣು ದೇಸಾಯಿ (Renu Desai) ಅವರೊಡನೆ ಲಿವಿನ್ ರಿಲೇಶನ್ಷಿಪ್ ನಲ್ಲಿ ಇರುವುದಕ್ಕೆ ಶುರು ಮಾಡಿದರು, ಅವರಿಬ್ಬರು ಇಬ್ಬರು ಮಕ್ಕಳು ಕೂಡ ಜನಿಸಿದರು. ಆದರೆ ಇಬ್ಬರಿಗು ಮದುವೆ ಆಗಿರಲಿಲ್ಲ, ಬಳಿಕ ಅಣ್ಣ ಚಿರಂಜೀವಿ ಅವರ ಸಲಹೆ ಮೇರೆಗೆ ರೇಣು ಅವರೊಡನೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ, ಇಬ್ಬರು ವಿಚ್ಛೇದನ ಪಡೆದರು. ಬಳಿಕ ರಷ್ಯಾ ಮೂಲದ ನಟಿ ಅನ್ನಾ ಲಿಜಿನೋವಾ (Anna Lezhneva) ಅವರನ್ನು ಮೂರನೇ ಸಾರಿ ಮದುವೆಯಾದರು. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
ಇವರಿಬ್ಬರಿಗೂ ಇಬ್ಬರು ಮಕ್ಕಳು ಜನಿಸಿದರು. ಇವರ ನಡುವೆ ಎಲ್ಲವು ಚೆನ್ನಾಗಿದೆ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಲಿಜಿನೋವಾ ಅವರು ಹೊರಗಡೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಅವರ ಆರೋಗ್ಯ ಚೆನ್ನಾಗಿಲ್ಲ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪತ್ನಿಯ ಪರಿಸ್ಥಿತಿ ಹೀಗಿದ್ದರೂ ಕೂಡ ಪವನ್ ಕಲ್ಯಾಣ್ ಅವರು ಹೋಗಿ ಪತ್ನಿಯನ್ನು ನೋಡಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ, ಇಬ್ಬರು ಡಿವೋರ್ಸ್ ಪಡೆಯುವ ನಿರ್ಧಾರ ಮಾಡಿದ್ದಾರೆ. ಆ ಕಾರಣದಿಂದಲೇ ಪವನ್ ಕಲ್ಯಾಣ್ ಅವರು ಪತ್ನಿಯಿಂದ ದೂರ ಉಳಿದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಪೂರ್ತಿ ವಿಚಾರ ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ. ಇದನ್ನು ಓದಿ..Kannada News: ಶ್ರೀರಸ್ತು ಶುಭಮಸ್ತು: ಅದ್ಭುತ ನಟನೆಯ ಮೂಲಕ ರಾಜ್ಯದ ಮನಗೆದ್ದಿರುವ ಮಾಧವ ರವರ ಪತ್ನಿ ಹಾಗೂ ಕುಟುಂಬ ಹೇಗಿದೆ ಗೊತ್ತೇ??