ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಜೆಡಿಎಸ್ ಗೆ ಬಿಗ್ ಶಾಕ್: ಭದ್ರಕೋಟೆಯಾಗುತ್ತಿದೆ ಛಿದ್ರ ಛಿದ್ರ: ಮಂಡ್ಯದಲ್ಲಿ ಏನಾಗುತ್ತಿದೆ ಗೊತ್ತೇ?? ಒಮ್ಮೆಲೇ ಮೂರು ಶಾಕ್.

648

Get real time updates directly on you device, subscribe now.

Kannada News: ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ (Karnataka Elections) ಸಮಯ ಹತ್ತಿರವಾಗುತ್ತಿದ್ದ ಹಾಗೆ, ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ರಾಜಕೀಯ ನಾಯಕರು, ಮುಖಂಡರು ಎಲ್ಲರೂ ಸಹ ಜನರನ್ನು ಆಕರ್ಷಿಸಿ ಮತಗಳನ್ನು ಪಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ರಾಷ್ಟ್ರ ನಾಯಕರು ಕೂಡ ನಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ರಾಜ್ಯದಲ್ಲಿ ಪಕ್ಷಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ತೊಂದರೆ ಅನುಭವಿಸುತ್ತಿರುವುದು, ಶಾಕ್ ಗೆ ಒಳಗಾಗುತ್ತಿರುವುದು ಜೆಡಿಎಸ್ (JDS) ಪಕ್ಷ. ಜೆಡಿಎಸ್ ಪಕ್ಷ ಮೇಲುಗೈ ಸಾಧಿಸುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ ಅದೇ ಪಕ್ಷಕ್ಕೆ ಊಹಿಸಲಾರದ ಹಾಗೆ ಶಾಕ್ ಗಳು ಸಿಗುತ್ತಿವೆ.

ಕೆ.ಆರ್ ಪೇಟೆ (K R Pete) ಮತ್ತು ನಾಗಮಂಗಲದಲ್ಲಿ ಆದ ಬೆಳವಣಿಗೆಗಳು ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿತ್ತು, ಈಗ ಶ್ರೀರಂಗಪಟ್ಟಣದಲ್ಲಿ (SriRanga Pattana) ಕೂಡ ಅದೇ ರೀತಿ ಆಗಿದೆ. ಜೆಡಿಎಸ್ ಪಕ್ಷದ ಶಾಸಕರಾದ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಅವರಿಗೆ ಕಾಂಪಿಟೇಶನ್ ಕೊಡಲು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ತಗ್ಗಳ್ಳಿ ವೆಂಕಟೇಶ್ (Thaggalli Venkatesh) ಅವರು ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರೆ. ಇವರು ಬಂಡಾಯ ಸ್ಪರ್ಧಿಯಾಗಿ ಚುನಾವಣೆಗೆ ನಿಲ್ಲಲಿದ್ದಾರೆ. ಮೊದಲಿಗೆ ವೆಂಕಟೇಶ್ ಅವರು ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡಿ, ಟಿಕೆಟ್ ಪಡೆಯಬೇಕು ಎಂದುಕೊಂಡಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಬೇಸರದಲ್ಲಿ ಬಂಡಾಯ ಸ್ಪರ್ಧಿಯಾಗಿ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇದನ್ನು ಓದಿ..Post Office: ಜಸ್ಟ್ ನೀವು 5 ಸಾವಿರ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಗಳಿಸುವುದು ಹೇಗೆ ಗೊತ್ತೇ? ಪೋಸ್ಟ್ ಆಫೀಸ್ ಕೊಡ್ತು ಭರ್ಜರಿ ಆಫರ್. ಏನು ಗೊತ್ತೇ?

ಶ್ರೀರಂಗಪಟ್ಟಣದಲ್ಲಿ ಮಾತ್ರವಲ್ಲದೆ, ಕೆ.ಆರ್.ಪೇಟೆಯಲ್ಲಿ ಕೂಡ ಜೆಡಿಎಸ್ ಪಕ್ಷಕ್ಕೆ ಇದೇ ವಿಷಯದಿಂದ ಆಘಾತ ಆಗಿದೆ. ಜೆಡಿಎಸ್ ಪರವಾಗಿ ಹೆಚ್.ಟಿ ಮಂಜು (H T Manju) ಅವರು ಚುನಾವಣೆಗೆ ನಿಲ್ಲಲಿದ್ದು, ಅವರ ವಿರುದ್ಧ ಬಿ.ಎಲ್.ದೇವರಾಜ್ (B L Devaraj) ಮತ್ತು ಅವರಿಗೆ ಸಪೋರ್ಟ್ ಮಾಡುವವರು ಜೆಡಿಎಸ್ ಪಕ್ಷದ ವಿರುದ್ಧ ನಿಲ್ಲಲಿದ್ದಾರೆ. ಎಲೆಕ್ಷನ್ ಹತ್ತಿರವಾಗುತ್ತಿದ್ದ ಹಾಗೆ, ಅನೇಕ ಘಟನೆಗಳು ದೊಡ್ಡ ಬದಲಾವಣೆಗಳನ್ನೇ ತರುತ್ತಿದೆ. ಅದರಲ್ಲೂ ಜೆಡಿಎಸ್ ಪಕ್ಷಕ್ಕೆ ಒಂದು ಕಡೆ ಭಯ ಶುರುವಾಗಿದೆ ಎಂದರೆ ತಪ್ಪಲ್ಲ. ಈಗಲೇ ಪರಿಸ್ಥಿತಿ ಹೀಗಿದೆ, ಇನ್ನು ಚುನಾವಣೆ ನಡೆಯುವ ಸಮಯಕ್ಕೆ ಹೇಗಿರುತ್ತದೆ, ಇನ್ನು ಏನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಕೆಲವೇ ನಿಮಿಷಗಳಲ್ಲಿ 1.44 ಲಕ್ಷ ಕೋಟಿ ಕಳೆದುಕೊಂಡ ಆದಾನಿ: ಇದಕ್ಕೆಲ್ಲ ಕಾರಣವಾದ ಆ ವಿದೇಶಿ ಸಂಸ್ಥೆ ಯಾವುದು ಗೊತ್ತೇ? ಹಬ್ಬಿಸಿದ್ದ ಸುದ್ದಿ ಏನು ಗೊತ್ತೇ?

Get real time updates directly on you device, subscribe now.