ಕರುನಾಡ ವಾಣಿ
ಇದು ನಿಮ್ಮ ಧ್ವನಿ

Post Office: ಜಸ್ಟ್ ನೀವು 5 ಸಾವಿರ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಗಳಿಸುವುದು ಹೇಗೆ ಗೊತ್ತೇ? ಪೋಸ್ಟ್ ಆಫೀಸ್ ಕೊಡ್ತು ಭರ್ಜರಿ ಆಫರ್. ಏನು ಗೊತ್ತೇ?

Post Office: ಜಸ್ಟ್ ನೀವು 5 ಸಾವಿರ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಗಳಿಸುವುದು ಹೇಗೆ ಗೊತ್ತೇ? ಪೋಸ್ಟ್ ಆಫೀಸ್ ಕೊಡ್ತು ಭರ್ಜರಿ ಆಫರ್. ಏನು ಗೊತ್ತೇ?

2,653

Post Office: ಸ್ವಯಂ ಉದ್ಯೋಗ ಮಾಡಿ ಚೆನ್ನಾಗಿ ಹಣಗಳಿಸಬೇಕು ಎಂದುಕೊಳ್ಳುವವರು ಹೆಚ್ಚು ಹಣ ಹೂಡಿಕೆ ಮಾಡಬೇಕು ಎಂದು ಹೆದರಿ ಅವುಗಳಿಗೆ ಕೈಹಾಕುವುದಿಲ್ಲ. ಅಂಥವರಿಗೆ ಭಾರತೀಯ ಅಂಚೆ ಕಚೇರಿ ಒಂದು ಅವಕಾಶ ನೀಡುತ್ತಿದೆ. ಪೋಸ್ಟ್ ಆಫೀಸ್ ಗಳಲ್ಲಿ ಅಂಚೆಯ ಸೇವೆ ಮಾತ್ರವಲ್ಲದೆ, ಆಧಾರ್ ಅಪ್ಡೇಟ್, ಆರ್.ಡಿ ಹಾಗೂ ಇನ್ನಿತರ ಸೇವೆಗಳು ಇದೆ. ಇವುಗಳನ್ನು ಜನರಿಗೆ ಒದಗಿಸಲು ಹೆಚ್ಚು ಅಂಚೆಕಛೇರಿಗಳು ದೇಶದಲ್ಲಿಲ್ಲ. ಹಾಗಾಗಿ ಭಾರತೀಯ ಅಂಚೆ ಇಲಾಖೆಯು ಫ್ರಾಂಚೈಸ್ ತೆರೆಯುವ ಅವಕಾಶವನ್ನು ನೀಡಿದೆ, ಇದರ ಮೂಲಕ ನೀವು ಒಳ್ಳೆಯ ಆದಾಯವನ್ನು ಗಳಿಸಬಹುದು. ನಿಮ್ಮ ಊರಿನಲ್ಲೇ ಶುರು ಮಾಡಿ, ಒಳ್ಳೆಯ ಆದಾಯ ಗಳಿಸಬಹುದು.

Follow us on Google News

ಇಲ್ಲಿ ನಿಮಗೆ ಎರಡು ರೀತಿಯ ಫ್ರಾಂಚೈಸಿ ತೆರೆಯುವ ಅವಕಾಶ ಇದೆ, ಒಂದು ಫ್ರಾಂಚೈಸಿ ಆಫ್ ಔಟ್ಲೆಟ್ಸ್ ಮತ್ತೊಂದು ಫ್ರಾಂಚೈಸಿ ಆಫ್ ಏಜೆಂಟ್ಸ್. ಔಟ್ಲೆಟ್ಸ್ ಎಂದರೆ ಈ ಫ್ರಾಂಚೈಸಿಯ ಮೂಲಕ ನೀವು ಕಚೇರಿ ಶುರು ಮಾಡಬಹುದು. ಏಜೆಂಟ್ಸ್ ಎಂದರೆ, ಊರಿನಲ್ಲಿ ಮನೆ ಮನೆಗಳಿಗೆ ಹೋಗಿ ಅಂಚೆಯ ಸ್ಟಾಂಪ್ ಸ್ಟೇಶನರಿ ಇವುಗಳ ವಿತರಣೆ ಮಾಡಬಹುದು. ಇದಕ್ಕೆ ಅರ್ಜಿ ಸಲ್ಲಿಸಲು ಅಂಚೆ ಇಲಾಖೆಯ ವೆಬ್ಸೈಟ್ ಗೆ ಹೋಗಿ, ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಫಿಲ್ ಮಾಡಿ, ಎಲ್ಲಾ ನಿಬಂಧನೆಗಳಿಗೂ ನೀವು ಬದ್ಧರಾಗಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.. ಇಲ್ಲಿ ಹೆಚ್ಚಿನ ಷರತ್ತುಗಳು ಇಲ್ಲ, 18 ವರ್ಷ ತುಂಬಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು, ಹಾಗೆಯೇ ಅವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರಬಾರದು. ಇದನ್ನು ಓದಿ..Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?

ಈ ಫ್ರಾಂಚೈಸಿ ಶುರು ಮಾಡಲು, 5000 ರೂಪಾಯಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಬೇರೆ ಸ್ಟೇಷನರಿ ವಸ್ತುಗಳನ್ನು ಖರೀದಿ ಮಾಡಲು ಇನ್ನು ಸ್ವಲ್ಪ ಹಣ ಬೇಕಾಗುತ್ತದೆ. ಈ ಫ್ರಾಂಚೈಸಿಗಾಗಿ 200 ಅಡಿ ಚದರದಷ್ಟು ಜಾಗ ಕಚೇರಿ ಸ್ಥಳಕ್ಕಾಗಿ ಬೇಕಾಗುತ್ತದೆ. ಇಲ್ಲಿ ನಿಮಗೆ ಇಷ್ಟೇ ಆದಾಯ ಬರುತ್ತದೆ ಎಂದು ಹೇಳಲು ಆಗುವುದಿಲ್ಲ, ನೀವು ಹೆಚ್ಚು ಸೇವೆಗಳನ್ನು ನೀಡಿದ ಹಾಗೆ ನಿಮಗೆ ಕಮಿಷನ್ ಸಿಗುತ್ತದೆ. ಯಾವ ಸೇವೆಗೆ ಎಷ್ಟು ಹಣ ಕಮಿಷನ್ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಒಂದು ಬುಕಿಂಗ್ ರಿಜಿಸ್ಟರ್ಡ್ ಆರ್ಟಿಕಲ್ಸ್ ಗೆ 3 ರೂಪಾಯಿ..ಒಂದು ಸ್ಪೀಡ್ ಪೋಸ್ಟ್ ಬುಕಿಂಗ್ ಆರ್ಟಿಕಲ್ಸ್ ಗೆ 5 ರೂಪಾಯಿ, ಒಂದು ಮನಿ ಆರ್ಡರ್ ಬುಕಿಂಗ್ (100 ರಿಂದ 200 ರೂಪಾಯಿ) ಗೆ 3.50 ರೂಪಾಯಿ, ಒಂದು ಮನಿ ಆರ್ಡರ್ (200 ರೂಪಾಯಿಗಿಂತ ಹೆಚ್ಚು) ಇದಕ್ಕೆ 5 ರೂಪಾಯಿ. ತಿಂಗಳು ₹1000 ರೂಪಾಯಿಗಿಂತ ಹೆಚ್ಚು ಸ್ಪೀಡ್ ಪೋಸ್ಟ್ ಹಾಗೂ ರಿಜಿಸ್ಟರ್ ಪೋಸ್ಟ್ ಮಾಡಿದರೆ 20% ಎಕ್ಸ್ಟ್ರಾ ಕಮಿಷನ್. ಚಿಲ್ಲರೆ ಸೇವೆ ಮಾಡಿದರೆ, ನೀವು ಮಾಡಿದ ವಹಿವಾಟಿಗೆ 40% ಕಮಿಷನ್ ಸಿಗುತ್ತದೆ. ಇದನ್ನು ಓದಿ..Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??