ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಕೆಲವೇ ನಿಮಿಷಗಳಲ್ಲಿ 1.44 ಲಕ್ಷ ಕೋಟಿ ಕಳೆದುಕೊಂಡ ಆದಾನಿ: ಇದಕ್ಕೆಲ್ಲ ಕಾರಣವಾದ ಆ ವಿದೇಶಿ ಸಂಸ್ಥೆ ಯಾವುದು ಗೊತ್ತೇ? ಹಬ್ಬಿಸಿದ್ದ ಸುದ್ದಿ ಏನು ಗೊತ್ತೇ?

820

Get real time updates directly on you device, subscribe now.

Kannada News: ಅದಾನಿ ಅವರ ಕಂಪನಿಯ ಮೇಲೆ ಇರುವ ಸಾಲದ ಬಗ್ಗೆ ವರದಿಗಳು ಹೊರಬಂದ ನಂತರ ಈ ಸಂಸ್ಥೆಯ ಶೇರ್ ಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈ ಶುಕ್ರವಾರ ಅದಾನಿ ಅವರ ಪೋರ್ಟ್ಸ್ ಶೇರ್ ಗಳಲ್ಲಿ 24% ಕುಸಿತ ಕಂಡುಬಂದಿದ್ದು, ಟ್ರಾನ್ಸ್ಮಿಷನ್ ಶೇರ್ ಗಳಲ್ಲಿ 20% ಗಿಂತ ಹೆಚ್ಚು ಕುಸಿತವಾಗಿದೆ. ಅಮೆರಿಕಾ ಮೂಲದ ಫೊರೆನ್ಸಿಕ್ ಹಣಕಾಸು ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಸಂಸ್ಥೆ ಒಂದು ವರದಿ ನೀಡಿದ್ದು, ಅದರಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಸಾಲ ವಂಚನೆಯ ದೂರು ನೀಡಿದೆ. ಇದರಿಂದ ಅದಾನಿ ಅವರ ಶೇರ್ ಮೇಲೆ ಭಾರಿ ಪ್ರಭಾವ ಬೀರಿದೆ, ಒಟ್ಟು ಶೇರ್ ಗಳಲ್ಲಿ 10%ಇಳಿಕೆಯಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರಿಂದ ನಷ್ಟ ಆಗಿರುವುದು 1.44ಲಕ್ಷ ಕೋಟಿಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ..

ಅದಾನಿ ಅವರ ಸಂಸ್ಥೆಯ ಮೇಲೆ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿದೆ ಎಂದು ಆರೋಪ ಮಾಡಿದ್ದು, ಇವರ 7 ಸಂಸ್ಥೆಗಳು ಕೂಡ ದೊಡ್ಡ ಮಟ್ಟದಲ್ಲಿ ಸಾಲ ಹೊಂದಿದೆ ಎಂದು ತಿಳಿಸಿದೆ. ಅದಾನಿ ಸಂಸ್ಥೆಯು ಶೇರ್ ಗಳಲ್ಲಿ ಮೋಸ ಮಾಡಿದೆ, ಲೆಕ್ಕಗಳ ಡಾಕ್ಯುಮೆಂಟ್ಸ್ ವಿಚಾರದಲ್ಲಿ ಮೋಸ ಮಾಡಿದೆ, ಮನಿ ಲಾಂಡರಿಂಗ್ ನಲ್ಲಿ ಇದೆ ಎಂದು ಹಿಂಡನ್ ಬರ್ಗ್ ವರದಿ ಮಾಡಿದೆ.. ಈ ಸುದ್ದಿ ಆಚೆ ಬಂದ ನಂತರ ಅದಾನಿ ಕಂಪನಿಯ ಒಟ್ಟು ಮೌಲ್ಯ ಈಗ 97.5 ಬಿಲಿಯನ್ ಯುಎಸ್ ಡಾಲರ್ಸ್ ಅಂದರೆ ಭಾರತದ ರೂಪಾಯಿಯ ಮೌಲ್ಯ 7.76ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇವರ ಸಂಸ್ಥೆಯ ಒಂದೊಂದು ಶೇರ್, ₹3,112 ಇಂದ ₹3,276 ರೂಪಾಯಿಯವರೆಗೂ ಇತ್ತು. ಆದರೆ ಈ ವರದಿಯ ನಂತರ ₹2,918 ರೂಪಾಯಿಗೆ ಇಳಿದಿದೆ. ಇದರಲ್ಲಿ 14% ಇಳಿಕೆಯಾಗಿದೆ. ಇದನ್ನು ಓದಿ..Kannada News: ವಿಶ್ವಕ್ಕೆ ಇನ್ನು ಸವಾಲಾಗಿರುವ ನಾಗಾಸಾಧುಗಳಾಗಿ ಮಹಿಳೆಯರು ಹೇಗೆ ವಾಸಿಸುತ್ತಾರೆ ಗೊತ್ತೇ? ಮಹಿಳೆಯರು ಹೇಗೆ ನಾಗಾಸಾಧು ಆಗುತ್ತಾರೆ ಗೊತ್ತೇ??

ಅಷ್ಟೇ ಅಲ್ಲದೆ, ಫೋರ್ಬ್ಸ್ ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಅದಾನಿ ಸಂಸ್ಥೆ 7ನೇ ಸ್ಥಾನಕ್ಕೆ ಇಳಿದಿದೆ. ಇದೆಲ್ಲವೂ ನಡೆಯುವಾಗ ಅದಾನಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ
ಜುಗ್ಶಿಂದರ್ ಸಿಂಗ್ ಅವರು ಈ ವರದಿಗೆ ಯಾವುದೇ ಆಧಾರ ಇಲ್ಲ, ಇದು ಸುಳ್ಳು ಆರೋಪ, ಇದರ ಹಿಂದಿನ ಉದ್ದೇಶ ಸರಿಯಿಲ್ಲ, ಇದೆಲ್ಲವೂ ತಪ್ಪು ಮಾಹಿತಿ, ಇದರಿಂದ ಸಂಸ್ಥೆಗೆ ತೊಂದರಯಾದರೆ ಹಿಂಡನ್ ಬರ್ಗ್ ಸಂಸ್ಥೆಯ ಮೇಲೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಹಿಂಡನ್ ಬರ್ಗ್ ಸಂಸ್ಥೆ ಕೂಡ ಪ್ರತಿಕ್ರಿಯೆ ನೀಡಿದ್ದು, ತಮ್ಮ ವರದಿಯ ಪರವಾಗಿಯೇ ತಾವು ನಿಲ್ಲುವುದಾಗಿ ತಿಳಿಸಿದ್ದು, ಕಾನೂನಿನ ಕ್ರಮಕ್ಕೆ ಬೇಕಾದ ದಾಖಲೆಗಳು ತಮ್ಮ ಬಳಿ ಇದೆ, ಕಾನೂನಿನ ರೀತಿಯಲ್ಲಿ ಹೋರಾಟಕ್ಕೆ ಸಿದ್ಧ ಎಂದು ಹಿಂಡನ್ ಬರ್ಗ್ ಸಂಸ್ಥೆ ತಿಳಿಸಿದೆ. ಇದನ್ನು ಓದಿ.. Kannada News: ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್; ಮೊದಲ ಅತಿಥಿ ಯರಂತೆ ಗೊತ್ತೆ?? ಹೆಸರು ಕೇಳಿ, ಬೇಡವೇ ಬೇಡ ನೆಟ್ಟಿಗರು. ಕಾರಣ ಏನು ಗೊತ್ತೇ??

Get real time updates directly on you device, subscribe now.