ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಪಾಪ ತನ್ನ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ ಸಮಂತಾ ರವರನ್ನು ಶಾಕುಂತಲಂ ಟೀಮ್ ಏನು ಮಾಡಿದೆ ಗೊತ್ತೇ?? ಕೆಳ ಮಟ್ಟಕೆ ಇಳಿದ ಸಿನಿಮಾ ತಂಡ.

36

Get real time updates directly on you device, subscribe now.

Kannada News: ನಟಿ ಸಮಂತಾ (Samantha) ಅವರಿಗೆ ಮಯೋಸೈಟಿಸ್ ಆಗಿರುವ ಕಾರಣದಿಂದ ಅವರು ಕೆಲವು ತಿಂಗಳುಗಳಿಂದ ಚಿತ್ರೀಕರಣ ಮತ್ತು ಸಿನಿಮಾ ಸಂಬಂಧಿತ ಎಲ್ಲಾ ಕೆಲಸಗಳಿಂದ ದೂರವಿದ್ದರು. ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ, ಸಂಪೂರ್ಣ ಸಮಯ ಚಿಕಿತ್ಸೆ ಮತ್ತು ವಿಶ್ರಾಂತಿಯಲ್ಲೇ ಕಳೆದಿದ್ದರು. ಆದರೆ ಈಗ ಸ್ವಲ್ಪ ಸ್ವಲ್ಪವಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ ಎನ್ನುವ ವಿಷಯ ಅವರ ಆಪ್ತರ ಕಡೆಯಿಂದ ಸಿಕ್ಕಿದೆ. ಸಮಂತಾ ಅವರು ಅಭಿನಯಿಸಿರುವ ಐತಿಹಾಸಿಕ ಸಿನಿಮಾ ಶಾಕುಂತಲಂ (Shakuntalam) ಫೆಬ್ರವರಿ 17ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಟ್ರೈಲರ್ ಲಾಂಚ್ ಇತ್ತೀಚೆಗೆ ನಡೆದಾಗ ಸಮಂತಾ ಕೂಡ ಬಂದಿದ್ದರು. ಸಮಂತಾ ಅವದರು ಈ ಎಲ್ಲಾ ಕೆಲಸಗಳಲ್ಲಿ ಹೆಚ್ಚು ಕಷ್ಟ ಪಡುತ್ತಿದ್ದಾರೆ.

ಶಾಕುಂತಲಂ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ, ನಾರ್ಥ್ ಇಂದ ಸೌತ್ ವರೆಗು ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ದೇಶಕ ಗುಣಶೇಖರ್ (Gunasekhar) ಅವರು ಸಮಂತಾ ಅವರನ್ನು ಅಪ್ರೋಚ್ ಮಾಡಿದ್ದಾರಂತೆ. ಸಮಂತಾ ಅವರ ಅನಾರೋಗ್ಯದ ವಿಚಾರವನ್ನು ಮುಂದಿಟ್ಟುಕೊಂಡು ಸಿನಿಮಾಗೆ ಪ್ರಚಾರ ಪಡೆಯುವ ಪ್ಲಾನ್ ನಲ್ಲಿ ಚಿತ್ರತಂಡ ಇರುವ ಹಾಗೆ ತೋರುತ್ತಿದೆ. ಟ್ರೈಲರ್ ಲಾಂಚ್ ನಲ್ಲಿ ಸಮಂತಾ ಅವರು ಕಣ್ಣೀರು ಹಾಕಿದ್ದಕ್ಕೆ ಭಾರಿ ಪ್ರಚಾರ ಸಿಕ್ಕಿತ್ತು, ಜನರ ಕರುಣೆ ಸಹ ದಕ್ಕಿತ್ತು, ಇದನ್ನೇ ಈಗ ಎನ್ ಕ್ಯಾಶ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರಂತೆ. ಕೆಲವು ಕಾರ್ಯಕ್ರಮಗಳಲ್ಲಿ ಸಮಂತಾ ಅವರು ಕಣ್ಣೀರು ಹಾಕಬೇಕು ಎಂದು ಪ್ಲಾನ್ ಮಾಡಿಕೊಂಡಿರುವ ಹಾಗೆ ತೋರುತ್ತಿದೆ ಎಂದು ಚಿತ್ರರಂಗದಲ್ಲಿ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ..Kannada News: ಬೇರೆ ಬೇರೆ ಭಾಷೆಯವರು ಕರೆದರೂ ಕೂಡ ಕನ್ನಡಲ್ಲಿಯೇ ನಟನೆ ಮಾಡಿ ವಜ್ರಮುನಿ ರವರು, ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

ಸಮಂತಾ ಅವರು ಪ್ರಚಾರಗಳಲ್ಲಿ ಕಣ್ಣೀರು ಹಾಕಿದರೆ, ಶಾಕುಂತಲಂ ಪ್ರಮೋಷನ್ಸ್ ನಲ್ಲಿ ಕಣ್ಣೀರು ಹಾಕಿದ ಸಮಂತಾ ಎಂದು ಎಲ್ಲ ಕಡೆ ಹೆಚ್ಚು ಪ್ರಚಾರ ಸಿಗುತ್ತದೆ, ಇದರಿಂದ ಸಿನಿಮಾ ಹಿಟ್ ಆಗುತ್ತದೆ ಎಂದು ಟೀಮ್ ಪ್ಲಾನ್ ಮಾಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಗುಣಶೇಕರ್ ಅವರ ಟೀಮ್ ನವರು ಹೇಳುವ ಹಾಗೆ, ಸಮಂತಾ ಅವರು ಪ್ರೊಮೋಷನ್ಸ್ ಗೆ ಬರಲು ಒಪ್ಪಿದ್ದಾರಂತೆ. ಹಾಗೆಯೇ ಸಮಂತಾ ಅವರ ಬಳಿ ಎಮೋಷನಲ್ ಆಗಿ ಕೇಳಿಕೊಳ್ಳುವ ಅವಶ್ಯಕತೆ ಇಲ್ಲ. ಖಂಡಿತವಾಗಿಯೂ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಟೀಮ್ ಮೆಂಬರ್ ಗಳು ಹೇಳಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಹೇಗಿರುತ್ತದೆ, ಹಿಟ್ ಅಥವಾ ಫ್ಲಾಪ್ ಎನ್ನುವುದು ಸಿನಿಮಾ ಬಿಡುಗಡೆಯಾದ ನಂತರ ಗೊತ್ತಾಗಲಿದೆ. ಇದನ್ನು ಓದಿ..Kannada News: ಕನ್ನಡ ಚಿತ್ರದ ಯಶಸ್ಸಿನಿಂದ ಬಾಲಿವುಡ್ ಅವಕಾಶ ಪಡೆದ ಸಪ್ತಮಿ ಗೌಡ: ಕನ್ನಡ ಸಿನೆಮಾಗಳ ಬಗ್ಗೆ ಬಾಲಿವುಡ್ ಗೆ ಹೋದ ಕ್ಷಣ ಏನು ಹೇಳಿದ್ದಾರೆ ಗೊತ್ತೆ??

Get real time updates directly on you device, subscribe now.