ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಕನ್ನಡ ಚಿತ್ರದ ಯಶಸ್ಸಿನಿಂದ ಬಾಲಿವುಡ್ ಅವಕಾಶ ಪಡೆದ ಸಪ್ತಮಿ ಗೌಡ: ಕನ್ನಡ ಸಿನೆಮಾಗಳ ಬಗ್ಗೆ ಬಾಲಿವುಡ್ ಗೆ ಹೋದ ಕ್ಷಣ ಏನು ಹೇಳಿದ್ದಾರೆ ಗೊತ್ತೆ??

39

Get real time updates directly on you device, subscribe now.

Kannada News: ಕಾಂತಾರ (Kantara) ಸಿನಿಮಾ ಇಂದ ದೇಶದ ಎಲ್ಲೆಡೆ ಸೆನ್ಸೇಷನ್ ಆದ ಕಲಾವಿದೆ ಸಪ್ತಮಿ ಗೌಡ (Saptami Gowda). ಈ ಒಂದು ಸಿನಿಮಾ ಯಶಸ್ಸು ಸಪ್ತಮಿ ಗೌಡ ಅವರನ್ನು ಸ್ಟಾರ್ ನಟಿಯಾಗಿ ಮಾಡಿತು. ಕಾಂತಾರ ಸಿನಿಮಾ ಇಂದ ಇವರಿಗೆ ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳು ಮತ್ತು ಬೇಡಿಕೆ ಎರಡು ಕೂಡ ಜಾಸ್ತಿಯಾಗಿದೆ. ಇದೀಗ ಸಪ್ತಮಿ ಗೌಡ ಅವರು ಬಾಲಿವುಡ್ (Bollywood) ಗು ಎಂಟ್ರಿ ಕೊಟ್ಟಿದ್ದಾರೆ. ಕಾಶ್ಮೀರ್ ಫೈಲ್ಸ್ ಅಂತಹ ಶ್ರೇಷ್ಠ ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾ ದಿ ವ್ಯಾಕ್ಸಿನ್ ವಾರ್ ನಲ್ಲಿ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ..

ಚಿತ್ರತಂಡ ಸಪ್ತಮಿ ಗೌಡ ಅವರನ್ನು ಪ್ರೀತಿಯಿಂದ ಸ್ವಾಗತ ಮಾಡಿಕೊಂಡಿದೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಸಪ್ತಮಿ ಗೌಡಸ್. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಸಪ್ತಮಿ ಅವರು, ತಾವು ಸಿನಿಮಾಗೆ ಆಯ್ಕೆಯಾಗಿದ್ದು ಹೇಗೆ ಎಂದು ತಿಳಿಸಿ, ಕನ್ನಡ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ದಾರೆ, “ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ (Rishab Shetty) ಅವರನ್ನ ಕಾಂಟ್ಯಾಕ್ಟ್ ಮಾಡಿದ್ದಾರೆ. ಅವರ ಸಿನಿಮಾದ ಒಂದು ಪಾತ್ರಕ್ಕೆ ನಾನು ಸೂಟ್ ಆಗ್ತೀನಿ ಅಂತ ಅನ್ನಿಸಿ, ರಿಷಬ್ ಅವರಿಂದ ನನ್ನ ನಂಬರ್ ಪಡೆದು ಫೋನ್ ಮಾಡಿದ್ರು. ನನ್ನ ಪಾತ್ರದ ಬಗ್ಗೆ ಹೇಳಿ, ಈ ಪಾತ್ರದಲ್ಲಿ ನಾನು ನಟಿಸಿದರೆ ಚೆನ್ನಾಗಿರುತ್ತೆ ಅಂದ್ರು.. ಇದನ್ನು ಓದಿ.. Kannada News: ಬೇರೆ ಬೇರೆ ಭಾಷೆಯವರು ಕರೆದರೂ ಕೂಡ ಕನ್ನಡಲ್ಲಿಯೇ ನಟನೆ ಮಾಡಿ ವಜ್ರಮುನಿ ರವರು, ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

ನಾನು ಆ ಕ್ಷಣವೇ ಓಕೆ ಹೇಳಿದೆ.. ನಂತರ ನನಗೆ ಸ್ಕ್ರಿಪ್ಟ್ ಕಳಿಸಿದರು. ಈ ಥರ ನೋಡ್ತಿದ್ದ ಹಾಗೆ, ಬಾಲಿವುಡ್ ಸಿನಿಮಾ ಒಂದರಲ್ಲಿದ್ದೇ. ಸಿನಿಮಾ ಕಥೆ ಇಷ್ಟವಾದರೆ ಓಕೆ ಹೇಳ್ತೀನಿ..ಆದರೆ ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾಗಳು, ಕನ್ನಡ ಸಿನಿಮಾಗಳಿಗಾಗಿ ನಾನು ಕಾಯುತ್ತಿರುತ್ತೇನೆ..” ಎಂದು ಸಪ್ತಮಿ ಗೌಡ ಅವರು ಹೇಳಿದ್ದಾರೆ. ಹಾಗೆಯೇ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಹೀರೋ ಹೀರೋಯಿನ್ ಎಂದು ಇಲ್ಲ, ಎಲ್ಲಾ ಪಾತ್ರಗಳು ಮುಖ್ಯ, ನನ್ನ ಪಾತ್ರ ಸ್ವಲ್ಪ ಕಷ್ಟವಾಗಿತ್ತು, ಎಲ್ಲಾ ಪಾತ್ರಗಳು ಕಷ್ಟವಾಗಿದೆ. ವಿವೇಕ್ ಅಗ್ನಿಹೋತ್ರಿ ಅವರು ನನಗೆ ಸಹಾಯ ಮಾಡ್ತಿದ್ದಾರೆ..ಎಂದು ಹೇಳಿದ್ದಾರೆ ನಟಿ ಸಪ್ತಮಿ ಗೌಡ. ಇದನ್ನು ಓದಿ..Cricket News: ಶುರುವಾಯ್ತು ರಾಹುಲ್ ಮದುವೆ ಸಂಭ್ರಮ: ಅತಿಥಿಗಳಿಗೆ ಏನೆಲ್ಲಾ ಷರತ್ತುಗಳು ಇವೆ ಗೊತ್ತೇ? ಹೇಗೆ ಸಿದ್ದಗೊಂಡಿದೆ ಗೊತ್ತೆ ಮದುವೆ ಮನೆ??

Get real time updates directly on you device, subscribe now.