Kannada News: ಬೇರೆ ಬೇರೆ ಭಾಷೆಯವರು ಕರೆದರೂ ಕೂಡ ಕನ್ನಡಲ್ಲಿಯೇ ನಟನೆ ಮಾಡಿ ವಜ್ರಮುನಿ ರವರು, ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

Kannada News: ಬೇರೆ ಬೇರೆ ಭಾಷೆಯವರು ಕರೆದರೂ ಕೂಡ ಕನ್ನಡಲ್ಲಿಯೇ ನಟನೆ ಮಾಡಿ ವಜ್ರಮುನಿ ರವರು, ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

Kannada News: ಕನ್ನಡ ಚಿತ್ರರಂಗದಲ್ಲಿ ಆಗಿನಿಂದ ಈಗಿನವರೆಗೂ ಖಳ ನಾಯಕ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವವರು ಹಿರಿಯನಟ ವಜ್ರಮುನಿ (Vajramuni) ಅವರು. ಇವರು ತಮ್ಮ ಕಂಚಿನ ಕಂಠ ಮತ್ತು ಕಣ್ಣುಗಳಿಂದಲೇ ಜನರು ಭಯಪಡುವ ಹಾಗೆ ಮಾಡುತ್ತಿದ್ದರು. ವಜ್ರಮುನಿ ಅವರು 70ರ ದಶಕದಿಂದ 90ರ ದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದವರು. ಆಗಿನ ಕಾಲದಲ್ಲಿ ವಿಲ್ಲನ್ ಅಂದ್ರೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ಇವರ ತಂದೆ ಆಗ ಕಾರ್ಪೊರೇಟರ್ ಆಗಿದ್ದ ಕಾರಣ ಹಣಕಾಸಿನ ವಿಚಾರದಲ್ಲಿ ಚೆನ್ನಾಗಿಯೇ ಇದ್ದರು.

ಆದರೆ ಯಾರೂ ಕೂಡ ವಜ್ರಮುನಿ ಅವರು ನಟನಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದ ವಜ್ರಮುನಿ ಅವರ ಪ್ರಚಂಡ ರಾವಣ ನಾಟಕ ನೋಡಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಮಲ್ಲಮ್ಮನ ಪವಾಡ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ವಜ್ರಮುನಿ ಅವರಿಗೆ ಸಾಲು ಸಾಲು ಅವಕಾಶಗಳು ಬರುವುದಕ್ಕೆ ಶುರುವಾದವು. ಹೆಂಗಸರು ಮತ್ತು ಪುಟ್ಟ ಮಕ್ಕಳು ತೆರೆಯಮೇಲೆ ಇವರನ್ನು ನೋಡಿ ಭಯ ಪಡುತ್ತಿದ್ದರಂತೆ, ಅಷ್ಟರಮಟ್ಟಿಗೆ ಇರುತ್ತಿತ್ತು, ಇವರ ಅಭಿನಯ. ವಜ್ರಮುನಿ ಅವರು ಕನ್ನಡದ ಎಲ್ಲಾ ಮೇರುನಟರ ಸಿನಿಮಾಗಳಲ್ಲಿ ವಿಲ್ಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??

ಇವರ ಅಭಿನಯ ಚಾತುರ್ಯತೆ ಬಗ್ಗೆ ಹೇಳುವ ಹಾಗೆಯೇ ಇಲ್ಲ, ವಜ್ರಮುನಿ ಅವರ ಅಭಿನಯ ಹೇಗಿರುತ್ತಿತ್ತು ಎಂದು ಎಲ್ಲರು ನೋಡಿದ್ದೇವೆ. ವಜ್ರಮುನಿ ಅವರಿಗೆ ಬೇರೆ ಭಾಷೆಗಳಿಂದ ಎಷ್ಟೇ ಅವಕಾಶಗಳು ಬಂದರು ಕೂಡ ಅದನ್ನು ಒಪ್ಪಿಕೊಳ್ಳದೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿದರು. ಕನ್ನಡದಲ್ಲಿಯೇ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ವಜ್ರಮುನಿ ಅವರು ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಬಗ್ಗೆ ಈಗ ಚರ್ಚೆಯಾಗುತ್ತದೆ, 70 ಮತ್ತು 80ರ ದಶಕದಲ್ಲಿ ಟಾಪ್ ವಿಲ್ಲನ್ ಆಗಿದ್ದ ವಜ್ರಮುನಿ ಅವರು ಒಂದು ಸಿನಿಮಾಗೆ ಬರೋಬ್ಬರಿ 10 ಸಾವಿರ ಸಂಭಾವನೆ ಪಡೆಯುತ್ತಿದ್ದರು, ಈಗಿನ ಕಾಲಕ್ಕೆ ಅದು 10 ಲಕ್ಷ ರೂಪಾಯಿಗೆ ಸಮವಾಗಿದೆ. ಇದನ್ನು ಓದಿ.. Kannada News: ರವಿಚಂದ್ರನ್ ಮಾಡಬೇಕಾಗಿದ್ದ ಸೂರ್ಯವಂಶ ಸಿನಿಮಾ ಕೈ ತಪ್ಪಿದ್ದು ಹೇಗೆ? ನಿಜಕ್ಕೂ ಆ ಸ್ಥಾನಕ್ಕೆ ರವಿಚಂದ್ರನ್ ಸೂಕ್ತ ಆಗಿದ್ರ? ತೆರೆ ಹಿಂದೆ ಏನಾಗಿತ್ತು ಗೊತ್ತೇ?