ಕೋಲಾರದಲ್ಲಿ ಸಿದ್ದರಾಮಯ್ಯರವರಿಗೆ ಮೊದಲ ಶಾಕ್: ಒಂದು ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದಿರುವ ಸಿದ್ದರಾಮಯ್ಯ ಸೋಲು ಫಿಕ್ಸ್ ಆಯ್ತಾ??

ಕೋಲಾರದಲ್ಲಿ ಸಿದ್ದರಾಮಯ್ಯರವರಿಗೆ ಮೊದಲ ಶಾಕ್: ಒಂದು ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದಿರುವ ಸಿದ್ದರಾಮಯ್ಯ ಸೋಲು ಫಿಕ್ಸ್ ಆಯ್ತಾ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಉಚಿತ ಭಾಗ್ಯಗಳನ್ನು ಕೊಡುವ ಮೂಲಕ ಬಾರಿ ಸದ್ದು ಮಾಡಿದ್ದ ಸಿದ್ದರಾಮಯ್ಯರವರು ಅದಾದ ಬಳಿಕ ಕ್ಷೇತ್ರ ಹುಡುಕಾಟದ ವಿಚಾರದಲ್ಲಿ ಸಾಕಷ್ಟು ಬಾರಿ ಸದ್ದು ಮಾಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಲ್ಲಿ ಜಿಟಿ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯರವರು ಹೀನಾಯವಾಗಿ ಸೋಲನ್ನು ಕಂಡಿದ್ದರು. ಆದರೆ ಈ ಸೋಲನ್ನು ಮೊದಲೇ ಅರಿತಂತೆ ಸಿದ್ದರಾಮಯ್ಯರವರು ಬಾದಾಮಿಯಲ್ಲಿ ಶ್ರೀರಾಮುಲು ರವರ ವಿರುದ್ಧ ಸ್ಪರ್ಧೆ ಮಾಡಿದ ಕಾರಣ ಸಿದ್ದರಾಮಯ್ಯರವರು ಕೊನೆಗೂ ಎರಡು ಕ್ಷೇತ್ರಗಳಲ್ಲಿ ಒಂದು ಗೆದ್ದು ಶಾಸಕರಾದರು.

ಒಂದು ರಾಜ್ಯದ ಮುಖ್ಯಮಂತ್ರಿ ಕ್ಷೇತ್ರ ಹುಡುಕಾಟ ನಡೆಸಿದ ರೀತಿ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲದೆ ವಿಪಕ್ಷಗಳ ಟೀಕೆಯನ್ನು ಇಡೀ ದೇಶದಲ್ಲಿ ಎದುರಿಸಬೇಕಾಗಿತ್ತು. ಇನ್ನು ಈ ಬಾರಿಯ ಚುನಾವಣೆ ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ನಡೆಯಲಿದ್ದು ಸಿದ್ದರಾಮಯ್ಯರವರು ಸಾಕಷ್ಟು ಅಳೆದು ತೂಗಿ ಈ ಬಾರಿ ಕೋಲಾರದಲ್ಲಿ ಅಹಿಂದ ಮತಗಳನ್ನು ನಂಬಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ನಿಲ್ಲಬೇಕು ಎಂದುಕೊಂಡಿದ್ದ ಸಿದ್ದರಾಮಯ್ಯರವರು ಸಾಕಷ್ಟು ರಾಜಕೀಯ ಲೆಕ್ಕಾಚಾರಗಳನ್ನು ಮಾಡಿ, ಜಾತಿ ಹಾಗೂ ಧರ್ಮದ ಎಲ್ಲಾ ಲೆಕ್ಕಾಚಾರಗಳನ್ನು ನಡೆಸಿದ ಬಳಿಕ ಕೊನೆಗೆ ಕೋಲಾರದಲ್ಲಿ ನಿಲ್ಲುತ್ತಿದ್ದಾರೆ. ಆದರೆ ಈ ಘೋಷಣೆಯಾದ ಕೆಲವೇ ಕೆಲವು ದಿನಗಳ ಬಳಿಕ ಸಿದ್ದರಾಮಯ್ಯರವರಿಗೆ ಶಾಕ್ ಎದುರಾಗಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಲು ಪರಮೇಶ್ವರ್ ರವರನ್ನು ಸ್ವಂತ ಕ್ಷೇತ್ರದಲ್ಲಿ ಸೋಲಿಸಿದರು ಎಂಬ ಮಾತುಗಳು ಹಾಗೂ ಆರೋಪಗಳು ಹಲವಾರು ಬಾರಿ ಕೇಳಿ ಬಂದಿವೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ದಲಿತರೊಬ್ಬರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಒಳ ಸಂಚು ಮಾಡಿ ಸೋಲಿಸಿದ ಆರೋಪದ ಕಾರಣ ನೀಡಿ ಕೋಲಾರದಲ್ಲಿ ತನ್ನದೇ ಆದ ಅಸ್ತಿತ್ವ ಹೊಂದಿರುವ ದಲಿತ ಮತದಾರರ ಸಂಘ ಜಾಗೃತಿ ಅಭಿಯಾನ ಎಂಬ ಘೋಷಣೆಯೊಂದಿಗೆ ದಲಿತ ಸಂಘಟನೆಗಳು ಸಿದ್ದರಾಮಯ್ಯರ ವಿರುದ್ಧ ಕರಪತ್ರಗಳನ್ನು ಹಂಚಲು ಆರಂಭಿಸಿದೆ.

ಕೇವಲ ಪರಮೇಶ್ವರ್ ರವರನ್ನು ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಚಾಮರಾಜನಗರ ಕ್ಷೇತ್ರದಲ್ಲಿ ಧ್ರುವನಾರಾಯಣ ಹಾಗೂ ಶ್ರೀನಿವಾಸ ಪ್ರಸಾದ್ ರವರನ್ನು ಸೋಲಿಸಿದ್ದು, ನಂತರ ಕೋಲಾರದಲ್ಲಿ ದಲಿತ ನಾಯಕ ಎಂದೇ ಪ್ರಸಿದ್ಧ ಪಡೆದು ಕೊಂಡಿದ್ದ ಮುನಿಯಪ್ಪ ರವರನ್ನು ಸೋಲಿಸಿದ್ದು ನೇರವಾಗಿ ಸಿದ್ದರಾಮಯ್ಯರವರೇ ಎಂದು ದಲಿತ ಸಮುದಾಯ ಆರೋಪ ಮಾಡಿದ್ದು ಈಗಾಗಲೇ ಕರಪಾತ್ರಗಳನ್ನು ಹಂಚುವ ಮೂಲಕ ಕೋಲಾರದಲ್ಲಿ ಸಿದ್ದು ರವರನ್ನು ಸೋಲಿಸಲು ಪಣತೊಟ್ಟಿದೆ. ಈ ಕಾರ್ಯ ಆರಂಭಗೊಂಡಿದ್ದು ದಲಿತರ ಬೆಂಬಲವಿಲ್ಲದೆ ಸಿದ್ದು ಗೆಲುವು ಸಾಧ್ಯನಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.