Cricket News: ಶುರುವಾಯ್ತು ರಾಹುಲ್ ಮದುವೆ ಸಂಭ್ರಮ: ಅತಿಥಿಗಳಿಗೆ ಏನೆಲ್ಲಾ ಷರತ್ತುಗಳು ಇವೆ ಗೊತ್ತೇ? ಹೇಗೆ ಸಿದ್ದಗೊಂಡಿದೆ ಗೊತ್ತೆ ಮದುವೆ ಮನೆ??
Cricket News: ಶುರುವಾಯ್ತು ರಾಹುಲ್ ಮದುವೆ ಸಂಭ್ರಮ: ಅತಿಥಿಗಳಿಗೆ ಏನೆಲ್ಲಾ ಷರತ್ತುಗಳು ಇವೆ ಗೊತ್ತೇ? ಹೇಗೆ ಸಿದ್ದಗೊಂಡಿದೆ ಗೊತ್ತೆ ಮದುವೆ ಮನೆ??
Cricket News: ಕರ್ನಾಟಕದ ಹುಡುಗ ಕೆ.ಎಲ್.ರಾಹುಲ್ (K L Rahul)ಹಾಗೂ ಕರ್ನಾಟಕದವರಾಗಿ ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ (Athiya Shetty) ಅವರ ಮದುವೆ ಸಂಭ್ರಮ ನಿನ್ನೆಯಿಂದ ಶುರುವಾಗಿದೆ. ಈ ಮದುವೆ ಮೂರು ದಿನಗಳ ಭರ್ಜರಿಯಾಗಿ ನಡೆಯಲಿದೆ. ಖಂಡಾಲದಲ್ಲಿ ಇರುವ ಸುನೀಲ್ ಶೆಟ್ಟಿ (Suniel Shetty) ಅವರ ಬಂಗಲೆಯಲ್ಲಿ ಮದುವೆ ನಡೆಯಲಿದ್ದು, ಕೆ.ಎಲ್.ರಾಹುಲ್ ಅವರ ಮನೆಯನ್ನು ಸಹ ಸುಂದರವಾಗಿ ಅಲಂಕಾರ ಮಾಡಲಾಗಿದೆ. ಕೆಲವು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು.
ಇದೀಗ ಎರಡು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಜನವರಿ 21 ದಿಂದ ಮದುವೆಯ ಶಾಸ್ತ್ರಗಳು ಶುರುವಾಗಿದೆ, ಸಂಗೀತ್, ಮೆಹೆಂದಿ ಸೇರಿದಂತೆ ಎಲ್ಲಾ ಶಾಸ್ತ್ರಗಳು ನಡೆಯಲಿದ್ದು, ಜನವರಿ 23ರಂದು ಅಂದರೆ ನಾಳೆ ಮದುವೆ ನಡೆಯಲಿದೆ. ಈ ಮದುವೆಯು ಕುಟುಂಬದವರು ಮತ್ತು ಆಪ್ತರ ಬಳಗದ ಸಮ್ಮುಖದಲ್ಲಿ ನಡೆಯಲಿದೆ. ರಾಹುಲ್ ಮತ್ತು ಅಥಿಯಾ ಇಬ್ಬರು ಕೂಡ ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿ ಡಿಸೈನರ್ ಸಭ್ಯಸಾಚಿ (Sabhyasachi) ಅವರು ಡಿಸೈನ್ ಮಾಡಿರುವ ಉಡುಪುಗಳನ್ನು ಧರಿಸಲಿದ್ದಾರೆ. ಇದನ್ನು ಓದಿ.. Cricket News: ಕೊನೆಗೂ ಸಿಕ್ತು ವಿಡಿಯೋ: ದ್ವಿಶತಕ ಗಳಿಸಿ ಕೊಹ್ಲಿ ದಾಖಲೆ ಪುಡಿ ಮಾಡಿದ ಗಿಲ್ ಔಟ್ ಆದಾಗ ಕೊಹ್ಲಿ, ಪಾಂಡ್ಯ ಮಾಡಿದ್ದೇನು ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
ವಧು ವರ ಇಬ್ಬರು ಕೂಡ ಗೋಲ್ಡ್ ಮತ್ತು ಬಿಳಿ ಬಣ್ಣದ ಉಡುಪುಗಳನ್ನು ಧರಿಸಲಿದ್ದಾರೆ, ಈಗ ಸಾಮಾನ್ಯವಾಗಿ ಮದುವೆಗಳಲ್ಲಿ ಇದೇ ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಅಥಿಯಾ ಶೆಟ್ಟಿ ಅವರಿಗೆ ತಮ್ಮ ಮದುವೆ ಬಹಳ ಪೀಸ್ ಫುಲ್ ಆಗಿ ನಡೆಯಬೇಕು ಎಂದು ಆಸೆ ಇದ್ದ ಕಾರಣ ಸುನೀಲ್ ಶೆಟ್ಟಿ ಅವರ ಖಂಡಾಲದ ಬಂಗಲೆಯಲ್ಲಿ ಮದುವೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಮದುವೆಗೆ ಹೆಚ್ಚಿನ ಜನರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ..
IN PICS 📸 | A glimpse of cricketer #KLRahul and #AthiyaShetty‘s wedding mandap ✨💍 pic.twitter.com/BiKJJWaFyq
— Hyderabad Times (@HydTimes) January 21, 2023
ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಇಬ್ಬರ ಕುಟುಂಬದಿಂದ ಕೇವಲ 100 ಜನರಿಗೆ ಮಾತ್ರ ಆಮಂತ್ರಣ ನೀಡಲಾಗಿದೆಯಂತೆ. ಎರಡು ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಹಾಗೂ ಕ್ರಿಕೆಟ್ ಮತ್ತು ಚಿತ್ರರಂಗದ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಸಲ್ಮಾನ್ ಖಾನ್ (Salman Khan), ಜಾಕಿ ಶ್ರಾಫ್ (Jackie Shroff), ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಕೆಲವೇ ಕೆಲವು ಬಾಲಿವುಡ್ ಗಣ್ಯರು, ವಿರಾಟ್ ಕೋಹ್ಲಿ (Virat Kohli), ಎಂ.ಎಸ್.ಧೋನಿ (M S Dhoni) ಸೇರಿದಂತೆ ಕೆಲವೇ ಕೆಲವು ಕ್ರಿಕೆಟ್ ಲೋಕದ ತಾರೆಯರು ಬರಲಿದ್ದಾರೆ. ಇದನ್ನು ಓದಿ..Cricket News: ಶುಭ್ಮಂ ಅಲ್ಲ, ಕಿಶನ್ ಅಲ್ಲ, ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಹಾಗೂ ರೋಹಿತ್ ಸಿಕ್ಕೇ ಬಿಟ್ಟನೇ?? ಮಾಜಿ ಕ್ರಿಕೆಟಿಗ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ಈ ಮದುವೆ ಅಪ್ಪಟ ದಕ್ಷಿಣ ಭಾರತ ಸಂಪ್ರದಾಯದಂತೆ ನಡೆಯಲಿದ್ದು, ಅಥಿತಿಗಳಿಗೆ ಬಾಳೆ ಎಲೆಯ ಊಟ ಇರಲಿದೆ. ಸಾಂಪ್ರದಾಯಿಕ ಶೈಲಿಯ ಆಹಾರವನ್ನು ಆಯ್ಕೆ ಮಾಡಲಾಗಿದೆ. ನಾಳೆ ಮದುವೆ ನಡೆಯಲಿದ್ದು, ಈ ಜೋಡಿ ನಂತರದ ದಿನಗಳಲ್ಲಿ ಎಲ್ಲಾ ಸ್ನೇಹಿತರಿಗೆ ಪಾರ್ಟಿ ನೀಡಲಿದ್ದಾರೆ. ಇವರ ಮದುವೆಗೆ ಬರುವ ಅತಿಥಿಗಳಿಗೆ ಒಂದು ಮುಖ್ಯವಾದ ಶರತ್ತನ್ನು ಹಾಕಲಾಗಿದ್ದು, ಇವರ ಮದುವೆಗೆ ಬರುವವರು ಮೊಬೈಲ್ ತರುವ ಹಾಗಿಲ್ಲ, ಮದುವೆ ಮಂಟಪ ಅಥವಾ ಇನ್ನೇನನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಹಾಗಿಲ್ಲ. ಇದು ಈಗ ಎಲ್ಲಾ ಸೆಲೆಬ್ರಿಟಿಗಳ ಮದುವೆಯಲ್ಲಿ ಹಾಕುವ ಕಾಮನ್ ಕಂಡೀಷನ್ ಆಗಿದೆ.
#KLRahul and #AthiyaShetty will soon tie the knot at #SunielShetty’s holiday home in Khandala. Ahead of their wedding, let’s take a look at the gorgeous wedding venue! 👉🏼 pic.twitter.com/KKZTUTSHam
— Bollywood Buzz (@BollyTellyBuzz) January 21, 2023
ಆದರೆ ಮದುವೆಯಾದ ನಂತರ ಇಬ್ಬರು ಕೂಡ ಬಹಳ ಬೇಗ ತಮ್ಮ ಕೆಲಸಕ್ಕೆ ಮರಳಬೇಕಿದೆ, ಫೆಬ್ರವರಿ 9ರಂದು ಶುರುವಾಗುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕೆ.ಎಲ್.ರಾಹುಲ್ ಅವರು ಪಾಲ್ಗೊಳ್ಳಬೇಕು. ಹಾಗೆಯೇ ಅಥಿಯಾ ಶೆಟ್ಟಿ ಅವರಿಗೆ ಚಿತ್ರರಂಗದಲ್ಲಿ ಕೆಲಸಗಳಿವೆ. ಹಾಗಾಗಿ ಇಬ್ಬರು ಕೂಡ ಬಹಳ ಬೇಗ ಕೆಲಸಕ್ಕೆ ಮರಳಲಿದ್ದಾರೆ. ಹಲವು ದಿನಗಳಿಂದ ಇವರಿಬ್ಬರ ಮದುವೆ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದ್ದವು, ಇದೀಗ ನಾಳೆ ಈ ಜೋಡಿ ಹಸೆಮಣೆ ಏರಲಿದ್ದಾರೆ. ಇದನ್ನು ಓದಿ..Cricket News: ಗಂಡ ಹಾರ್ಧಿಕ್ ಪಾಂಡ್ಯ ವಿವಾದಾತ್ಮಕ ಔಟ್ ಬಗ್ಗೆ ಮಾತನಾಡಿದ ಪತ್ನಿ ನತಾಶಾ: ಹೇಳಿದ್ದೇನು ಗೊತ್ತೇ??