Kannada News: ನಿಜವಾಗಲೂ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ಹೈವೇ ಬೈಕ್ – ಆಟೋಗೆ ಪ್ರವೇಶ ಇಲ್ಲ ಎಂದಿದ್ದು ಯಾಕೆ ಗೊತ್ತೇ? ಪ್ರತಾಪ್ ಸಿಂಹ ರವರು ಕೊಟ್ಟ ಕ್ಲಾರಿಟಿ ಏನು ಗೊತ್ತಾ?
Kannada News: ನಿಜವಾಗಲೂ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ಹೈವೇ ಬೈಕ್ – ಆಟೋಗೆ ಪ್ರವೇಶ ಇಲ್ಲ ಎಂದಿದ್ದು ಯಾಕೆ ಗೊತ್ತೇ? ಪ್ರತಾಪ್ ಸಿಂಹ ರವರು ಕೊಟ್ಟ ಕ್ಲಾರಿಟಿ ಏನು ಗೊತ್ತಾ?
Kannada News: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವು ದಿನಗಳಲ್ಲಿ ಬೆಂಗಳೂರು (Bangalore) ಹಾಗೂ ಮೈಸೂರು (Mysore) ನಡುವೆ ದಶಪಥ ರಸ್ತೆ ಅಧಿಕೃತವಾಗಿ ಆರಂಭವಾಗಲಿದೆ. ಈಗಾಗಲೇ ವಾಹನಗಳಿಗೆ ಅವಕಾಶ ನೀಡಲಾಗಿದ್ದು ಅಧಿಕೃತವಾಗಿ ಉದ್ಘಾಟನೆ ಮಾಡುವುದು ಇನ್ನೂ ಬಾಕಿ ಇದೆ. ಹೀಗೆ ಉದ್ಘಾಟನೆಗೆ ಇನ್ನಷ್ಟು ದಿನ ಇರುವಾಗಲೂ ಈ ದಶಪಥ ರಸ್ತೆಯು ಕೆಲವೊಂದು ವಿಚಾರಗಳ ಕುರಿತು ಬಾರಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಈ ಎಕ್ಸ್ ಪ್ರೆಸ್ ಹೈವೇ ಗೆ ಹೆಸರು ಇಡುವ ವಿಚಾರದ ಕುರಿತು ಹಾಗೂ ನಡೆಯುತ್ತಿರುವ ಅಪಘಾತಗಳ ಕುರಿತು ಸಾಕಷ್ಟು ಚರ್ಚೆಗಳು ಸೃಷ್ಟಿಯಾಗಿವೆ.
ಹಲವಾರು ಜನ ನಾಯಕರು ಈ ರಸ್ತೆಯನ್ನು ಅವೈಜ್ಞಾನಿಕ ಎಂದು ಕರೆಯುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣ ಮಾಡಿದ ಸಾಕಷ್ಟು ಜನರು ರಸ್ತೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಪಕ್ಷ ರಸ್ತೆಯು ವೈಜ್ಞಾನಿಕತೆಯಿಂದ ಕೂಡಿದೆ ಎಂದು ಕೂಡ ಹೇಳುತ್ತಿದೆ. ಹೀಗೆ ವಾದ ವಿವಾದಗಳ ಚರ್ಚೆಗಳ ನಡುವೆ ಎಕ್ಸ್ಪ್ರೆಸ್ ಹೈವೇನಲ್ಲಿ ಬೈಕುಗಳು ಹಾಗೂ ತ್ರಿಚಕ್ರ ವಾಹನಗಳು ಸಂಚಾರ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಪ್ರತಾಪ್ ಸಿಂಹರವರು (Pratap Simha) ಹೇಳಿದ್ದರು. ಇವರ ಈ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಓದಿ..Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?
ಇದನ್ನು ಹಲವಾರು ಜನ ಉತ್ತಮ ನಿರ್ಧಾರ ಎಂದು ಹೊಗಳಿದರೇ ಮತ್ತಷ್ಟು ಜನ ಬಿಜೆಪಿ ಪಕ್ಷ ಕೇವಲ ಶ್ರೀಮಂತರಿಗಾಗಿ ರಸ್ತೆ ಮಾಡಿದೆ ಎಂದು ಟೀಕೆ ಮಾಡಲು ಆರಂಭಿಸಿದರು. ಟೀಕೆಗಳಿಗೆ ಉತ್ತರ ಕೊಡಲು ಮುಂದೆ ಬಂದಿರುವ ಪ್ರತಾಪ್ ಸಿಂಹರವರು ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ಬೈಕುಗಳು ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶ ಕೊಡುವುದಿಲ್ಲ, ಯಾಕೆಂದರೆ ಈ ಎಕ್ಸ್ ಪ್ರೆಸ್ ಹೈವೇ ನಲ್ಲಿ ಸಾಕಷ್ಟು ಜನ ವೇಗವಾಗಿ ಸಂಚರಿಸುತ್ತಾರೆ. ಸಾಮಾನ್ಯವಾಗಿ ಹೈವೆಗಳಲ್ಲಿ ದ್ವಿಚಕ್ರ ವಾಹನಗಳು ಯಾವ ಲೇನ್ ನಲ್ಲಿ ಹೋಗಬೇಕು ನಿಯಮಗಳನ್ನು ಪಾಲಿಸುವುದು ಕಷ್ಟವಾಗುತ್ತದೆ.
ಒಂದು ವೇಳೆ ನಾವು ಇದಕ್ಕೆ ತಡೆಗಟ್ಟದೆ ಇದ್ದರೆ ಒಂದು ಕಡೆ ವೇಗದ ಮಿತಿ ಕಡಿಮೆಗೊಳಿಸಬೇಕಾಗುತ್ತದೆ, ಮತ್ತೊಂದು ಕಡೆ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅಪಘಾತಗಳು ಕೂಡ ಹೆಚ್ಚಾಗುತ್ತವೆ. ಎಕ್ಸ್ ಪ್ರೆಸ್ ಹೈವೇ ರೀತಿಯಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣವಾಗಿರುವ ಕಾರಣ ಬೈಕುಗಳು ಹಾಗೂ ತ್ರಿಚಕ್ರ ವಾಹನಗಳು ಸುಲಭವಾಗಿ ಸರ್ವಿಸ್ ರಸ್ತೆಯಲ್ಲಿ ಓಡಾಟ ಮಾಡಬಹುದು. ಇದಕ್ಕೆ ಯಾವುದೇ ರೀತಿಯ ಶುಲ್ಕಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಂದು ಈ ರಸ್ತೆ ಕೇವಲ ಶ್ರೀಮಂತರಿಗಾಗಿ ಎಂದು ಕೊಳ್ಳಬಾರದು, ಎಕ್ಸ್ ಪ್ರೆಸ್ ಹೈವೇನಲ್ಲಿ ಟೋಲ್ ಹಣ ಸಂಗ್ರಹ ಮಾಡಲಾಗುತ್ತದೆ ವೇಗದ ಮಿತಿಯನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಇದನ್ನು ಓದಿ.. Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?