2023 Kannada Astrology: ಇಡೀ ವರ್ಷ ಪ್ರತಿ ರಾಶಿಗಳ ಆರೋಗ್ಯ, ವೃತ್ತಿ ಜೀವನ, ಹಣಕಾಸು ಹೇಗಿರಲಿದೆ ಗೊತ್ತೇ? ಯಾವ್ಯಾವ ರಾಶಿಗಳ ಜೀವನವೇ ಬದಲಾಗುತ್ತದೆ ಗೊತ್ತೇ?? ನಿಮ್ಮ ರಾಶಿ ಫಲಾ ಫಲಗಳನ್ನೂ ತಿಳಿಯಿರಿ.

2023 Kannada Astrology: ಇಡೀ ವರ್ಷ ಪ್ರತಿ ರಾಶಿಗಳ ಆರೋಗ್ಯ, ವೃತ್ತಿ ಜೀವನ, ಹಣಕಾಸು ಹೇಗಿರಲಿದೆ ಗೊತ್ತೇ? ಯಾವ್ಯಾವ ರಾಶಿಗಳ ಜೀವನವೇ ಬದಲಾಗುತ್ತದೆ ಗೊತ್ತೇ?? ನಿಮ್ಮ ರಾಶಿ ಫಲಾ ಫಲಗಳನ್ನೂ ತಿಳಿಯಿರಿ.

2023 Kannada Astrology: ಇಂದಿನಿಂದ ಹೊಸ ವರ್ಷ ಶುರುವಾಗುತ್ತದೆ. ಹೊಸ ವರ್ಷ ಎಂದರೆ ಎಲ್ಲರಲ್ಲಿ ಸಂಭ್ರಮ ಸಡಗರ, ಹೊಸ ವರ್ಷಕ್ಕೆ ಹೊಸ ಭರವಸೆ, ಹೊಸ ಕೆಲಸಗಳು, ಹೊಸ ಕನಸುಗಳು, ಹೊಸ ಆಸೆಗಳು, ಹೀಗೆ ಯಾವುದೇ ಸಮಸ್ಯೆ ಇಲ್ಲದೆ ಮುಂಬರುವ ವರ್ಷವನ್ನು ಎದುರಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಿಂದಿನ ವರ್ಷ ಉಳಿದ ಎಲ್ಲಾ ಕೆಲಸಗಳನ್ನು ಹೊಸ ವರ್ಷದ ಉತ್ಸಾಹದಲ್ಲಿ ಮುಂದುವರೆಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಒಬ್ಬ ವ್ಯಕ್ತಿಗೆ ಹೊಸ ವರ್ಷ ಹೇಗಿರುತ್ತದೆ, ಅವರ ಜೀವನದಲ್ಲಿ ಏನೆಲ್ಲಾ ಒಳ್ಳೆಯದು ಅಥವಾ ಅಶುಭ ನಡೆಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಫಲಗಳ ಮೂಲಕ ತಿಳಿದುಕೊಳ್ಳಬಹುದು. ಹಾಗಿದ್ದರೆ ಎಲ್ಲಾ ರಾಶಿಯವರಿಗೆ ವೃತ್ತಿ ಜೀವನ, ವೈಯಕ್ತಿಕ ಜೀವನ, ಹಣಕಾಸಿನ ವಿಚಾರ ಇದೆಲ್ಲದರಲ್ಲೂ ಫಲ ಹೇಗಿರುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಉತ್ತಮ ಮತ್ತು ಶಕ್ತಿಯುತವಾದ ದೇಹ ಹೊಂದಿರುತ್ತಾರೆ. ಇವರು ತೆಳ್ಳಗೆ ಮತ್ತು ಸ್ಟ್ರಾಂಗ್ ಆಗಿರುತ್ತಾರೆ. ಮೀಡಿಯಂ ಆದ ಮೈಕಟ್ಟು ಹೊಂದಿರುತ್ತಾರೆ. ಈ ರಾಶಿಯವರು ಹೆಚ್ಚು ಎತ್ತರ ಅಥವಾ ದಪ್ಪ ಇರುವುದಿಕೆಳ. ಇವರಿಗೆ ಮುಖ ಅಗಲವಾಗಿ ಇರುತ್ತದೆ, ಹಾಗೆಯೇ ಗೋಧಿ ಮೈಬಣ್ಣ ಹೊಂದಿರುತ್ತಾರೆ, ದೈಹಿಕವಾಗಿ ಬಲ ಹೆಚ್ಚಾಗಿರುತ್ತದೆ. ಈ ರಾಶಿಯ ಅಧಿಪತಿ ಮಂಗಳಗ್ರಹ, ಹಾಗಾಗಿ ಇವರ ಜೀವನದಲ್ಲಿ ಉತ್ಸಾಹ ಮತ್ತು ಶಕ್ತಿ ಸದಾ ಇರುತ್ತದೆ. ಈ ರಾಶಿಯಲ್ಲಿ ಹುಟ್ಟಿದವರಃ ಸುಂದರವಾಗಿ ಮತ್ತು ಆಕರ್ಷಕವಾಗಿರುತ್ತಾರೆ, ಹಾಗೆಯೇ ಇವರದ್ದು ಕಲಾತ್ಮಕ ಸ್ವಭಾವ ಆಗಿರುತ್ತದೆ. ಯಾವಾಗಲೂ ಲವಲವಿಕೆ ಇಂದ ಇರುತ್ತಾರೆ. ಕೆಲಸಗಳ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೀರಿ.

ಮೇಷರಾಶಿಯವರ ವೃತ್ತಿ ಜೀವನ :- 2023ರಲ್ಲಿ ಈ ರಾಶಿಯವರ ಉದ್ಯೋಗದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಶನಿದೇವರು 10ನೇ ಮನೆಗೆ ಅಧಿಪತಿ ಆಗಿದ್ದು, ಈ ತಿಂಗಳು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಹಾಗಾಗಿ ಕೆಲಸ ಮತ್ತು ಉದ್ಯೋಗದಲ್ಲಿ ಸಾಧನೆ ಮಾಡುತ್ತೀರಿ, ಹಾಗೆ ಆದಾಯ ಹೆಚ್ಚಾಗುತ್ತದೆ. ಹೆಚ್ಚು ಸಂಬಳ ಪಡೆದು, ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತೀರಿ.

ಈ ವರ್ಷ ನೀವು ಹೊಸ ಕಡೆ ಹೂಡಿಕೆ ಮಾಡುವುದರಿಂಡ್ಸ್ ಲಾಭ ಪಡೆಯುತ್ತೀರಿ, ಬ್ಯುಸಿನೆಸ್ ಗೆ ಹೊಸ ಐಡಿಯಾ ಸಿಗುತ್ತದೆ. ರಾಹು ಕೇತುವಿನ ಸಂಚಾರ ಆಗುವುದರಿಂದ ಮೋಸ ಆಗುವ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗದ ವಿಚಾರದಲ್ಲಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವ ಹಾಗಿದ್ದರೆ, ಏಪ್ರಿಲ್ ನಂತರ ತೆಗೆದುಕೊಳ್ಳಿ, ದೇವಾಗುರುವಿನ ಸಂಚಾರ ನಿಮ್ಮ ರಾಶಿಯಲ್ಲಿ ನಡೆಯುತ್ತದೆ. ಆದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ನಿಮ್ಮ ಕೆಲಸವನ್ನು ನಿಧಾನ ಆಗುವ ಹಾಗೆ ಮಾಡಬಹುದು.

ಮೇಷ ರಾಶಿಯವರ ಕೌಟುಂಬಿಕ ಜೀವನ :- ನಿಮ್ಮ ರಾಶಿಯ ಮೊದಲ ಮತ್ತು ಏಳನೇ ಮನೆಗೆ ರಾಹು ಕೇತು ಸಂಚಾರ ಆಗುತ್ತಿರುವುದರಿಂದ, ಮನೆಯವರ ಜೊತೆಗೆ ಭಿನ್ನಾಭಿಪ್ರಾಯ ಮೂಡಬಹುದು, ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ನಂಬಿಕೆಯ ವಿಚಾರದಲ್ಲಿ ಅರ್ಥಮಾಡಿಕೊಳ್ಳುವಲ್ಲಿ ಎಡವಬಹುದು, ಜನವರಿ ಇಂದ ಏಪ್ರಿಲ್ ವರೆಗು ಈ ರೀತಿ ಆಗಬಹುದು.

ಆದರೆ ಏಪ್ರಿಲ್ ನಲ್ಲಿ ಗುರುಗ್ರಹ ನಿಮ್ಮ ರಾಶಿಗೆ ಪ್ರವೇಶ ಮಾಡಿದ ನಂತರ ಎಲ್ಲಾಗು ಬದಲಾಗಿ, ಸುಧಾರಣೆ ಕಾಣುತ್ತೀರಿ..ಮಗುವಿಗೆ ಸಂಬಂಧಿಸಿದ ವಿಷಯದಲ್ಲಿ ಒಳ್ಳೆ ಸುದ್ದಿ ಪಡೆಯುತ್ತೀರಿ, ಇದರಿಂದ ಸಂತೋಷ ಇರುತ್ತದೆ. ಮೇ ಇಂದ ಆಗಸ್ಟ್ ತಿಂಗಳವರೆಗೂ ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ಆದರೆ ನವೆಂಬರ್ ನಲ್ಲಿ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯ ಜೀವನದಲ್ಲಿ ಸ್ವಲ್ಪ ಏರಿಳಿತ ಇರುತ್ತದೆ. ಈ ವರ್ಷ ನೀವಿಬ್ಬರು ಜಾಗರೂಕವಾಗಿ ಇರುವುದು ಒಳ್ಳೆಯದು.

ಮೇಷ ರಾಶಿಯವರ ಆರೋಗ್ಯ :- ಆರೋಗ್ಯದ ವಿಚಾರದಲ್ಲಿ ಈ ರಾಶಿಯವರ ಸಮಯ ಅಷ್ಟೇನು ಚೆನ್ನಾಗಿರುವುದಿಲ್ಲ, ಆದರೆ ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹದ ಪ್ರವೇಶ ಆದ ನಂತರ, ಆರೋಗ್ಯದಲ್ಲಿ ಬದಲಾವಣೆ ಉಂಟಾಗುತ್ತದೆ..ಈ ಸಮಯದಲ್ಲಿ ನೀವು ಉತ್ತಮವಾಗಿ ಆರೋಗ್ಯಕರ ಊಟ ಮಾಡುವುದು, ವ್ಯಾಯಾಮ ಮಾಡುವುದು, ಯೋಗ ಮಾಡುವುದು ಇದೆಲ್ಲವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ವರ್ಷದ ಅಂತ್ಯದ ವೇಳೆಗೆ ನಿಮಗೆ ಆರೋಗ್ಯ ಸಮಸ್ಯೆ ಇಲ್ಲದೆ, ಮಾನಸಿಕವಾಗಿ ಸಂತೋಷವಾಗಿ ಮತ್ತು ಶಾಂತಿಯಿಂದ ಇರುತ್ತೀರಿ.

ಮೇಷ ರಾಶಿಯವರ ಆರ್ಥಿಕ ಸ್ಥಿತಿ :- ಜನವರಿ ಇಂದ ಏಪ್ರಿಲ್ ವರೆಗು ರಾಹುವಿನ ಸಂಚಾರ ಇರುವುದರಿಂದ, ಆರ್ಥಿಕವಾಗಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಆದರೆ ಏಪ್ರಿಲ್ ನಂತರ ಗುರುವಿನ ಕೃಪೆಯಿಂದ ಆರ್ಥಿಕವಾಗಿ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ವೃತ್ತಿ ಮತ್ತು ಬ್ಯುಸಿನೆಸ್ ಎರಡು ವೃದ್ಧಿಯಾಗುತ್ತದೆ. ಆದರೆ, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಿತ್ತಿರುವವರು ಎಚ್ಚರಿಕೆ ಇಂದ ಇರಿ.

ವಿದ್ಯಾರ್ಥಿ ಜೀವನ :- ಈ ರಾಶಿಯ ವಿದ್ಯಾರ್ಥಿಗಳಿಗೆ ಜನವರಿ ಇಂದ ಏಪ್ರಿಲ್ ವರೆಗು ಮಿಶ್ರ ಫಲಿತಾಂಶ ನೀಡುತ್ತದೆ. ಆದರೆ, ಜುಲೈ ಇಂದ ನವೆಂಬರ್ ವರೆಗು ಅತ್ಯುತ್ತಮ ಫಲ ಇರುತ್ತದೆ, ವಿದ್ಯಾರ್ಥಿಗಳು ಯಶಸ್ಸು ಪಡೆಯುತ್ತೀರಿ, ವಿದೇಶಕ್ಕೆ ಹೋಗಿ ಓದಬೇಕು ಎಂದುಕೊಂಡವರ ಕನಸು ನನಸಾಗುತ್ತದೆ. ಒಟ್ಟಿನಲ್ಲಿ ವಿದ್ಯೆಯಲ್ಲಿ ನೀವು ವಿದ್ಯೆಯಲ್ಲಿ ಅನುಕೊಂಡ ಹಾಗಿರಲು ಹೆಚ್ಚು ಶ್ರಮ ಪಡಬೇಕು.

ಪರಿಹಾರ :- ಈ ವರ್ಷ ನಿಮಗೆ ಶುಭವಾಗಬೇಕು ಎಂದರೆ, ಆಂಜನೇಯ ಸ್ವಾಮಿಯ ಆರಾಧನೆ ಮಾಡಿ, ಆಂಜನೇಯ ಸ್ವಾಮಿಗೆ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವುದರಿಂದ, ನಿಮ್ಮ ಕಷ್ಟಗಳು ಕಳೆದು, ಎಲ್ಲವೂ ಪರಿಹಾರ ಆಗುತ್ತದೆ.

ವೃಷಭ ರಾಶಿ :- ಇವರದ್ದು ಆಕರ್ಷಕವಾದ ವ್ಯಕ್ತಿತ್ವ, ಇವರು ಜನರ ಮೇಲೆ ಪ್ರಭಾವ ಬೀರುತ್ತಾರೆ, ಶಕ್ತಿವಂತರಾಗಿರುತ್ತಾರೆ, ಸುಂದರವಾಗಿರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಹಾಗಾಗಿ ಇವರು ಕ್ರಿಯಾತ್ಮಕ ಮತ್ತು ಕಲಾತ್ಮಕ ಗುಣ ಇರುವವರಾಗಿರುತ್ತಾರೆ. ಈ ರಾಶಿಯವರು ಸ್ವಾಭಿಮಾನಿಗಳು, ತಮ್ಮ ಜೊತೆಗಿರುವವರನ್ನು ಗೌರವಿಸುತ್ತಾರೆ. ಜನರು ನಿಮ್ಮ ಮೇಲೆ ವಿಶ್ವಾಸ ಇಡುವ ಹಾಗೆ ಮಾಡುವ ಸ್ವಭಾವ ನಿಮ್ಮದು.

ವೃಷಭ ರಾಶಿಯವರ ವೃತ್ತಿ ಜೀವನ :- 2023 ಈ ರಾಶಿಯವರ ವೃತ್ತಿ ಜೀವನಕ್ಕೆ ಅತ್ಯುತ್ತಮವಾಗಿದೆ, ಶನಿದೇವರು 10ನೇ ಮನೆಯಲ್ಲಿರುತ್ತಾನೆ, ಇದರಿಂದ ಅತ್ಯುತ್ತಮ ಫಲಿತಾಂಶ ನಿಮ್ಮದಾಗುತ್ತದೆ..ಪರಿಶ್ರಮದಿಂದ ಒಳ್ಳೆಯ ಯಶಸ್ಸು ಪಡೆಯುತ್ತೀರಿ.. ಗುರು ಏಪ್ರಿಲ್ ವರೆಗು ನಿಮ್ಮ ರಾಶಿಯ 11ನೇ ಮನೆಯಲ್ಲಿರುವುದರಿಂದ, ವೃತ್ತಿಯಲ್ಲಿ ಲಾಭ ನಿಮ್ಮದಾಗುತ್ತಈ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ದೊಡ್ಡ ಸಾಧನೆ ಮಾಡುತ್ತೀರಿ,ಏಪ್ರಿಲ್ ನಂತರ ಗುರು ಮತ್ತು ರಾಹುವಿನ ಸಂಯೋಗದಿಂದ ನಿಮಗೆ ಹೆಚ್ಚು ಲಾಭವಾಗುತ್ತದೆ. ಬ್ಯುಸಿನೆಸ್ ಇದು ಒಳ್ಳೆಯ ವರ್ಷ, ಶನಿದೇವರ ಕೃಪೆ ಕೆಲಸ ಮತ್ತು ಬ್ಯುಸಿನೆಸ್ ಮಾಡುವವರ ಮೇಲೆ ಇರುತ್ತದೆ.

ವೃಷಭ ರಾಶಿಯವರ ಕೌಟುಂಬಿಕ ಜೀವನ :- ಈ ರಾಶಿಯವರಿಗೆ ಆರಂಭದ ತಿಂಗಳುಗಳಲ್ಲಿ ಮನೆಯಲ್ಲಿ ಜಗಳ ಕದನ ಉಂಟಾಗಬಹುದು. ಏಪ್ರಿಲ್ ನಲ್ಲಿ ಗುರುವಿನ ಸಂಚಾರದಿಂದ, ನಿಮ್ಮ ರಾಶಿಯವರ ಮನೆಯಲ್ಲಿ ಪರಿಸ್ಥಿತಿಗಳು ಸುಧಾರಿಸುತ್ತದೆ. ಮಕ್ಕಳ ವಿಚಾರದಲ್ಲಿ ಸಂತೋಷ ಪಡುತ್ತೀರಿ, ಆದರೆ ಹಣಕಾಸಿನ ವಿಷಯದಲ್ಲಿ ಖರ್ಚುಗಳು ಹೆಚ್ಚಾಗಬಹುದು. ಎಲ್ಲವೂ ಸೇರಿ ಈ ವರ್ಷ ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ.

ವೃಷಭ ರಾಶಿಯವರ ಆರೋಗ್ಯ :- ಈ ವರ್ಷ ಆರೋಗ್ಯ ತಕ್ಕಮಟ್ಟಿಗೆ ಚೆನ್ನಾಗಿರುತ್ತದೆ, ಶನಿಯು 8ನೇ ಮನೆಯಲ್ಲಿ ಇರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆರೋಗ್ಯಕ್ಕೆ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಬಹಳ ದಿನಗಳಿಂದ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ ಇದರಿಂದ ಎಲ್ಲವು ಒಳ್ಳೆಯದಾಗುತ್ತದೆ.

ವೃಷಭ ರಾಶಿಯವರ ಆರ್ಥಿಕ ಸ್ಥಿತಿ :- ಶನಿದೇವರು ಲಾಭದಾಯಕದ ಮನೆಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುತ್ತದೆ. ಆದರೆ ಉದ್ಯಮಿಗಳು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದನ್ನು ತಪ್ಪಿಸುವುದೇ ಒಳ್ಳೆಯದು. ವಿದೇಶದಿಂದಲು ನಿಮಗೆ ಧನಲಾಭ ಉಂಟಾಗಬಹುದು.

ವೃಷಭ ರಾಶಿಯವರ ವಿದ್ಯಾಭ್ಯಾಸ :- ಶನಿದೇವರು ಈ ರಾಶಿಯ ಏಳನೇ ಮನೆಯಲ್ಲಿ ಇರುವುದರಿಂದ, ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಏಪ್ರಿಲ್ ನಂತರ ಗುರು ಗ್ರಹದ ಸ್ಥಾನ ಬದಲಾವಣೆ ಇಂದ, ಈ ರಾಶಿಯವರಿಗೆ ವಿದ್ಯೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ಪರಿಹಾರ :- ಈ ವರ್ಷ ನೀವು ಶುಕ್ರವಾರದ ದಿವಸ, ಕನ್ಯೆಯರಿಗೆ ಪ್ರತ್ಯೇಕವಾಗಿ, ಬಿಳಿ ಬಣ್ಣಫಾ ಸ್ವೀಟ್, ಅಕ್ಕಿ ಪಾಯಸವನ್ನು ಪ್ರಸಾದದ ರೂಪದಲ್ಲಿ ನೀಡಿ.

ಮಿಥುನ ರಾಶಿ :- ಈ ರಾಶಿಯವರು ಯಾವಾಗಲೂ ಲವಲವಿಕೆಯಿಂದ ಇರುತ್ತಾರೆ, ಎಲ್ಲರನ್ನು ಹಾಗೇವಾಮಾಡುತ್ತಾರೆ. ಬೇರೆಯವರ ಜೊತೆಗೆ ಚೆನ್ನಾಗಿ ಬೆರೆಯುತ್ತಾರೆ, ಇವರದ್ದು ಆಕರ್ಶಕ ವ್ಯಕ್ತಿತ್ವ, ಸುಂದರವಾಗಿರುತ್ತಾರೆ, ಕ್ರಿಯಾಶೀಲರಾಗಿರುತ್ತಾರೆ, ಧೈರ್ಯಶಾಲಿಗಳಾಗಿರುತ್ತಾರೆ, ಚಿಂತನಾಶೀಲರಾಗಿರುತ್ತಾರೆ. ಹೊಸದನ್ನು ಕಲಿಯುವ ಆಸಕ್ತಿ ಇವರಿಗೆ ಇರುತ್ಯದೇ. ಒಳ್ಳೆಯ ವಿಮರ್ಶಕರು ನೀವು, ಆದರೆ ನಿಮ್ಮ ಹಕ್ಕುಗಳಿಂದ ಗೊಂದಲಕ್ಕೆ ಒಳಗಾಗುತ್ತೀರಿ. ನಿಮ್ಮ ಉದ್ದೇಶಗಳು ಬೇರೆಯವರಿಗೆ ಬೇರೆ ರೀತಿ ಅನ್ನಿಸಬಹುದು,ಅದರಿಂದ ನೀವು ಟಾಪ್ ಸ್ಥಾನಕ್ಕೆ ಏರುತ್ತೀರಿ..

ಮಿಥುನ ರಾಶಿಯವರ ಕೆರಿಯರ್ :- ವೃತ್ತಿಯಲ್ಲಿ ಹೆಚ್ಚು ಅವಕಾಶ ಸಿಗುತ್ತದೆ, ಶನಿ ದೇವರು ಜನವರಿಯಲ್ಲೂ ನಿಮ್ಮ ರಾಶಿಯ 9ನೇ ಮನೆಯಲ್ಲಿರುತ್ತಾರೆ, ಇದರಿಂದ ಅದೃಷ್ಟ ನಿಮ್ಮದಾಗುತ್ತದೆ. ಹಿಂದಿನ ಸಮಸ್ಯೆಗಳು ದೂರಬಾಗುತ್ತದೆ. ಜೂನ್ ಇಂದ ನವೆಂಬರ್ ವರೆಗು ನಿಮಗೆ ಸಾಕಷ್ಟು ಹೊಸ ಅವಕಾಶಗಳು ಸಿಗುತ್ತದೆ. ಆದರೆ ಎಚ್ಚರಿಕೆಯಿಂದ ನಿರ್ಧಾರ ಮಾಡಿ, ಮೇಲಧಿಕಾರಿಗಳ ಜೊತೆಗೆ ಸಂಬಂಧ ಹಾಳಾಗಬಹುದು, ಎಚ್ಚರಿಕೆಯಿಂದ ಇರಿ. ಕೆಲಸದ ಒತ್ತಡ ಜಾಸ್ತಿ ಇರುತ್ತದೆ. ಬ್ಯುಸಿನೆಸ್ ನಲ್ಲಿರುವವರಿಯೇ ಹೆಚ್ಚು ಲಾಭವಾಗುತ್ತದೆ. 11ನೇ ಮನೆಯಲ್ಲಿ ರಾಹು ಇರುತ್ತಾನೆ ಇದರಿಂದ ಲಾಭಕ್ಕೆ ಹೊಸ ಯೋಜನೆಗಳು ಬರುತ್ತದೆ, ನೀವು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದು ಅಂದುಕೊಂಡಿದ್ದರೇ, ಈ ವರ್ಷದ ಆರಂಭ ಒಳ್ಳೆಯ ಸಮಯ ಆಗಿದೆ.

ಮಿಥುನ ರಾಶಿಯವರ ಕೌಟುಂಬಿಕ ಜೀವನ :- ಮನೆಯವರ ವಿಚಾರದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ ಎಲ್ಲವೂ ಇರುತ್ತದೆ. ತಂದೆ ತಾಯಿ ಆರೋಗ್ಯದಿಂದ ಇರುತ್ತಾರೆ. ನೀವು ಕೂಡ ಉತ್ತಮವಾಗಿರುತ್ತೀರಿ, ಮಕ್ಕಳಿಂದ ಸಂತೋಷ ಪಡೆಯುತ್ತೀರಿ, ಮಕ್ಕಳಿಂದ ಶುಭಸುದ್ದಿ ಕೇಳುತ್ತೀರಿ. ತಂದೆ ತಾಯಿಯನ್ನು ಧಾರ್ಮಿಕ ಸ್ಥಳಕ್ಕೆ ಕಳಿಸುತ್ತೀರಿ. ಮನೆಯಲ್ಲಿ ಶುಭ ಸಮಾರಂಭ ನಡೆಯುತ್ತದೆ.

ಮಿಥುನ ರಾಶಿಯವರ ಆರೋಗ್ಯ :- 2023ರ ಜನವರಿ 17ರಂದು ಶನಿದೇವರು ಈ ರಾಶಿಯ 9ನೇ ಮನೆಗೆ ಪ್ರವೇಶ ಮಾಡುತ್ತಾರೆ, ಇದರಿಂದ ನಿಮ್ಮ ಅದೃಷ್ಟ ಸಾಥ್ ನೀಡುತ್ತದೆ, ಹಾಗೂ ನಿಮ್ಮ ಅಡೆತಡೆಗಳು ಕಡಿಮೆ ಆಗುತ್ತದೆ. ರಾಹು ಮಾತೃ ಕೇತುವಿನ ಸಂಚಾರ ಹೊಟ್ಟೆ ಸಮಸ್ಯೆ ಶುರು ಮಾಡಬಹುದು, ಇದಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ಯೋಗ, ಧ್ಯಾನ ಮಾಡುವುದು ಒಳ್ಳೆಯದು.

ಮಿಥುನ ರಾಶಿಯವರ ಆರ್ಥಿಕ ಸ್ಥಿತಿ :- ಶನಿದೇವರು ನಿಮಗೆ ಅದೃಷ್ಟ ತರುತ್ತಾನೆ, ಹಾಗಾಗಿ ಆರ್ಥಿಕವಾಗಿ ಹೆಚ್ಚು ಲಾಭವಾಗುತ್ತದೆ. ನೀವು ಯೋಚನೆ ಬಿಟ್ಟು ಕೆಲಸ ಮಾಡಿದರೆ, ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ರಾಹು ಕೇತುವಿನಿಂದ ಆದಾಯ ಹೆಚ್ಚಾಗುತ್ತದೆ. 10ನೇ ಮನೆಯಲ್ಲಿ ಗುರು ಇದ್ದು, ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಹಾಗೆ ಹೇಳುತ್ತಾನೆ, ಇಡೀ ವರ್ಷ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ಮಿಥುನ ರಾಶಿಯವರ ವಿದ್ಯಾರ್ಥಿ ಜೀವನ :- ಈ ರಾಶಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ, ಏಪ್ರಿಲ್ ನಂತರ ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಇದು ವಿಶೇಷವಾದ ನೀಡುತ್ತದೆ. ಈ ವರ್ಷದ ಶುರುವಿನಲ್ಲಿ ರಾಹು ಮತ್ತು ಕೇತು ನಿಮ್ಮ ಗಮನವನ್ನು ಬೇರೆ ಕಡೆಗೆ ಸೆಳೆಯಬಹುದು. ವಿದೇಶದಲ್ಲಿ ಓದಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಪರಿಶ್ರಮ ನಿಮಗೆ ತಕ್ಕ ಫಲ ನೀಡುತ್ತದೆ. 9ನೇ ಮನೆಯಲ್ಲಿರುವ ಶನಿ ನಿಮಗೆ ಸಹಾಯ ಮಾಡುತ್ತಾನೆ. ಹೆಚ್ಚಿನ ಬಯಸುವವರು, ಒಳ್ಳೆಯ ಕಾಲೇಜಿನಲ್ಲಿ ಕೆಲಸ ಪಡೆಯುತ್ತಾರೆ.

ಪರಿಹಾರ :- ಈ ವರ್ಷ ಗೋಶಾಲೆಗೆ ಮೇವು ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಹಾಗು ಗಣಪತಿಗೆ ತಪ್ಪದೇ ಪೂಜೆ ಮಾಡುವುದದಿಂದ ಒಳ್ಳೆಯದಾಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರು ವಿಭಿನ್ನ ಸ್ವಭಾವ ಹೊಂದಿರುತ್ತಾರೆ, ಇವರಿಗೆ ಭಾವನೇಗಳು ಕಲ್ಪನೆಗಳು ಕೂಡ ಹೆಚ್ಚು. ಇವರು ಭಾಷೆಯ ವಿಚಾರದಲ್ಲಿ ಒಳ್ಳೆಯ ಗುಣ ಹೊಂದಿರುತ್ತಾರೆ. ಇವರು ಚಂಚಲ ಸ್ವಭಾವದವರು, ಆಧ್ಯಾತ್ಮಿಕ ಗುಣಗಳು ಕೂಡ ಇವರಲ್ಲಿರುತ್ತದೆ. ಇವರ ನೆನಪಿನ ಶಕ್ತಿ ತೀಕ್ಷ್ಣವಾದದ್ದು, ಇವರು ಸರಳ, ಸೂಕ್ಷ್ಮ ಮತ್ತು ಕರುಣೆ ಹೊಂದಿರುವ ಸ್ವಭಾದವರು.

ಕರ್ಕಾಟಕ ರಾಶಿಯವರ ವೃತ್ತಿ ಜೀವನ :- ಉದ್ಯೋಗ ಚೆನ್ನಾಗಿರುತ್ತದೆ, ಏಪ್ರಿಲ್ ವರೆಗು ಪ್ರತಿ ಕೆಲಸದಲ್ಲು ಗುರುಗ್ರಹ ಸಾಥ್ ನ್ಯೂಡುತ್ತದೆ. ಜನವರಿ 17ರಿಂದ ಈ ರಾಶಿಯ 8ನೇ ಮನೆಯಲ್ಲಿ ಶನಿದೇವರ ಸಂಕ್ರಮಣ ನಡೆಯುತ್ತದೆ. ಒಂದು ಕಡೆ ಶನಿ ಧೈಯಾ ಶುರುವಾದರೆ, ಮತ್ತೊಂದೆಡೆ 8ನೇ ಮನೆಗೆ ಶನಿ ಸಂಕ್ರಮಣದಿಂದ ಹೊಸದಾಗಿ ಏನಾದರೂ ನಡೆಯಬಹುದು..ರಾಹು ಕೇತು ಸಂಚಾರದಿಂದ ಕೆಲವು ಬದಲಾವಣೆ ಉಂಟಾಗುತ್ಯದೆ. ಕೆಲಸದ ವಿಚಾರದಲ್ಲಿ ಮುನ್ನೆಚ್ಚರಿಕೆ ಶುರುವಾಗುತ್ತದೆ. ದಿಢೀರ್ ನಿರ್ಧಾರ ತೆಗೆದುಕೊಳ್ಳಬಾರದು. ಕೆಲಸ ವರ್ಗಾವಣೆ ಆಗಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ, ಪರಿಶ್ರಮ ನಿಮಗೆ ಒಳ್ಳೆಯ ಫಲ ನೀಡುತ್ತದೆ..

ಕರ್ಕಾಟಕ ರಾಶಿಯವರ ಕೌಟುಂಬಿಕ ಜೀವನ :- ರಾಹು ಕೇತು ಇರುವುದರಿಂದ ಮನೆಯಲ್ಲಿ ಪ್ರಕ್ಷುಬ್ಧತೆ ಇರುತ್ತದೆ. ಏಪ್ರಿಲ್ ನಂತರ ಗುರುದೇವನ ಸ್ಥಾನ ಬದಲಾವಣೆ ಇಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಯಾಗುತ್ತದೆ. ಜನವರಿ ತಿಂಗಳಲ್ಲಿ 8ನೇ ಮನೆಗೆ ಶನಿದೇವರ ಸಂಚಾರ ಶುರುವಾಗಲಿದ್ದು, ಇದರಿಂದ ಮನೆಯಲ್ಲಿ ಸಮಸ್ಯೆ ಹೆಚ್ಚಾಗಬಹುದು. ಪೂರ್ವಿಕರ ವಿಚಾರ ಪರಿಹಾರಕ್ಕೆ ಹೊಸ ಸಲಹೆ ಸಿಗುತ್ತದೆ. ಎಲ್ಲಾ ವಿಷಯದಲ್ಲೂ ಶಾಂತಿಯಿಂದ ಇರಿ, ಇದರಿಂದ ಒಳ್ಳೆಯದಾಗುತ್ತದೆ..

ಕರ್ಕಾಟಕ ರಾಶಿಯವರ ಆರೋಗ್ಯ :- ಈ ಸಮಯದಲ್ಲಿ ನೀವು ಆರೋಗ್ಯದ ವಿಷಯದಲ್ಲಿ ಹೆಚ್ಚು ಗಮನ ಹರಿಸಿ, ಜನವರಿ 17ರಿಜದ ಶನಿದೆಗರ ಧೈಯಾ ಸಮಸ್ಯೆ ಮಾನಸಿಕವಾಗಿ ಒತ್ತಡ ತರಬಹುದು. ಎರಡನೇ ಮನೆಯಲ್ಲಿ ಶನಿದೇವರ ಅಂಶವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 8ನೇ ಮನೆಗೆ ಶನಿ ಬರುವುದರಿಂದ ದಿಢೀರ್ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. 6ನೇ ಮನೆಯ ಅಧಿಪತಿ ಗುರು, ಈ ರಾಶಿಯ ಏಪ್ರಿಲ್ ವರೆಗು ಮೀನ ರಾಶಿಯಲ್ಲಿದ್ದು, ಬಳಿಕ ಮೇಷ ರಾಶಿಗೆ ಬರುತ್ತದೆ. ಏಪ್ರಿಲ್ ಬಳಿಕ 6ನೇ ಮನೆಯಲ್ಲಿ ಗುರುದೇವನ ಇರುವುದರಿಂದ ದೊಡ್ಡ ಸಮಸ್ಯೆ ಏನು ಆಗುವುದಿಲ್ಲ. ಆರೋಗ್ಯದ ಬಗ್ಗೆ ಜಾಗರೂಕತೆ ಇಂದ ಇರಿ, ಯೋಗ ಮತ್ತು ಜ್ಞಾನ ಅಭ್ಯಾಸ್ ಮಾಡಿ.

ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿ :- ಹಣಕಾಸಿನ ವಿಚಾರದಲ್ಲಿ ಈ ವರ್ಷ ಚೆನ್ನಾಗಿರುತ್ತದೆ. ದಿಢೀರ್ ಧನಲಾಭ ಬರುತ್ತದೆ. ಕುಟುಂಬಗಳಲ್ಲಿ ಆಸ್ತಿ ವಿಷಯ ಇತ್ಯರ್ಥ ಅಗಬಹುದು. 9 ಮತ್ತು 10ನೇ ಮನೆಯಲ್ಲಿ ಗುರುಗ್ರಹದ ಸಂಚಾರ ಆಗುವುದರಿಂದ, ಹಣಕಾಸಿನ ವಿಚಾರದಲ್ಲಿ ಅದೃಷ್ಟ ಹೆಚ್ಚಾಗುತ್ತದೆ..ಹಣ ಹೂಡಿಕೆ ಮಾಡಲು ಅಥವಾ ಮನೆ ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ.

ಕರ್ಕಾಟಕ ರಾಶಿಯವರ ವಿದ್ಯಾಭ್ಯಾಸ :- ಆರಂಭದಲ್ಲಿ ಚೆನ್ನಾಗಿರುತ್ತದೆ. ನಂತರ 5ನೇ ಮನೆಯಲ್ಲಿ ಗುರುಗ್ರಹದ ಪ್ರವೇಶ ಆಗುತ್ತದೆ, ಇದರಿಂದ ಒಳ್ಳೆಯದಾಗುತ್ತದೆ. 4ನೇ ಮನೆಯಲ್ಲಿ ರಾಹು ಪ್ರವೇಶದಿಂದ ಮಾನಸಿಕ ಒತ್ತಡ ಜಾಸ್ತಿಯಾಗಬಹುದು. 2023 ಶುರುವಿನಲ್ಲಿ ಶನಿದೇವರ ಧೈಯಾ ಶುರುವಾಗುತ್ತದೆ, ಹಾಗಾಗಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಿ, ಏಕಾಗ್ರತೆ ಮತ್ತು ವಿಶೇಷ ಗಮನ ಇರಬೇಕು. ನಿಮ್ಮ ಕನಸು ನನಸಾಗುವ ವರ್ಷ ಇದು.
ಪರಿಹಾರ :- ಶಿವಲಿಂಗಕ್ಕೆ ಅಕ್ಷತೆ ಅರ್ಪಣೆ ನೀಡಿ, ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಮಂಗಳವಾರ ಹನುಮಾನ್ ಚಾಳಿಸ ಓದಿ, ಹಾಗೂ ಹನುಮಂತನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಬನ್ನಿ.

ಸಿಂಹ ರಾಶಿ :- ಇವರದ್ದು ಬಹಳ ಒಳ್ಳೆಯ ವ್ಯಕ್ತಿತ್ವ, ಸಿಂಹಕ್ಕೆ ಹೋಲುತ್ತದೆ. ಈ ರಾಶಿಯ ಅಧಿಪತಿ ಸೂರ್ಯಗ್ರಹ, ಇವರಲ್ಲಿ ನಾಯಕತ್ವದ ಗುಣವಿದೆ. ಇವರಿಗೆ ಭಯ ಎನ್ನುವುದೇ ಇರೋದಿಲ್ಲ, ಸ್ವಭಾವದಲ್ಲಿ ಜನ್ಮಜಾತರು. ಇವರು ರಾಜನ ಹಾಗೆ ಬದುಕುಟಿಗಾರೆ, ದೃಢನಿಶ್ಚಯ ಸ್ವಭಾವ ಹೊಂದಿರುವವರು. ಇವರು ತಮ್ಮ ಎಲ್ಲರ ಎದುರು ತಮ್ಮ ಅಭಿಪ್ರಾಯ ಹೇಳಲು ಹಿಂದೆ ಮುಂದೆ ನೋಡೋದಿಲ್ಲ, ಜನರ ನಿರ್ಧಾರದ ಮೇಲೆ ಇವರು ನಿಲ್ಲೋದಿಲ್ಲ. ಇವರಲ್ಲಿರುವ ವಿಭಿನ್ನವಾದ ಗುಣದಿಂದ ಜನರಿಗೆ ಇವರು ಬಹಳ ಬೇಗ ಇಷ್ಟ ಆಗುತ್ತಾರೆ. ಇವರು ಅತ್ಯುತ್ತಮ ಸ್ನೇಹಿತರು ಮತ್ತು ಪ್ರಾಮಾಣಿಕರು ಆಗುತ್ತಾರೆ.

ಸಿಂಹ ರಾಶಿಯವರ ವೃತ್ತಿ ಜೀವನ :- 2023 ಇವರ ವೃತ್ತಿ ಜೀವನದಲ್ಲಿ ಬಹಳ ಮುಖ್ಯ, ಜನವರಿ 17ರಿಂದ ಈ ರಾಶಿಯ 7ನೇ ಮನೆಗೆ ಶನಿದೇವ ಸಾಗಲಿದ್ದಾನೆ, ಶನಿದೇವರೇ ಈ ರಾಶಿಯ ಅಧಿಪತಿ, ಬ್ಯುಸಿನೆಸ್ ವಿಚಾರದಲ್ಲಿ ಇದು ನಿಮಗೆ ಸಹಾಯ ಮಾಡುತ್ತವೆ. ಏಪ್ರಿಲ್ ತಿಂಗಳಿನಲ್ಲಿ ಗುರು ಗ್ರಹದ ಸ್ಥಾನ ಬದಲಾವಣೆ ಇಂದ ನಿಮಗೆ ಅದೃಷ್ಟ ಶುರುವಾಗುತ್ತದೆ, ಬ್ಯುಸಿನೆಸ್ ಮತ್ತು ಕೆಲಸದಲ್ಲಿ ಹೊಸ ಸಾಧನೆ ಮಾಡುತ್ತೀರಿ. ಈ ವರ್ಷ ನೀವು ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಶುರು ಮಾಡಬಹುದು. ಶತ್ರುಗಳು ನಿಮ್ಮ ಎದುರು ಸೋಲುತ್ತಾರೆ. ಕೆಲಸದಲ್ಲಿ ಪೂರ್ತಿ ಗೌರವ ಪಡೆಯುತ್ತೀರಿ..

ಸಿಂಹ ರಾಶಿಯವರ ಕೌಟುಂಬಿಕ ಜೀವನ :- ಈ ವರ್ಷ ಕುಟುಂಬದಲ್ಲಿ ಎಲ್ಲರ ಬಾಂಧವ್ಯ ಚೆನ್ನಾಗಿರುತ್ತದೆ, ಆದರೆ ಕೆಲವು ಸಾರಿ ತೊಂದರಗಳು ಉಂಟಾಗುತ್ತದೆ. 7ನೇ ಮನೆಯಲ್ಲಿ ಶನಿ ಇರುವುದರಿಂದ ಬಾಳ ಸಂಗಾತಿಯ ಜೊತೆಗೆ ಇನ್ನಷ್ಟು ಉತ್ತಮವಾಗಿರುವ ಹಾಗೆ ಮಾಡುತ್ತದೆ, ಆದರೆ ಕೆಲ ಸಮಯದಲ್ಲಿ ಹೊಂದಾಣಿಕೆ ಕಾಪಾಡಿಕೊಳ್ಳಬೇಕಾಗುತ್ತದೆ..8ನೇ ಮನೆಯಲ್ಲಿ ಶನಿ ಇದ್ದು, ಏಪ್ರಿಲ್ ವರೆಗು ಕೌಟುಂಬಿಕ ಜೀವನದಲ್ಲಿ, ಎಲ್ಲವೂ ಚೆನ್ನಾಗಿರುತ್ತದೆ. ಏಪ್ರಿಲ್ ನಂತರ ಗುರುಗ್ರಹ ಸಹಾಯ ಮಾಡುತ್ತದೆ..ಮಕ್ಕಳನ್ನು ಪಡೆಯಲು ಬಯಸುವ ದಂಪತಿಗಳಿಗೆ ಈ ಸಮಯ ಒಳ್ಳೆಯದು.

ಸಿಂಹ ರಾಶಿಯವರ ಆರೋಗ್ಯ :- ಇವರಿಗೆ ಈ ವರ್ಷ ಆರೋಗ್ಯ ಸಮಸ್ಯೆಗಳು ಕಡಿಮೆ ಇರುತ್ತದೆ. ಈ ರಾಶಿಯ್ 6ನೇ ಮನೆಯ ಅಧಿಪರು ಶನಿ ದೇವರು, ತನ್ನ ಮೂಲ ರಾಶಿಯಾದ ಕುಂಭ ರಾಶಿಯಲ್ಲಿ ಸಾಗಲಿದ್ದಾನೆ, ಹಾಗಾಗಿ ಈ ಸಂಚಾರ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಗುರುಗ್ರಹವು 8ನೇ ಮನೆಯಲ್ಲಿ ಇರುವುದರಿಂದ ಹಳೆಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಏಪ್ರಿಲ್ ನಂತರ ನೀವು ಆರೋಗ್ಯದ ವಿಷಯದಲ್ಲಿ ಜಾಗರೂಕವಾಗಿರುವುದು ಒಳ್ಳೆಯದು.

ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿ :- ಹಣಕಾಸಿನ ವಿಚಾರದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ದಿಢೀರ್ ಧನಲಾಭಗಳನ್ನು ಈ ವರ್ಷ ಪಡೆಯುತ್ತೀರಿ..8ನೇ ಮನೆಯಕ್ಕಿ ಗುರು ಮತ್ತು ರಾಹು ಸಂಕ್ರಮಣ ಏಪ್ರಿಲ್ ನಲ್ಲಿ ನಡೆಯುತ್ತದೆ, ಇದರಿಂದ ಧನಲಾಭ ಉಂಟಾಗುತ್ತದೆ. 2ನೇ ಮ ಎಯ ಅಧಿಪತಿ ಮತ್ತು ಲಾಭದ ಮನೆಯಲ್ಲಿ ಬುಧ ಇರುವುದರಿಂದ ಖರ್ಚಿನ ವಿಷಯ. ಬ್ಯಾಲೆನ್ಸ್ಡ್ ಆಗಿರುತ್ತದೆ.. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ, ಭವಿಷ್ಯದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ಸಿಂಹ ರಾಶಿಯವರ ವಿದ್ಯಾರ್ಥಿ ಜೀವನ :- ಉನ್ನತ ವಿದ್ಯಾಭ್ಯಾಸಕ್ಕೆ ತಯಾರಿ ಮಾಡಿಕೊಳ್ಳುತ್ತಾ ಇರುವವರಿಗೆ, ಏಪ್ರಿಲ್ ವರೆಗು ಗಮನ ಹರಿಸಲು ಆಗುವುದಿಲ್ಲ, ಏಪ್ರಿಲ್ ಬಳಿಕ ಗುರುಗ್ರಹವು ಐದನೇ ಮನೆಯಲ್ಲಿ ಇರುವುದರಿಂದ ಓದಿನ ಕಡೆಗೆ ವಿಶೇಶ ಗಮನ ಹರಿಸುತ್ತೀರಿ. ಹೊಸದೇಶಕ್ಕೆ ಓದಲು ಹೋಗುವುದಕ್ಕೆ ಇಷ್ಟಪಡುವವರಿಗೆ ಇದು ಒಳ್ಳೆಯ ಸಮಯ ಆಗುತ್ತದೆ.

ಪರಿಹಾರಗಳು :- ಈ ರಾಶಿಯಲ್ಲಿ ಸೂರ್ಯನ ಸ್ಥಾನ ಬಲವಾಗಲು, ಪ್ರತಿ ದಿನ ಸೂರ್ಯದೇವರಿಗೆ ನೀರನ್ನು ಅರ್ಪಣೆ ಮಾಡಿ, ಭಾನುವಾರದ ದಿನ, ಸೂರ್ಯದೇವನಿಗೆ ವಿಶೇಷ ಪೂಜೆ ಮಾಡಿ, ಹನುಮಾನ್ ಚಾಲೀಸಾ ಓದಿ, ಬೆಲ್ಲ ಮತ್ತು ಇನ್ನಿತರ ವಸ್ತುಗಳನ್ನು ದಾನ ನೀಡಿ, ಬಡವರಿಗೆ ಸಹಾಯ ಮಾಡಿ.

ಕನ್ಯಾ ರಾಶಿ :- ಇದು ಉಳಿದ ಎಲ್ಲ ರಾಶಿಗಳಿಗಿಂತ ಸುಂದರವಾದ ರಾಶಿ ಎನ್ನುತ್ತಾರೆ, ಇವರು ಸೌಂದರ್ಯವನ್ನು ಆರಾಧಿಸುತ್ತಾರೆ, ಅದಕ್ಕೆ ಕಾರಣ ಈ ರಾಶಿಯ ಪ್ರತಿನಿಧಿ ಹುಡುಗಿ. ಇವರ ವಿಶೇಷತೆ ಏನೆಂದರೆ, ಯಾವುದೇ ಕೆಲಸ ತೆಗೆದುಕೊಂಡರು ಸುಂದರವಾಗಿ ಮಾಡಿ ಮುಗಿಸುತ್ತಾರೆ. ಈ ರಾಶಿಯವರು ಹುಡುಗಿ ಆಗಿರಲಿ ಅಥವಾ ಹುಡುಗ ಆಗಿರಲಿ ಯಾವುದಾದರು ವಿಷಯವನ್ನು ಮನಸ್ಸಿನಲ್ಲೇ ಹೂತುಹಾಕುವುದು ಹೇಗೆ ಎನ್ನುವ ಕಲೆ ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಶುಚಿತ್ವವನ್ನು ಕಾಪಾಡುವುದರ ಜೊತೆಗೆ,ಒಳ್ಳೆಯ ರೀತಿಯಲ್ಲಿ ಕೆಲಸಗಳನ್ನು ಅಯೋಜಿಸುವುದು ವಿಶೇಷತೆ ಆಗಿದೆ.

ಕನ್ಯಾ ರಾಶಿಯ ವೃತ್ತಿಜೀವನ :- ಈ ವರ್ಷ ನಿಮ್ಮ ವೃತ್ತಿ ಜೀವನ ಚೆನ್ನಾಗಿರುತ್ತದೆ, ಸ್ಪರ್ಧೆಯಲ್ಲಿ ಜಯ ಸಾಧಿಸುತ್ತೀರಿ. ಈ ವರ್ಷದ ಆರಂಭ ಬ್ಯುಸಿನೆಸ್ ಗೆ ಒಳ್ಳೆಯ ಸಮಹ ಆಗಿದೆ. ಇದನ್ನು ನೀವು ಒಳ್ಳೆಯ ರೀತಿಯಲ್ಲಿ ಮುಂದುವರೆಸುತ್ತೀರಿ, ಗುರು 7ನೇ ಮನೆಯಲ್ಲಿ ಏಪ್ರಿಲ್ ವರೆಗು ಇದ್ದು ಹೊಸ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ, ಇದರಿಂದ ಲಾಭವಾಗುತ್ತದೆ. ಹೊಸ ಸಂಪರ್ಕಗಳಿಂದ ಲಾಭ ಪಡೆಯುತ್ತೀರಿ, ರಾಹು ಮತ್ತು ಕೇತು ಇದರಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ವಿದೇಶ ದ ಸಂಪರ್ಕವೂ ಇದಾಗಿರಬಹುದು, ಇದರಿಂದ ಪ್ರಗತಿ ಕಾಣುತ್ತೀರಿ. ಮೇ ತಿಂಗಳ ಬಳಿಕ, ಬ್ಯುಸಿನೆಸ್ ನಲ್ಲಿ ಹೊಸ ಸಂಪರ್ಕ ಸಿಗುತ್ತದೆ. ಇದರಿಂದ ಲಾಭ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ..ಕೆಲಸದಲ್ಲಿ ನೀವು ಇಷ್ಟಪಟ್ಟ ಜಾಗಕ್ಕೆ ವರ್ಗಾವಣೆ ಆಗುತ್ತದೆ..

ಕನ್ಯಾ ರಾಶಿಯವರ ಕೌಟುಂಬಿಕ ಜೀವನ :- ಗುರುವಿನ ಸಹಾಯ ನಿಮಗೆ ಕೌಟುಂಬಿಕ ಜೀವನದಲ್ಲಿ ಸಹಾಯ ಮಾಡುತ್ತದೆ, ಏಪ್ರಿಲ್ ವರೆಗು 7ನೇ ಮನೆಯಲ್ಲಿ ರಾಹು ಗ್ರಹ ಮಾತ್ರ ಇರುವುದರಿಂದ ಸಂಬಂಧಗಳಲ್ಲಿ ಏರು ಪೇರು ಉಂಟಾಗಬಹುದು, ಹಾಗಾಗಿ ಅಂತಹ ಸಮಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು. ಏಪ್ರಿಲ್ ಇಂದ ಗುರು ಗ್ರಹವು 8ನೇ ಮನೆಯಲ್ಲಿ ಸಾಗಲಿದೆ, ಇದರಿಂದ ಪರಿಸ್ಥಿತಿ ಸುಧಾರಿಸುತ್ತದೆ. ಈ ವರ್ಷ ನಿಮಗೆ ನಿಮ್ಮ ತಾಯಿಯ ಚಿಕ್ಕಾಪ್ಪನ ಕಡೆಯಿಂದ ಲಾಭ ಉಂಟಾಗಬಹುದು. ಕುಟುಂಬದಲ್ಲಿ ವಿವಾದಗಳು ನಡೆಯುತ್ತಿದ್ದರೆ, ಏಪ್ರಿಲ್ ಇಂದ ಸೆಪ್ಟೆಂಬರ್ ವರೆಗು ಅದೆಲ್ಲವೂ ಪರಿಹಾರ ಆಗುತ್ತದೆ.

ಕನ್ಯಾ ರಾಶಿಯವರ ಆರೋಗ್ಯ :- ಜನವರಿ 17ರಿಂದ ಶನಿಗ್ರಹವು ತನ್ನ ರಾಶಿಹಲಿ ಸಾಗುತ್ತಾನೆ, ಹಾಗಾಗಿ ಆರೋಗ್ಯ ಸಮಸ್ಯೆ ಇಂದ ನಿಮಗೆ ಮುಕ್ತಿ ಸಿಗುತ್ತದೆ. ಆದರೆ 8ನೇ ಮನೆಹಳ್ಳಿ ರಾಹು ಸಂಚಾರ ಇರುವುದರಿಂದ ದಿಢೀರ್ ಎಂದು ಆರೋಗ್ಯ ಸಮಸ್ಯೆ ಶುರುವಾಗಬಹುದು. ಎಚ್ಚರಿಕೆಯಿಂದ ಇರಿ..ಈ ವರ್ಷ ನಿಮಗೆ ದೊಡ್ಡದಾಗಿ ಆರೋಗ್ಯ ಸಮಸ್ಯೆ ಬರುವುದಿಲ್ಲ.

ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ :- ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆದರೆ ನಿಮ್ಮ ಆದಾಯದ ಮೊತ್ತ ಯಾವಾಗಲೂ ಕಡಿಮೆ ಆಗುತ್ತಿರುತ್ತದೆ, ಆದರೆ ಈ ವರ್ಷ ಏರಿಕೆ ಕಾಣುತ್ತೀರಿ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ಸಮವ ಆಗಿದೆ. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಲಾಭ ಇರುತ್ತದೆ.

ಕನ್ಯಾ ರಾಶಿಯವರ ವಿದ್ಯಾರ್ಥಿ ಜೀವನ :- ಈ ವರ್ಷ ಐದನೇ ಮನೆಗೆ ಅಧಿಪತಿ ಆಗಿರುವ ಶನಿ, 6ನೇ ಮನೆಗೆ ಸಾಹಲಿದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಏಪ್ರಿಲ್ ವರೆಗು ಗುರು ಗ್ರಹ ನಿಮಗೆ ಸಹಾಯ ಮಾಡಲಿದೆ. ವಿದೇಶಕ್ಕೆ ಹೋಗಿ ಓದಬೇಕು ಎಂದುಕೊಂಡಿರುವವರಿಗೆ ಸೆಪ್ಟೆಂಬರ್ ವರೆಗು ಒಳ್ಳೆಯ ಸಮಯ ಆಗಿದೆ. ಪರಿಹಾರ :- ಗಣೇಶನಿಗೆ ದುರ್ವ ಅರ್ಪಿಸುವ ಮೂಲಕ ಈ ವರ್ಷ ಶುರು ಮಾಡಿ, ಗೋಶಾಲೆಗೆ ಹಸಿರು ಮೇವು ದಾನ ಮಾಡಿ.

ತುಲಾ ರಾಶಿ :- ಇವರ ರಾಶಿಯಲ್ಲಿರುವ ಮಾಪಕಗಳು, ಇವರ ಜೀವನ ಬ್ಯಾಲೆನ್ಸ್ಡ್ ಆಗಿರುವುದನ್ನು ತಿಳಿಸುಯ್ತದೆ. ಇವರು ಯಾವುದೇ ಸಮಸ್ಯೆಯನ್ನು ಸರಳವಾಗಿ ಪರಿಹಾರ ಮಾಡುವುದು ಇವರ ಶ್ರೇಷ್ಠ ಗುಣ ಆಗಿದೆ. ತಮ್ಮ ಜ್ಞಾನದಿಂದ ಚರ್ಚೆಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಇವರು ಮುಕ್ತ ಮನಸ್ಸಿನವರು, ಸೃಜನಶೀಲರು ಹಾಗೂ ಶಕ್ತಿಯುತರು ಮತ್ತು ಭಾವನಾತ್ಮಕ ಜೀವಿ.

ತುಲಾ ರಾಶಿಯವರ ವೃತ್ತಿ ಜೀವನ :- ಈ ವರ್ಷ ನಿಮಗೆ ಶನಿದೇವ ಸಹಾಯ ಮಾಡುತ್ತಾನೆ, ರಾಹು ಮತ್ತು ಕೇತು ಪರ್ಟ್ನರ್ಶಿಪ್ ವ್ಯವಹಾರ ಮಾಡಬೇಡಿ ಎಂದು ಸಲಹೆ ನ್ಯೂಡುತ್ತದೆ. ಗುರುಗ್ರಹವು ನಿಮ್ಮ ಉದ್ಯೋಗದಲ್ಲಿ ಬರುವ ಅಡೆತಡೆಗಳಿಂದ ರಕ್ಷಣೆ ನೀಡುತ್ತದೆ. ಏಪ್ರಿಲ್ ನಲ್ಲಿ ಕೆಲಸದಲ್ಲಿ ಹೊಸ ಬದಲಾವಣೆ ಬರುತ್ತದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಸಮಯ, ಈ ವರ್ಷ ನೀವು ಕೆಲಸ ಕಳೆದುಕೊಳ್ಳಬಹುದು, ಆದರೆ ಇನ್ನೂ ಒಳ್ಳೆಯ ಕೆಲಸ ಪಡೆಯುತ್ತೀರಿ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಒಳ್ಳೆಯ ಜಾಗಕ್ಕೆ ವರ್ಗಾವಣೆ ಆಗಬಹುದು.

ತುಲಾ ರಾಶಿಯವರ ಕೌಟುಂಬಿಕ ಜೀವನ :- ಈ ವರ್ಷ ನಿಮಗೆ ಶನಿದೇವರ ಧೈಯಾ ಮುಗಿಯುವುದರಿಂದ ಶುರುವಾಗುತ್ತದೆ.. ಕುಟುಂಬದಲ್ಲಿರುವ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ. ಈ ವರ್ಷ ನೀವು ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಜೀವನ ಸಂಗಾತಿಯ ಜೊತೆಗೆ ಜಗಳ ಆಗಬಹುದು. ಏಪ್ರಿಲ್ ವರೆಗೆ ಹೀಗೆ ಇರಬಹುದು, ಏಪ್ರಿಲ್ ನಂತರ ಎಲ್ಲವೂ ನಾರ್ಮಲ್ ಆಗುತ್ತದೆ.

ತುಲಾ ರಾಶಿಯವರ ಆರೋಗ್ಯ :- ಈ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮಾನಸಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಈ ವರ್ಷ ಪರಿಹಾರ ಸಿಗುತ್ತದೆ. 6ನೇ ಮನೆಯಲ್ಲಿ ಗುರುವಿನ ಸಂಚಾರ ಇದೆ, ಇದು ಆರೋಗ್ಯ ಉತ್ತಮ ಆಗಿರುವುದನ್ನು ಸೂಚಿಸುತ್ತದೆ. ಏಪ್ರಿಲ್ ನಂತರ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ಇಲ್ಲದೆ ಹೋದರೇ ಯಾವುದಾದರೂ ಖಾಯಿಲೆ ಶುರುವಾಗಬಹುಡಿ. ಯೋಗ ಮಾಡುವುದು ಒಳ್ಳೆಯದು.

ತುಲಾ ರಾಶಿಯವರ ಆರ್ಥಿಕ ರಾಶಿ :- ಹಣಕಾಸಿನ ವಿಚಾರದಲ್ಲಿ ಈ ವರ್ಷ ಮಿಶ್ರ ಫಲಿತಾಂಶ ಇರುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಿದ್ದರೆ, ಈ ವರ್ಷ ಲಾಭ ಪಡೆಯುತ್ತೀರಿ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಿದರೆ ನಷ್ಟ ಆಗಬಹುದು. ಏಪ್ರಿಲ್ ಇಂದ ಸೆಪ್ಟೆಂಬರ್ ವರೆಗು ಆದಾಯ ಹೆಚ್ಚಾಗುತ್ತದೆ. ಹಾಗಾಗಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.

ತುಲಾ ರಾಶಿಯವರ ವಿದ್ಯಾರ್ಥಿ ಜೀವನ :- ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ವರ್ಷ, ಶನಿದೇವರು ಈ ರಾಶಿಯ ಐದನೇ ಮನೆಯಲ್ಲಿರಲಿದ್ದಾರೆ, ಬಳಿಕ ಪರಿಸ್ಥಿತಿ ನಿಮಗೆ ಚೆನ್ನಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಾ ಇರುವವರು ಯಶಸ್ಸು ಪಡೆಯುತ್ತೀರಿ. ಏಪ್ರಿಲ್ ವರೆಗು ಗುರುಗ್ರಹ ಸಹಾಯ ಮಾಡುತ್ತದೆ.

ಪರಿಹಾರ :- ದುರ್ಗಾದೇವಿ ಪೂಜೆ ಮಾಡುವುದರಿಂದ ಈ ವರ್ಷವನ್ನು ಶುರು ಮಾಡಿ, ಲಕ್ಷ್ಮೀದೇವಿ ಮತ್ತು ದುರ್ಗಾದೇವಿಯ ಪೂಜೆ ಮಾಡಿ. ಶುಕ್ರವಾರ ಈ ದೇವರಿಗೆ ಪೂಜೆ ಮಾಡುವುದು ಒಳ್ಳೆಯದು, ಏಕೆಂದರೆ ಶುಕ್ರವಾರದ ದಿನವನ್ನು ಇವರಿಬ್ಬರು ದೇವಿಯರ ದಿನ ಎಂದು ಕರೆಯುತ್ತಾರೆ.

ವೃಶ್ಚಿಕ ರಾಶಿ :- ಮಂಗಳಗ್ರಹ ಈ ರಾಶಿಯ ಅಧಿಪತಿ, ಹಾಗಾಗಿ ಇವರಲ್ಲಿ ತೀಕ್ಷ್ಣತೆ ಇರುತ್ತದೆ. ಇವರು ಸ್ವಲ್ಪ ಉಗ್ರ ಸ್ವಭಾವದವರು, ಧೈರ್ಯಕ್ಕೆ ಕೊರತೆ ಇರುವುದಿಲ್ಲ. ಇವರು ದೃಢ ಸ್ವಭಾವದವರು, ಪರಿಶೋಧನಾತ್ಮಕ ಸ್ವಭಾದವವರು, ಎಲ್ಲಾ ವಿಷಯಕ್ಕೂ ಸ್ವಲ್ಪ ತಳಮಳಗೊಳ್ಳುತ್ತಾರೆ. ಹಠಮಾರಿ ಕೂಡ ಹೌದು, ವಿಶ್ವಾಸಾರ್ಹ ಮತ್ತು ನಿಷ್ಠೆ ಇರುವ ಸ್ವಭಾವದವರು. ಇವರು ಕೆಲಸವನ್ನು ಆತ್ಮವಿಶ್ವಾಸ, ಶಕ್ತಿ ಮತ್ತು ಉತ್ಸಾಹದಿಂದ ಮಾಡುತ್ತಾರೆ.
ವೃಶ್ಚಿಕ ರಾಶಿಯವರ ವೃತ್ತಿ ಜೀವನ :- ಈ ವರ್ಷದ ಶುರುವಿಂದಲು ನೀವು ಮುಖ್ಯ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಯಾವುದಾದರೂ ವಿಷಯದಲ್ಲಿ ಬದಲಾವಣೆ ಮಾಡುವುದಕ್ಕಿಂತ ಮೊದಲು, ಯೋಚನೆ ಮಾಡಿ.

ಜನವರಿ 17ರ ಬಳಿಕ ಶನಿದೇವರ ಧೈಯಾ ಶುರುವಾಗುತ್ತದೆ, ಹಾಗಾಗಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಗುರುಗ್ರಹವು ಇಡೀ ವರ್ಷ ನಿಮಗೆ ಸಹಾಯ ಮಾಡಿತ್ತಾರೆ. ಗುರುವು ಏಪ್ರಿಲ್ ವರೆಗು ನಿಮ್ಮ ರಾಶಿಯ 5ನೇ ಮನೆಯಲ್ಲಿ, ನಂತರ 6ನೇ ಮನೆಯಲ್ಲಿ ಇರುತ್ತದೆ. ಇದರಿಂದ ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಯಶಸ್ಸು ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇದು ವಿಶೇಷವಾದ ವರ್ಷ ಆಗಿದೆ, ಹೊಸ ಕೆಲಸ ಸಿಗಬಹುದು. ಹಿರಿಯ ಅಧಿಕಾರಿಗಳ ಸಹಾಯ ಸಿಗುತ್ತದೆ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುತ್ತದೆ.

ವೃಶ್ಚಿಕ ರಾಶಿಯವರ ಕೌಟುಂಬಿಕ ಜೀವನ :- ಈ ರಾಶಿಯ 4ನೇ ಮನೆಯಲ್ಲಿ ಶನಿಯ ಸಂಚಾರ ಇರುವುದರಿಂದ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಅವರ ಬಗ್ಗೆ ವಿಶೇಷ ಗಮನ ಹರಿಸಿ, ಈ ಸಮಯದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಅವುಗಳನ್ನು ಮುಂದಕ್ಕೆ ಹಾಕಿ. ಈ ವರ್ಷ ನಿಮಗೆ ಮಕ್ಕಳ ವಿಚಾರಕ್ಕೆ ಸಂಬಂಧಿಸಿದ ಚಿಂತೆ ದೂರವಾಗುತ್ತದೆ. ಹೆಚ್ಚಿನ ಶಿಕ್ಷಣ ಪಡೆಯಲು ಶ್ರಮ ಪಡುತ್ತಿರುವವರು ಯಶಸ್ಸು ಪಡೆಯುತ್ತೀರಿ. ಶತ್ರುಕಾಟ ಇದ್ದೇ ಇರುತ್ತದೆ, ಏಪ್ರಿಲ್ ಇಂದ ಮುಕ್ತಿ ಪಡೆಯುತ್ತೀರಿ.

ವೃಶ್ಚಿಕ ರಾಶಿಯವರ ಆರೋಗ್ಯ :- ಈ ವರ್ಷ ರಾಹು ಮತ್ತು ಕೇತು ಸಂಚಾರದಿಂದ ನಿಮಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಶನಿದೇವರ ಧೈಯಾ ಈ ವರ್ಷ ಶುರುವಿನಿಂದ ನಿಮಗೆ ಮಾನಸಿಕವಾಗಿ ತೊಂಡ್ಸರ್ ಕೊಡುತ್ತದೆ. ಆದರೆ ಏಪ್ರಿಲ್ ಬಳಿಕ, ಗುರುಗ್ರಹದ ಸಂಚಾರದ ಕಾರಣ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಈ ವರ್ಷ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ತೊಂದರೆ ಕೊಡಬಹುದು. ಹಾಗಾಗಿ ಆಹಾರ ಮತ್ತು ಪಾನೀಯಗಳ ವಿಷಯದಲ್ಲಿ ಕಾಳಜಿಯಿಂದ ಇರಿ. ಯೋಗದ ಅಭ್ಯಾಸ ಮಾಡುತ್ತಲೇ ಇರಿ, ಇದರಿಂದ ಸಮಸ್ಯೆ ದೊಡ್ಡದಾಗುವುದಿಲ್ಲ.

ವೃಶ್ಚಿಕ ರಾಶಿಯವರ ಆರ್ಥಿಕ ಸ್ಥಿತಿ :- ಹಣಕಾಸಿನ ವಿಷಯದಲ್ಲಿ ಈ ವರ್ಷ ಒಳ್ಳೆಯದಾಗುತ್ತದೆ, ಈ ಹಿಂದೆ ಮಾಡಿದ ಹೂಡಿಕೆಯ ಲಾಭ ನಿಮಗೆ ಸಿಗುತ್ತದೆ. ಆಸ್ತಿ ಮತ್ತು ಮನೆ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದರೆ, ನಿಮ್ಮದೇ ಆದ ಸ್ವಂತ ರಾಶಿಯ ಸಹಾಯ ಸಿಗುತ್ತದೆ. ಈ ವರ್ಷ ನಿಮ್ಮ ಸ್ಥಿರಾಸ್ತಿ ಏರಿಕೆ ಆಗಬಹದ್ದು, ಆದಾಯ ಹೆಚ್ಚಾಗುತ್ತದೆ. ಹೊಸದಾಗಿ ಹೂಡಿಕೆ ಮಾಡುವುದನ್ನು ಚೆನ್ನಾಗಿ ಯೋಚಿಸಿದ ನಂತರ ಮಾತ್ರ ಮಾಡಿ.

ವೃಶ್ಚಿಕ ರಾಶಿಯವರ ವಿದ್ಯಾರ್ಥಿ ಜೀವನ :- ಈ ವರ್ಷ ವಿದ್ಯಾರ್ಥಿಗಳಿಗೆ ಉತ್ತಮ ಸಮಯ, ದೊಡ್ಡ ಸಂಸ್ಥೆಗೆ ಹೋಗಬೇಕು ಎಂದು ಬಯಸಿದರೆ, ಏಪ್ರಿಲ್ ಗಿಂತ ಮೊದಲು ನಿಮ್ಮ ಆಸೆ ನೆರವೇರಬೇಕು, ಶನಿದೇವರ ಧೈಯಾ ಮಾನಸಿಕವಾಗಿ ಗಮನ ಹರಿಸದೆ ಇರುವ ಹಾಗೆ ಮಾಡುತ್ತದೆ, ಆದರೆ ಗುರುಗ್ರಹವು ಇದನ್ನು ಸರಿ ಮಾಡುತ್ತಾರೆ, ವಿದ್ಯಾಭ್ಯಾಸದಲ್ಲಿ ಹೆಚ್ಚು ಶ್ರಮದ ಅಗತ್ಯವಿದೆ, ಅನಾವಶ್ಯಕ ಕೆಲಸಗಳಲ್ಲಿ ಕಡಿಮೆ ಸಮಯ ಕಳೆಯಿರಿ ಎನ್ನುತ್ತಾರೆ.

ಪರಿಹಾರ :- ಆಂಜನೇಯ ಸ್ವಾಮಿ ಆರಾಧನೆ ಇಂದ ಈ ವರ್ಷ ಶುರು ಮಾಡಿ, ಇಡೀ ವರ್ಷ ಮಂಗಳವಾರದ ದಿನ ಹನುಮಾನ್ ಚಾಲೀಸಾ ಪಠಿಸಿ, ಶನಿವಾರದ ದಿನ ಪೀಪಲ್ ಮರದ ಕೆಳಗೆ ಸಾಸಿವೆ ದೀಪ ಹಚ್ಚಿ.

ಧನು ರಾಶಿ :- ಇವರ ಆಲೋಚನೆ ಮುಕ್ತವಾಗಿರುತ್ತವ, ಬುದ್ಧಿವಂತರ ಕಡೆಗೆ ಬೇಗ ಆಕರ್ಷಣೆಗೆ ಒಳಗಾಗುತ್ತಾರೆ.ನಂಬಿಕೆಗೆ ಅರ್ಹರಾಗಿರುವ ಇವರು ಹೃದಯದಿಂದ ಶುದ್ಧ ಸ್ವಭಾವದವರು. ಇವರು ಶಿಕ್ಷಕರು ಅಥವಾ ತತ್ವಜ್ಞಾನಿಗಳು ಆಗಬಹುದು. ಇವರು ಆಶಾವಾದಿ ದೃಷ್ಟಿಕೋನದಿಂದ ಭವಿಷ್ಯದ ಜೀವನವನ್ನು ನೋಡುತ್ತಾರೆ. ಇವರ ಕಣ್ಣುಗಳು ಹೊಳಪಿನಿಂದ ಕೂಡಿರುತ್ತದೆ. ಯಾವಾಗಲೂ ಸಂತೋಷವಾಗಿರುತ್ತೀರಿ. ಈ ರಾಶಿಯವರು ಒಳ್ಳೆಯವರು, ಇವರು ಅಸಾಮಾನ್ಯ, ಆಧ್ಯಾತ್ಮಿಕ ಸ್ವಭಾವ ಇರುವುದರಿಂದ ಜನರನ್ನು ಬೇಗ ಆಕರ್ಷಿಸುತ್ತಾರೆ. ಕೆಲಸದಲ್ಲಿ ಧೈರ್ಯ ನಟರು ಉತ್ಸಾಹ ಇರುತ್ತದೆ.

ಧನು ರಾಶಿಯ ವೃತ್ತಿ ಜೀವನ :- ವರ್ಷದ ಶುರುವಿನಲ್ಲಿ ಶನಿದೇವರಿಂದ ಮುಕ್ತಿ ಪಡೆಯುತ್ತೀರಿ, ಹೊಸ ವರ್ಷ ಹೊಸ ಸಾಧನೆ ಮತ್ತು ಭರವಸೆ ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗಬಹುದು, ಕೌಶಲ್ಯದ ಆಧಾರದ ಮೇಲೆ ಉದ್ಯೋಗ ಪಡೆಯುವ ನೀವು, ಅದೃಷ್ಟ ಹೊಂದುತ್ತೀರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು ಮಾತ್ರವಲ್ಲದೆ, ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ನೀಡುತ್ತದೆ.. ಈ ರಾಶಿಯ ಅಧಿಪತಿ ಗುರು, ಏಪ್ರಿಲ್ ವರೆಗು ದೊಡ್ಡ ಕೆಲಸ ಮಾಡುವ ಸೂಚನೆ ನೀಡುತ್ತಾನೆ, ಏಪ್ರಿಲ್ ಬಳಿಕ ಮೇಷ ರಾಶಿಯಲ್ಲಿ ಗುರು ಗ್ರಹ ಸಾಗಲಿದ್ದು, ಬ್ಯುಸಿನೆಸ್ ನಲ್ಲಿ ನಿಮ್ಮ ಭರವಸೆ ಹೆಚ್ಚಾಗುತ್ತದೆ..

ಧನು ರಾಶಿಯವರ ಕೌಟುಂಬಿಕ ಜೀವನ :- ಕೌಟುಂಬಿಕ ಜೀವನ ಈ ವರ್ಷ ಚೆನ್ನಾಗಿರುತ್ತದೆ, ಮನೆವಲ್ಲಿ ಕೆಲವು ಶುಭಕಾರ್ಯ ನಡೆಯುವ ಸೂಚನೆ ಇದೆ, ಹಿಸ ಮನೆ ಖರೀದಿ ಮಾಡಲು ಬಯಸಿದ್ದರೆ, ಈ ವರ್ಷ ಯಶಸ್ವಿಯಾಗುತ್ತೀರಿ. ತಂದೆ ತಾಯಿಯ ಆರೋಗ್ಯದ ಬಗೆಗಿನ ಚಿಂತೆ ದೂರವಾಗುತ್ತದೆ. ತಂದೆ ತಾಯಿಯನ್ನು ಧಾರ್ಮಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೀರಿ. ಏಪ್ರಿಲ್ ನಂತರ ಮಕ್ಕಳ ವಿಷಯದ ಚಿಂತೆ ದೂರವಾಗುತ್ತದೆ.

ಧನು ರಾಶಿಯವರ ಆರೋಗ್ಯ ಪರಿಸ್ಥಿತಿ :- ಈ ವರ್ಷ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತಾರೆ, ಶನಿದೇವರ ಅರ್ಧಅರ್ಧ ಅಂಟಿಡಿನ ಮಾನಸಿಕ ಚಿಂತೆಗಳು ದೂರವಾಗುತ್ತದೆ. ಹಾಗಾಗಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಐದನೇ ಮನೆಯಲ್ಲಿ ರಾಹುವಿನ ಸಂಚಾರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಶುರುವಾಗುವ ಹಾಗೆ ಮಾಡಬಹುದು. ಆಹಾರದ ವಿಷಯದಲ್ಲಿ ಕಾಳಜಿ ವಹಿಸಿ. ಯೋಗ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮನೆಯ ವಾತಾವರಣ ಚೆನ್ನಾಗಿದ್ದರೆ, ನೆಮ್ಮದಿ ಇರುತ್ತದೆ.

ಧನು ರಾಶಿಯವರ ವಿದ್ಯಾರ್ಥಿ ಜೀವನ :- ಈ ರಾಶಿಯವರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಶ್ರಮ ಪಡಬೇಕು, ಏಕಾಗ್ರತೆ ದೂರವಾಗುವ ಹಾಗೆ ಮಾಡಿಕೊಳ್ಳಬೇಡಿ. ರಾಹು 5ನೇ ಮನೆಯಲ್ಲಿ ರಾಹು ಸಂಚಾರ ಏಕಾಗ್ರತೆಗೆ ಭಂಗ ತರುತ್ತದೆ. ಏಪ್ರಿಲ್ ನಲ್ಲಿ ಗುರುದೇವ, ಐದನೇ ಮನೆಗೆ ಪ್ರವೇಶ ಮಾಡಿದ ನಂತರ, ವಿದ್ಯಾಭ್ಯಾಸದ ವಿಚಾರದಲ್ಲಿ ಯಶಸ್ಸು ಶುರುವಾಗುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಕನಸು ನನಸಾಗುತ್ತದೆ..

ಪರಿಹಾರ :- ವಿಷ್ಣುದೇವರಿಗೆ ಹಳದಿ ಹೂವುಗಳ ಮಾಲೆ ಮಾಡಿ ಹಾಕುವ ಮೂಲಕ ಈ ವರ್ಷ ಶುರು ಮಾಡಿ. ಪ್ರತಿ ಗುರುವಾರ, ಹಸುವಿಗೆ ಹಸಿರು ಮೇವು ಹಾಕಿ, ಹಾಗೆ ಬೆಲ್ಲ ಮತ್ತು ಇನ್ನಿತರ ಪದಾರ್ಥಗಳನ್ನು ತಿನ್ನಿಸಿ. ಮನೆಯಿಂದ ದೂರದಲ್ಲಿರುವ ಪಾರ್ಕ್ ಅಥವಾ ದೇವಸ್ಥಾನದಲ್ಲಿ ಪೀಪಲ್ ಗಿಡ ನೆಟ್ಟು ಪೂಜೆ ಮಾಡಿ.

ಮಕರ ರಾಶಿ :- ಈ ರಾಶಿಯ ಅಧಿಪತಿ ಶನಿದೇವ, ಈ ಗ್ರಹವನ್ನು ದುಷ್ಟ ಗ್ರಹ ಎನ್ನುತ್ತಾರೆ. ಉವರು ಕಠಿಣ ಪರಿಶ್ರಮ, ಸಮರ್ಪಣೆಯ ಮನೋಭಾವ ಹಾಗೂ ಶಿಸ್ತು ಹೊಂದಿರುವ ವ್ಯಕ್ತಿ. ಇವರಿಗೆ ಭಯವಿಲ್ಲ, ಒಳ್ಳೆಯ ಕೆಲಸಗಾರ ಎಂದು ಹೆಸರು ಪಡೆಯುತ್ತಾರೆ. ಇವರಿಗೆ ಎಲ್ಲವನ್ನೂ ಹೇಗೆ ನಿರ್ವಹಿಸಬೇಕು ಎಂದು ಗೊತ್ತಿದೆ. ಇವರು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರು ಉನ್ನತ ಶ್ರೇಣಿ ತಲುಪುವ ಪ್ರಯತ್ನ ಮಾಡುತ್ತಾರೆ. ಸಮಯಪ್ರಜ್ಞೆ ಹೊಂದಿರುತ್ತಾರೆ. ಹಾಗೆಯೇ ಇವರು ಜವಾಬ್ದಾರಿಯುತ ವ್ಯಕ್ತಿ ಆಗಿರುತ್ತಾರೆ. ಕೆಲಸ, ಕುಟುಂಬ, ಹೀಗೆ ಎಲ್ಲರ ಜವಾಬ್ದಾರಿ ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಮಕರ ರಾಶಿಯವರ ಕೆರಿಯರ್ :- ಇವರಿಗ ಸಾಡೇಸಾತಿಯ ಕೊನೆಯ ವರ್ಷ ಶುರುವಾಗುತ್ತಿದೆ. ಜನವರಿ 17ರಂದು ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾರೆ, ಇದರಿಂದ ಸಾಡೇಸಾತಿ ಕೊನೆಯ ಹಂತ ಶುರುವಾಗುತ್ತದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಸೂಚನೆ ಸಿಗುತ್ತದೆ .ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ, ಲಾಭ ಪಡೆಯುತ್ತೀರಿ, ಹೆಚ್ಚು ಹೂಡಿಕೆ ಮಾಡಿ, ಪಡೆಯುತ್ತೀರಿ. ರಾಹು ಮತ್ತು ಕೇತುವಿನಿಂದ ನಿಮ್ಮ ಕೆಲಸದಲ್ಲಿ ಬದಲಾವಣೆ ಆಗುತ್ತದೆ.. ಬಲದ ಮನೆಯಲ್ಲಿ ಗುರುದೇವ ಕುಳಿತಿದ್ದಾನೆ, ಅವನ ಅದೃಷ್ಟದ ಬೆಂಬಲ ನಿಮಗೆ ಸಿಗುತ್ತದೆ. ಕಷ್ಟಪಟ್ಟು ಕೆಲಸ ಮಾಡಬೇಕು, ಏಪ್ರಿಲ್ ನಂತರ ಕೆಲಸದಲ್ಲಿ ಪಾಸಿಟಿವ್ ಫಲಿತಾಂಶ ಸಿಗುತ್ತದೆ.

ಮಕರ ರಾಶಿಯವರ ಕೌಟುಂಬಿಕ ಜೀವನ :- ವರ್ಷದ ಶುರುವಿನಲ್ಲಿ ಕುಟುಂಬದಲ್ಲಿ ಸಮಸ್ಯೆ ಕಾಣಬಹುದು. ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಇದರಿಂದ ಮಾನಸಿಕ ಸಮಸ್ಯೆ ಉಂಟಾಗುತ್ತದೆ..ಏಪ್ರಿಲ್ ನಲ್ಲಿ ಗುರುಗ್ರಹದ ಸಂಚಾರ ಮೇಷ ರಾಶಿಯಲ್ಲಿದ್ದಾಗ, ಸುಧಾರಣೆ ಕಾಣುತ್ತೀರಿ. ಈ ರಾಶಿಯ ಅಧಿಪತಿ ಶನಿ, ಇದರಿಂದ ನಿಮ್ಮ ಮಾನಸಿಕವಾಗಿ ನಿಮ್ಮ ತೊಂದರೆ ಕಡಿಮೆ ಆಗುತ್ತದೆ. ಕುಟುಂಬದ ಹಳೆಯ ವಿವಾದಗಳು ಈ ವರ್ಷ ಪರಿಹಾರ ಆಗುತ್ತದೆ. ತಾಯಿಯನ್ನು ಧಾರ್ಮಿಕ ಯಾತ್ರೆಗೆ ಕಳಿಸಬಹುದು. ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.

ಮಕರ ರಾಶಿಯವರ ಆರೋಗ್ಯ :- ಇದು ಸಾಡೇಸಾತಿಯ ಕೊನೆಯ ಹಂತ ಆಗಿರುವುದರಿಂದ ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ. ಹಿಂದಿನ ವರ್ಷದ ಮಾನಸಿಕ ತೊಂದರೆ ದೂರವಾಗುತ್ತದೆ. ಸರಿಯಾಗಿ ಊಟ ಮಾಡುವುದು, ನಿದ್ದೆ ಮಾಡುವುದು ಒಳ್ಳೆಯದು. ವೇಗ ಹೆಚ್ಚಾದರೆ ಅಪಘಾತ ಆಗಬಹುದು, ಮೇ ತಿಂಗಳಿನಲ್ಲಿ ಹುಷಾರಾಗಿ ಡ್ರೈವಿಂಗ್ ಮಾಡಿ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತೀರಿ. ಹೊಟ್ಟೆಗೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ಇರಬಹುದು. ಹಾಗಾಗಿ ತಿನ್ನುವಾಗ ಎಚ್ಚರಿಕೆ ಇಂದ ಇರಿ.

ಮಿಥುನ ರಾಶಿಯವರ ಆರ್ಥಿಕ ಸ್ಥಿತಿ :- ಈ ರಾಶಿಯ ಎರಡನೇ ಮನೆಯಲ್ಲಿ ಶನಿದೇವರು ಸಾಗುತ್ತಾನೆ, ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಬಲವಾಗುತ್ತದೆ. ಹಣಕಾಸಿನ ಲಾಭ, ಆಸ್ತಿ ಖರೀದಿ ಮತ್ತು ಮಾರಾಟದ ಲಾಭ. ಭೂಮಿ ಖರೀದಿಸಿ ಮನೆ ನಿರ್ಮಾಣ ಮಾಡುವ ಕೆಲಸ ಶುರು ಮಾಡಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಪ್ರಯೋಜನ ಸಿಗುತ್ತದೆ, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಬೇಡಿ, ಇದು ಹಾನಿ ತರಬಹುದು.

ಮಿಥುನ ರಾಶಿಯವರ ವಿದ್ಯಾರ್ಥಿ ಜೀವನ :- ವಿದ್ಯಾರ್ಥಿಗಳಿಗೆ ಹಿಂದಿನ ವರ್ಷಕ್ಕಿಂತ ಈ ವರ್ಷ ಚೆನ್ನಾಗಿದೆ, ಒಳ್ಳೆಯ ಯಶಸ್ಸಿಗೆ ಪರಿಶ್ರಮ ಬೇಕೇ ಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ. ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಗುಂಪಿನಲ್ಲಿ ನಡೆಯಲು ಇಷ್ಟವಿಲ್ಲ, ಅದರ ಅಭ್ಯಾಸವು ಇಲ್ಲ. ತಮ್ಮ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡೋದಿಲ್ಲ. ಇವರಲ್ಲಿರುವ ಒಂದೇ ಒಂದು ನೆಗಟಿವ್ ಅಂಶ ಎಂದರೆ, ಇವರಿಗೆ ಬಹಳ ಬೇಗ ಕೋಪ ಬರುತ್ತದೆ. ಹಾಗೆಯೇ ಒಳ್ಳೆಯ ಲೀಡರ್ ಗಳಾಗಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಎಲ್ಲರ ಎದುರು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಇವರು ನ್ಯಾಯವಾಗಿ ಯೋಚನೆ ಮಾಡುತ್ತಾರೆ, ಹಾಗು ಯಾವುದೇ ವಿಷಯದಲ್ಲಿ ಕೊನೆಯ ಕ್ಷಣದವರೆಗೂ ಹೋರಾಟ ಮಾಡಲು ಇಷ್ಟಪಡುತ್ತಾರೆ. ಇವರಿಗೆ ದೂರದೃಷ್ಟಿ ಹೆಚ್ಚು ಹಾಗೂ ಒಳ್ಳೆಯ ಮಾರ್ಗದರ್ಶಕರಾಗಿರುತ್ತಾರೆ.

ಕುಂಭ ರಾಶಿಯವರ ವೃತ್ತಿ ಜೀವನ :- ಈ ವರ್ಷ ನಿಮ್ಮ ರಾಶಿಯವರ ಆದಾಯ ಹೆಚ್ಚಾಗುತ್ತದೆ, ನಿಮ್ಮ ಎಲ್ಲಾ ಕೆಲಸಗಳನ್ನು ಶಿಸ್ತಿನಿಂದ ಪೂರ್ತಿ ಮಾಡುತ್ತೀರಿ, ಹೊಸ ಬ್ಯುಸಿನೆಸ್ ಗಳಿಗೆ ಅಗ್ರಿಮೆಂಟ್ ಆಗುತ್ತದೆ. ಹೊಸ ಜನರನ್ನು ಭೇಟಿ ಮಾಡುತ್ತೀರಿ, ಅವರಿಂದ ಬ್ಯುಸಿನೆಸ್ ನಲ್ಲಿ ಏಳಿಗೆ ಉಂಟಾಗಲು ಸಹಾಯ ಆಗುತ್ತದೆ..ಈ ವರ್ಷದ ಆರಂಭದಲ್ಲಿ, 10ನೇ ಮಮೆಯಕಲಿ ಗುರು ಮತ್ತು ಶನಿದೇವರ ಸಂಯೋಜಿತ ದೃಷ್ಟಿ ನಿಮ್ಮ ಬ್ಯುಸಿನೆಸ್ ನಲ್ಲಿ ಏಳಿಗೆಯ ಏಳಿಗೆಯ ಮುನ್ಸೂಚನೆ ಆಗುತ್ತದೆ. ಬ್ಯುಸಿನೆಸ್ ನಲ್ಲಿ ಗಶಸ್ಸು ಪಡೆಯಲು ಹಿರಿಯರ ಸಹಕಾರ ತೆಗೆದುಕೊಳ್ಳಿ. ಕೆಲಸದಲ್ಲಿ ಬಡ್ತಿ ಪಡೆಯಲು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಶಾಂತಿಯಿಂದ ಮತ್ತು ಕೂಲ್ ಆಗಿ ಯೋಚಿಸಿ, ನಿಧಾನವಾಗಿ ಏಳಿಗೆ ಕಾಣಬಹುದು. ಏಪ್ರಿಲ್ 22ರ ನಂತರ ನಿಮಗೆ ಶುಭವಾಗುತ್ತದೆ. 7ನೇ ಮನೆಯಲ್ಲಿ ಗುರು ಮತ್ತು ಶನಿಯ ಸಂಯೋಜಣೆ ಆಗಿರುವುದರಿಂದ ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಕೆಲಸದಲ್ಲಿ ನಿಮ್ಮ ಸಂಗಾತಿಯಿಂದ ಬೆಂಬಲ ಸಿಗುತ್ತದೆ.

ಕುಂಭ ರಾಶಿಯವರ ಕೌಟುಂಬಿಕ ಜೀವನ :- ಈ ವರ್ಷದ ಶುರುವಿನಲ್ಲಿ ಗುರು ಎರಡನೇ ಮನೆಯಲ್ಲಿದ್ದು, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಸೇರ್ಪಡೆಯಾಗಬಹುದು. ಇದು ಮದುವೆ ಅಥವಾ ಮಗು ಯಾವುದಾದರೂ ರೂಪದಲ್ಲಿ ಇರಬಹುದು. ನಿಮ್ಮ ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ, ಮನೆಯ ಎಲ್ಲರಲ್ಲೂ ಒಳ್ಳೆಯ ಭಾವನೆ ಇರುತ್ತದೆ. 3ನೇ ಮನೆಯಲ್ಲಿ ರಾಹು ಇರುವುದು, ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಿಸುವ ಕೆಲಸ ಆಗಿದೆ. ಈ ವರ್ಷದ ಆರಂಭ ಮಕ್ಕಳಿಗೆ, ಶುಭ ತರುತ್ತದೆ, ಗುರು ಎರಡನೇ ಮಕ್ನೆಯಲ್ಲಿ ಇರುವುದರಿಂದ ಮಕ್ಕಳಲ್ಲಿ ಏಳಿಗೆ ಕಾಣುತ್ತೀರಿ..ನಿಮ್ಮ ಮಕ್ಕಳು ತಮ್ಮ ಬಲದಿಂದ ಯಶಸ್ಸು ಪಡೆಯುತ್ತಾರೆ. ಶನಿದೇವರು 7ನೇ ಮನೆಯಲ್ಲಿರುತ್ತಾರೆ, ಬಾಳಸಂಗಾತಿಯ ಜೊತೆಗೆ ಉತ್ತಮ ಸಂಬಂಧ ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ತಂದೆಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಎಚ್ಚರ ವಿಶಿಸಿ..

ಕುಂಭ ರಾಶಿಯವರ ಆರೋಗ್ಯ :- ಈ ವರ್ಷ ಕುಂಭ ರಾಶಿಯವರ ಆರೋಗ್ಯದಲ್ಲಿ ಮಾನಸಿಕವಾಗಿ ಸಮಸ್ಯೆಗಳು ಕಂಡುಬರುತ್ತದೆ. 6ನೇ ಮನೆಯ ಅಧಿಪತಿ ಆಗಿರುವ ಚಂದ್ರನ ಮೇಲೆ ಶನಿದೇವರ ಪ್ರಭಾವ ಬೀರುತ್ತದೆ, ಇದರಿಂದ ನಿಮಗೆ ಶೀತದ ಸಮಸ್ಯೆ ಬರಬಹುದು. ಇದರಿಂದ ತೊಂದರೆಯಾಗಬಹುದು. ಅಲರ್ಜಿ, ಅಸ್ತಮಾ ಇಂತಹ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯೋಗ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಶನಿದೇವರು ಆರೋಗ್ಯದ ವಿಷಯದಲ್ಲಿ ಪರಿಹಾರ ನೀಡುತ್ತಾನೆ.. ಆಗಾಗ ಸಮಸ್ಯೆಗಳು ಉಂಟಾಗಬಹುದು.

ಕುಂಭ ರಾಶಿಯವರ ಆರ್ಥಿಕ ಸ್ಥಿತಿ :- ಹಣಕಾಸಿನ ವಿಚಾರದಲ್ಲಿ ಈ ವರ್ಷ ಹಿಂದಿನ ವರ್ಷಕ್ಕಿಂತ ಚೆನ್ನಾಗಿರುತ್ತದೆ. ಜನವರಿ ಇಂದ ಏಪ್ರಿಲ್ ವರೆಗು, ಗುರುಗ್ರಹ ಎರಡನೇ ಮನೆಯಲ್ಲಿ ಸಾಗುತ್ತದೆ, ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿರುವವರಿಗೆ ಇದು ಬೆಳೆಯಲು ಒಳ್ಳೆಯ ಸಮಯ ಆಗಿದೆ. ಹೂಡಿಕೆಯನ್ನು ಎಚ್ಚರಿಕೆಯಿಂದ ಮಾಡಿ, ಇಲ್ಲದಿದ್ದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ಏಪ್ರಿಲ್ ಆದಮೇಲೆ ನಿಮ್ಮ ಆದಾಯ ಹೆಚ್ಚಾಗುತ್ತದೆ. ಕುಟುಂಬದ ಆಸ್ತಿಯಲ್ಲಿ ಲಾಭ ಸಿಗುತ್ತದೆ.

ಕುಂಭ ರಾಶಿಯವರ ವಿದ್ಯಾರ್ಥಿ ಜೀವನ :- ವಿದ್ಯಾರ್ಥಿಗಳಿಗೆ ಈ ವರ್ಷ ಶ್ರಮ ಫಲ ಕೊಡುತ್ತದೆ ಎಂದು ಅರ್ಥವಾಗುತ್ತದೆ. ರಾಶಿಗಳ ಮೇಲೆ ಶನಿದೇವರ ಸಂಕ್ರಮನಾದ, ಶನಿಯ ಆಂಶವು ಮೂರನೆಯ ಮನೆಯ ಮೇಲೆ ಇರುತ್ತದೆ. ಏಪ್ರಿಲ್ ನಂತರ ಗುರುಗ್ರಹ ಸಂಕ್ರಮಿಸುತ್ತದೆ, ಇದರಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವರ್ಷಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಿದರೆ, ಯಶಸ್ಸು ಪಡೆಯುತ್ತೀರಿ.

ಪರಿಹಾರ :- ಈ ರಾಶಿಯವರಿಗೆ ಶನಿದೇವರ ಸಾಡೇಸಾತಿ ಪ್ರಭಾವ ಇದೆ, ಹಾಗಾಗಿ ಇವರು ಶನಿವಾರದ ದಿನ, ಶನಿ ದೇವಸ್ಥಾನ ಅರ್ಹವ ಪೀಪಲ್ ಮರದ ಬಳಿ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಶನಿ ಆರಾದ ದಿನ ಇರುವೆಗಳಿಗೆ ಸಿಹಿ ಹಿಟ್ಟನ್ನು ಸುರಿದು ಇಡ, ಇದರಿಂದ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ಶನಿವಾರ ಮತ್ತು ಮಂಗಳವಾರ ಹನುಮಾನ್ ಚಾಲೀಸ ಪಠಿಸಿ ಹಾಗೆಯೇ, ಆಹಾರದಲ್ಲಿ ಉದ್ದಿನಬೇಳೆ, ಚನಾ ದಾಲ್ ಕರಿಮೆಣಸು ಸೇರಿಸಿ.

ಮೀನ ರಾಶಿ :- ಈ ರಾಶಿಯವರಿಗೆ ದ್ವಂದ್ವ ಸ್ವಭಾವ, ಇವರ ಮನಸ್ಸು ಸ್ಥಿರವಾಗಿ ಇರುವುದಿಲ್ಲ. ಇವರದ್ದು ಕಾಲ್ಪನಿಕತೆ ಜಾಸ್ತಿ, ಇವರಿಗೆ ಮಾನವೀಯತೆ ಹೆಚ್ಚು. ಗುರುಗ್ರಹದ ಪ್ರಭಾವದಿಂದ ಇವರಲ್ಲಿ ಬುದ್ಧಿವಂತಿಕೆ ಮತ್ತು ವಿವೇಕ ಎರಡು ಇರುತ್ತದೆ. ನೀವು ಬಹಳ ಯೋಚನೆ ಮಾಡಿದ ನಂತರ ಕೆಲಸ ಮಾಡಿ. ಎಲ್ಲಾ ಕೆಲಸವನ್ನು ಸರಿಯಾಗಿ ಪೂರ್ತಿ ಮಾಡುವುದರ ಗುರಿಯ ಜೊತೆಗೆ, ಆಗಾಗ ನಿರ್ಧಾರಗಳನ್ನು ಬದಲಾಯಿಸುತ್ತಾ ಇರುತ್ತಾರೆ.

ಮೀನ ರಾಶಿಯವರ ವೃತ್ತಿ ಜೀವನ :- ಈ ವರ್ಷ ವೃತ್ತಿಜೀವನದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಗುರುಗ್ರಹದ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ. ಜನವರಿ 17ರಿಂದ ಸಾಡೇಸಾತಿ ಶುರುವಾಗುತ್ತದೆ, ಹಾಗಾಗಿ ಉದ್ಯೋಗದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇಂದ ಇರಿ. ಗುರು ಗ್ರಹ ಏಪ್ರಿಲ್ ವರೆಗು ಒಳ್ಳೆಯದನ್ನು ಮಾಡುತ್ತದೆ. ಬಳಿಕ ನಿಮ್ಮ ಬ್ಯುಸಿನೆಸ್ ನಲ್ಲಿ ಕೆಲವು ಸಮಸ್ಯೆ ಬರಬಹುದು. ವಿದೇಶದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. 12ನೇ ಮನೆಯಲ್ಲಿ ಶನಿ ಇರುವುದರಿಂದ ವಿದೇಶದ ವಿಚಾರಗಳಲ್ಲಿ ಲಾಭ ಪಡೆಯಬಹುದು. ಆದರೆ ನೀವು ಎಚ್ಚರಿಕೆಯಿಂದ ಇಲ್ಲದೆ ಹೋದರೆ, ನಷ್ಟ ಅನುಭವಿಸುತ್ತೀರಿ..ಕೆಲಸ ಬದಲಾವಣೆ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಮೀನ ರಾಶಿಯವರ ಕೌಟುಂಬಿಕ ಜೀವನ :- ಈ ವರ್ಷದ ಶುರುವಿನಿಂದ ಏಪ್ರಿಲ್ ವರೆಗು ಎಲ್ಲವೂ ಶಾಂತಿಯಿಂದ ಇರುತ್ತದೆ. ಶನಿದೇವರ ಸಾಡೇಸಾತಿ ಆಗಾಗ ಕುಟುಂಬದಲ್ಲಿ ಸಮಸ್ಯೆ ಉಂಟುಮಾಡಬಹುಡಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ, ಕುಟುಂಬದಲ್ಲಿ ಜಗಳ ಆಗಬಹುದು. ಏಪ್ರಿಲ್ ನಂತರ ಇದಕ್ಕೆ ಪರಿಹಾರ ಸಿಗುತ್ತದೆ. ಕುಟುಂಬದ ವಿಷಯದಲ್ಲಿ ಎಚ್ಚರಿಕೆಯಿಂದ ಪರಿಹಾರ ತೆಗೆದುಕೊಳ್ಳಿ. ಇಲ್ಲದಿದ್ದರೆ, ಮಾನಸಿಕ ಅಸ್ವಸ್ಥತೆಗೆ ಕಾರಣ ಆಗಬಹುದು. ಜೀವನ ಸಂಗಾತಿಯ ಜೊತೆಗೆ ಚೆನ್ನಾಗಿರುತ್ತೀರಿ, ಮಕ್ಕಳ ವಿಚಾರಕ್ಕೆ ಇದ್ದ ಕಾಳಜಿ ದೂರವಾಗುತ್ತದೆ,ಮಕ್ಕಳ ಬಗ್ಗೆ ಆಸಕ್ತಿ ಇರುವವರಿಗೆ ಏಪ್ರಿಲ್ ವರೆಗು ಚೆನ್ನಾಗಿರುತ್ತದೆ.

ಮೀನ ರಾಶಿಯವರ ಆರೋಗ್ಯ :- ಸಾಡೇಸಾತಿ ಇಂದ ಮಾನಸಿಕವಾಗಿ ತೊಂದರೆ ಆಗಬಹುದು. ಗುರು ಗ್ರಹದ ಸಂಚಾರದಿಂದ ಏಪ್ರಿಲ್ ವರೆಗು ನಿಮ್ಮ ಆರೋಗ್ಯ ಕಾಪಾಡುತ್ತದೆ. ಏಪ್ರಿಲ್ ನಂತರ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು. ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು,ಎದೆಗೆ ಸಂಬಂಧಿಸಿದ ಖಾಯಿಲೆಗಳು,ಹಾಗೂ ಹಲ್ಲುಗಳಿಗೆ ಸಂಬಂಧಸಿದ ಹಾಗೆ ಸಮಸ್ಯೆ ಬರಬಹುದು, ಯೋಗಾಭ್ಯಾಸ ಮಾಡಿ, ಒಳ್ಳೆಯ ಆರೋಗ್ಯ ಕ್ರಮ ಇಟ್ಟುಕೊಳ್ಳಿ, ಇದರಿಂದ ತೊಂದರೆ ತಪ್ಪುತ್ತದೆ. ಆರೋಗ್ಯದ ವಿಷಯದಲ್ಲಿ ಈ ವರ್ಷ ನಿಮಗೆ ಮಿಶ್ರ ಫಲಿತಾಂಶ ಇರುತ್ತದೆ..

2023 Kanada Astrology ಮೀನ ರಾಶಿಯವರ ಆರ್ಥಿಕ ಸ್ಥಿತಿ :- ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ, ಸಮಯ ದುಬಾರಿ ಆಗಿರುತ್ತದೆ. 12ನೇ ಮನೆಯಲ್ಲಿ ಶನಿದೇವರ ಸ್ಥಾನದಿಂದ ಅನಗತ್ಯ ಖರ್ಚು ಹೆಚ್ಚಾಗಿರುತ್ತದೆ, ಬಜೆಟ್ ಹಾಳಾಗುವ ಹಾಗೆ, ವೆಚ್ಚಗಳು ಇರುತ್ತದೆ. ಏಪ್ರಿಲ್ ನಂತರ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೆಚ್ಚಗಳನ್ನು ಕಂಟ್ರೋಲ್ ಮಾಡಿದಷ್ಟು, ಆದಾಯದ ಮೂಲಗಳು ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ಹೂಡಿಕೆ ಮಾಡಿ, ಇಲ್ಲದಿದ್ದರೆ ನಷ್ಟ ಆಗುತ್ತದೆ.

ಮೀನ ರಾಶಿಯವರ ವಿದ್ಯಾರ್ಥಿ ಜೀವನ :- ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದರೆ, ಏಪ್ರಿಲ್ ವರೆಗೆ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಓದಿನ ಮೇಲೆ ಹೆಚ್ಚು ಪರಿಶ್ರಮ ಹಾಕಬೇಕಾಗುತ್ತದೆ. ಕಠಿಣ ಪರಿಶ್ರಮದ ಫಲಿತಾಂಶ ಪಡೆಯುತ್ತೀರಿ.

ಪರಿಹಾರ :- ಗುರುವಾರದ ದಿನ ಬಾಳೆಗಿಡಕ್ಕೆ ಪೂಜೆ ಮಾಡಿ, ನೀರಿನ ಜೊತೆಗೆ ಬೆಲ್ಲ ಸೇರಿಸಿ ಗಿಡಕ್ಕೆ ಹಾಕಿ. ಶ್ರೀರಾಮನನ್ನು ಪೂಜಸುವುದರಿಂದ ವಿಶೇಷ ಪ್ರಯೋಜನ ಸಿಗುತ್ತದೆ. ಶನಿವಾರ ಪೀಪಲ್ ಮರದ ಬಳಿ ಸಾಸಿವೆ ಎಣ್ಣೆಯ ದೀಪ ಹಚ್ಚಿ.