ಕರುನಾಡ ವಾಣಿ
ಇದು ನಿಮ್ಮ ಧ್ವನಿ

Post Office Investment: ಸಾಮಾನ್ಯರಿಗೆ ಮತ್ತೊಂದು ಬಂಪರ್: ಪೋಸ್ಟ್ ಆಫೀಸ್ ನಲ್ಲಿ 1500 ರೂಪಾಯಿ ಹೂಡಿಕೆ ಮಾಡಿದರೆ 31 ಲಕ್ಷ ಪಡೆಯುವುದು ಹೇಗೆ ಗೊತ್ತೇ?

217

Get real time updates directly on you device, subscribe now.

Post Office Investment: ಹಣ ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಒಂದು ಉತ್ತಮ ಆಯ್ಕೆ ಆಗಿದೆ, ಇದರಲ್ಲಿ ನಿಮ್ಮ ಹಣ ಸೇಫ್ ಆಗಿರುತ್ತದೆ. ಜೊತೆಗೆ, ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ. ಇಂಥ ಒಂದು ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗಾಗಿ ಮಾಡಿರುವ ಗ್ರಾಮೀಣ ಸುರಕ್ಷಾ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕಡಿಮೆ ಹಣ ಹೂಡಿಕೆ ಮಾಡುಗ ಮೂಲಕ ಲಕ್ಷ ಲಕ್ಷ ಹಣವನ್ನು ಪಡೆಯುತ್ತೀರಿ. ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..

ಈ ಯೋಜನೆಯಲ್ಲಿ ನೀವು ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ, ಇದರಿಂದ ನೀವು 31 ರಿಂದ 35 ಲಕ್ಷ ರೂಪಾಯಿ ಲಾಭ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ನಿಮಗೆ ಹಣದ ವಿಚಾರದಲ್ಲಿ ಅಪಾಯ ಬಹಳ ಕಡಿಮೆ ಹಾಗೆಯೇ, ನಿಮಗೆ ಒಳ್ಳೆಯ ಆದಾಯ ಕೂಡ ಸಿಗುತ್ತದೆ. 19 ವರ್ಷ ಮೇಲ್ಪಟ್ಟವರು, 55 ವರ್ಷದ ಒಳಗೆ ಇರುವವರು ಈ ಯೋಜನೆ ಶುರು ಮಾಡಲು ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ನೀವು ಕನಿಷ್ಠ 10 ಸಾವಿರದಿಂದ, 10 ಲಕ್ಷ ರೂಪಾಯಿ ವರೆಗು ಹೂಡಿಕೆ ಮಾಡಬಹುದು. ಇದರ ಪ್ರೀಮಿಯಂ ಅನ್ನು, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಕೂಡ ಕಟ್ಟಬಹುದು. ಈ ಯೋಜನೆ ಹೊಂದುವ ವ್ಯಕ್ತಿಯ ವಯಸ್ಸು 80 ಅಥವಾ ಅದಕ್ಕಿಂತ ಮೇಲ್ಪಟ್ಟಾಗ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇದನ್ನು ಓದಿ..Post Office Recruitment: ಬಿಗ್ ನ್ಯೂಸ್: ಎಲ್ಲಾ 98000 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದ ಅಂಚೆ ಇಲಾಖೆ: ಕೇಂದ್ರ ನೌಕರಿಗೆ ಹೇಗೆ ಅಪ್ಲೈ ಮಾಡುವುದು ಗೊತ್ತೇ??

ಪಾಲಿಸಿದಾರರು ಪ್ರೀಮಿಯಂ ಕಟ್ಟುವುದಕ್ಕೆ ಸುಮಾರು 30 ದಿನಗಳ ಗ್ರೇಸ್ ಅವಧಿ ಅವಕಾಶ ಇರುತ್ತದೆ. ಒಂದು ವೇಳೆ ಪಾಲಿಸಿ ಡಿಫಾಲ್ಟ್ ಆಗಿದ್ದರೆ, ಪಾಲಿಸಿ ಹೊಂದಿರುವವರು, ಪೂರ್ತಿ ಹಣ ಪಾವತಿ ಮಾಡಿ, ಅದನ್ನು ನವೀಕರಣ ಮಾಡಬಹುದು. ಈ ಯೋಜನೆಯಲ್ಲಿ ನೀವು ಸಾಲ ಕೂಡ ಪಡೆಯಬಹುದು. ಇಲ್ಲಿ ನಿಮಗೆ ಮೂರು ವರ್ಷಗಳ ನಂತರ ಪಾಲಿಸಿ ಸರೆಂಡರ್ ಮಾಡುವ ಆಯ್ಕೆ ಇರುತ್ತದೆ. ಆದರೆ ಇಲ್ಲಿ ನೀವು, ಗ್ರಾಮ ಭದ್ರತಾ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, 19 ವರ್ಷದ ವ್ಯಕ್ತಿ 10 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತಾರೆ ಎಂದುಕೊಳ್ಳುವುದಾದರೆ, ಇದರ ತಿಂಗಳ ಪ್ರೀಮಿಯಂ, 55 ವರ್ಷಕ್ಕೆ ₹1,515, 58 ವರ್ಷಕ್ಕೆ ₹1,463, ಹಾಗು 58 ವರ್ಷಕ್ಕೆ ₹1,411 ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇದರಲ್ಲಿ ನಿಮಗೆ 55 ವರ್ಷಗಳ ಮೆಚ್ಯುರಿಟಿಗೆ ₹31.60 ಲಕ್ಷ, 58 ವರ್ಷಕ್ಕೆ ₹33.40 ಲಕ್ಷ, 60 ವರ್ಷಗಳ ಮೆಚ್ಯುರಿಟಿಗೆ 34.60 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ಓದಿ.. Google Pay: ನೀವು ಗೂಗಲ್ ಪೇ ಬಳಸ್ತೀರಾ? ಹಾಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ 8 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??

Get real time updates directly on you device, subscribe now.