RCB IPL 2023: ಹಿಂದೆಂದೂ ಕಾಣದಂತಹ ಬಲಿಷ್ಠ ಆರ್ಸಿಬಿ; 8 ಬೌಲರ್ ಗಳು, 10 ಆಲ್ ರೌಂಡರ್ ಗಳ ನಡುವೆ 11 ರ ಬಳಗ ಹೇಗಿರಲಿದೆ ಗೊತ್ತೇ??

RCB IPL 2023: ಹಿಂದೆಂದೂ ಕಾಣದಂತಹ ಬಲಿಷ್ಠ ಆರ್ಸಿಬಿ; 8 ಬೌಲರ್ ಗಳು, 10 ಆಲ್ ರೌಂಡರ್ ಗಳ ನಡುವೆ 11 ರ ಬಳಗ ಹೇಗಿರಲಿದೆ ಗೊತ್ತೇ??

RCB IPL 2023: ಐಪಿಎಲ್16 (IPL16) ರ ಬಹು ನಿರೀಕ್ಷಿತ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ನಡೆಯಿತು. ಇದರಲ್ಲಿ ನಮ್ಮ್ ಆರ್ಸಿಬಿ ತಂಡ 7 ಆಟಗಾರರನ್ನು ಖರೀದಿ ಮಾಡಿದೆ. ಈ ಬಾರಿ ಆರ್ಸಿಬಿ (RCB) ತಂಡ ಹೆಚ್ಚಾಗಿ ನಮ್ಮ ದೇಶದ ಆಟಗಾರರಿಗೆ ಒತ್ತು ನೀಡಿದೆ. ಹರಾಜಿಗಿಂತ ಮೊದಲು, 5 ಆಟಗಾರರನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಿತ್ತು. ಈಗ ಆರ್ಸಿಬಿ ತಂಡದಲ್ಲಿ ಒಟ್ಟಾರೆಯಾಗಿ 25 ಆಟಗಾರರು ಇದ್ದಾರೆ. ಹಿಂದೆಂದೂ ಕಾಣದ ಹಾಗೆ, ಬಲಿಷ್ಠ ತಂಡವನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಕಟ್ಟಿದ್ದು, ನಮ್ಮ ತಂಡದಲ್ಲಿ ಈಗ ಬರೋಬ್ಬರಿ 8 ಬೌಲರ್ ಗಳು ಮತ್ತು 10 ಆಲ್ ರೌಂಡರ್ ಗಳು ಇದ್ದಾರೆ. ಒಟ್ಟಾರೆಯಾಗಿ ಆರ್ಸಿಬಿ ಪ್ಲೇಯಿಂಗ್ 11 ಹೇಗಿರುತ್ತದೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಆರ್ಸಿಬಿ ತಂಡದಲ್ಲಿ ಇರುವ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳು ದಿನೇಶ್ ಕಾರ್ತಿಕ್ (Dinesh Karthik) ಮತ್ತು ಅನುಜ್ ರಾವತ್ (Anuj Rawat) ಅವರು. ವಿರಾಟ್ ಕೋಹ್ಲಿ (Virat Kohli), ಫಾಫ್ ಡು ಪ್ಲೆಸಿಸ್ (Faf du Plessis), ವಿಲ್ ಜಾಕ್ಸ್ (Will Jacks), ರಜತ್ ಪಾಟಿದಾರ್ (Rajat Patidar), ಫಿನ್ ಅಲೆನ್ (Finn Allen), ಸುಯಶ್ ಪ್ರಭುದೇಸಾಯಿ (Suyash Prabhudesai) ಈ ಆರು ಪ್ಲೇಯರ್ ಗಳು ಬ್ಯಾಟ್ಸ್ಮನ್ ಗಳಾಗಿದ್ದಾರೆ. ಇನ್ನು ವನಿಂದು ಹಸರಂಗ (Vanindu Hasaranga), ಮಹಿಪಾಲ್ ಲೋಮ್ರೋರ್ (Mahipal Lomror), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell), ಶಾಬಾಜ್ ಅಹ್ಮದ್ (Shahbaz Ahmed), ಸೋನು ಯಾದವ್ (Sonu Yadav), ಮನೋಜ್ ಬಂಡಾಜೆ (Manoj Bhandaje) ಇವರಿಷ್ಟು ಜನರು ಆಲ್ ರೌಂಡರ್ ಗಳು. ಇದು ಆರ್ಸಿಬಿ ತಂಡಕ್ಕೆ ಬಹಳ ಹೆಚ್ಚಿನ ಬಲ ತಂದುಕೊಡುವುದರಲ್ಲಿ ಸಂಶಯವಿಲ್ಲ. ಇನ್ನುಳಿದ ಹಾಗೆ ಆಕಾಶ ದೀಪ್ (Akash Deep), ಜೋಶ್ ಹೇಜಲ್ ವುಡ್ (Josh Hazelwood). ಇದನ್ನು ಓದಿ..Cricket News: ಭಾರತ ತಂಡಕ್ಕೆ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ಅಜಯ್ ಜಡೇಜಾ: ನಿಜಕ್ಕೂ ಪಾಂಡ್ಯಗಿಂತ ಇವನೇ ಬೆಸ್ಟ್ ಎಂದ ಫ್ಯಾನ್ಸ್.

ಸಿದ್ಧಾರ್ಥ್ ಕೌಲ್ (Siddharth Kaul), ಮೋಹಮ್ಮದ್ ಸಿರಾಜ್ (Mohammad Siraj), ಹರ್ಷಲ್ ಪಟೇಲ್ (Harshal Patel), ಕರ್ಣ್ ಶರ್ಮ (Karn Sharma), ಡೇವಿಡ್ ವಿಲ್ಲಿ (David Villi), ಅವಿನಾಶ್ ಸಿಂಗ್ (Avinash Singh), ರಾಜನ್ ಕುಮಾರ್ (Rajan Kumar), ರೀಸ್ ಟೊಪ್ಲಿ (Reece Topley), ಹಿಮಾಂಶು ಶರ್ಮ (Himanshu Sharma), ಇವರಿಷ್ಟು ಜನರು ತಂಡದಲ್ಲಿ ಇರುವ ಬೌಲರ್ ಗಳಾಗಿದ್ದಾರೆ. ಆರ್ಸಿಬಿಯ ಪ್ಲೇಯಿಂಗ್ 11 ಹೇಗಿರಬಹುದು ಎಂದು ನೋಡುವುದಾದರೆ, ಫಾಫ್ ಡು ಪ್ಲೆಸಿಸ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಜೋಶ್ ಹೇಜಲ್ ವುಡ್, ಮೊಹಮ್ಮದ್ ಸಿರಾಜ್. ಇಂತಹ ಬಲಿಷ್ಠ ತಂಡ ಇದ್ದರೆ, ಈ ಸಾರಿ ಆರ್ಸಿಬಿ ಕಪ್ ಗೆಲ್ಲುವುದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ.. RCB IPL 2023: ಕೊಹ್ಲಿ ಆರಂಭಿಕನಾಗಿ ಬೇಡವೇ ಬೇಡ, ಮತ್ಯಾರು ಬರಬೇಕು ಗೊತ್ತೇ?? ಈತ ಬಂದರೆ ಪಕ್ಕ ಗೆಲುವು ನಮ್ದೇ. ಯಾರು ಗೊತ್ತೇ??