RCB IPL 2023: ಈ ಬಾರಿಯ ಆರ್ಸಿಬಿ ತಂಡ ಹೇಗಿದೆ ಅಂತೇ ಗೊತ್ತೇ?? ಎಬಿಡಿ ರವರು ಮಾತನಾಡಿ ಹೇಳಿದ್ದೇನು ಗೊತ್ತೇ??
RCB IPL 2023: ಈ ಬಾರಿಯ ಆರ್ಸಿಬಿ ತಂಡ ಹೇಗಿದೆ ಅಂತೇ ಗೊತ್ತೇ?? ಎಬಿಡಿ ರವರು ಮಾತನಾಡಿ ಹೇಳಿದ್ದೇನು ಗೊತ್ತೇ??
RCB IPL 2023: ಡಿಸೆಂಬರ್ 23ರಂದು ಐಪಿಎಲ್16ರ ಮಿನಿ ಹರಾಜು (IPL Auction) ಪ್ರಕ್ರಿಯೆ ಮುಗಿದ ನಂತರ ಎಲ್ಲಾ ತಂಡಗಳ ಸಂಯೋಜನೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟವಾರನನ್ನು ಆಯ್ಕೆ ಮಾಡಿದೆ, ಅದರಲ್ಲಿ ನಮ್ಮ ಆರ್ಸಿಬಿ (RCB) ತಂಡ ಮತ್ತು ಕೆಕೆಆರ್ (KKR) ತಂಡದ ಬಳಿ ಇದ್ದ ಮೊತ್ತ ಕಡಿಮೆ, ಹಾಗಾಗಿ ಈ ಎರಡು ತಂಡಗಳು ಕೂಡ ತಮ್ಮಿಂದ ಆದ ಹಾಗೆ ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ತಂಡ ಇದ್ದ ಮೊತ್ತದಲ್ಲಿ 2 ವಿದೇಶಿ ಆಟಗಾರರು ಮತ್ತು 5 ದೇಶಿ ಆಟಗಾರರನ್ನು ಖರೀದಿ ಮಾಡಿದೆ..
ಹರಾಜು ಪ್ರಕ್ರಿಯೆ ಮುಗಿದ ನಂತರ ಹಲವು ಕ್ರಿಕೆಟಿಗರು ಐಪಿಎಲ್ ಫ್ರಾಂಚೈಸಿಗಳ ಬಗ್ಗೆ, ಈ ಸಾರಿ ಅವರು ಆಯ್ಕೆ ಮಾಡಿರುವ ಆಟಗಾರರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿಡಿ (ABD) ಅವರು ಆರ್ಸಿಬಿ ಹೊಸ ತಂಡದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಎಬಿಡಿ ಅವರು 10 ವರ್ಷಕ್ಕಿಂತ ಹೆಚ್ಚಿನ ಸಮಯ, ಆರ್ಸಿಬಿ ತಂಡಕ್ಕಾಗಿ ಆಡಿದ್ದಾರೆ. ಇದೀಗ ಎಬಿಡಿ ಅವರು ಆರ್ಸಿಬಿ ತಂಡದ ಬಗ್ಗೆ ಮಾತನಾಡಿದ್ದಾರೆ.. “ಕಳೆದ ವರ್ಷದ ಹಾಗೆ ಈ ವರ್ಷ ಆರ್ಸಿಬಿ ತಂಡ ಈ ವರ್ಷ ಕೂಡ ಉತ್ತಮ ಸ್ಥಿತಿಯಲ್ಲಿದೆ, ತಂಡ ಈಗ ಸಂಯೋಜನೆ ಹೊಂದಿದೆ, ಹಾಗೂ ಅತ್ಯುತ್ತಮ ಬ್ಯಾಕಪ್ ಆಟಗಾರರು ಈಗ ಆರ್ಸಿಬಿ ತಂಡದಲ್ಲಿದ್ದಾರೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ಅಜಯ್ ಜಡೇಜಾ: ನಿಜಕ್ಕೂ ಪಾಂಡ್ಯಗಿಂತ ಇವನೇ ಬೆಸ್ಟ್ ಎಂದ ಫ್ಯಾನ್ಸ್.
ತಂಡದ ಕೆಲವು ಆಟಗಾರರು ಉತ್ತಮವಾದ ಫಾರ್ಮ್ ನಲ್ಲಿದ್ದರೆ ಸಾಕು, ಕಳೆದ ಸಾರಿಯ ಹಾಗೆ ಈ ವರ್ಷ ಕೂಡ ಆರ್ಸಿಬಿ ತಂಡ ಪ್ಲೇ ಆಫ್ಸ್ ತಲುಪುತ್ತದೆ, ತಂಡದ ಕೆಲವು ಆಟಗಾರರು ಅಬ್ಬರದ ಪ್ರದರ್ಶನ ನೀಡಬೇಕು. ಆರ್ಸಿಬಿ ತಂಡದಲ್ಲಿ ಕ್ಲಾಸ್ ಆಟಗಾರರನ್ನು ನಾವು ನೋಡಬಹುದು. ಹಿರಿಯ ವೇಗಿ ಆಗಿ, ಜೋಶ್ ಹೇಜಲ್ ವುಡ್ (Josh Hazlewood) ಅವರು ಇದ್ದಾರೆ, ಅವರು ಉತ್ತಮ ಅನುಭವಿ ಆಟಗಾರ, ಇಂಥಾ ವೇಗಿಯ ಅವಶ್ಯಕತೆ ಆರ್ಸಿಬಿ ತಂಡಕ್ಕೆ ಇತ್ತು. ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರ ಫಾರ್ಮ್ ಆರ್ಸಿಬಿ ತಂಡದ ಉತ್ತಮ ಪ್ರದರ್ಶನಕ್ಕೆ ಮುಖ್ಯ, ರಜತ್ ಪಾಟಿದಾರ್ (Rajat Patidar) ಅವರು ಕೂಡ ಇದಕ್ಕೆ ಸಾಥ್ ನೀಡಬೇಕಾಗುತ್ತದೆ. ವಿರಾಟ್ ಕೊಹ್ಲಿ (Virat Kohli) ಅವರು ಟಿ20 ವಿಶ್ವಕಪ್ ನ ಹಾಗೆ, ಐಪಿಎಲ್ ನಲ್ಲಿ ಕೂಡ ಉತ್ತಮ ಫಾರ್ಮ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಬೇಕು. ಇವರೆಲ್ಲರ ಉತ್ತಮವಾದ ಆಟ ನೋಡಲು ನಾನು ಎದುರು ನೋಡುತ್ತಿದ್ದೇನೆ..” ಎಂದಿದ್ದಾರೆ ಎಬಿಡಿ. ಇದನ್ನು ಓದಿ.. RCB IPL 2023: ಹಿಂದೆಂದೂ ಕಾಣದಂತಹ ಬಲಿಷ್ಠ ಆರ್ಸಿಬಿ; 8 ಬೌಲರ್ ಗಳು, 10 ಆಲ್ ರೌಂಡರ್ ಗಳ ನಡುವೆ 11 ರ ಬಳಗ ಹೇಗಿರಲಿದೆ ಗೊತ್ತೇ??