Cricket News: ಭಾರತ ತಂಡಕ್ಕೆ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ಅಜಯ್ ಜಡೇಜಾ: ನಿಜಕ್ಕೂ ಪಾಂಡ್ಯಗಿಂತ ಇವನೇ ಬೆಸ್ಟ್ ಎಂದ ಫ್ಯಾನ್ಸ್.

Cricket News: ಭಾರತ ತಂಡಕ್ಕೆ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ಅಜಯ್ ಜಡೇಜಾ: ನಿಜಕ್ಕೂ ಪಾಂಡ್ಯಗಿಂತ ಇವನೇ ಬೆಸ್ಟ್ ಎಂದ ಫ್ಯಾನ್ಸ್.

Cricket News: ಪ್ರಸ್ತುತ ಟೀಮ್ ಇಂಡಿಯಾ (Team India) ಪರವಾಗಿ ಈ ವರ್ಷ ಅತ್ಯುತ್ಯಮ ಪ್ರದರ್ಶನ ನೀಡಿರುವ ಆಟಗಾರರಲ್ಲಿ ಒಬ್ಬರು ಶ್ರೇಯಸ್ ಅಯ್ಯರ್ (Shreyas Iyer) ಅವರು. ಈ ವರ್ಷ ಶ್ರೇಯಸ್ ಅಯ್ಯರ್ ಅವರು ಎಲ್ಲಾ ಮೂರು ರೀತಿಯ ಕ್ರಿಕೆಟ್ ನಲ್ಲಿ 1609 ರನ್ಸ್ ಗಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಪರವಾಗಿ ಅತಿ ಹೆಚ್ಚು ರನ್ಸ್ ಗಳಿಸಿದ ಆಟಗಾರ ಎನ್ನಿಸಿಕೊಂಡಿದ್ದಾರೆ. ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ 202 ರನ್ಸ್ ಗಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು.

ಈಗ ಎಲ್ಲರೂ ಶ್ರೇಯಸ್ ಅಯ್ಯರ್ ಅವರ ಗುಣಗಾನ ಮಾಡುತ್ತಿದ್ದಾರೆ. ಇದೀಗ ಹಿರಿಯ ಪ್ಲೇಯರ್ ಅಜಯ್ ಜಡೇಜಾ (Ajay Jadeja) ಅವರು ಕೂಡ ಶ್ರೇಯಸ್ ಅಯ್ಯರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, “ಶ್ರೇಯಸ್ ಅಯ್ಯರ್ ಅವರು ಇದು ಮೊದಲ ಸಾರಿ ಅಲ್ಲ, ಈ ಹಿಂದೆ ಎರಡು ಮೂರು ಸಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಂಬ್ಯಾಕ್ ಮಾಡಿದ ನಂತರ, ಶಾರ್ಟ್ ಪಿಚ್ ಗಳನ್ನು ಹಾಕಿದಾಗ ಸ್ವಲ್ಪ ಕಷ್ಟಪಟ್ಟಿದ್ದರು. ಆದರೆ ಈಗ ಅದರಲ್ಲಿ ಸುಧಾರಿಸಿಕೊಂಡಿದ್ದಾರೆ. ಅವುಗಳನ್ನು ಕಲಿತು ತಂಡಕ್ಕೆ ವಾಪಸ್ ಬಂದಿದ್ದಾರೆ. ಒಂದು ಸಾರಿ ನೀವು ನಿಮ್ಮ ತಪ್ಪುಗಳಿಂದ ಕಲಿತು ಕಂಬ್ಯಾಕ್ ಮಾಡಿದರೆ, ಬೇರೆ ಎಲ್ಲಾ ಆಟಗಾರರನ್ನು ಹಿಂದಕ್ಕೆ ಹಾಕಬಹುದು.. ಇದನ್ನು ಓದಿ..RCB IPL 2023: ಕೊಹ್ಲಿ ಆರಂಭಿಕನಾಗಿ ಬೇಡವೇ ಬೇಡ, ಮತ್ಯಾರು ಬರಬೇಕು ಗೊತ್ತೇ?? ಈತ ಬಂದರೆ ಪಕ್ಕ ಗೆಲುವು ನಮ್ದೇ. ಯಾರು ಗೊತ್ತೇ??

ಹಿಂದಿನ ಮೂರು ವರ್ಷಗಳಿಂದಲೂ ಟೀಮ್ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರು ಎಂದು ಹೇಳಲಾಗುತ್ತಿದ್ದು, ಟೀಮ್ ಇಂಡಿಯಾಗೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 12 ಕ್ಯಾಪ್ಟನ್ ಗಳು ಬದಲಾಗಿದ್ದಾರೆ. ಇದೆಲ್ಲಾ ಏನೇ ನಡೆದರು, ಟೀಮ್ ಇಂಡಿಯಾ ಗೆ ನೆಕ್ಸ್ಟ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರೇ ಆಗಬೇಕು. ಬಾಂಗ್ಲಾದೇಶ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಪಾರ್ಟ್ನರ್ಶಿಪ್ ನೋಡಿದರೆ, ಶ್ರೇಯಸ್ ಅಯ್ಯರ್ ಅವರು ಹೆಚ್ಚು ಎಸೆತಗಳನ್ನು ಫೇಸ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಅವರು ವಿಶೇಷ ಪ್ರದರ್ಶನ ನೀಡಿದ್ದರು. ತಮ್ಮ ಮೇಲಿನ ಭರವಸೆಯನ್ನು ಶ್ರೇಯಸ್ ಅಯ್ಯರ್ ಅವರು ಅಚ್ಚುಕಟ್ಟಾಗಿ ಮುಗಿಸಿದ್ದಾರೆ..” ಎಂದು ಹೇಳಿದ್ದಾರೆ ಅಜಯ್ ಜಡೇಜಾ. ಅಜಯ್ ಜಡೇಜಾ ಅವರು ಹೇಳಿದ ಈ ಮಾತುಗಳನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು, ಈ ಮಾತುಗಳು ನಿಜ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗಿಂತ ಶ್ರೇಯಸ್ ಅಯ್ಯರ್ ಉತ್ತಮ ಎನ್ನುತ್ತಿದ್ದಾರೆ. ಇದನ್ನು ಓದಿ.. Cricket News: ರಾಹುಲ್ ಬೇಡ, ಮುಂದಿನ ವಿಶ್ವಕಪ್ ನಲ್ಲಿ ಈತನೇ ಆರಂಭಿಕ ನಾಗಬೇಕು ಎಂದ ಬ್ರೆಟ್ ಲೀ. ಯಾರು ಅಂತೇ ಗೊತ್ತೇ??