Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??

Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??

Kannada News: ಪ್ರಪಂಚಕ್ಕೆ ಕೋವಿಡ್ ಬಂದ ನಂತರ ಹೆಚ್ಚು ಬ್ಲೂಮ್ ಆಗಿದ್ದು ಓಟಿಟಿ ಪ್ಲಾಟ್ ಫಾರ್ಮ್ ಗಳು ಎಂದರೆ ತಪ್ಪಲ್ಲ. ಏಕೆಂದರೆ ಕೋವಿಡ್ ಗಿಂತ ಮೊದಲು ಕೆಲವು ಜನರಿಗಷ್ಟೇ ಓಟಿಟಿ ಬಗ್ಗೆ ಗೊತ್ತಿತ್ತು, ಲಾಕ್ ಡೌನ್ ಸಮಯದಲ್ಲಿ ಜನರು ಮನೆಯಲ್ಲೇ ಇದ್ದಾಗ, ಸಿನಿಮಾ ಥಿಯೇಟರ್ ಗಳು ಕೂಡ ಓಪನ್ ಇರಲಿಲ್ಲ. ಆ ಸಮಯದಲ್ಲಿ ಜನರಿಗೆ ಹೆಚ್ಚು ಮನರಂಜನೆ ನೀಡಿದ್ದು, ಓಟಿಟಿ ಪ್ಲಾಟ್ ಫಾರ್ಮ್ ಗಳು ಎಂದೇ ಹೇಳಬಹುದು. ಇವುಗಳಲ್ಲಿ ಹೆಚ್ಚು ಫೇಮಸ್ ಆಗುವುದು ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಮತ್ತು ಡಿಸ್ನಿ ಹಾಟ್ ಸ್ಟಾರ್. ಇವುಗಳಲ್ಲಿ ಹಲವು ವೆಬ್ ಸೀರೀಸ್ ಗಳು, ಸಿನಿಮಾಗಳು ಶೋಗಳು ಸ್ಟ್ರೀಮ್ ಆಗುತ್ತವೆ.

ಓಟಿಟಿಯಲ್ಲಿ ಎರಡು ರೀತಿ ಕಂಟೆಂಟ್ ಇರುತ್ತದೆ, ಒಂದು ತಮ್ಮ ಓಟಿಟಿಗಾಗಿ ಒರಿಜಿನಲ್ ಆಗಿ ಸಿನಿಮಾ ಮತ್ತು ವೆಬ್ ಸೀರೀಸ್ ಗಳನ್ನು ತಯಾರಿಸುತ್ತಾರೆ, ಇನ್ನು ಪ್ರಖ್ಯಾತ ಸಿನಿಮಾ ನಿರ್ಮಾಪಕರಿಂದ ಸಿನಿಮಾದ ಹಕ್ಕುಗಳನ್ನು ಪಡೆಯುತ್ತಾರೆ. ಈ ಎರಡು ರೀತಿಯಲ್ಲಿ ಓಟಿಟಿ ಕಂಟೆಂಟ್ ಗಳನ್ನು ಪಡೆಯುತ್ತದೆ. ಎಲ್ಲಾ ಓಟಿಟಿ ಪ್ಲಾಟ್ ಫಾರ್ಮ್ ಗಳು ತಮ್ಮ ಬಳಿ ಹೆಚ್ಚು ಕಂಟೆಂಟ್ ಗಳು ಇರಬೇಕು ಎಂದು ಪ್ಲಾನ್ ಮಾಡುತ್ತಾರೆ. ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಕೂಡ ಖರ್ಚು ಮಾಡುತ್ತಾರೆ. ಓಟಿಟಿ ಗಳನ್ನು ಈಗ ಮೊಬೈಲ್ ಗಳಲ್ಲಿ ಮತ್ತು ಸ್ಮಾರ್ಟ್ ಟಿವಿ ಗಳಲ್ಲಿ ನೋಡಬಹುದು. ಕೇಬಲ್ ಅಗತ್ಯವೂ ಇಲ್ಲದೆ, ಎಲ್ಲಾ ಕಾರ್ಯಮಗಳನ್ನು ಓಟಿಟಿ ಮೂಲಕ ನೋಡಬಹುದು. ಇನ್ನು ಇದನ್ನು ಬಳಸುವ subscriber ಗಳು 1500ಕ್ಕಿಂತ ಹೆಚ್ಚು ಹಣ ಪಾವತಿ ಮಾಡುವುದಿಲ್ಲ.. ಇದನ್ನು ಓದಿ..Automobiles: ಸುಮ್ಮನೆ ಕಾರು ಖರೀದಿ ಮಾಡುವುದಲ್ಲ, ನಿಮ್ಮ ಆದಾಯಕ್ಕೆ ತಕ್ಕ ಹಾಗೆ ಖರೀದಿ ಮಾಡಿ, ಆದಾಯ ಪ್ರಕಾರ ಯಾವ ಕಾರ್ ಬೆಸ್ಟ್ ಗೊತ್ತೇ??

ಹಾಗಿದ್ದಾಗ ಓಟಿಟಿ ಸಂಸ್ಥೆಗಳಿಗೆ ಹಣ ಬರುವುದು ಹೇಗೆ? ಇದಕ್ಕೆ ಇಂದು ಉತ್ತರ ತಿಳಿಸುತ್ತೇವೆ ನೋಡಿ.. ಓಟಿಟಿ ಸಂಸ್ಥೆಗಳು ಪ್ರಮುಖವಾಗಿ 4 ರೀತಿಗಲ್ಲಿ ಆದಾಯ ಗಳಿಸುತ್ತದೆ.
*SVOD :- ಪ್ರಮುಖ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್, ನೆಟ್ ಫ್ಲಿಕ್ಸ್, ಸೋನಿ ಲಿವ್ ಇವುಗಳು subscription ರೂಪದಲ್ಲಿ ಗ್ರಾಹಕರಿಂದ ಕಡಿಮೆ ಮೊತ್ತದ ಹಣವನ್ನು ಪಡೆಯುತ್ತದೆ.
*AVOD :- ಓಟಿಟಿ ಪ್ಲಾಟ್ ಫಾರ್ಮ್ ಗಳು ಜಾಹೀರಾತುಗಳ ಮೂಲಕ ಹಣ ಗಳಿಸುತ್ತದೆ. ದೊಡ್ಡ ಕಂಪನಿಗಳ ಜಾಹೀರಾತುಗಳನ್ನು ಪಡೆಯುತ್ತಾರೆ, ಅವುಗಳನ್ನು ತಾವು ಸ್ಟ್ರೀಮ್ ಮಾಡುವ ವಿಡಿಯೋ ನಡುವೆ ಬರುವ ಹಾಗೆ ಮಾಡುತ್ತಾರೆ. ಇದರಿಂದ ದೊಡ್ಡ ಮೊತ್ತದ ಹಣ ಗಳಿಸುತ್ತಾರೆ. ವೂಟ್, MX Player ಈ ಪ್ಲಾಟ್ ಫಾರ್ಮ್ ಗಳು ಹೀಗೆ ಜಾಹೀರಾತುಗಳ ಮೂಲಕ ಹಣ ಸಂಪಾದನೆ ಮಾಡುತ್ತವೆ.

Hybrid :- ಇಲ್ಲಿ ಹೆಸರೇ ಹಣ ಗಳಿಸುವ ವಿಧಾನವನ್ನು ಅನುಸರಿಸುತ್ತದೆ. ಇವುಗಲ್ಲಿ ಜನರಿಂದ ಪಡೆಯುವ subscription ಹಣ ಅದರ ಜೊತೆಗೆ ಜಾಹಿರಾತುಗಳು ಈ ಎರಡದಿಂದಲೂ ಓಟಿಟಿ ಸಂಸ್ಥೆಗಳು ಹಣ ಗಳಿಕೆ ಮಾಡುತ್ತವೆ. Disney+ Hotstar ಮತ್ತು Zee5 ಓಟಿಟಿ ಪ್ಲಾಟ್ ಫಾರ್ಮ್ ಗಳು ಈ ರೀತಿಯಲ್ಲಿ ಕೆಲಸ ಮಾಡುತ್ತದೆ.
*TVOD :- ಇದು ಮತ್ತೊಂದು ವಿಧಾನ ಆಗಿದ್ದು, ಇದರಲ್ಲಿ subscribers ಗಳಿಗೆ ಎರಡು ರೀತಿಯ ಆಯ್ಕೆ ಇರುತ್ತದೆ. ನಾವು ಎಂಥಹ ಕಾರ್ಯಕ್ರಮಗಳನ್ನು ನೋಡುತ್ತಾರೋ, ಅದರ ಅಗತ್ಯಕ್ಕೆ ತಕ್ಕ ಹಾಗೆ ಆಯ್ಕೆಗಳನ್ನು ಮಾಡಬಹುದು..ಆಪಲ್ ಐ ಟ್ಯೂನ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಸ್ಟೋರ್, ಸ್ಕೈ ಬಾಕ್ಸ್ ಇವುಗಳಲ್ಲಿ ಯಾವುದನ್ನಾದರು ಆಯ್ಕೆ ಮಾಡಬಹುದು. ಇದನ್ನು ಓದಿ.. Kannada News: ಬಿಎಂಟಿಸಿ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ: ಬೆಂಗಳೂರಿಗರಿಗೆ ಮತ್ತೊಂದು ಸಿಹಿ ಸುದ್ದಿ.