RCB IPL 2023: ಆರ್ಸಿಬಿ ಬೇಕೇ ಬೇಕು ಇವರಿಬ್ಬರ ಬಲ: ಈ ವಿದೇಶಿಗರು ಬಂದರೆ ಕಪ್ ನಮ್ಮದೇ. ಆರ್ಸಿಬಿ ಟಾರ್ಗೆಟ್ ಯಾರು ಗೊತ್ತೇ??
RCB IPL 2023: ಆರ್ಸಿಬಿ ಬೇಕೇ ಬೇಕು ಇವರಿಬ್ಬರ ಬಲ: ಈ ವಿದೇಶಿಗರು ಬಂದರೆ ಕಪ್ ನಮ್ಮದೇ. ಆರ್ಸಿಬಿ ಟಾರ್ಗೆಟ್ ಯಾರು ಗೊತ್ತೇ??
RCB IPL 2023: ಐಪಿಎಲ್ 16ರ (IPL 16) ಹರಾಜು ನಾಳೆ ನಡೆಯಲಿದೆ ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ನಡೆಸಿದ್ದು, ನಮ್ಮ ಆರ್ಸಿಬಿ (RCB) ತಂಡ ಈ ಸಾರಿ ಕಪ್ ಗೆಲ್ಲಲೇಬೇಕು ಎಂದು ಹೊಸ ತಂತ್ರಗಳನ್ನು ಅನುಸರಿಸಿದೆ. ಆರ್ಸಿಬಿ ತಂಡ ಈಗ 5 ಆಟಗಾರರನ್ನು ಬಿಡುಗಡೆ ಮಾಡಿ, ಮೂಲ ತಂಡವನ್ನು ಹಾಗೆಯೇ ಉಳಿಸಿಕೊಂಡಿದೆ. ನಮ್ಮ ಆರ್ಸಿಬಿ ತಂಡದಲ್ಲಿ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ, ಆದರೆ ಬೌಲಿಂಗ್ ನಲ್ಲೇ ಸ್ವಲ್ಪ ಸಮಸ್ಯೆ ಇರುವುದರಿಂದ, ಈ ಬಾರಿ ಒಳ್ಳೆಯ ಬೌಲರ್ ಗಳನ್ನು ಖರೀದಿ ಮಾಡುವುದು ಉತ್ತಮ, ಇನ್ನು ಆರ್ಸಿಬಿ ಬಳಿ ಈಗ ಉಳಿದಿರುವುದು 8.75ಕೋಟಿ ರೂಪಾಯಿಗಳು, ಇಷ್ಟು ಹಣದಲ್ಲಿ 9 ಆಟಗಾರರನ್ನು ಆರ್ಸಿಬಿ ಖರೀದಿ ಮಾಡಬೇಕಾಗುತ್ತದೆ. ಅವರಲ್ಲಿ 7 ದೇಶಿ ಆಟಗಾರರು, 2 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕು.
ಆರ್ಸಿಬಿ ತಂಡ ಈಗ ಬುದ್ಧುವಂತಿಕೆಯಿಂದ ತಂಡವನ್ನು ಆಯ್ಕೆ ಮಾಡಬೇಕಿದೆ. ಆರ್ಸಿಬಿ ತಂಡ ಉಳಿಸಿಕೊಂಡಿರುವ ಆಟಗಾರರ ಲಿಸ್ಟ್ ಹೀಗಿದೆ, ಫಾಫ್ ಡು ಪ್ಲೆಸಿಸ್ (ಕ್ಯಾಪ್ಟನ್) (Faf du Plessis), ಶಾಬಾಜ್ ಅಹ್ಮದ್, ಫಿನ್ ಅಲೆನ್, ಆಕಾಶ್ ದೀಪ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್ (Dinesh Karthik), ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ (Virat Kohli), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್ (Harshal Patel), ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಅನುಜ್ ಶರ್ಮ, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ. ಇನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಿರುವ ಆಟಗಾರರು ಇವರು, ಜೇಸನ್ ಬೆಹರೆಂಡೋರ್ಫ್ (Jason Behrendorff), ಶೆರ್ಫಾನ್ ರುದರ್‌ಫೋರ್ಡ್ (Sherfan Rutherford), ಚಾಮ ಮಿಲಿಂದ್, ಅನೇಶ್ವರ್ ಗೌತಮ್, ಲವನೀತ್ ಸಿಸೋಡಿಯಾ. ಇದನ್ನು ಓದಿ.. Ishan Kishan: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ಕಿಶನ್: ರೋಹಿತ್ ಅಲ್ಲವಂತೆ ಮತ್ಯಾರು ಗೊತ್ತೇ?
ಇಬ್ಬರು ವಿದೇಶಿ ಆಟಗಾರರನ್ನು ತಂಡಕ್ಕೆ ಖರೀದಿ ಮಾಡುವ ಅವಕಾಶ ಇರುವುದರಿಂದ, ಆಫ್ರಿಕಾ ತಂಡದ ವೇಗದ ಬೌಲರ್ವೇ ಯ್ನ್ ಪಾರ್ನೆಲ್ (Wayne Parnell) ಅವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದೆ ಆರ್ಸಿಬಿ. ಐಪಿಎಲ್ ಆಕ್ಷನ್ ನಲ್ಲಿ ಇವರ ಬೇಸ್ ಪ್ರೈಸ್ 75ಲಕ್ಷ. ಮತ್ತೊಂದು ಆಯ್ಕೆ ಇಂಗ್ಲೆಂಡ್ ತಂಡದ ಅದಿಲ್ ರಶೀದ್ (Adil Rasheed) ಅವರು, ಐಪಿಎಲ್ ಆಕ್ಷನ್ ನಲ್ಲಿ ಇವರ ಬೇಸ್ ಪ್ರೈಸ್ 2ಕೋಟಿ ರೂಪಾಯಿ. ಟಿ20 ವರ್ಲ್ಡ್ ಕಪ್ ನಲ್ಲಿ ಇವರು ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ನಮ್ಮ ಆರ್ಸಿಬಿ ಈಗಾಗಲೇ ಉತ್ತಮವಾದ ತಂಡವನ್ನು ಹೊಂದಿದೆ.. ಬ್ಯಾಟಿಂಗ್ ಅತ್ಯುತ್ತಮವಾಗಿದ್ದರು ಸಮಸ್ಯೆ ಇರುವುದು ಬೌಲಿಂಗ್ ನಲ್ಲಿ. ಹಾಗಾಗಿ ಈ ಇಬ್ಬರು ವಿದೇಶಿ ಆಟಗಾರರು ಆರ್ಸಿಬಿ ತಂಡಕ್ಕೆ ಬಂದರೆ, ಬೌಲಿಂಗ್ ಲೈನಪ್ ಇನ್ನಷ್ಟು ಶ್ರೇಷ್ಠ ಆಗುವುದರಲ್ಲಿ ಸಂಶಯವಿಲ್ಲ. ಇದನ್ನು ಓದಿ..IPL 2023: ಈ ಬಾರಿ ಕನ್ನಡಿಗರನ್ನು ಟಾರ್ಗೆಟ್ ಮಾಡಿದ RCB: ಒಮ್ಮೆಲೇ ಕಣ್ಣು ಇಟ್ಟಿರುವ 5 ಕನ್ನಡಿಗರು ಯಾರ್ಯಾರು ಗೊತ್ತೆ?? ಇವರೇ RCB ಟಾರ್ಗೆಟ್.