Automobiles: ಸುಮ್ಮನೆ ಕಾರು ಖರೀದಿ ಮಾಡುವುದಲ್ಲ, ನಿಮ್ಮ ಆದಾಯಕ್ಕೆ ತಕ್ಕ ಹಾಗೆ ಖರೀದಿ ಮಾಡಿ, ಆದಾಯ ಪ್ರಕಾರ ಯಾವ ಕಾರ್ ಬೆಸ್ಟ್ ಗೊತ್ತೇ??

Automobiles: ಸುಮ್ಮನೆ ಕಾರು ಖರೀದಿ ಮಾಡುವುದಲ್ಲ, ನಿಮ್ಮ ಆದಾಯಕ್ಕೆ ತಕ್ಕ ಹಾಗೆ ಖರೀದಿ ಮಾಡಿ, ಆದಾಯ ಪ್ರಕಾರ ಯಾವ ಕಾರ್ ಬೆಸ್ಟ್ ಗೊತ್ತೇ??

Automobiles: ಕಾರ್ ಖರೀದಿ ಮಾಡಬೇಕು ಎನ್ನುವುದು ಬಹುತೇಕ ಎಲ್ಲಾ ಭಾರತೀಯರ ಆಸೆ ಆಗಿರುತ್ತದೆ. ಒಂದು ವೇಳೆ ನೀವು ಕಾರ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, ಕೆಲವು ವಿಷಯಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಕಾರ್ ಖರೀದಿ ಮಾಡುವುದಕ್ಕಿಂತ ಮೊದಲಿಗೆ ನೀವು ಬಜೆಟ್ ರೆಡಿ ಮಾಡಿಕೊಳ್ಲಬೇಕು, ಅದಕ್ಕೆ ಅನುಗುಣವಾಗಿ ಕಾರ್ ಖರೀದಿ ಮಾಡಬೇಕು. ಹೆಚ್ಚು ಜನ ಬಜೆಟ್ ಗಿಂತ ಜಾಸ್ತಿ ಹೋಗಿ, ಸಾಲ ಮಾಡಿ ಕಾರ್ ಖರೀದಿ ಮಾಡುತ್ತಾರೆ, ಅದರಿಂದ ಸಾಲಕ್ಕೆ ಸಿಕ್ಕಿಹಾಕಿಕೊಂಡು ನರಳುವವರೆ ಹೆಚ್ಚು. ಹಾಗಾಗಿ ನೀವು ಮೊದಲು ಬಜೆಟ್, ನಿಮ್ಮ ತಿಂಗಳ ಸಂಬಳ ಎಲ್ಲವನ್ನು ನೋಡಿಕೊಂಡು ಯಾವ ಕಾರ್ ಖರೀದಿ ಮಾಡಬೇಕು ಎನ್ನುವುದನ್ನು ಪ್ಲಾನ್ ಮಾಡಿಕೊಳ್ಲಬೇಕು. ಹಾಗಿದ್ದರೆ ಬನ್ನಿ, ಬಜೆಟ್ ಗೆ ತಕ್ಕದಾದ ಕಾರ್ ಯಾವುದು ಎಂದು ಇಂದು ನಿಮಗೆ ತಿಳಿಸುತ್ತೇವೆ..

ನಿಮ್ಮ ವಾರ್ಷಿಕ ಆದಾಯ ಎಷ್ಟಿರುತ್ತದೆಯೋ ಅದರ ಅನುಸಾರ ನೀವು ಕಾರ್ ಖರೀದಿ ಮಾಡುವ ಪ್ಲಾನ್ ಮಾಡಬಹುದು. ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಇದ್ದರೆ, 5 ಲಕ್ಷ ರೂಪಾಯಿ ವರೆಗೆ ಕಾರ್ ಖರೀದಿ ಮಾಡಬಹುದು. ಅದಕ್ಕಿಂತ ಹೆಚ್ಚಿನ ಬೆಲೆಯ ಕಾರ್ ಅನ್ನು ಖರೀದಿ ಮಾಡಬೇಡಿ. ಕಾರ್ ನ ಶೋರೂಮ್ ಬೆಲೆ, ಇಂಶುರೆನ್ಸ್, ರಿಜಿಸ್ಟ್ರೇಷನ್ ಇದೆಲ್ಲವೂ ಸೇರುವುದರಿಂದ 5 ಲಕ್ಷದ ವರೆಗು ಕಡೆ ಖರೀದಿ ಮಾಡಿ. ಒಂದು ವೇಳೆ ನಿಮ್ಮ ವಾರ್ಷಿಕ ಆದಾಗ 20 ಲಕ್ಷ ರೂಪಾಯಿವರೆಗು ಇದ್ದರೆ 10 ಲಕ್ಷದವರೆಗು ಬರುವ ಹಾಗೆ ಕಾರ್ ಖರೀದಿ ಮಾಡಬಹುದು. ಇದನ್ನು ಓದಿ..Technology: ಬಿಗಡೆಗೆ ಸಿದ್ದಗೊಂಡ ಐಫೋನ್ 15, ಬೆಲೆ ಕೇಳಿದರೆ ಈಗಲೇ ತಗೋಳೋದು ಬೇಡ ಅಂತೀರಾ. ಎಷ್ಟು ಅಂತೇ ಗೊತ್ತೆ?

ಒಂದು ವೇಳೆ ನೀವು 5 ಲಕ್ಷ ರೂಪಹಿಯ ಒಳಗಿನ ಕಾರ್ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿದ್ದರೆ, ನೀವು ಮಾರುತಿ ಸುಜುಕಿ ವ್ಯಾಗನ್ಆರ್, ಆಲ್ಟೊ, ರೆನಾಲ್ಟ್ ಕ್ವಿಡ್ ಈ ಕಾರ್ ಗಳನ್ನು ಖರೀದಿ ಮಾಡಬಹುದು. 10 ಲಕ್ಷದವರೆಗು ಕಾರ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, ಟಾಟಾ ನೆಕ್ಸಾನ್, ಮಾರುತಿ ಬಲೆನೊ, ಮಾರುತಿ ಬ್ರೆಝಾ, ಟಾಟಾ ಪಂಚ್ ಈ ಕಾರ್ ಗಳ ಆಯ್ಕೆ ಇದೆ. ಒಂದು ವೇಳೆ ಇಎಂಐ ನಲ್ಲಿ ಕಾರ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, 20-4-10 ರೂಲ್ಸ್ ನ ಅನುಸಾರ ತೆಗೆದುಕೊಳ್ಳಿ. ಇದರಲ್ಲಿ ನೀವು 20% ವಾಹನದ ಮೊತ್ತವನ್ನು ಡೌನ್ ಪೇಮೆಂಟ್ ಮಾಡಿ, ಹಾಗೆಯೇ 4 ವರ್ಷಗಳು ಇಎಂಐ ಕಟ್ಟಬಹುದಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ. ಇದರ ಇಎಂಐ ಗೆ ನಿಮ್ಮ ಸಂಬಳದಲ್ಲಿ 10% ಹಣ ಬರುವ ಹಾಗೆ ನೋಡಿಕೊಳ್ಳಿ. ಇದನ್ನು ಓದಿ.. Kannada News: ಬಿಎಂಟಿಸಿ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ: ಬೆಂಗಳೂರಿಗರಿಗೆ ಮತ್ತೊಂದು ಸಿಹಿ ಸುದ್ದಿ.