Ishan Kishan: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ಕಿಶನ್: ರೋಹಿತ್ ಅಲ್ಲವಂತೆ ಮತ್ಯಾರು ಗೊತ್ತೇ?

Ishan Kishan: ತಾನು ಕಂಡ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ಕಿಶನ್: ರೋಹಿತ್ ಅಲ್ಲವಂತೆ ಮತ್ಯಾರು ಗೊತ್ತೇ?

Ishan Kishan: ಟೀಮ್ ಇಂಡಿಯಾದಲ್ಲಿ (Team India) ಸಧ್ಯಕ್ಕೆ ಶೈನ್ ಆಗುತ್ತಿರುವ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಅವರು. ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಏಕದಿನ ಸರಣಿಯಲ್ಲಿ ಭರ್ಜರಿಯಾಗಿ 210 ರನ್ಸ್ ಭಾರಿಸಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೂಡ ಇಶಾನ್ ಕಿಶನ್ ಅವರು ಉತ್ತಮವಾಗಿ ಪ್ರದರ್ಶನ ನೀಡಿದರು. ಇವರು ಆಡುತ್ತಿರುವ ರೀತಿ ನೋಡಿದರೆ ಭಾರತ ತಂಡಕ್ಕೆ ಭವಿಷ್ಯದಲ್ಲಿ ಉತ್ತಮವಾದ ಆಟಗಾರ ಆಗುತ್ತಾರೆ ಎನ್ನುವ ಭರವಸೆ ಮೂಡಿಸಿದ್ದಾರೆ. ಸಧ್ಯಕ್ಕೆ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಆಗಿದ್ದಾರೆ ಇಶಾನ್ ಕಿಶನ್.

ಇವರು ಇದುವರೆಗೂ ಟೀಮ್ ಇಂಡಿಯಾ ಪರವಾಗಿ, 31 ಇಂಟರ್ನ್ಯಾಷನಲ್ ಪಂದ್ಯಗಳನ್ನಾಡಿದ್ದಾರೆ, ಅವುಗಳಲ್ಲಿ 477 ರನ್ಸ್ ಗಳಿಸಿದ್ದಾರೆ, ಹಾಗೆಯೇ ಟಿ20 ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ 589 ರನ್ಸ್ ಗಳಿಸಿದ್ದಾರೆ. ಹೀಗೆ ಉತ್ತಮವಾದ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್ ಅವರ, ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಮೆಚ್ಚಿನ ನಾಲ್ವರು ಕ್ಯಾಪ್ಟನ್ ಗಳನ್ನು ಆಯ್ಕೆ ಮಾಡಿದ್ದಾರೆ. ಇವರ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ (M S Dhoni) ಅವರು, ಧೋನಿ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ, ಅವರ ಕ್ಯಾಪ್ಟನ್ಸಿಯಲ್ಲಿ ಬಹಳಷ್ಟು ಐಸಿಸಿ ಟ್ರೋಫಿ (ICC Trophy) ಗೆದ್ದಿದೆ ಟೀಮ್ ಇಂಡಿಯಾ. ಎರಡನೆಯದಾಗಿ ಇವರು ರಿಕ್ಕಿ ಪಾಂಟಿಂಗ್ (Ricky Ponting) ಅವರನ್ನು ಆಯ್ಕೆ ಮಾಡಿದ್ದಾರೆ, ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್ ಆಗಿರುವ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಹಳಷ್ಟು ದಾಖಲೆ ಬರೆದಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಎರಡು ಬಾರಿ ವಿಶ್ವಕಪ್ ತಂಡವನ್ನು ಮುನ್ನಡೆಸಿದ್ದಾರೆ. ಇದನ್ನು ಓದಿ..Cricket News: ಆ ಒಂದು ಶತಕ ಕೊಹ್ಲಿ ಅದೃಷ್ಟವನ್ನೇ ಬದಲಿಸಿ ಬಿಡ್ತು: ಬಾಂಗ್ಲಾ ದೇಶ ಸರಣಿಯ ಮಧ್ಯದಲ್ಲಿಯೇ ಕೊಹ್ಲಿ ಗೆ ಸಿಹಿ ಸುದ್ದಿ.

ಇಶಾನ್ ಕಿಶನ್ ಅವರ ಮೂರನೇ ಆಯ್ಕೆ, ಆಫ್ರಿಕಾ ತಂಡದ ಮಾಜಿ ಕ್ಯಾಪ್ಟನ್ ಗ್ರೇಮ್ ಸ್ಮಿತ್ (Graeme Smith), ಇವರ ಕ್ಯಾಪ್ಟನ್ಸಿಯಲ್ಲಿ ಆಫ್ರಿಕಾ ತಂಡ ಸಾಕಷ್ಟು ದಾಖಲೆಗಳನ್ನು ಮುರಿದು, ಸಾಧನೆಗಳನ್ನು ಮಾಡಿದೆ. ಇವರು ಕ್ಯಾಪ್ಟನ್ ಆಗಿ ಮತ್ತು ಬ್ಯಾಟ್ಸ್ಮನ್ ಆಗಿ ಆಫ್ರಿಕಾ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಶಾನ್ ಕಿಶನ್ ಅವರ ನಾಲ್ಕನೇ ಆಯ್ಕೆ ನ್ಯೂಜಿಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಬ್ರೆಂಡನ್ ಮೆಕಲಮ್ (Brendon McCullum), ಇವರು ನ್ಯೂಜಿಲೆಂಡ್ ತಂಡದ ಸ್ಫೋಟಕ ಆಟಗಾರ ಆಗಿದ್ದರು. ಜೊತೆಗೆ ಕ್ಯಾಪ್ಟನ್ ಆಗಿ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಈ ನಾಲ್ವರನ್ನು ಬೆಸ್ಟ್ ಕ್ಯಾಪ್ಟನ್ ಗಳು ಎಂದು ಇಶಾನ್ ಕಿಶನ್ ಅವರು ಆಯ್ಕೆ ಮಾಡಿದ್ದು, ವಿರಾಟ್ ಕೊಹ್ಲಿ (Virat Kohli) ಅವರ ಕ್ಯಾಪ್ಟನ್ಸಿಯಲ್ಲಿ ಹಲವು ಪಂದ್ಯಗಳನ್ನಾಡಿದ್ದರು ಕೂಡ ವಿರಾಟ್ ಅವರ ಹೆಸರನ್ನಾಗಲಿ, ರೋಹಿತ್ ಶರ್ಮಾ (Rohit Sharma) ಅವರ ಹೆಸರನ್ನಾಗಲಿ ತೆಗೆದುಕೊಳ್ಳದೆ ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.