RCB IPL 2023: ಕಠಿಣ ನಿರ್ಧಾರ ತೆಗೆದುಕೊಂಡ ಡುಪ್ಲೆಸಿಸ್ ಅನ್ನು ನಾಯಕ ಸ್ಥಾನದಿಂದ ಕಿತ್ತು ಹಾಕುತ್ತದೆಯೇ ಆರ್ಸಿಬಿ. ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ??

RCB IPL 2023: ಕಠಿಣ ನಿರ್ಧಾರ ತೆಗೆದುಕೊಂಡ ಡುಪ್ಲೆಸಿಸ್ ಅನ್ನು ನಾಯಕ ಸ್ಥಾನದಿಂದ ಕಿತ್ತು ಹಾಕುತ್ತದೆಯೇ ಆರ್ಸಿಬಿ. ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ??

RCB IPL 2023: ನಮ್ಮ ಆರ್ಸಿಬಿ (RCB) ತಂಡ ಐಪಿಎಲ್ 16 (IPL 2016) ರಲ್ಲಿ ಕಪ್ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಬೇಕು ಎಂದು ಯೋಜನೆ ಹಾಕಿಕೊಂಡಿದೆ. ಆರ್ಸಿಬಿ ತಂಡ ಬಲಿಷ್ಠ ತಂಡವನ್ನು ಉಳಿಸಿಕೊಂಡಿದ್ದು, ಮಿನಿ ಆಕ್ಷನ್ ನಲ್ಲಿ ಇನ್ನು ಕೆಲವು ಆಟಗಾರರನ್ನು ಖರೀದಿ ಮಾಡಲಿದೆ. ಈ ವಿಚಾರ ಒಂದು ಕಡೆಯಾದರೆ, ಆರ್ಸಿಬಿ ತಂಡದ ಕ್ಯಾಪ್ಟನ್ ವಿಚಾರ ಕೂಡ ಈಗ ಚರ್ಚೆಗೆ ಕಾರಣವಾಗಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಮಾಜಿ ಆಟಗಾರ ಆಕಾಶ್ ಚೋಪ್ರಾ (Akash Chopra) ಅವರು ಆರ್ಸಿಬಿ ತಂಡದ ಕ್ಯಾಪ್ಟನ್ ಅನ್ನು ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕಳೆದ ವರ್ಷ ವಿರಾಟ್ ಕೊಹ್ಲಿ (Virat Kohli) ಅವರು ಎಲ್ಲಾ ವಿಭಾಗದ ಕ್ಯಾಪ್ಟನ್ಸಿಯನ್ನು ತೊರೆದಾಗ, ಆರ್ಸಿಬಿ ತಂಡವು ಹೊಸ ಕ್ಯಾಪ್ಟನ್ ಗಾಗಿ ಹುಡುಕಾಟ ನಡೆಸುತ್ತಿತ್ತು, ಆ ಸಮಯದಲ್ಲಿ ಸಿ.ಎಸ್.ಕೆ (CSK) ತಂಡದ ಆಟಗಾರ ಫಾಫ್ ಡು ಪ್ಲೆಸಿಸ್ (Faf du Plessis) ಅವರನ್ನು ಖರೀದಿ ಮಾಡಿ, ಅವರನ್ನು ಕ್ಯಾಪ್ಟನ್ ಆಗಿ ಮಾಡಿತು, ಇವರನ್ನು 7 ಕೋಟಿಗೆ ಖರೀದಿ ಮಾಡಿತ್ತು ಆರ್ಸಿಬಿ. ಈ ವರ್ಷ ಕೂಡ ಫಾಫ್ ಅವರನ್ನು ಉಳಿಸಿಕೊಂಡಿದೆ. ಹೊಸ ಕ್ಯಾಪ್ಟನ್ ಅಡಿಯಲ್ಲಿ ತಂಡ ಉತ್ತಮವಾಗಿಯೇ ಪ್ರದರ್ಶನ ನೀಡಿದರು ಕೂಡ, ಫಿನಾಲೆ ತಲುಪಿ ಕಪ್ ಗೆಲ್ಲಲು ಆಗಲಿಲ್ಲ. ಹಾಗಾಗಿ ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡ ಕ್ಯಾಪ್ಟನ್ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.. ಇದನ್ನು ಓದಿ..RCB IPL 2023: ಆರ್ಸಿಬಿ ಬೇಕೇ ಬೇಕು ಇವರಿಬ್ಬರ ಬಲ: ಈ ವಿದೇಶಿಗರು ಬಂದರೆ ಕಪ್ ನಮ್ಮದೇ. ಆರ್ಸಿಬಿ ಟಾರ್ಗೆಟ್ ಯಾರು ಗೊತ್ತೇ??

“ಫಾಫ್ ಡು ಪ್ಲೆಸಿಸ್ ಅವರನ್ನು ಆರ್ಸಿಬಿ ತಂಡವು ಬಹಳ ವರ್ಷದವರೆಗೂ ಕ್ಯಾಪ್ಟನ್ ಆಗಿರಲು ಖರೀದಿ ಮಾಡಿಲ್ಲ.. ಆರ್ಸಿಬಿ ತಂಡಕ್ಕೆ ಈಗ ಕ್ಯಾಪ್ಟನ್ ರೀಪ್ಲೇಸ್ಮೆಂಟ್ ಮಾಡುವುದು ಅವಶ್ಯಕತೆ ಇದೆ. ಮುಂಬರುವ ವರ್ಷ ಆರ್ಸಿಬಿ ಮ್ಯಾನೇಜ್ಮೆಂಟ್ ಇದರ ಬಗ್ಗೆ ಯೋಚನೆ ಮಾಡುವ ಅಗತ್ಯವಿದೆ. ತಂಡಕ್ಕೆ ಸ್ಫೋಟಕವಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಆಟಗಾರ ಬೇಕು. ಅಂತಹ ಆಟಗಾರನನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿದರೆ, ಆರ್ಸಿಬಿ ತಂಡಕ್ಕೆ ಒಳ್ಳೆಯದು..”ಎಂದು ಆರ್ಸಿಬಿ ತಂಡಕ್ಕೆ ಸಲಹೆ ನೀಡಿದ್ದಾರೆ ಆಕಾಶ್ ಚೋಪ್ರಾ. ಇದನ್ನು ಓದಿ.. Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??