IPL 2023: CSK ಯಿಂದ ಹೊರಬಿದ್ದಿರುವ ಯುವ ಆಟಗಾರನಿಗೆ ಸ್ಕೆಚ್ ಹಾಕಿದ ಆರ್ಸಿಬಿ: ಕೋಟಿ ಕೋಟಿ ಕೊಟ್ಟಾದರೂ ಖರೀದಿ ಮಾಡಿ ಎಂದ ಫ್ಯಾನ್ಸ್. ಯಾರು ಗೊತ್ತೆ?
IPL 2023: CSK ಯಿಂದ ಹೊರಬಿದ್ದಿರುವ ಯುವ ಆಟಗಾರನಿಗೆ ಸ್ಕೆಚ್ ಹಾಕಿದ ಆರ್ಸಿಬಿ: ಕೋಟಿ ಕೋಟಿ ಕೊಟ್ಟಾದರೂ ಖರೀದಿ ಮಾಡಿ ಎಂದ ಫ್ಯಾನ್ಸ್. ಯಾರು ಗೊತ್ತೆ?
IPL 2023: ಐಪಿಎಲ್ 16 (IPL 16) ಮಿನಿ ಹರಾಜು ನಡೆಯುವ ಈ ಸಮಯದಲ್ಲಿ ನಮ್ಮ ಆರ್ಸಿಬಿ (RCB) ತಂಡ ಇನ್ನು ಬಲಿಷ್ಠವಾಗಬೇಕು ಎನ್ನುವ ಪ್ಲಾನ್ ನಲ್ಲಿದೆ, ಇದಕ್ಕಾಗಿ ಕೆಲವು ಅತ್ಯುತ್ತಮ ಆಟಗಾರರನ್ನು ಖರೀದಿ ಮಾಡಬೇಕಿದೆ. ಆರ್ಸಿಬಿ ತಂಡದಲ್ಲಿ ಈಗಿರುವ ಸಮಸ್ಯೆಗಳನ್ನು ಸರಿಪಡಿಸಲು ಒಬ್ಬ ಆಟಗಾರ ಸಿಕ್ಕಿದ್ದಾಗಿದೆ, ಆತನನ್ನು ಹರಾಜಿನಲ್ಲಿ ಆರ್ಸಿಬಿ ಖರೀದಿ ಮಾಡಬೇಕಿದೆ. ಆರ್ಸಿಬಿ ತಂಡದ ಓಪನಿಂಗ್ ಸಮಸ್ಯೆ, ವಿಕೆಟ್ ಕೀಪಿಂಗ್, ಮಧ್ಯಮ ಕ್ರಮಾಂಕದ ಸಮಸ್ಯೆ ಇದೆಲ್ಲದಕ್ಕೂ ಈ ಒಬ್ಬರೇ ಆಟಗಾರ ಪರಿಹಾರ ಆಗುತ್ತಾರೆ. ಆ ಆಟಗಾರ ಯಾರು ಎಂದು ತಿಳಿಸುತ್ತೇವೆ ನೋಡಿ…
ಆರ್ಸಿಬಿ ತಂಡ ಈಗ ಖರೀದಿ ಮಾಡಲು ಸೂಕ್ತವಾಗಿರುವುದು ಸಿ.ಎಸ್.ಕೆ (CSK) ತಂಡದ ನಾರಾಯಣ ಜಗದೀಸನ್ (Narayan Jagadeesan) ಅವರು, ಇವರನ್ನು ಸಿ.ಎಸ್.ಕೆ ತಂಡ ಉಳಿಸಿಕೊಳ್ಳದೆ ರಿಲೀಸ್ ಮಾಡಿದೆ. ಈಗ ನಾರಾಯಣ್ ಅವರು ದೇಶೀಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ, ಇಂತಹ ಆಟಗಾರನನ್ನು ಸಿ.ಎಸ್.ಕೆ ತಂಡ ಯಾಕೆ ಕೈಬಿಟ್ಟಿತು ಎನ್ನುವ ಪ್ರಶ್ನೆ ಎಲ್ಲರಲ್ಲೂ ಶುರುವಾಗಿದ್ದು, ಆರ್ಸಿಬಿ ತಂಡಕ್ಕೆ ಇದೊಂದು ಒಳ್ಳೆಯ ಅವಕಾಶ ಆಗಿದೆ. 2023ರಲ್ಲಿ ಇವರು ಆಡಿದ ಪಂದ್ಯಗಳಲ್ಲಿ 8 ವೈಟ್ ಬಾಲ್ ಪಂದ್ಯದಲ್ಲಿ 830 ರನ್ಸ್ ಗಳಿಸಿದ್ದು, 5 ಪಂದ್ಯಗಳಲ್ಲಿ 794 ರನ್ಸ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕೂಡ ಅತ್ಯುತ್ತಮ ಪ್ರದರ್ಶನ ನೀಡಿ ಐದು ಶತಕ ಸಿಡಿಸಿದ್ದಾರೆ, ನಾರಾಯಣ ಜಗದೀಸನ್. ಇದನ್ನು ಓದಿ..RCB IPL 2023: ಕಠಿಣ ನಿರ್ಧಾರ ತೆಗೆದುಕೊಂಡ ಡುಪ್ಲೆಸಿಸ್ ಅನ್ನು ನಾಯಕ ಸ್ಥಾನದಿಂದ ಕಿತ್ತು ಹಾಕುತ್ತದೆಯೇ ಆರ್ಸಿಬಿ. ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ??
ಆಡಿದ ಐದು ಪಂದ್ಯಗಳಲ್ಲೂ ಐದು ಶತಕ ಸಿಡಿಸಿದ್ದಾರೆ, 114 (ನಾಟ್ ಔಟ್), 107, 168, 128 ಮತ್ತು 177 ರನ್ಸ್ ಗಳಿಸಿದ್ದು, ಇದರ ಮೂಲಕ ಲಿಸ್ಟ್ ಎ ಪಂದ್ಯದಲ್ಲಿ ಅತಿಹೆಚ್ಚು ಸ್ಕೋರ್ ಮಾಡಿರುವ ಇಂಡಿಯನ್ ಬ್ಯಾಟ್ಸ್ಮನ್ ಆಗಿದ್ದಾರೆ ಇವರು. ಇಂಥಹ ಅದ್ಭುತವಾದ ಫಾರ್ಮ್ ನಲ್ಲಿರುವ ಆಟಗಾರನನ್ನು ಖರೀದಿಸಿ ಈ ಸಲ ಕಪ್ ನಮ್ಮದೇ ಆಗುತ್ತದೆ ಎಂದು ಆರ್ಸಿಬಿ ಅಭಿಮಾನಿಗಳು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಇವರನ್ನು ಕೇವಲ 20 ಲಕ್ಷ ರೂಪಾಯಿಗೆ ಸಿ.ಎಸ್.ಕೆ ತಂಡ ಖರೀದಿ ಮಾಡಿತ್ತು, ಈ ಸಾರಿ ನಾರಾಯಣ ಜಗದೀಸನ್ ಅವರು ಅತ್ಯುತ್ತಮ ಫಾರ್ಮ್ ನಲ್ಲಿರುವುದರಿಂದ ಇನ್ನು ಹೆಚ್ಚು ಹಣಕ್ಕೆ ಮಾರಾಟ ಆಗುವ ಸಾಧ್ಯತೆಗಳಿವೆ, ಹಾಗೆಯೇ ಹಲವು ಫ್ರಾಂಚೈಸಿಗಳು ಇವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿರುತ್ತದೆ. ಇದನ್ನು ಓದಿ.. Kannada News: ಎಲ್ಲಾ OTT ಗಳು ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಖರೀದಿ ಮಾಡಿ ಚಿಲ್ಲರೆ ಹಣಕ್ಕೆ ಕೊಡುವುದು ಯಾಕೆ ಗೊತ್ತೇ??