Money Tips: ಇದೊಂದು ನಿಯಮ ನೀವು ಫಾಲೋ ಮಾಡಿದರೆ ಆಯಿತು, ಕೋಟ್ಯಧಿಪತಿಯಾಗುವುದು ಬಹಳ ಸುಲಭ.

Money Tips: ಇದೊಂದು ನಿಯಮ ನೀವು ಫಾಲೋ ಮಾಡಿದರೆ ಆಯಿತು, ಕೋಟ್ಯಧಿಪತಿಯಾಗುವುದು ಬಹಳ ಸುಲಭ.

Money tips: ಮಧ್ಯಮವರ್ಗದ ಜನರು ಹಣದ ವಿಚಾರದಲ್ಲಿ ಬಹಳ ಕನಸು ಕಾಣುತ್ತಾರೆ. ಹೂಡಿಕೆ (Investment) ಮಾಡಲು ಲಕ್ಷಗಟ್ಟಲೆ ಹಣ ಇಲ್ಲದೆ ಹೋದರು, ತಾವು ಕೂಡ ಮಿಲಿಯನೇರ್ ಆಗಬೇಕು, ಕೋಟಿಗಟ್ಟಲೇ ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಮಧ್ಯಮವರ್ಗದ ಜನರು ಮಿಲಿಯನೇರ್ ಆಗುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಸುಳ್ಳು, ಯಾರು ಬೇಕಾದರೂ ಬುದ್ಧಿವಂತಿಕೆ ಇಂದ ಹಣವನ್ನು ಹೂಡಿಕೆ ಮಾಡಿದರೆ, ಜೀವನದಲ್ಲಿ ಮಿಲಿಯನೇರ್ ಆಗಬಹುದು. ಇದಕ್ಕೆ ಆರ್ಥಿಕ ಶಿಸ್ತು ಬಹಳ ಮುಖ್ಯವಾಗುತ್ತದೆ. ನೀವು ಸಂಪಾದನೆ ಮಾಡುವ ಹಣದಲ್ಲಿ ಇಂತಿಷ್ಟು ಎಂದು ಸರಿಯಾದ ಕಡೆ ಹೂಡಿಕೆ ಮಾಡುತ್ತಾ ಬಂದರೆ, ನೀವು ಮಿಲಿಯನೇರ್ ಆಗಬಹುದು. ಇದಕ್ಕೆ 15×15×15 ನಿಯಮ ನಿಮಗೆ ಸಹಾಯ ಮಾಡುತ್ತದೆ. ಈ ನಿಯಮ ಅನುಸರಿಸಿ ನೀವು ಕೋಟಿ ಹಣ ಸಂಪಾದನೆ ಮಾಡಬಹುದು.

*ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಬರುವ ಹಾಗೆ, ಹೆಚ್ಚು ನೀವು ಉಳಿತಾಯ ಮಾಡಬೇಕು. ಎಕ್ಸಾಂಪಲ್, ಸ್ಥಿರ ಠೇವಣಿಗಳಲ್ಲಿ ನೀವು ಉಳಿತಾಯ ಮಾಡಿದರೆ, ಅದರಲ್ಲಿ ನಿಮಗೆ ಸಿಗುವ ಬಡ್ಡಿದರ 6% ಇಂದ 10% ಇರುತ್ತದೆ. ಹಾಗಾಗಿ ಇದರಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚು ಆದಾಯ ಬರುವುದಿಲ್ಲ.
*ಮಿಲಿಯನೇರ್ ಆಗಲು ನಿಮಗೆ ಉತ್ತಮವಾದ ಆಯ್ಕೆ ಶೇರ್ ಮಾರ್ಕೆಟ್ ಆಗಿದೆ. ಮ್ಯೂಚುವಲ್ ಫಂಡ್ (Mutual Fund) ಗಳಲ್ಲಿ ಇನ್ವೆಸ್ಟ್ (Investment) ಮಾಡುವ ಮೂಲಕ ನೀವು ಒಳ್ಳೆಯ ಆದಾಯ ಗಳಿಸಬಹುದು. ಆದರೆ ಇದರಲ್ಲಿ ಕೆಲವು ಆಪಾಯ ಕೂಡ ಇದೆ. ಆದರೆ ತಜ್ಞರು ಇದನ್ನು ಹ್ಯಾಂಡಲ್ ಮಾಡುವುದರಿಂದ ಅಪಾಯ ಕಡಿಮೆ ಇರುತ್ತದೆ. ಇದರ ಜೊತೆಗೆ ಗೋಲ್ಡ್ ಮತ್ತು ರಿಯಲ್ ಎಸ್ಟೇಟ್ ಸಹ ಉತ್ತಮವಾದ ಒಳ್ಳೆಯ ಆಯ್ಕೆ ಆಗಿದೆ. ಇದನ್ನು ಓದಿ.. Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.

*ಇಲ್ಲಿ ನಿಮಗೆ ಹೂಡಿಕೆಯ ಆಯ್ಕೆ ಮತ್ತು ಉಳಿತಾಯಕ್ಕೆ ಕೆಲವು ಆಯ್ಕೆಗಳಿವೆ. ಇದರಲ್ಲಿ ಮ್ಯೂಚುವಲ್ ಫಂಡ್ ಮತ್ತು ಮರುಕಳಿಸುವ ಠೇವಣಿ ಇದೆ, ಮರುಕಳಿಸುವ ಠೇವಣಿಯಲ್ಲಿ ನಿಮಗೆ ಕಡಿಮೆ ರಿಟರ್ನ್ಸ್ ಸಿಗುತ್ತದೆ. ಆದರೆ ನೀವು ಮ್ಯೂಚುವಲ್ ಫಂಡ್ ನಲ್ಲಿ 15% ರಿಟರ್ನ್ಸ್ ಬರುವ ಮ್ಯೂಚುವಲ್ ಫಂಡ್ ಸೆಲೆಕ್ಟ್ ಮಾಡಿದರೆ, 15×15×15 ನಿಯಮದ ಪ್ರಕಾರ ನೀವು ಮಿಲಿಯನೇರ್ ಆಗಬಹುದು.
*ಮ್ಯೂಚುವಲ್ ಫಂಡ್ ಗಳಲ್ಲಿ ನೀವು ಇನ್ವೆಸ್ಟ್ ಮಾಡಿದಾಗ, ಆದಾಯ ಇಷ್ಟೇ ಬರುತ್ತದೆ ಎಂದು ಹೇಳೋದಕ್ಕೆ ಆಗುವುದಿಲ್ಲ. ಆದರೆ ಒಳ್ಳೆಯ ಮ್ಯೂಚುವಲ್ ಫಂಡ್ ಗಳಲ್ಲಿ ನೀವು ಉತ್ತಮ ಲಾಭ ಪಡೆಯಬಹುದು. ಹೆಚ್ಚು ಹಣ ಉಳಿಸಲು, ಪ್ರತಿ ತಿಂಗಳು 15,000 ಉಳಿಸುವ ಹಾಗೆ, 15 ವರ್ಷಗಳವರೆಗು ಎಸ್.ಐ.ಪಿ ಹೂಡಿಕೆ ಯೋಜನೆ ಮಾಡಬೇಕು.

ಇದರಲ್ಲಿ ನಿಮ್ಮ ವಾರ್ಷಿಕ ಆದಾಯ ಮತ್ತು ಎಲ್ಲವನ್ನು ನೋಡಿದರೆ, 15 ವರ್ಷಗಳಲ್ಲಿ ನೀವು ಕೋಟಿ ರೂಪಾಯಿ ಉಳಿತಾಯ ಮಾಡಬಹುದು.
*ಇದಕ್ಕೆ ಉದಾಹರಣೆ ನೀಡುವುದಾದರೆ, ನೀವು 15 ವರ್ಷಗಳ ವರೆಗು ತಿಂಗಳಿಗೆ 15,000 ಉಳಿಸುತ್ತಿದ್ದೀರಾ, 15 ವರ್ಷಕ್ಕೆ ಅಂದರೆ 180 ತಿಂಗಳಿಗೆ ನೀವು 27,00,000 ಲಕ್ಷ ಉಳಿಸುತ್ತೀರಿ. 15 ವರ್ಷಗಳ ವರೆಗು 15% ಬಡ್ಡಿ ನಿಮಗೆ ಸಿಗುತ್ತದೆ ಎಂದು ನೋಡಿದರೆ, ಅಷ್ಟು ಆದಾಯ ನಿಮಗೆ ಬರುತ್ತದೆ, 15 ವರ್ಷಗಳ ನಂತರ ನೀವು ಪಡೆಯುವ ಒಟ್ಟು ಆದಾಯ 1.01 ಕೋಟಿ ರೂಪಾಯಿ ಆಗಿರುತ್ತದೆ. ಇಲ್ಲಿ ನೀವು ಉಳಿಸುವುದು 27 ಲಕ್ಷ, ಪಡೆಯುವ ಆದಾಯ 74 ಲಕ್ಷ ಆಗಿರುತ್ತದೆ. ಇದನ್ನು ಓದಿ.. Post Office Saving Schemes: ಈ ಚಿಕ್ಕ ಯೋಜನೆಯಲ್ಲಿ 50 ರೂಪಾಯಿ ಹೂಡಿಕೆ ಮಾಡಿದರೆ, 35 ಲಕ್ಷ ರೂಪಾಯಿ ಲಾಭ. ಯಾವ ಸ್ಕೀಮ್ ಗೊತ್ತೇ?