Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

Kannada News: ಪ್ರಸ್ತುತ ಟೀಮ್ ಇಂಡಿಯಾದ (Team India) ಸ್ಕಿಪ್ಪರ್ ಆಗಿರುವವರು ರೋಹಿತ್ ಶರ್ಮಾ (Rohit Sharma). ಈ ವರ್ಷ ಮೂರು ಫಾರ್ಮೇಟ್ ಪಂದ್ಯಗಳಿಗೂ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿದ್ದರು. ವಿರಾಟ್ (Virat Kohli) ಅವರು ಕ್ಯಾಪ್ಟನ್ಸಿ ಇಂದ ಕೆಳಗಿಳಿದ ಬಳಿಕ, ರೋಹಿತ್ ಶರ್ಮಾ ಕ್ಯಾಪ್ಟನ್ ಆದರು. ಇವರು ಕ್ಯಾಪ್ಟನ್ಸಿಯನ್ನು ಉತ್ತಮವಾಗಿ ನಿಭಾಯಿಸಿದರು ಕೂಡ, ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕೆಲವು ಆಟಗಾರರು, ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಕೈಕೊಟ್ಟಿದ್ದಾರೆ. ಆ ಐವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಮಯಾಂಕ್ ಅಗರ್ವಾಲ್ (Mayank Agarwal) :- ಈ ಲಿಸ್ಟ್ ನಲ್ಲಿ ಮೊದಲ ಪ್ಲೇಯರ್ ಮಯಾಂಕ್ ಅಗರ್ವಾಲ್ ಅವರು, ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಯಾಗಿರುವ ಇವರು, 2021ರಲ್ಲಿ 4 ಟೆಸ್ಟ್ ಪಂದ್ಯಗಳಲ್ಲಿ 44.12 ಆವರೇಜ್ ನಲ್ಲಿ 353 ರನ್ಸ್ ಭಾರಿಸಿದ್ದರು. ಅದರಲ್ಲಿ 1 ಶತಕ ಮತ್ತು 2 ಅರ್ಧಶತಕ ಇತ್ತು. ಆದರೆ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಇವರು ಉತ್ತಮ ಪ್ರದರ್ಶನ ನೀಡಿಲ್ಲ. 7 ಇನ್ನಿಂಗ್ಸ್ ಗಳಲ್ಲಿ ಕೇವಲ 130 ರನ್ಸ್ ಗಳಿಸಿದ್ದಾರೆ. ಇದನ್ನು ಓದಿ.. Cricket News: ತಂಡದ ಮುಂದೆ ಹೊಸ ಡಿಮ್ಯಾಂಡ್ ಇಟ್ಟ ರಿಷಬ್ ಪಂತ್: ಯಾವ ಸ್ಥಾನ ಬೇಕಂತೆ ಗೊತ್ತೆ??

ರಿಷಬ್ ಪಂತ್ (Rishab Pant) :- ಈ ಲಿಸ್ಟ್ ನಲ್ಲಿ ಎರಡನೆಯ ಆಟಗಾರ ರಿಷಬ್ ಪಂತ್. ಇವರು ರೋಹಿತ್ ಅವರ ಕ್ಯಾಪ್ಟನ್ಸಿಗಿಂತ ವಿರಾಟ್ ಅವರ ಕ್ಯಾಪ್ಟನ್ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ 10 ಇನ್ನಿಂಗ್ಸ್ ಗಳಲ್ಲಿ 213 ರನ್ಸ್ ಗಳಿಸಿದ್ದ ರಿಷಬ್ ಅವರ ಆವರೇಜ್ 30.42 ಇತ್ತು. ಆದರೆ 2022ರಲ್ಲಿ 21 ಇನ್ನಿಂಗ್ಸ್ ಗಳಲ್ಲಿ 21.34 ಆವರೇಜ್ ನಲ್ಲಿ 364 ರನ್ಸ್ ಗಳಿಸಿದ್ದಾರೆ.

ಕೆ.ಎಲ್.ರಾಹುಲ್ (K L Rahul) :- ತಂಡದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರು ಕೂಡ ವಿರಾಟ್ ಅವರ ಕ್ಯಾಪ್ಟನ್ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ, 43.61 ಆವರೇಜ್ ನಲ್ಲಿ 461 ರನ್ಸ್ ಭಾರಿಸಿದ್ದರು ರಾಹುಲ್. ಆದರೆ 2022ರಲ್ಲಿ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ 2 ಟೆಸ್ಟ್ ಪಂದ್ಯಗಳಲ್ಲಿ 80 ರನ್ಸ್ ಗಳಿಸಿದ್ದಾರೆ, ಅವರ ಆವರೇಜ್ 20 ಇದೆ. ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ ಇವರ ಪರ್ಫಾರ್ಮೆನ್ಸ್ ಕೂಡ ತಲೆಕೆಳಗಾಗಿದೆ. ಇದನ್ನು ಓದಿ.. Cricket News: ವಿಶ್ವಕಪ್ ನಲ್ಲಿ ಕೊಹ್ಲಿ ಬಾರಿಸಿದ ಆ ಎರಡು ಸಿಕ್ಸರ್ ಗಳನ್ನು ನೆನಪಿಸಿಕೊಂಡ ಅದೇ ಪಾಕ್ ಬೌಲರ್ ಈಗ ಹೇಳಿದ್ದೇನು ಗೊತ್ತೇ??

ವಾಷಿಂಗ್ಟನ್ ಸುಂದರ್ (Washington Sundar) :- ಇವರು ಕೂಡ ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2021ರಲ್ಲಿ 4 ಪಂದ್ಯಗಳಲ್ಲಿ 4 ವಿಕೆಟ್ಸ್ ಪಡೆದಿದ್ದರು. ಇವರ ಎಕಾನಮಿ 8.90 ಇತ್ತು. 2020ರಲ್ಲಿ 7 ಪಂದ್ಯಗಳಲ್ಲಿ 6 ವಿಕೆಟ್ಸ್ ಪಡೆದಿದ್ದರು. ಆದರೆ ಈ ವರ್ಷ ಅವರು ಆಡಿದ ಒಂದೇ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆದರು. ಅವರ ಎಕಾನಮಿ 12 ಇತ್ತು. ಇದರಿಂದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಕಳೆದುಕೊಂಡರು.

ಅಕ್ಷರ್ ಪಟೇಲ್ :- ಇವರು ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿದರು. ಕಳೆದ ವರ್ಷ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ 36 ವಿಕೆಟ್ಸ್ ಪಡೆದಿದ್ದಾರೆ, ಇವರ ಎಕಾನಮಿ 11.86 ಇತ್ತು. ಆದರೆ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯಲ್ಲಿ 2 ಟೆಸ್ಟ್ ಗಳಲ್ಲಿ 3 ವಿಕೆಟ್ಸ್ ಪಡೆದರು, ಇವರ ಆವರೇಜ್ 19.33 ಇತ್ತು. ಇದನ್ನು ಓದಿ.. Money Tips: ಇದೊಂದು ನಿಯಮ ನೀವು ಫಾಲೋ ಮಾಡಿದರೆ ಆಯಿತು, ಕೋಟ್ಯಧಿಪತಿಯಾಗುವುದು ಬಹಳ ಸುಲಭ.