IPL 2023: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಣ್ಣಿಟ್ಟಿರುವ ನಾಲ್ಕು ಬಲಾಢ್ಯ ಆಟಗಾರರು ಯಾರ್ಯಾರು ಗೊತ್ತೆ?? ಇವರಲ್ಲಿ ಯಾರು ಬರಬೇಕು?

IPL 2023: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಣ್ಣಿಟ್ಟಿರುವ ನಾಲ್ಕು ಬಲಾಢ್ಯ ಆಟಗಾರರು ಯಾರ್ಯಾರು ಗೊತ್ತೆ?? ಇವರಲ್ಲಿ ಯಾರು ಬರಬೇಕು?

IPL 2023: 2023ರ ಐಪಿಎಲ್ (IPL) ಗಾಗಿ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ ತಿಂಗಳಿನಲ್ಲಿ ಕೇರಳದ ಕೊಚ್ಚಿ (Kochi) ಯಲ್ಲಿ ನಡೆಯಲಿದೆ. ಐಪಿಎಲ್ ಆಕ್ಷನ್ ಗಾಗಿ 991 ಆಟಗಾರರು ಹೆಸರು ನೀಡಿದ್ದಾರೆ. ಎಲ್ಲಾ ತಂಡಗಳು ಈಗ ಎಲ್ಲಾ ತಂಡಗಳು ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಮಾಡಿದೆ. ಇನ್ನು ನಮ್ಮ ಆರ್ಸಿಬಿ (RCB) ತಂಡವು 18 ಆಟಗಾರರನ್ನು ಉಳಿಸಿಕೊಂಡಿದ್ದು, ಪ್ರಸ್ತುತ 7 ಆಟಗಾರರನ್ನು ಖರೀದಿ ಮಾಡಬಹುದು, ಅದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು, ಐದು ದೇಶಿ ಆಟಗಾರರನ್ನು ಆಯ್ಕೆ ಮಾಡಬಹುದು. ಆರ್ಸಿಬಿ ಈಗಾಗಲೇ ಶೇರ್ಫಾನ್ ರುದರ್ ಫೋರ್ಡ್ (Sherfane Rutherford) ಮತ್ತು ಜೇಸನ್ ಬೆಹ್ರಂಡೋರ್ಫ್ (Jason Behrendorff) ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ನಾಲ್ಕು ಆಟಗಾರರ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ, ಆ ನಾಲ್ವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಜೋಶ್ವ ಲಿಟರ್ (Joshua Little) :- ಇವರು ಐರ್ಲೆಂಡ್ (Ireland) ತಂಡದ ಯುವ ವೇಗಿ ಬೌಲರ್.. ಟಿ20 ವಿಶ್ವಕಪ್ ನಲ್ಲಿ ಜೋಶ್ವ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು, 26 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಬರೋಬ್ಬರಿ 39 ವಿಕೆಟ್ಸ್ ಕಬಳಿಸಿದರು. ಇಂತಹ ಪ್ರತಿಭೆ ಇರುವ ಆಟಗಾರನ ಮೇಲೆ ಆರ್ಸಿಬಿ ತಂಡ ಕಣ್ಣಿಟ್ಟಿದ್ದು, ಇವರನ್ನು ಖರೀದಿ ಮಾಡುವ ಯೋಚನೆಯಲ್ಲಿದೆ. ಇದನ್ನು ಓದಿ.. IPL 2023: ಐಪಿಎಲ್ ಗೆ ಭರ್ಜರಿ ನಿಯಮ ರೂಪಿಸಿದ ಬಿಸಿಸಿಐ: ಹೊಸ ರೂಲ್ಸ್ ಬಂದ್ಮೇಲೆ ಮತ್ತಷ್ಟು ರಂಗು ಫಿಕ್ಸ್. ಪ್ಲೇಯರ್ಸ್ ಆಯ್ಕೆಯಲ್ಲಿ ಹೊಸ ರೂಲ್ಸ್.

ಸ್ಯಾಮ್ ಕರನ್ (Sam Curran) :- ಇವರು ಇಂಗ್ಲೆಂಡ್ (England) ತಂಡದ ಆಲ್ ರೌಂಡರ್ ಆಗಿದ್ದು, ಈ ಬಾರಿ ವಿಶ್ವಕಪ್ ನಲ್ಲಿ 13 ವಿಕೆಟ್ಸ್ ಕಬಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಸ್ಯಾಮ್ ಅವರನ್ನು ಖರೀದಿ ಮಾಡಲು, ಐಪಿಎಲ್ ಫ್ರಾಂಚೈಸಿ ಗಳ ಪೈಕಿ ಪೈಪೋಟಿ ಇದೆ, ಆರ್ಸಿಬಿ ತಂಡ ಕೂಡ ಇವರ ಮೇಲೆ ಕಣ್ಣಿಟ್ಟಿದೆ.

ಬೆನ್ ಸ್ಟೋಕ್ಸ್ (Ben Stokes) :- ಇಂಗ್ಲೆಂಡ್ ತಂಡದ ಆಲ್ ರೌಂಡರ್ ಆಗಿರುವ ಸ್ಟೋಕ್ಸ್ ಅವರು ಐಪಿಎಲ್ ನಲ್ಲಿ ಪಾಲ್ಗೊಳ್ಳಲಿದ್ದು, ಪ್ರಸ್ತುತ ಇವರು ಒಳ್ಳೆಯ ಫಾರ್ಮ್ ನಲ್ಲಿಲ್ಲ. ಹಾಗಿದ್ದರೂ ಕೂಡ, ಬೆನ್ ಸ್ಟೋಕ್ಸ್ ಅವರು ಯಾವಾಗ ಬೇಕಾದರೂ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ಕೊಡುತ್ತಾರೆ ಎನ್ನುವ ಭರವಸೆ ಇರುವುದರಿಂದ ಆರ್ಸಿಬಿ ತಂಡ ಇವರನ್ನು ಖರೀದಿ ಮಾಡಲು ಪ್ಲಾನ್ ಮಾಡಿದೆ. ಈ ಹಿಂದೆ ಇವರು ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದರು. ಇದನ್ನು ಓದಿ.. Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ಜೇಸನ್ ಹೋಲ್ಡರ್ (Jason Holder) :- ಇವರು ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್, ಕಳೆದ ಸೀಸನ್ ನಲ್ಲಿ ಲಕ್ನೌ ಸೂಪರ್ ಜೈನ್ಟ್ಸ್ ತಂಡದ ಪರವಾಗಿ ಆಡಿದ್ದರು, ಆರ್ಸಿಬಿ ತಂಡ ಇವರನ್ನು ಕೂಡ ಖರೀದಿ ಮಾಡಬಹುದು. ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಅವರನ್ನು ಬಿಟ್ಟರೆ, ಮುಂದಿನ ಆಯ್ಕೆ ಜೇಸನ್ ಆಗಿದ್ದಾರೆ. ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡವ ಇವರನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದೆ ಆರ್ಸಿಬಿ.