Jio Plans in Kannada: ಒಂದು ವರ್ಷ ರಿಚಾರ್ಜ್ ಪ್ಲಾನ್ ಬಗ್ಗೆ ಆಲೋಚನೆ ಮಾಡಬಾರದು ಎಂದರೆ, ಈ ಒಂದು ಪ್ಲಾನ್ ಸಾಕು. ವರ್ಷ ಪೂರ್ತಿ ಇಂಟರ್ನೆಟ್.

Jio Plans in Kannada: ಒಂದು ವರ್ಷ ರಿಚಾರ್ಜ್ ಪ್ಲಾನ್ ಬಗ್ಗೆ ಆಲೋಚನೆ ಮಾಡಬಾರದು ಎಂದರೆ, ಈ ಒಂದು ಪ್ಲಾನ್ ಸಾಕು. ವರ್ಷ ಪೂರ್ತಿ ಇಂಟರ್ನೆಟ್.

Jio Plans in Kannada: ಪ್ರಸ್ತುತ ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿ ಇರುವ ಟೆಲಿಕಾಂ ಕಂಪನಿ ಜಿಯೋ, ಈ ಸಂಸ್ಥೆ ತಮ್ಮ ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಪ್ಲಾನ್ ಗಳನ್ನು ನೀಡುತ್ತದೆ. ಬಜೆಟ್ ಫ್ರೆಂಡ್ಲಿ ಆಗಿರವುದರಿಂದ ಜನರು ಹೆಚ್ಚಾಗಿ ಜಿಯೋ ಸೇವೆಯನ್ನು ಬಳಸುತ್ತಿದ್ದಾರೆ. ಜಿಯೋ ಸಂಸ್ಥೆ ಪ್ರತಿವರ್ಷ ತಮ್ಮ ಗ್ರಾಹಕರಿಗೆ ಹೊಸ ಪ್ಲಾನ್ ಗಳನ್ನು ಪರಿಚಯ ಮಾಡುತ್ತದೆ, ಅದೇ ರೀತಿ ಈ ವರ್ಷಾಂತ್ಯದಲ್ಲಿ ಜಿಯೋ ಕೆಲವು ಹೊಸ ಪ್ಲಾನ್ ಗಳನ್ನು ಹೊರತಂದಿದ್ದು, ಈ ಒಂದು ರೀಚಾರ್ಜ್ ಮಾಡಿದರೆ, ಒಂದು ವರ್ಷ ಪೂರ್ತಿ ರೀಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಗ್ರಾಹಕರಿಗೆ ಪ್ರಯೋಜನ ನೀಡುವ ಉತ್ತಮವಾದ ಪ್ಲಾನ್ ಗಳನ್ನು ತಿಳಿಸುತ್ತೇವೆ ನೋಡಿ..

ಜಿಯೋ ₹2,545 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನಲ್ಲಿ ನೀವು 1.5ಜಿಬಿ ಡೇಟಾವನ್ನು ಪ್ರತಿದಿನ ಪಡೆಯಬಹುದು. ಈ ಪ್ಲಾನ್ ನ ವ್ಯಾಲಿಡಿಟಿ 336 ದಿನಗಳವರೆಗು ಇರುತ್ತದೆ. ಒಟ್ಟಾರೆಯಾಗಿ 504ಜಿಬಿ ಡೇಟಾ ನಿಮಗೆ ಸಿಗುತ್ತದೆ. ಇವುಗಳ ಜೊತೆಗೆ ಜಿಯೋ ಟು ಜಿಯೋ ಮತ್ತು ಬೇರೆ ನೆಟ್ವರ್ಕ್ ಗಳಿಗೆ ಅನ್ ಲಿಮಿಟೆಡ್ ಕರೆಗಳು ಇರುತ್ತದೆ, ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆ ಉಚಿತವಾಗಿ ಸಿಗುತ್ತದೆ.
ಜಿಯೋ ₹2,879 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 365 ದಿನಗಳು ಅಂದ್ರೆ ಪೂರ್ತಿ ವರ್ಷ ಇರುತ್ತದೆ.ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2ಜಿಬಿ ಡೇಟಾ ಸಿಗುತ್ತದೆ, ವರ್ಷಕ್ಕೆ 730ಜಿಬಿ ಡೇಟಾ ಆಗುತ್ತದೆ. ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಸೇವೆ ಸಹ ಸಿಗುತ್ತದೆ. ಇದನ್ನು ಓದಿ.. IPL 2023: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಕಣ್ಣಿಟ್ಟಿರುವ ನಾಲ್ಕು ಬಲಾಢ್ಯ ಆಟಗಾರರು ಯಾರ್ಯಾರು ಗೊತ್ತೆ?? ಇವರಲ್ಲಿ ಯಾರು ಬರಬೇಕು?

ಜಿಯೋ ₹2,999 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 365 ದಿನಗಳವರೆಗು ಇರುತ್ತದೆ. ಪ್ರತಿದಿನ 2.5.ಜಿಬಿ ಡೇಟಾ ಸಿಗುತ್ತದೆ. ಒಂದು ವರ್ಷಕ್ಕೆ ನಿಮಗೆ 912.5ಜಿಬಿ ಡೇಟಾ ಸಿಗುತ್ತದೆ. ಇದರ ಜೊತೆಗೆ ಪ್ರತಿದಿನ ಉಚಿತ ಅನ್ ಲಿಮಿಟೆಡ್ ಕಾಲ್ಸ್ ಗಳು ಇರುತ್ತದೆ, ಹಾಗೆಯೇ ದಿನಕ್ಕೆ 100 ಉಚಿಯ ಎಸ್.ಎಂ.ಎಸ್ ಗಳು ಸಿಗುತ್ತದೆ. ಇವುಗಳ ಜೊತೆಗೆ ಜಿಯೋ ಕ್ಲೌಡ್, ಜಿಯೋ ಟಿವಿ, ಜಿಯೋ ಸೆಕ್ಯೂರಿಟಿ, ಅಷ್ಟೇ ಅಲ್ಲದೆ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಕೂಡ ಸಿಗುತ್ತದೆ.
ಜಿಯೋ ₹4,199 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 365ದಿನಗಳ ವರೆಗು ಇರುತ್ತದೆ, ಈ ಪ್ಲಾನ್ ನಲ್ಲಿ ದಿನಕ್ಕೆ 3ಜಿಬಿ ಉಚಿತ ಡೇಟಾ ಸಿಗುತ್ತದೆ, ವರ್ಷಕ್ಕೆ 1095 ಜಿಬಿ ಡೇಟಾ ನಿಮಗೆ ಸಿಗುತ್ತದೆ. ಇದರಲ್ಲಿ ಅನಿಯಮಿತ ಕಾಲ್ ಗಳು, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಸಿಗುತ್ತದೆ. ಜೊತೆಗೆ ಜಿಯೋ ಕ್ಲೌಡ್, ಜಿಯೋ ಸೆಕ್ಯೂರಿಟಿ, ಜಿಯೋ ಟಿವಿ ಸೇವೆ ಸಿಗುತ್ತದೆ. ಒಂದು ವರ್ಷದ ವರೆಗು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಕೂಡ ಸಿಗುತ್ತದೆ. ಇದನ್ನು ಓದಿ..Cricket News: ವಿರಾಟ್ ನಾಯಕನಾಗಿದ್ದಾಗ ಭರ್ಜರಿಯಾಗಿ ಮಿಂಚಿ, ರೋಹಿತ್ ನಾಯಕನಾದ ಮೇಲೆ ಕೈ ಕೊಡುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??